ಕಾಲೇಜು ಕಟ್ಟಡದಿಂದ ಜಿಗಿದು ಇಂಜಿನಿಯರಿಂಗ್​ ವಿದ್ಯಾರ್ಥಿ ಆತ್ಮಹತ್ಯೆ!

March 01, 2021

 


ಬೆಂಗಳೂರು: ಕಾಲೇಜು ಕಟ್ಟಡದ ಮೇಲಿಂದ ಜಿಗಿದು ಇಂಜಿನಿಯರಿಂಗ್​ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಜ್ಯ ರಾಜಧಾನಿಯಲ್ಲಿ ಸಂಭವಿಸಿದೆ.

ಜಯಂತ್ ರೆಡ್ಡಿ ಮೃತ ದುರ್ದೈವಿ. ವಿವಿ ಪುರಂನಲ್ಲಿರುವ ಬೆಂಗಳೂರು ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಸೋಮವಾರ ಬೆಳಗ್ಗೆ ಈ ಅವಘಡ ಸಂಭವಿಸಿದ್ದು, ವಿದ್ಯಾರ್ಥಿ ಸಾವಿನ ಸುತ್ತಾ ಅನುಮಾನದ ಹುತ್ತ ಬೆಳೆದಿದೆ.

ಕಾಲೇಜಿನ ನಾಲ್ಕನೇ ಮಹಡಿಯಿಂದ ಹಾರಿ ಜಯಂತ್ ರೆಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳಕ್ಕೆ ಭೇಟಿ ನೀಡಿದ ವಿವಿ ಪುರಂ ಪೊಲೀಸರು ಪರಿಶೀಲನೆ ನಡೆಸಿ ವಿದ್ಯಾರ್ಥಿಯ ಶವವನ್ನು ಕಿಮ್ಸ್​ ಆಸ್ಪತ್ರೆಗೆ ಸಾಗಿಸಿದ್ದಾರೆ.

ಮೃತ ಜಯಂತ್ ರೆಡ್ಡಿ ಬೆಂಗಳೂರು ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಬಿಇ ಮೂರನೇ ಸೆಮಿಸ್ಟರ್​ ಓದುತ್ತಿದ್ದ.

ಇಂದು ಇಯರ್ ಬ್ಯಾಕ್ ಆಗಿದ್ದ ಪರೀಕ್ಷೆ ಬರೆಯಲು ಬಂದಿದ್ದ. ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಕಾಲೇಜಿನ ಶುಲ್ಕದ ವಿಚಾರಕ್ಕೆ ಬೇಸರವಾಗಿತ್ತೆ? ಪರೀಕ್ಷೆ ಬರೆಯುವ ವಿಚಾರಕ್ಕೆ ಟೆನ್ಷನ್ ಆಗಿತ್ತೇ? ಎಂಬ ಅನುಮಾನ ಮೂಡಿದೆ. ತನಿಖೆ ಬಳಿಕ ಸತ್ಯಾಸತ್ಯತೆ ಹೊರಬರಲಿದೆ.


Related Articles

Advertisement
Previous
Next Post »

1 komentar:

Write komentar
Unknown
AUTHOR
March 1, 2021 at 7:55 AM delete

Very sad. RIP brother

Reply
avatar