ನವದೆಹಲಿ: ಸಂಗಾತಿಯ ಮೇಲೆ ಹಲ್ಲೆ ನಡೆಸಿದ ಆರೋಪಿಯೊಬ್ಬನಿಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ಸುಪ್ರೀಂ ಕೋರ್ಟ್, ವೈವಾಹಿಕ ಮನೆಯಲ್ಲಿ ಹೆಂಡತಿಗೆ ಆಗಿರುವ ಗಾಯಗಳಿಗೆ ಪತಿ ಮುಖ್ಯವಾಗಿ ಹೊಣೆಗಾರನಾಗಿರುತ್ತಾನೆ, ಅದು ಅಲ್ಲದೇ ತನ್ನ ಸಂಬಂಧಿಗಳಿಂದ ಆಕೆಯ ಉಂಟಾದ ಗಾಯಗಳಿಗೆ ಕೂಡ ಕಾರಣವಾಗುತ್ತಾನೆ ಅಂತ ಪ್ರಕರಣವೊಂದರ ವಿಚಾರಣೆ ನಡೆಸಿದ ವೇಳೆಯಲ್ಲಿ ನ್ಯಾಯಾಪೀಠ ಹೇಳಿದೆ.
ಘಟನೆ ಹಿನ್ನಲೆ: ಪ್ರಕರಣವೊಂದರ ದಂಪತಿಗಳು ಮದುವೆಯಾದ ಒಂದು ವರ್ಷದ ನಂತರ 2018ರಲ್ಲಿ ಒಂದು ಮಗು ಜನಿಸಿತು. ಇದೇ ವೇಳೆ ಕಳೆದ ವರ್ಷ ಜೂನ್ ನಲ್ಲಿ ಮಹಿಳೆ ನನ್ನ ಪತಿ, ಅತ್ತೆ, ಮಾವ ವರದಕ್ಷಿಣೆ ಬೇಡಿಕೆ ಈಡೇರಿಸಿಲ್ಲ ಎಂದು ತಮ್ಮ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಅಂತ ಆರೋಪಿಸಿ ಪತಿ ಮತ್ತು ಅತ್ತೆ ಯ ವಿರುದ್ಧ ಲೂಧಿಯಾನ ಪೊಲೀಸರಿಗೆ ದೂರು ನೀಡಿದ್ದರು.
ನಿರೀಕ್ಷಣಾ ಜಾಮೀನು ಕೋರಿ ಪತಿ ಪರ ವಕೀಲ ಕುಶಾಗ್ರ ಮಹಾಜನ್ ಅರ್ಜಿ ವಿಚಾರಣೆ ನಡೆಸಿದ ಸಿಜೆಐ ಎಸ್.ಎ.ಬೊಬ್ಡೆ ನೇತೃತ್ವದ ಪೀಠ, 'ನೀವು ಯಾವ ರೀತಿಯ ವ್ಯಕ್ತಿ? ಕತ್ತು ಹಿಸುಕಿ ಕೊಲೆ ಮಾಡಲು ನೀವು ಪ್ರಯತ್ನಿಸುತ್ತಿದ್ದೀರಿ ಎಂದು ಆಕೆ ಆರೋಪಿಸುತ್ತಾಳೆ. ನೀವು ಬಲವಂತವಾಗಿ ಗರ್ಭಪಾತ ಮಾಡಿಸುತ್ತೀರಿ ಎಂದು ಆಕೆ ಆರೋಪಿಸುತ್ತಾಳೆ. ಹೆಂಡತಿಯನ್ನು ನಿಂದಿಸಲು ಕ್ರಿಕೆಟ್ ಬ್ಯಾಟ್ ಅನ್ನು ಬಳಸಲು ನೀವು ಯಾವ ರೀತಿಯ ಮನುಷ್ಯ? ಅಂಥ ಪ್ರಶ್ನೆ ಮಾಡಿದ್ದಾರೆ.
ಆಕೆಯ ಮೇಲೆ ಹಲ್ಲೆ ನಡೆಸಲು ಬ್ಯಾಟ್ನನ್ನು ಬಳಸಿದ್ದು ಗಂಡನ ತಂದೆ ಎಂದು ತಾನು ಆರೋಪಿಸಿದ್ದೇನೆ ಎಂದು ಮಹಾಜನ್ ಹೇಳಿದಾಗ, ಸಿಜೆಐ ನೇತೃತ್ವದ ನ್ಯಾಯಪೀಠ, 'ನೀವು (ಗಂಡ) ಅಥವಾ ನಿಮ್ಮ ತಂದೆ ಅವಳ ಮೇಲೆ ಹಲ್ಲೆ ಮಾಡಲು ಬ್ಯಾಟ್ ಬಳಸಿದ್ದಾರೆಯೇ ಎಂಬುದು ಮುಖ್ಯವಲ್ಲ . ವೈವಾಹಿಕ ಮನೆಯಲ್ಲಿ ಮಹಿಳೆಯ ಮೇಲೆ ಗಾಯಗಳು ಉಂಟಾದಾಗ, ಪ್ರಾಥಮಿಕ ಹೊಣೆಗಾರಿಕೆಯು ಗಂಡನ ಮೇಲೆ ಇರುತ್ತದೆ (ಹೊಣೆಗಾರ ಅಂತ) ಜಾಮೀನು ಅರ್ಜಿಯನ್ನು ನ್ಯಾಯಪೀಠ ತಿರಸ್ಕರಿಸಿದೆ.
EmoticonEmoticon