ಕೊರೊನಾ ಸೋಂಕು ಹೆಚ್ಚಳ : ತಮಿಳುನಾಡಿನಲ್ಲಿ ನಾಳೆಯಿಂದ 9,10, 11 ನೇ ತರಗತಿ ಶಾಲೆಗಳು ಬಂದ್!

March 20, 2021
Saturday, March 20, 2021

 ಚೆನ್ನೈ : ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಾರ್ಚ್ 22 ರಿಂದ 9, 10 ಮತ್ತು 11 ನೇ ತರಗತಿ ಶಾಲೆಗಳನ್ನು ಮುಚ್ಚಲಾಗುವುದು ಎಂದು ತಮಿಳುನಾಡು ಸರ್ಕಾರ ಆದೇಶಿಸಿದೆ.


ತಮಿಳುನಾಡಿನಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮ ಕೈಗೊಂಡಿರುವ ರಾಜ್ಯ ಕಂದಾಯ ಮತ್ತು ವಿಪತ್ತು ನಿರ್ವಹಣಾ ಇಲಾಖೆ, 9,10, 11 ತರಗತಿ ಶಾಲೆ ಹಾಗೂ ಹಾಸ್ಟೆಲ್ ಗಳನ್ನು ಮುಚ್ಚಲಾಗುವುದು . ಆದರೆ ಆನ್ ಲೈನ್ ತರಗತಿಗಳು ಮುಂದುವರಿಯುತ್ತದೆ ಎಂದು ಆದೇಶ ಹೊರಡಿಸಿದೆ.

ಇನ್ನು 10 ನೇ ತರಗತಿ ಬೋರ್ಡ್ ಪರೀಕ್ಷೆ ನಡೆಯಲಿದ್ದು, ವಿಶೇಷ ತರಗತಿಗಳು ಮುಂದುವರೆಯಲಿವೆ.

9,10, ಮತ್ತು 11 ನೇ ತರಗತಿ ವಿದ್ಯಾರ್ಥಿಗಳಿಗೆ ಆನ್ ಲೈನ್/ ಡಿಜಿಟಲ್ ಶಿಕ್ಷಣ ಮುಂದುವರೆಸುವಂತೆ ತಮಿಳು ನಾಡುಸರ್ಕಾರ ಸೂಚನೆ ನೀಡಿದೆ.

ಮಧ್ಯಪ್ರದೇಶದಲ್ಲಿ ಕೊರೊನಾ ಅಬ್ಬರ : ಮೂರು ಜಿಲ್ಲೆಗಳಲ್ಲಿ ಸಂಡೇ ಲಾಕ್ ಡೌನ್ನವದೆಹಲಿ : ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಅಬ್ಬರ ಹೆಚ್ಚಳವಾಗುತ್ತಿದ್ದು, ಮಹಾರಾಷ್ಟ್ರದ ಬಳಿಕ ಮಧ್ಯಪ್ರದೇಶದಲ್ಲೂ ಲಾಕ್ ಡೌನ್ ಜಾರಿ ಮಾಡಲಾಗಿದೆ.

ಮಧ್ಯಪ್ರದೇಶ ಸರ್ಕಾರ ಈ ಕುರಿತು ಆದೇಶ ಹೊರಡಿಸಿದ್ದು, ಮಧ್ಯಪ್ರದೇಶದ ಇಂದೋರ್, ಭೋಪಾಲ್, ಜಬಲ್ ಪುರ್ ನಲ್ಲಿ ಇಂದಿನಿಂದ ಸಂಡೇ ಲಾಕ್ ಡೌನ್ ಜಾರಿಯಾಗಲಿದೆ. ಪ್ರತಿ ಭಾನುವಾರ ಲಾಕ್ ಡೌನ್ ಇರಲಿದ್ದು, ಇದು ಸರ್ಕಾರದ ಮುಂದಿನ ಆದೇಶದ ವರೆಗೆ ಮುಂದುವರೆಯಲಿದೆ ಎಂದು ಸರ್ಕಾರ ತಿಳಿಸಿದೆ.

ಇನ್ನು ಶನಿವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಗ್ಗೆ ವರೆಗೆ ನೈಟ್ ಕರ್ಪ್ಯೂ ಇರಲಿದೆ.

ಲಾಕ್ ಡೌನ್, ಕರ್ಪ್ಯೂ ನಡುವೆ ಜನರ ಅಗತ್ಯ ಸೇವೆಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಸರ್ಕಾರ ಹೇಳಿದೆ.


Thanks for reading ಕೊರೊನಾ ಸೋಂಕು ಹೆಚ್ಚಳ : ತಮಿಳುನಾಡಿನಲ್ಲಿ ನಾಳೆಯಿಂದ 9,10, 11 ನೇ ತರಗತಿ ಶಾಲೆಗಳು ಬಂದ್! | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಕೊರೊನಾ ಸೋಂಕು ಹೆಚ್ಚಳ : ತಮಿಳುನಾಡಿನಲ್ಲಿ ನಾಳೆಯಿಂದ 9,10, 11 ನೇ ತರಗತಿ ಶಾಲೆಗಳು ಬಂದ್!

Post a Comment