Wakefit.co ಕಂಪನಿಯು ಈ ಹಿಂದೆ ಆಯೋಜಿಸಿದ್ದ ವೈರಲ್ ಸ್ಲೀಪ್ ಕಾಂಪಿಟೀಶನ್ ವೇಕ್ಫಿಟ್ ಸ್ಲೀಪ್ ಇಂಟರ್ನ್ಶಿಪ್ ಅನ್ನು ಈ ವರ್ಷ ಮತ್ತೆ ಘೋಷಿಸಿದೆ.
ಸ್ಲೀಪ್ ಕಾಂಪಿಟೀಶನ್ಗಾಗಿ ಇರುವ ಅರ್ಜಿ ಪ್ರಕ್ರಿಯೆಯು ಈಗ ಬಹಳ ಸರಳ ಮಾದರಿಯಲ್ಲಿದ್ದು, ಅಲ್ಲಿ ಅರ್ಜಿದಾರರು ಸರಳ ಅರ್ಜಿಯನ್ನು ಭರ್ತಿ ಮಾಡಬೇಕು. ಅದರಲ್ಲಿ ಈ ಕೆಲಸಕ್ಕೆ ಅವರೇ ಯಾಕೆ ಅತ್ಯುತ್ತಮ ಆಯ್ಕೆ ಎಂಬುದನ್ನು ಬರೆಯಬೇಕು. ಯಶಸ್ವಿ ಅರ್ಜಿದಾರರು ಸೃಜನಾತ್ಮಕವಾಗಿ ಇದಕ್ಕೆ ಉತ್ತರ ನೀಡಬಲ್ಲರು.
ಭರ್ತಿ ಮಾಡಬೇಕಾದ ಅರ್ಜಿಗಾಗಿ ಈ ಲಿಂಕ್ ಕ್ಲಿಕ್ಕಿಸಿ - https://bit.ly/3txtXut
ಭಾರತದ ಸ್ಲೀಪ್ ಚಾಂಪಿಯನ್ ಕಿರೀಟ ತೊಡಿಸುವುದಕ್ಕಾಗಿ ವೇಕ್ಫಿಟ್, ಯಾವುದೇ ರೀತಿಯ ಪರಿಸರದಲ್ಲೂ ನಿದ್ದೆ ಮಾಡಬಲ್ಲ ವ್ಯಕ್ತಿಗಳನ್ನು ನಿರೀಕ್ಷಿಸುತ್ತಿದೆ. ತರಗತಿಯಲ್ಲೇ ನಿದ್ದೆ ಹೋಗುವ ಅಭ್ಯಾಸವಿದ್ದರೆ ಅಂಥ ಅನುಭವವನ್ನು ಇದಕ್ಕೆ ಪೂರಕ ಅನುಭವ ಎಂದು ಪರಿಗಣಿಸಲಾಗುತ್ತದೆ. ಬಿಂಜ್ ವಾಚಿಂಗ್ ಕೈಬಿಡುವ ಮತ್ತು ನಿಶ್ಚಿತ ಮಲಗುವ ಸಮಯವನ್ನು ನಿರ್ವಹಿಸುವ ಸಾಮರ್ಥ್ಯವಿದ್ದರೆ ಅದು ದೊಡ್ಡ ಪ್ಲಸ್ ಪಾಯಿಂಟ್ ಆಗುತ್ತದೆ.
ಅತ್ಯುತ್ತಮ ಸಾಧನೆ ತೋರುವ ಸ್ಲೀಪ್ ಇಂಟರ್ನ್ ಗೆ ಅಥವ ಸ್ಲೀಪ್ ಚಾಂಪಿಯನ್ ಆಫ್ ಇಂಡಿಯಾ ಕಿರೀಟ ಧರಿಸುವವರಿಗೆ ಗ್ರ್ಯಾಂಡ್ ಸ್ಟೈಪೆಂಡ್ 10 ಲಕ್ಷ ರೂಪಾಯಿಯನ್ನು ವೇಕ್ಫಿಟ್.ಕೊ ನೀಡಲಿದೆ. ಆಯ್ಕೆಯಾದ ಪ್ರತಿಯೊಬ್ಬ ಇಂಟರ್ನ್ಗೆ 1 ಲಕ್ಷ ರೂಪಾಯಿ ಸ್ಟೈಪೆಂಡ್ ಸಿಗಲಿದೆ.
ಕಳೆದ ಸೀಸನ್ ನಲ್ಲಿ, 1.65 ಲಕ್ಷ ಅರ್ಜಿ ಬಂದಿತ್ತು. ಅದರಲ್ಲಿ 23 ಸ್ಲೀಪ್ ಇಂಟರ್ನ್ಗಳನ್ನು ಆಯ್ಕೆ ಮಾಡಿ, ಅವರಿಗೆ ವೇಕ್ಫಿಟ್ ಮ್ಯಾಟ್ರೆಸ್ ಮತ್ತು ಸ್ಲೀಪ್ ಟ್ರ್ಯಾಕರ್ ಕೊಡಲಾಗಿತ್ತು. ಸೆಲೆಬ್ರಿಟಿ ಜಡ್ಜ್ ಗಳಾದ ಮಲ್ಲಿಕಾ ದುವಾ, ಸೈರಸ್ ಬರೋಚಾ, ಶಿವಾಂಕಿತ್ ಪರಿಹಾರ್ ಮತ್ತು ನವೀನ್ ಕೌಶಿಕ್ ಬೆಂಗಳೂರಿನಲ್ಲಿ ಸಂದರ್ಶನ ನಡೆಸಿ ಈ 23 ಇಂಟರ್ನ್ಗಳನ್ನು ಆಯ್ಕೆ ಮಾಡಿದ್ದರು.
ಈ 100 ರಾತ್ರಿ ಇಂಟರ್ನ್ಶಿಪ್ ಸಂದರ್ಭದಲ್ಲಿ ಅವರ ನಿದ್ದೆಯನ್ನು ಒಂದು ಫಿಟ್ನೆಸ್ ಟ್ರ್ಯಾಕಿಂಗ್ ಡಿವೈಸ್ ಮೂಲಕ ಟ್ರ್ಯಾಕ್ ಮಾಡಲಾಗಿತ್ತು ಮತ್ತು ಅವರು ವೇಕ್ಫಿಟ್ ಆರ್ಥೋಪೆಡಿಕ್ ಮ್ಯಾಟ್ರೆಸ್ ಬಳಸಿದ್ದರು. ಅಲ್ಲದೆ ಅವರು ಯೋಗ ನಿದ್ರಾ ಮೆಡಿಟೇಶನ್, ನ್ಯೂಟ್ರಿಶನ್ ಸೆಷನ್ಸ್ ಮುಂತಾದ ವಿವಿಧ ಸೆಷನ್ಸ್ ಗಳಲ್ಲೂ ಭಾಗವಹಿಸಿದ್ದರು. ಅದೇ ರೀತಿ, ಶಾರೀರಿಕ ಚಟುವಟಿಕೆ ಮತ್ತು ಇನ್ನೂ ಅನೇಕ ಚಟುವಟಿಕೆಗಳಲ್ಲಿ ಅವರು ಪಾಲ್ಗೊಂಡಿದ್ದರು.
ವೇಕ್ಫಿಟ್.ಕೊ ಕಂಪನಿಯು 2016ರಲ್ಲಿ ಅಸ್ತಿತ್ವಕ್ಕೆ ಬಂತು. ಇದು ಸ್ಲೀಪ್ ಸಲ್ಯೂಷನ್ ಕಂಪನಿ ಅಷ್ಟೇ ಅಲ್ಲ, ಈಗ ಇದು ಹೋಮ್ ಸಲ್ಯೂಷನ್ಸ್ ಅಥವಾ ಸೋಫಾಸ್, ಸ್ಟಡೀ ಟೇಬಲ್ಸ್, ಆಫೀಸ್ ಚೇರ್ಸ್, ವಾರ್ಡ್ರೋಬ್ಸ್, ಕಾಫಿ ಟೇಬಲ್ಸ್ ಮತ್ತು ಇನ್ನೂ ಅನೇಕ ರೀತಿಯ ಮನೆ ಬಳಕೆಯ ಪೀಠೋಪಕರಣಗಳನ್ನು ಪರಿಚಯಿಸಿದೆ. ಮನೆಗಳಿಗಾಗಿ ಬಜೆಟ್ ಸ್ನೇಹಿ ಮತ್ತು ಆರೋಗ್ಯಕರ ಜೀವನಶೈಲಿಗೆ ಅನುಗುಣವಾದ ದಕ್ಷತಾಶಾಸ್ತ್ರ ಪರಿಹಾರವನ್ನು ಒದಗಿಸುವ ಉದ್ದೇಶವನ್ನೂ ವೇಕ್ಫಿಟ್ ಹೊಂದಿದೆ.
2 komentar
Write komentarYamanurapp maliyapp diwanad. De gadag ta gajedragad. At myakalajari
ReplyYamanurapp maliyapp diwanad de gadag ta gajedragad at myakalajari
ReplyEmoticonEmoticon