ಬೆಂಗಳೂರು : ಕೋವಿಡ್ ಸೋಂಕು ಕೈ ಮೀರಿ ಹೋಗ್ತಿದೆ, ಸರ್ಕಾರದ ಜೊತೆ ಜನರು ಸಹಕರಿಸಬೇಕು, ಲಾಕ್ ಡೌನ್ ಆಗಬಾರದು ಅಂತಿದ್ದರೆ, ಕರ್ಪ್ಯೂ ಮಾಡಬಾರದು ಅಂತಿದ್ದರೆ ಸಹಕರಿಸಿ ಎಂದು ಸಿಎಂ ಯಡಿಯೂರಪ್ಪ ಜನರಲ್ಲಿ ಕೇಳಿಕೊಂಡಿದ್ದಾರೆ.
ಮಾಸ್ಕ್ ಹಾಕಬೇಕು, ಕೋವಿಡ್ ನಿಯಮ ಪಾಲಿಸಿದರೆ ಸೋಂಕು ಹರಡುವುದನ್ನು ನಿಯಂತ್ರಣ ಮಾಡಬಹುದು. ಮಹಾರಾಷ್ಟ್ರದಲ್ಲೂ ಹೆಚ್ಚಾಗ್ತಿದೆ, ಗಡಿಗಳಲ್ಲಿಯೂ ಬಿಗಿ ಕ್ರಮ ಕೈಗೊಳ್ಳುವ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದರು.
ರಮೇಶ್ ಜಾರಕಿಹೊಳಿ ಸಿಡಿ ವಿಚಾರವಾಗಿ ಮಾತನಾಡಿದ ಸಿಎಂ, ವಿರೋಧ ಪಕ್ಷದವರು ತಮ್ಮ ಕರ್ತವ್ಯ ನಿರ್ವಹಿಸಲಿ, ಅವರು ಸರ್ಕಾರಕ್ಕೆ ಸಲಹೆ ಕೊಟ್ಟರೆ ಅದನ್ನ ಸ್ವೀಕರಿಸುತ್ತೇವೆ, ಸಚಿವರು ಎಚ್ಚರಿಕೆಯಿಂದ ಕೆಲಸ ಮಾಡಲು ಸಹಕಾರಿ ಆಗುತ್ತೆ ಎಂದರು.
EmoticonEmoticon