ಮೇಲ್ ಓದಿ, ಹಣ ಪಡೆಯಿರಿ... ಈ ಸಿಂಪಲ್ ಟ್ರಿಕ್ಸ್ ಮೂಲಕ ಮನೆಯಲ್ಲಿಯೇ ಕುಳಿತು ಹೆಚ್ಚುವರಿ ಆದಾಯ ಪಡೆಯಿರಿ..

March 14, 2021
Sunday, March 14, 2021

 ಸ್ಪೆಷಲ್ ಡೆಸ್ಕ್ : ಹೆಚ್ಚುತ್ತಿರುವ ಹಣದ ಸಮಸ್ಯೆಯ ನಡುವೆ, ಪ್ರತಿಯೊಬ್ಬರೂ ತಮ್ಮ ಜೀವನವನ್ನು ಸುಧಾರಿಸುವ ಹೆಚ್ಚುವರಿ ಆದಾಯದ ಮೂಲವನ್ನು ಕಂಡುಹಿಡಿಯಲು ಬಯಸುತ್ತಾರೆ. ಅದಕ್ಕಾಗಿ ಏನು ಮಾಡುವುದು ಎಂದು ಜನರು ಯೋಚಿಸುತ್ತಲೇ ಇರುತ್ತಾರೆ, ಆದರೆ ಕೆಲವರಿಗೆ ಯೋಚನೆಯನ್ನು ಮೀರಿ ಹೋಗುವುದಿಲ್ಲ. ಇನ್ನು ಕೆಲವರು ಜುಗಾಡ್ ಅಥವಾ ಕಳ್ಳ ದಾರಿಯಲ್ಲಿ ಮುಂದುವರೆಯುತ್ತಾರೆ. ಇತ್ತೀಚಿನ ದಿನಗಳಲ್ಲಿ ಇಂಟರ್ನೆಟ್ ಕೂಡ ಹೆಚ್ಚುವರಿ ಆದಾಯಕ್ಕೆ ಬಹಳ ಸಹಕಾರಿ ಎಂದು ಸಾಬೀತು ಮಾಡುತ್ತಿದೆ. ಹಣ ಪಡೆಯುವ ಅನೇಕ ಸೈಟ್ ಗಳಿವೆ. ನೀವು ಇದೇ ರೀತಿಯ ಆಯ್ಕೆಯನ್ನು ಹುಡುಕುತ್ತಿದ್ದರೆ, ಈ ಸುದ್ದಿ ನಿಮಗೆ ಸಹಾಯಕಾರಿಯಾಗಬಹುದು. ಮನೆ ಅಥವಾ ಕಚೇರಿಯಲ್ಲಿ ಕುಳಿತು ಕಡಿಮೆ ಅವಧಿಯಲ್ಲಿ ನೀವು ಹೇಗೆ ಹೆಚ್ಚುವರಿ ಆದಾಯವನ್ನು ಗಳಿಸಬಹುದು ಎಂದು ಹೇಳೋಣ.


ಜಾಹೀರಾತು ನೋಡಿ ಗಳಿಕೆ
ಅಂತರ್ಜಾಲ ಜಗತ್ತಿನಲ್ಲಿ ಅನೇಕ ವೆಬ್ ಸೈಟ್ ಗಳಿದ್ದು, ಜಾಹೀರಾತುಗಳನ್ನು ನೋಡಲು ಹಣವೂ ದೊರೆಯುತ್ತದೆ. ಹೌದು ನೀವು ಓದಿರುವುದು ಸರಿಯಾಗಿಯೇ ಇದೆ. ಇದಕ್ಕಾಗಿ ನೀವು ಯಾವುದೇ ಪೇಯ್ಡ್-ಟು-ಕ್ಲಿಕ್ (PTC) ವೆಬ್ ಸೈಟ್ ಗೆ ಭೇಟಿ ನೀಡಿ ನಿಮ್ಮನ್ನು ನೀವು ನೋಂದಾಯಿಸಿಕೊಳ್ಳಬೇಕು. ClixSense.com, NeoBux ನಂತಹ PTC ವೆಬ್ ಸೈಟ್ ಗಳಲ್ಲಿ ಜಾಹೀರಾತುಗಳನ್ನು ನೋಡಿದರೆ ನೀವು ಹಣ ಪಡೆಯುತ್ತೀರಿ.

ಆಯಪ್ ಅನ್ನು ಪ್ರಚಾರ ಮಾಡುವ ಮೂಲಕ
ಇಂಟರ್ನೆಟ್ ನಲ್ಲಿ ಹಲವಾರು ಆಪ್ ಗಳಿದ್ದು, ನೀವು ಪ್ರಚಾರ ಮಾಡುವ ಮೂಲಕ ಹಣ ಗಳಿಸಬಹುದು. ಇದಕ್ಕಾಗಿ ನೀವು ಸಂಬಂಧಪಟ್ಟ ಆಯಪ್ ಗೆ ಲಾಗಿನ್ ಆಗಿ ನಂತರ ಆ ಆಪ್ ಬಗ್ಗೆ ನಿಮ್ಮ ಸ್ನೇಹಿತರಿಗೆ ಮತ್ತು ಸಂಬಂಧಿಕರಿಗೆ ತಿಳಿಸಬೇಕು. ಅಪ್ಲಿಕೇಶನ್ ನಲ್ಲಿ ನೀವು ಹೇಳಿದ ಕೋಡ್ ಬಳಸಿ, ಇತರ ಬಳಕೆದಾರರು ಸೇವೆಯನ್ನು ಪಡೆದುಕೊಂಡರೆ ಅದರಿಂದ ನಿಮಗೆ ನನಿಶ್ಚಿತ ಮೊತ್ತದ ಹಣ ಪಾವತಿಯಾಗುತ್ತದೆ.

ಮೇಲ್ ಓದಿ, ಹಣ ಪಡೆಯಿರಿ
ಕೇವಲ ಮೇಲ್ ಓದುವ ಮೂಲಕ ಹಣ ಸಂಪಾದಿಸಬಹುದು. ಮನಿ ಮೇಲ್ ಡಾಟ್ ಕಾಮ್ ನಲ್ಲಿ ನೀವು ಮೇಲ್ ಓದುವ ಮೂಲಕ ಸಂಪಾದಿಸಬಹುದು. ತಿಂಗಳಿಗೆ ಹತ್ತು ಸಾವಿರ ರೂಪಾಯಿವರೆಗೆ ಸಂಪಾದಿಸುತ್ತಾರೆ ಎಂದು ಅನೇಕರು ಹೇಳಿಕೊಂಡಿದ್ದಾರೆ. ಇದಕ್ಕಾಗಿ ನೀವು ಪ್ರತಿದಿನ ನಿಮ್ಮ ಖಾತೆಗೆ ಲಾಗಿನ್ ಆಗಬೇಕು ಮತ್ತು ಇನ್ ಬಾಕ್ಸ್ ಮೇಲ್ ಅನ್ನು ಓದಬೇಕಾಗುತ್ತದೆ. ನಿಮ್ಮ ಸ್ನೇಹಿತರೊಬ್ಬರು ನಿಮ್ಮ ಶಿಫಾರಸಿನ ಮೇಲೆ ಖಾತೆಯನ್ನು ರಚಿಸಿದರೆ, ನೀವು ನಿರ್ದಿಷ್ಟ ಮೊತ್ತವನ್ನು ಪಡೆಯುತ್ತೀರಿ. ಮ್ಯಾಟ್ರಿಕ್ಸ್ ಮೇಲ್ ಡಾಟ್ ಕಾಮ್ ನಲ್ಲಿ ನೀವು ಗಂಟೆಗೆ 2ರಿಂದ 2500 ರೂಪಾಯಿಗಳನ್ನು ಸುಲಭವಾಗಿ ಸಂಪಾದಿಸಬಹುದು.

ಕಂಪನಿಗಳ ಪ್ರಚಾರದಿಂದ
ಅನೇಕ ಕಂಪನಿಗಳು ತಮ್ಮ ಉತ್ಪನ್ನಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಲು ಹಣ ಪಾವತಿಸುತ್ತಿವೆ. ಇದಕ್ಕಾಗಿ ನೀವು ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ಇನ್ ಸ್ಟಾಗ್ರಾಂ ಮತ್ತು ಟ್ವಿಟರ್ ನಲ್ಲಿ ಖಾತೆಯೊಂದನ್ನು ರಚಿಸಿ ಮತ್ತು ಪ್ರಾಯೋಜಿತ ಪೋಸ್ಟ್ ಗಳನ್ನು ಪೋಸ್ಟ್ ಮಾಡಬೇಕಾಗುತ್ತದೆ. ಅಲ್ಲದೆ, ನಿಮ್ಮಸ್ವಂತ ವೀಡಿಯೊಗಳನ್ನು ರಚಿಸುವ ಮೂಲಕ ಮತ್ತು ಇನ್ ಬಾಕ್ಸ್ ಡೋಲ್ಸ್ ನಂತಹ ವೆಬ್ ಸೈಟ್ ಗಳಲ್ಲಿ ವೀಡಿಯೊಗಳನ್ನು ವೀಕ್ಷಿಸುವ ಮೂಲಕ ನೀವು ಹಣ ಗಳಿಸಬಹುದು.


ಹೊಸ ಅಪ್ ಗಳನ್ನು ಇನ್ ಸ್ಟಾಲ್ ಮಾಡುವ ಮೂಲಕ
ಯಾವುದೇ ಹೊಸ ಆಪ್ ಅನ್ನು ಲಾಂಚ್ ಮಾಡಿದರೆ, ಅದು ಬಳಕೆದಾರರಿಗೆ ಆರಂಭದಲ್ಲಿ ವಿವಿಧ ರೀತಿಯ ಪ್ರಯೋಜನಗಳನ್ನು ನೀಡುತ್ತದೆ. ಈ ಆಪ್ ಗಳ ಕಡೆಗೆ ಗಮನ ಹರಿಸುವ ಮೂಲಕ ಉತ್ತಮ ಪ್ರಯೋಜನವನ್ನು ಪಡೆಯಬಹುದು. ಫ್ರೋಂಟೋ ಒಂದು ಲಾಕ್ ಸ್ಕ್ರೀನ್ ಅಪ್ಲಿಕೇಶನ್ ಆಗಿದ್ದು, ಗುಗಲ್ ಪೇ, ಅಮೆಜಾನ್ ಇತ್ಯಾದಿಗಳಿಗೆ ಪಾಯಿಂಟ್ ಗಳನ್ನು ವಿನಿಮಯ ಮಾಡಿಕೊಳ್ಳಲು ನಿಮಗೆ ಅನುಮತಿಸುತ್ತದೆ. ಐಬೋಟಾ ಒಂದು ಕ್ಯಾಶ್ ಬ್ಯಾಕ್ ಆಪ್ ಆಗಿದೆ, ನೀವು 1000 ರೂಪಾಯಿಗಳಿಗಿಂತ ಹೆಚ್ಚು ಸಂಪಾದಿಸಬಹುದಾಗಿದೆ.

ಆಟಗಳನ್ನು ಆಡುವಮೂಲಕ, ಫೋಟೋ ಕ್ಲಿಕ್ ಮಾಡುವ ಮೂಲಕ ಹಣವನ್ನು ಸಂಪಾದಿಸಿ
ಸೆಕೆಂಡ್ ಲೈಫ್, ಲ್ಯಾಕ್ಟಿಕ್ ಮತ್ತು ಮಿಸ್ಟ್ ಪ್ಲೇ ನಂತಹ ಹಲವಾರು ವೆಬ್ ಸೈಟ್ ಗಳಿವೆ, ಅಲ್ಲಿ ನೀವು ಆಟಆಡುವಾಗ ಹಣ ಪದೆಯುತ್ತೀರಿ. ಕೆಲವು ವೆಬ್ ಸೈಟ್ ಗಳು ಈ ಮೊತ್ತವನ್ನು ಗಿಫ್ಟ್ ಕಾರ್ಡ್ ಆಗಿ ಮತ್ತು ಕೆಲವು PayPal ಮೂಲಕ ಪಾವತಿಸುತ್ತವೆ. ನೀವು ಫೋಟೋಗ್ರಫಿಯನ್ನು ಇಷ್ಟಪಡುತ್ತಿದ್ದರೆ, ನೀವು ಜನಪ್ರಿಯ ತಾಣಗಳಾದ ಶಟರ್ ಸ್ಟಾಕ್, ಗೆಟ್ಟಿ ಚಿತ್ರಗಳು, ಫೋಟೋಶೆಲ್ಡ್ ಗೆ ಅಪ್ ಲೋಡ್ ಮಾಡಬಹುದು. ಇಲ್ಲಿ, ನಿಮ್ಮ ಫೋಟೋವನ್ನು ಯಾರಾದರು ಬಳಕೆ ಮಾಡಿದ ತಕ್ಷಣ, ಆ ಮೊತ್ತವನ್ನು ನಿಮ್ಮ ಖಾತೆಯಲ್ಲಿ ಪಾವತಿಮಾಡಲಾಗುತ್ತದೆ.

ಕ್ಯಾಶ್ ಫಾರ್ ಆಫರ್ ಡಾಟ್ ಕಾಮ್ ನಲ್ಲಿ ನೀವು ಗೋಲ್ಡ್ ಸದಸ್ಯನಾದ ತಕ್ಷಣ . ನೀವು ವೆಬ್ ಸೈಟ್ ಗೆ ಸೈನ್ ಇನ್ ಆಗುತ್ತಿದ್ದಂತೆ, ನಿಮಗೆ 5 ಡಾಲರ್ ಅಂದರೆ 300 ರಿಂದ 350 ರೂ. ಸಿಗುತ್ತದೆ. ಹೀಗೆ ಇಮೇಲ್ ಗಳನ್ನು ಓದುವ ಮೂಲಕ, ಸಮೀಕ್ಷೆಗಳ ಮೂಲಕ, ಕ್ಯಾಶ್ ಆಫರ್ ಗಳ ಮೂಲಕ, ನೀವು ಆನ್ ಲೈನ್ ಆಟಗಳನ್ನು ಆಡುವ ಮೂಲಕ ಹೆಚ್ಚುವರಿ ಆದಾಯವನ್ನು ಗಳಿಸಬಹುದು.


Thanks for reading ಮೇಲ್ ಓದಿ, ಹಣ ಪಡೆಯಿರಿ... ಈ ಸಿಂಪಲ್ ಟ್ರಿಕ್ಸ್ ಮೂಲಕ ಮನೆಯಲ್ಲಿಯೇ ಕುಳಿತು ಹೆಚ್ಚುವರಿ ಆದಾಯ ಪಡೆಯಿರಿ.. | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಮೇಲ್ ಓದಿ, ಹಣ ಪಡೆಯಿರಿ... ಈ ಸಿಂಪಲ್ ಟ್ರಿಕ್ಸ್ ಮೂಲಕ ಮನೆಯಲ್ಲಿಯೇ ಕುಳಿತು ಹೆಚ್ಚುವರಿ ಆದಾಯ ಪಡೆಯಿರಿ..

Post a Comment