ಮೈಸೂರು: ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿ ಪ್ರಕರಣ ಐದು ಕೋಟಿ ರೂಪಾಯಿಗೆ ಡೀಲ್ ಆಗಿದೆ. ಈ ಬಗ್ಗೆ ನನಗೆ ಮಾಹಿತಿ ಬಂದಿದೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್ಡಿಕೆ, ಮೊದಲು ಸಿಡಿ ವಿಚಾರವಾಗಿ ಮಾತನಾಡುವವನನ್ನು ಬಂಧಿಸಲಿ. ಇನ್ನೂ 4 ಅಥವಾ 19 ಸಿಡಿ ಇವೆ ಅನ್ನೋದು ಬ್ಲ್ಯಾಕ್ಮೇಲ್. ಯಾರದ್ದೇ ಖಾಸಗಿ ಬದುಕನ್ನು ಈ ರೀತಿ ತೋರಿಸಿದ್ದು ತಪ್ಪು. ಅಷ್ಟು ಸಿಡಿ ಇವೆ ಎಂದು ಹೇಳುತ್ತಿದ್ದಾನೆ. ಹಾಗಾದರೆ ಅದನ್ನು ಈತನೇ ಚಿತ್ರೀಕರಣ ಮಾಡಿಸಿದ್ದಾ? ಬ್ಲ್ಯಾಕ್ಮೇಲ್ ಮಾಡುವವರನ್ನ ಬಂಧಿಸಿ ಏರೋಪ್ಲೇನ್ ಹತ್ತಿಸಿದ್ರೆ ಸತ್ಯ ಹೊರ ಬರುತ್ತೆ ಎಂದು ದೂರುದಾರ ದಿನೇಶ್ ಕಲ್ಲಳ್ಳಿ ವಿರುದ್ಧ ಕಿಡಿಕಾರಿದರು.
ಜಾರಕಿಹೊಳಿಯ ಇಡೀ ಪ್ರಕರಣ 5 ಕೋಟಿ ರೂ.ಗೆ ಡೀಲ್ ಆಗಿದೆ.
ರಮೇಶ್ ಜಾರಕಿಹೊಳಿ ಪ್ರಕರಣದಲ್ಲಿ ಅವರಿಬ್ಬರೇ ಸೇರಿ ವಿಡಿಯೋ ಮಾಡಿಕೊಂಡಿರಬಹುದಲ್ಲವೆ? ಅವರಿಬ್ಬರಲ್ಲೇ ಯಾರಾದರೊಬ್ಬರು ಕೊಟ್ಟಿರಬೇಕಲ್ವೆ? ಈತನ ಬಳಿ ಆ ಸಿಡಿ ಹೇಗೆ ಬಂತು? ಇದರ ಬಗ್ಗೆ ಸಮಗ್ರವಾಗಿ ತನಿಖೆಯಾಗಬೇಕು. ಇದು ಸಮಾಜದಲ್ಲಿ ಹೇಸಿಗೆ ಹುಟ್ಟಿಸುವ ಪರಿಸ್ಥಿತಿ ನಿರ್ಮಾಣ ಮಾಡಿದೆ ಎಂದು ಎಚ್ಡಿಕೆ ಬೇಸರಿಸಿದರು.
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ
EmoticonEmoticon