ಇನ್ಮುಂದೆ ಪಡಿತರ ಚೀಟಿ ಬೇಕೆಂದಿಲ್ಲ..! ಯಾಕೆ..? ಪೂರ್ಣ ಮಾಹಿತಿ ಇಲ್ಲಿದೆ.

 


ನವ ದೆಹಲಿ : ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಒನ್ ನೇಷನ್, ಒನ್ ರೇಷನ್ ಕಾರ್ಡ್ ಯೋಜನೆಗೆ ಈಗ ತಾಂತ್ರಿಕ ಬೆಂಬಲ ದೊರಕಿದೆ.

ದೇಶದ ಯಾವುದೇ ಭಾಗದಲ್ಲಿ ಪಡಿತರ ಪಡೆಯಲು ಜನರಿಗೆ ಅನುಕೂಲವಾಗುವ ಈ ಒನ್ ನೇಷನ್ ಒನ್ ರೇಷನ್ ಕಾರ್ಡ್‌ ಗೆ ಸಂಬಂಧಿಸಿದ ಸ್ಮಾರ್ಟ್‌ ಫೋನ್ ಆಪ್ ವೊಂದನ್ನು ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿದೆ.

ಪಡಿತರ ಕಾರ್ಡ್ ಹೊಂದಿದವರಿಗೆ ಸುಲಭವಾಗುವ ಹಾಗೆ ಕೇಂದ್ರ ಸರ್ಕಾರ 'ಮೇರಾ ರೇಷನ್' ಮೊಬೈಲ್ ಆಯಪ್ ನ್ನು ಅನಾವರನಗೊಳಿಸಿದ್ದು, ಪಡಿತರ ಚೀಟಿದಾರರು ಇನ್ನು ಮುಂದೆ ತಮ್ಮ ರೇಷನ್ ಪಡೆದುಕೊಳ್ಳಲು ಈ ಮೊಬೈಲ್ ಅಪ್ಲಿಕೇಶನ್ ನನ್ನು ಬಳಸಿಕೊಳ್ಳಬಹುದಾಗಿದೆ.

ಒಂದೇ ಪಡಿತರ ಕಾರ್ಡ್ ಇಟ್ಟುಕೊಂಡು ದೇಶದ ಯಾವ ಭಾಗದಲ್ಲಾದರೂ ರೇಷನ್ ಪಡೆಯಲು ಈ ಅಪ್ಲಿಕೇಶನ್ ನೆರವು ನೀಡುತ್ತದೆ.

ಬಹಳ ಪ್ರಮುಖವಾಗಿ ರಾಜ್ಯದಿಂದ ಪರ ರಾಜ್ಯಕ್ಕೆ ವಲಸೆ ಹೋಗುವ ಕಾರ್ಮಿಕರಿಗೆ ಇದು ಅತ್ಯಂತ ನೆರವನ್ನು ನೀಡಲಿದೆ ಎನ್ನುವುದರಲ್ಲಿ ಅನುಮಾನ ಪಡಬೇಕಾಗಿಲ್ಲ.

ವಲಸಿಗರು ಇನ್ಮುಂದೆ ಈ 'ಮೇರಾ ರೇಷನ್' ಮೊಬೈಲ್ ಅಪ್ಲಿಕೇಶನ್ ಮೂಲಕವೇ ಸಮೀಪದ ನ್ಯಾಯ ಬೆಲೆ ಅಂಗಡಿಗಳಿಂದಲೇ ಪಡಿತರ ಧಾನ್ಯಗಳನ್ನು ಪಡೆದುಕೊಳ್ಳಬಹುದಾಗಿದೆ.

ಇನ್ನು, ಸದ್ಯ ಬಿಡುಗಡೆಗೊಂಡಿರುವ 'ಮೇರಾ ರೇಷನ್' ಮೊಬೈಲ್ ಅಪ್ಲಿಕೇಶನ್ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಮಾತ್ರ ಲಭ್ಯವಿದ್ದು, ಅತಿ ಶೀಘ್ರದಲ್ಲೇ ದೇಶದ 14 ಪ್ರಾದೇಶಿಕ ಭಾಷೆಗಳಲ್ಲಿ ಈ ಅಪ್ಲಿಕೇಶನ್ ನ ಸಾಲಭ್ಯ ದೊಕಲಿದೆ.

ವಲಸೆ ಕಾರ್ಮಿಕರಿಗೆ ಅನುಕೂಲವಾಗುವಂತೆ ಹೆಚ್ಚು ಬಳಕೆಯಲ್ಲಿರುವ ಪ್ರಾದೇಶಿಕ ಭಾಷೆಗಳಲ್ಲಿ 'ಮೇರಾ ರೇಷನ್' 14 ಪ್ರಾದೇಶಿಕ ಭಾಷೆಗಳಲ್ಲಿ ದೊರೆಯುವಂತೆ ಮಾಡಲು ಕಾರ್ಯೋನ್ಮುಖವಾಗಿದೆ ಎಂದು ಮೂಲಗಳು ತಿಳಿಸಿವೆ. ಇದರಿಂದ ಪಡಿತರ ಚೀಟಿದಾರರಿಗೆ ಹೆಚ್ಚು ಲಾಭವಾಗಲಿದೆ. ಕೇವಲ ಹಿಂದಿ ಮತ್ತು ಇಂಗ್ಲಿಷ್‌ ನಲ್ಲೇ ಇದ್ದರೆ ಈ ಮೊಬೈಲ್ ಬಳಕೆಯ ಹೆಚ್ಚಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೂಡಾ, ವಲಸಿಗರು, ಕಾರ್ಮಿಕರು ಹೆಚ್ಚು ಎಲ್ಲಿದ್ದಾರೆಂಬುದನ್ನು ಗುರುತಿಸಿ ಭಾಷೆಗಳನ್ನು ನಿರ್ಧರಿಸಲಾಗುವುದು ಎಂದು ಮಾಹಿತಿ ನೀಡಿದೆ.

Comments