ಬಲು ದುಬಾರಿ ಈ ಕಡಕ್​ನಾಥ್​ ಕೋಳಿ ಮಾಂಸ: ಮೊಟ್ಟೆ ಬೆಲೆ ಕೇಳಿದ್ರೆ ಶಾಕ್​ ಆಗ್ತೀರಾ!

March 03, 2021
Wednesday, March 3, 2021

 


ಹೈದರಾಬಾದ್​: ವಿಚಿತ್ರ ಲುಕ್​ನಿಂದ ಮಾತ್ರವಲ್ಲದೇ ಕಡಿಮೆ ಕೊಬ್ಬಿನಂಶದೊಂದಿಗೆ ಮಾಂಸದ ಬಗೆಗಳಲ್ಲಿ ಆರೋಗ್ಯಕರ ಎನಿಸಿಕೊಂಡಿರುವ ಕಡಕ್​ನಾಥ್​ ಚಿಕನ್​ ಇದೀಗ ಹೈದರಾಬಾದ್​ನಲ್ಲಿ ತುಂಬಾ ದುಬಾರಿಯಾಗಿದೆ.

ಕಡಕ್​ನಾಥ್​ ಕೋಳಿ ಮಾಂಸ ಕೆಜಿಗೆ 1000 ರೂಪಾಯಿಯಿಂದ 1200 ರೂ. ವರೆಗೂ ಮಾರಾಟವಾಗುತ್ತದೆ. ಈಗಾಗಲೇ ದುಬಾರಿ ಎನಿಸಿಕೊಂಡಿರುವ ಮಟನ್​ ಸಹ ಕಡಕ್​ನಾಥ್​ ಮುಂದೆ ಅಗ್ಗ ಎನಿಸಿಕೊಂಡಿದೆ. ಒಂದು ಕೆಜಿ ಮಟನ್​ಗೆ ತಗಲುವ ಖರ್ಚಿನಲ್ಲಿ ಅರ್ಧ ಕೆಜಿ ಕಡಕ್​ನಾಥ್​​ ಚಿಕನ್​ ಬರುತ್ತದೆ.

ಇನ್ನು ಈ ಕಡಕ್​ನಾಥ್​ ತಳಿಯ ಮೂಲ ಮಧ್ಯಪ್ರದೇಶ ಮತ್ತು ಛತ್ತೀಸ್​ಗಢ ಮತ್ತು ಗುಜರಾತ್​ ಹಾಗೂ ರಾಜಸ್ಥಾನದ ಕೆಲವು ಭಾಗಗಳು.

ಅದರಲ್ಲೂ ಇಂತಹ ಕೋಳಿಗಳು ಹೆಚ್ಚು ಬುಡಕಟ್ಟು ಸಮುದಾಯದಲ್ಲಿ ಕಂಡುಬರುತ್ತವೆ. ಈ ಕೋಳಿಯ ವಿಶೇಷ ಕೊಕ್ಕಿನಿಂದ ಹಿಡಿದು ಕಾಲ ತುದಿಯವರೆಗೂ ಕಪ್ಪು ಬಣ್ಣದಿಂದ ಕೂಡಿದೆ. ಅಲ್ಲದೆ, ಅದರ ಮಾಂಸ ಮತ್ತು ಮೊಟ್ಟೆಯು ಸಹ ಕಪ್ಪು ಬಣ್ಣವೇ.

ಈ ಕೋಳಿಗಳನ್ನು ಮೊಟ್ಟೆ ಮತ್ತು ಮಾಂಸಕ್ಕಾಗಿ ಸಾಕಲಾಗುತ್ತದೆ. ಬೆಳೆದು ಸಾಮಾನ್ಯ ಗಾತ್ರಕ್ಕೆ ಬರಲು 8 ತಿಂಗಳು ತೆಗೆದುಕೊಳ್ಳುತ್ತದೆ. ಆದರೆ, ಬಾಯ್ಲರ್​ ಕೋಳಿಗಳು ಕೇವಲ 45 ದಿನಗಳಲ್ಲಿ ದಪ್ಪದಾಗುತ್ತವೆ. ಅನೇಕ ನಗರಗಳಿಗೆ ಕಡಕ್​ನಾಥ್​ ಮಾಂಸವನ್ನು ಪೂರೈಸುವ ಕಡಕ್​ನಾಥ್​ ಚಿಕನ್​ ಫಾರ್ಮ್ಸ್​ ಹೇಳುವಂತೆ ಪ್ರತಿ ಕೋಳಿಯ ಸಂತಾನೋತ್ಪತ್ತಿಗೆ 500 ರೂ. ವೆಚ್ಚವಾಗುತ್ತದೆ. ಈ ಕೋಳಿ ಪ್ರತಿದಿನ 100 ಗ್ರಾಂ ಆಹಾರ ತಿನ್ನುತ್ತದೆ ಎಂದಿದ್ದಾರೆ.


ಹೀಗಾಗಿ ಕೋಳಿ ಮಾಂಸ ತುಂಬಾ ದುಬಾರಿಯಾಗಿದೆ. ಇನ್ನು ಮೊಟ್ಟೆಯು ಕೂಡ ಕಡಿಮೆಯೇನಲ್ಲ. ಒಂದು ಮೊಟ್ಟೆಗೆ 30 ರೂ. ದರವಿದೆ. ಕಡಕ್​ನಾಥ್​ ಕೋಳಿಯ ಮಾಂಸ ಮತ್ತು ಮೊಟ್ಟೆ ಪೌಷ್ಟಿಕಾಂಶಗಳ ಆಗರವೆಂದೇ ನಂಬಲಾಗಿದೆ. ಅದರಲ್ಲೂ ಅಧಿಕ ರಕ್ತದೊತ್ತಡ ಇರುವ ಹಿರಿಯ ನಾಯಕರಿಗೆ ತುಂಬಾ ಉಪಯುಕ್ತವಂತೆ. ಹೀಗಾಗಿ ಈ ಕೋಳಿಗೆ ಇವು ಡಿಮ್ಯಾಂಡ್​ ಮೇಲೆ ಮಾರುಕಟ್ಟೆಯಲ್ಲಿ ಅಧಿಕ ಬೆಲೆ ಇದೆ. (ಏಜೆನ್ಸೀಸ್​)


Thanks for reading ಬಲು ದುಬಾರಿ ಈ ಕಡಕ್​ನಾಥ್​ ಕೋಳಿ ಮಾಂಸ: ಮೊಟ್ಟೆ ಬೆಲೆ ಕೇಳಿದ್ರೆ ಶಾಕ್​ ಆಗ್ತೀರಾ! | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಬಲು ದುಬಾರಿ ಈ ಕಡಕ್​ನಾಥ್​ ಕೋಳಿ ಮಾಂಸ: ಮೊಟ್ಟೆ ಬೆಲೆ ಕೇಳಿದ್ರೆ ಶಾಕ್​ ಆಗ್ತೀರಾ!

Post a Comment