ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಬಯಲು ಪ್ರಕರಣಕ್ಕೆ ಸಂಬಂಧಿಸಿದಂತೆ ಕಬ್ಬನ್ ಪಾರ್ಕ್ ಪೊಲೀಸರು ವಿಡಿಯೋದಲ್ಲಿದ್ದ ಯುವತಿಯನ್ನು ಪತ್ತೆಯಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ರಾಸಲೀಲೆ ವಿಡಿಯೋದಲ್ಲಿದ್ದ ಯುವತಿಯ ವಿಳಾಸವನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಯುವತಿ ಉತ್ತರ ಕರ್ನಾಟಕದವಳು ಎಂದು ಪತ್ತೆ ಹಚ್ಚಲಾಗಿದೆ.
ರಮೇಶ್ ಜಾರಕಿಹೊಳಿ ಆಡಿಯೋ ಸಂಭಾಷಣೆಯಲ್ಲೂ ಆ ಯುವತಿ ಉತ್ತರ ಕರ್ನಾಟಕದ ಭಾಷೆಯಲ್ಲಿ ಮಾತನಾಡಿದ್ದಳು.
ಆದರೆ, ಆಕೆ ಬೆಂಗಳೂರಿನಲ್ಲಿ ವಾಸವಾಗಿದ್ದಳು ಎನ್ನಲಾಗಿದ್ದು, ಬೆಂಗಳೂರಿನ ಬರೋಬ್ಬರಿ 48 ಪಿಜಿಗಳಲ್ಲಿ ಪೊಲೀಸರು ಹುಡುಕಾಟ ನಡೆಸಿದ್ದರು. ಕೊನೆಗೆ ಉತ್ತರ ಕರ್ನಾಟದಲ್ಲಿ ಆಕೆಯ ವಿಳಾಸವನ್ನು ಬೆಂಗಳೂರಿನ ಕಬ್ಬನ್ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಐಪಿಎಲ್ 2021ಕ್ಕೆ ಮುಹೂರ್ತ ನಿಗದಿ: 6 ನಗರದಲ್ಲಿ ನಡೆಯಲಿದೆ ಕೂಟ, ಸಂಪೂರ್ಣ ವೇಳಾಪಟ್ಟಿ
ಮುಂಬೈ: ಬಹುನಿರೀಕ್ಷಿತ 2021ರ ಸಾಲಿನ ಐಪಿಎಲ್ ಕೂಟಕ್ಕೆ ಕಡೆಗೂ ದಿನಾಂಕ ನಿಗದಿಯಾಗಿದೆ. ಬಿಸಿಸಿಐ ಇಂದು ಐಪಿಎಲ್ 14ರ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಈ ಬಾರಿಯ ಐಪಿಎಲ್ ಎಪ್ರಿಲ್ 9ರಂದು ಚೆನ್ನೈನಲ್ಲಿ ಆರಂಭವಾಗಲಿದೆ.
ನಿರೀಕ್ಷೆಯಂತೆ ಈ ಬಾರಿಯ ಐಪಿಎಲ್ ಫೈನಲ್ ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ತ ಮೇ 30ರಂದು ನಡೆಯಲಿದೆ.
ಕಳೆದ ಬಾರಿ ಯುಎಇ ನಲ್ಲಿ ನಡೆದಿದ್ದ ವಿಶ್ವದ ಶ್ರೀಮಂತ ಕ್ರಿಕೆಟ್ ಕೂಟ ಈ ಬಾರಿ ಭಾರತಕ್ಕೆ ಮರಳಿದೆ. ಆದರೆ ಈ ಬಾರಿ ಕೇವಲ ಆರು ಮೈದಾನದಲ್ಲಿ ಪಂದ್ಯಗಳು ನಡೆಯಲಿದೆ. ಅಹಮದಾಬಾದ್, ಬೆಂಗಳೂರು, ಚೆನ್ನೈ, ದಿಲ್ಲಿ, ಮುಂಬೈ ಮತ್ತು ಕೋಲ್ಕತ್ತಾದಲ್ಲಿ ಪಂದ್ಯಗಳು ನಡೆಯಲಿದೆ.
ಮೊದಲ ಪಂದ್ಯದಲ್ಲಿ ಕಳೆದ ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿದೆ.
ಈ ಬಾರಿ ಯಾವುದೇ ತಂಡಕ್ಕೆ ತವರು ನೆಲದ ಲಾಭ ಸಿಗಲಾರದು. ಅಂದರೆ ಆರ್ ಸಿಬಿ ತಂಡದ ಯಾವುದೇ ಪಂದ್ಯವೂ ಬೆಂಗಳೂರಿನಲ್ಲಿ ನಡೆಯುವುದಿಲ್ಲ.
ಸಂಪೂರ್ಣ ವೇಳಾಪಟ್ಟಿ
Comments
Post a Comment