ಈ ತಿಂಗಳು ಗ್ರಾಹಕರಿಗೆ ತಟ್ಟಲಿದೆ ಬ್ಯಾಂಕ್ ಬಂದ್‍ನ ಬಿಸಿ

March 09, 2021


 ಬೆಂಗಳೂರು, ಮಾ.10- ಬ್ಯಾಂಕ್‍ಗಳಿಗೆ ಸಾಲು ಸಾಲು ರಜೆ ಬರುವುದರಿಂದ ಈ ತಿಂಗಳು ಪೂರ್ತಿ ಗ್ರಾಹಕರಿಗೆ ಅದರ ಬಿಸಿ ತಟ್ಟಲಿದೆ.

ಮಾರ್ಚ್ 11 ರಂದು ಮಹಾಶಿವರಾತ್ರಿ ಅಂಗವಾಗಿ ಸರ್ಕಾರಿ ರಜೆ ಇರುವುದರಿಂದ ಅಂದು ಯಾವುದೇ ಬ್ಯಾಂಕ್ ವಹಿವಾಟುಗಳು ನಡೆಯುವುದಿಲ್ಲ, ಮಾರ್ಚ್ 12 ರಂದು ಬ್ಯಾಂಕ್‍ಗಳು ಮತ್ತೆ ಕಾರ್ಯನಿರ್ವಹಿಸಿದರೆ, ಮಾರ್ಚ್ 13 ಹಾಗೂ ಮಾ 14 ರಂದು ಎರಡನೆ ಶನಿವಾರ ಹಾಗೂ ಭಾನುವಾರವಿರುವುದರಿಂದ ಮತ್ತೆ ರಜೆ ಇರುವುದು ಗ್ರಾಹಕರಿಗೆ ತೊಂದರೆಯಾಗಲಿದೆ.

ಇನ್ನೂ ಮಾರ್ಚ್ 15 ಹಾಗೂ ಮಾರ್ಚ್ 16 ರಂದು ಸಾರ್ವಜನಿಕ ಬ್ಯಾಂಕುಗಳನ್ನು ಖಾಸಗೀಕರಣ ಮಾಡಲು ಹೊರಟಿರುವ ನಿಲುವನ್ನು ಖಂಡಿಸಿ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯುನಿಯನ್‍ಯವರು ಬಂದ್‍ಗೆ ಕರೆ ನೀಡುವುದರಿಂದ ಆ ದಿನಗಳಲ್ಲೂ ಬ್ಯಾಂಕ್ ವಹಿವಾಟು ನಡೆಸುವುದು ಕಷ್ಟವಾಗುತ್ತದೆ.

ಇನ್ನು ಈ ತಿಂಗಳ ಕೊನೆಯ ಹಂತದಲ್ಲಿ ಅಂದರೆ ಮಾರ್ಚ್ 27 ಹಾಗೂ ಮಾರ್ಚ್ 28ರಂದು ನಾಲ್ಕನೇ ಶನಿವಾರ ಹಾಗೂ ಭಾನುವಾರವಿದ್ದರೆ, ಮಾರ್ಚ್ 29 ಹಾಗೂ ಮಾರ್ಚ್ 30 ರಂದು ಹೋಳಿ ಹಬ್ಬವಿರುವುದರಿಂದ ಬಹುತೇಕ ಬ್ಯಾಂಕುಗಳಿಗೆ ರಜೆ ಇರುವುದರಿಂದ ಗ್ರಾಹಕರು ತೊಂದರೆ ಅನುಭವಿಸಬೇಕಾಗುತ್ತದೆ.


Related Articles

Advertisement
Previous
Next Post »