ಡಿಜಿಟಲ್ ಡೆಸ್ಕ್: SSC MTS Recruitment 2021: ನೀವು 10ನೇ ಕ್ಲಾಸ್ ಪಾಸ್ ಆಗಿದ್ದೀರಾ? ಸರ್ಕಾರಿ ಉದ್ಯೋಗ ಮಾಡೋ ಆಸೆ ಇದ್ಯಾ? ಹಾಗಾದ್ರೆ, ನಿಮಗೆ ಇಲ್ಲಿ ಉತ್ತಮ ಅವಕಾಶವಿದೆ ನೋಡಿ.
ಹೌದು, ಸ್ಟಾಫ್ ಸೆಲೆಕ್ಶನ್ ಕಮಿಷನ್ (SSC) ತನ್ನ ಅಧಿಕೃತ ವೆಬ್ಸೈಟ್ʼನಲ್ಲಿ ಮಲ್ಟಿ ಟಾಸ್ಕಿಂಗ್ (ತಾಂತ್ರಿಕೇತರ) ಸಿಬ್ಬಂದಿ ನೇಮಕಾತಿ (SSC MTS Recruitment 2021) ಪ್ರಕ್ರಿಯೆ ನಡೆಸುತ್ತಿದ್ದು, ಆನ್ಲೈನ್ ಮೂಲಕ ಅರ್ಜಿಗಳನ್ನ ಆಹ್ವಾನಿಸಿದೆ. ಭಾರತ ಸರ್ಕಾರದ ವಿವಿಧ ಸಚಿವಾಲಯಗಳಲ್ಲಿ ಕೆಲಸ ಹುಡುಕುತ್ತಿರುವ ಯುವಕರಿಗೆ ಇದೊಂದು ಅದ್ಭುತ ಅವಕಾಶವಾಗಿದೆ. ಇನ್ನು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮಾರ್ಚ್ 21, 2021 ಕೊನೆಯ ದಿನಾಂಕವಾಗಿದ್ದು, ಮಾರ್ಚ್ 23, 2021ರೊಳಗೆ ನೋಂದಣಿ ಶುಲ್ಕ ಪಾವತಿಸಿ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ ssc.nic.in ಭೇಟಿ ನೀಡಿ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಇದಲ್ಲದೆ, ಅಭ್ಯರ್ಥಿಗಳು ಈ ಹುದ್ದೆಗಳಿಗೆ https://ssc.nic.in/ (SSC MTS Recruitment 2021) ಈ ನೇರ ಕ್ಲಿಕ್ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದು. ಅಂದ್ಹಾಗೆ, ಅಲ್ಲಿ ಅಧಿಕೃತ ಅಧಿಸೂಚನೆ ಲಭ್ಯವಿದೆ.
ಆಯೋಗವು SSC MTS ಟಯರ್-1 ಪರೀಕ್ಷೆಯನ್ನ 2021 ರ ಜುಲೈ 1 ರಿಂದ 2021 ರವರೆಗೆ ನಡೆಸಲಿದ್ದು, ಟಯರ್-2 ಪರೀಕ್ಷೆಯನ್ನ ನವೆಂಬರ್ 21, 2021 ರಂದು ನಡೆಯಲಿದೆ. ಅಧಿಕೃತ ಪ್ರಕಟಣೆ ಪ್ರಕಾರ, 'ಖಾಲಿ ಇರುವ ಹುದ್ದೆಗಳ ವಿವರಗಳು ನಿಗದಿತ ಸಮಯದಲ್ಲಿ ಲಭ್ಯವಿರಲಿವೆ. ಇನ್ನು ಇದಕ್ಕೆ ಸಂಬಂಧಿಸಿದ ಯಾವುದೇ ಅಪ್ಡೇಟ್ ಆಯೋಗದ ವೆಬ್ಸೈಟ್ʼನಲ್ಲಿ ಲಭ್ಯವಿದೆ.
ಪ್ರಮುಖ ದಿನಾಂಕಗಳು..!
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: ಫೆಬ್ರವರಿ 5, 2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮಾರ್ಚ್ 21, 2021
ಆರ್ಹತೆ: ಅಭ್ಯರ್ಥಿಯು 10ನೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ಅದಕ್ಕೆ ಸಮಾನವಾದ ಯಾವುದೇ ಮಾನ್ಯತೆ ಪಡೆದ ಮಂಡಳಿಯಿಂದ ಉತ್ತೀರ್ಣರಾಗಿರಬೇಕು.
ಅರ್ಜಿ ಶುಲ್ಕ: ಸಾಮಾನ್ಯ ವರ್ಗಕ್ಕೆ ಸೇರಿದ ಅಭ್ಯರ್ಥಿಗಳು ಅರ್ಜಿ ಶುಲ್ಕ 100 ರೂಪಾಯಿಗಳನ್ನು ಪಾವತಿಸಬೇಕಿದ್ದು, ಪರಿಶಿಷ್ಟ ಜಾತಿ (ಎಸ್ ಸಿ), ಪರಿಶಿಷ್ಟ ಪಂಗಡ (ಎಸ್ ಟಿ), ವಿಕಲಚೇತನರು (ಪಿಡಬ್ಲ್ಯೂಡಿ) ಮತ್ತು ಮಾಜಿ ಸೈನಿಕರ (ಇಎಸ್ ಎಂ) ಮೀಸಲಾತಿಗೆ ಅರ್ಹರಾದ ಮಹಿಳಾ ಅಭ್ಯರ್ಥಿಗಳು ಮತ್ತು ಅಭ್ಯರ್ಥಿಗಳಿಗೆ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.
EmoticonEmoticon