12 ರೂ.ಗೆ 60-70 ಕಿಲೋಮೀಟರ್ ಚಲಿಸಲಿದೆ ಟೆಕೊದ ಎಲೆಕ್ಟ್ರಾ ಸ್ಕೂಟರ್

March 09, 2021
Tuesday, March 9, 2021

 


ಪೆಟ್ರೋಲ್ ಬೆಲೆ ಹೆಚ್ಚಾಗ್ತಿದ್ದಂತೆ ಜನರು ಎಲೆಕ್ಟ್ರಿಕ್ ಸ್ಕೂಟರ್ ಗೆ ಒಲವು ತೋರಿಸುತ್ತಿದ್ದಾರೆ. ಪೆಟ್ರೋಲ್ ಬೆಲೆ ಏರುತ್ತಿರುವ ಸಂದರ್ಭದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಳು ಗ್ರಾಹಕರ ಬೆಸ್ಟ್ ಆಯ್ಕೆಯಾಗಲಿದೆ. ಟೆಕೊ ಎಲೆಕ್ಟ್ರಾ ಎಲೆಕ್ಟ್ರಿಕ್ ಸ್ಕೂಟರ್ ಎಲೆಕ್ಟ್ರಿಕ್ ಅಗ್ಗದ ಸ್ಕೂಟರ್ ಗಳಲ್ಲಿ ಒಂದು.

ಕಂಪನಿಯು ಇದನ್ನು ಟೆಕೊ ಎಲೆಕ್ಟ್ರಾ ಸಾಥಿ ಹೆಸರಿನಲ್ಲಿ ಪರಿಚಯಿಸಿದೆ.

ಪುಣೆ ಮೂಲದ ಎಲೆಕ್ಟ್ರಿಕ್ ವಾಹನ ತಯಾರಕರಿಂದ ಇದನ್ನು ತಯಾರಿಸಲಾಗಿದೆ. ಟೆಕೊ ಎಲೆಕ್ಟ್ರಾ ಸಾಥಿ ಎಲೆಕ್ಟ್ರಿಕ್ ಮೊಪೆಡ್ ಬೆಲೆ ಪುಣೆಯಲ್ಲಿ 57,697 ರೂಪಾಯಿ. ಗ್ರಾಹಕರು ಈ ಸ್ಕೂಟರ್ ಅನ್ನು ಕಂಪನಿಯ ವೆಬ್‌ಸೈಟ್‌ನಿಂದ ಅಥವಾ +91 9540569569 ಸಂಖ್ಯೆಯನ್ನು ಡಯಲ್ ಮಾಡುವ ಮೂಲಕ ಬುಕ್ ಮಾಡಬಹುದು.

ಟೆಕೊ ಎಲೆಕ್ಟ್ರಾದ ಈ ಎಲೆಕ್ಟ್ರಿಕ್ ಮೊಪೆಡ್ ಅನೇಕ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಎಲ್‌ಇಡಿ ಹೆಡ್‌ಲೈಟ್‌ಗಳು, ಸೆಂಟ್ರಲ್ ಲಾಕಿಂಗ್ ಸಿಸ್ಟಮ್, ಆಂಟಿ-ಥೆಫ್ಟ್ ಅಲಾರ್ಮ್, ಸ್ಮಾರ್ಟ್ ರಿಪೇರಿ ಕಾರ್ಯ, ಮುಂಭಾಗ ಮತ್ತು ಹಿಂಭಾಗದ ಬುಟ್ಟಿಗಳು ಮತ್ತು ವೇಗದ ಚಾರ್ಜಿಂಗ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. 10 ಇಂಚಿನ ಟ್ಯೂಬ್‌ಲೆಸ್ ಟೈರ್ ಮತ್ತು ಡ್ರಮ್ ಬ್ರೇಕ್‌ಗಳನ್ನು ಸಹ ಒಳಗೊಂಡಿದೆ.

ಟೆಕೊ ಎಲೆಕ್ಟ್ರಾ ಸಂಪೂರ್ಣ ಚಾರ್ಜ್ ಆದ ನಂತರ 60-70 ಕಿ.ಮೀ ದೂರವನ್ನು ಕ್ರಮಿಸುತ್ತದೆ. ಅದರ ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು 3-4 ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ. ಇದು ಕೇವಲ 12 ರೂಪಾಯಿ ವೆಚ್ಚದಲ್ಲಿ 60 ಕಿಲೋಮೀಟರ್ ಓಡಲಿದೆ. ಸ್ಕೂಟರ್‌ನ ಉದ್ದ, ಅಗಲ ಮತ್ತು ಎತ್ತರ 1720 ಎಂಎಂ ಎಕ್ಸ್ 620 ಎಂಎಂ ಎಕ್ಸ್ 1050 ಮಿಮೀಯಾಗಿದೆ.ಇದು ಮಾರುಕಟ್ಟೆಯಲ್ಲಿ ಜಿಮೊಪೈ ಮಿಸೊ ಜೊತೆ ಸ್ಪರ್ಧಿಸಲಿದೆ.


Thanks for reading 12 ರೂ.ಗೆ 60-70 ಕಿಲೋಮೀಟರ್ ಚಲಿಸಲಿದೆ ಟೆಕೊದ ಎಲೆಕ್ಟ್ರಾ ಸ್ಕೂಟರ್ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on 12 ರೂ.ಗೆ 60-70 ಕಿಲೋಮೀಟರ್ ಚಲಿಸಲಿದೆ ಟೆಕೊದ ಎಲೆಕ್ಟ್ರಾ ಸ್ಕೂಟರ್

Post a Comment