ಪ್ರತಿದಿನ 1 ಚಮಚ ʼಸೋಂಪು ಕಾಳುʼ ತಿನ್ನಿ.. ಈ 6 ಸಮಸ್ಯೆಗಳಿಗೆ ಟಾಟಾ ಬೈ ಬೈ ಹೇಳಿ..!

March 13, 2021
Saturday, March 13, 2021

 


ಡಿಜಿಟಲ್‌ ಡೆಸ್ಕ್:‌ ಸಾಮಾನ್ಯ ಮಹಿಳೆಯರು ಸ್ತೂಲ ಕಾಯ ಅಥ್ವಾ ತೂಕ ಹೆಚ್ಚಳ ಸಮಸ್ಯೆಯಿಂದ ಬಳಲುತ್ತಿರ್ತಾರೆ. ಆದ್ರೆ, ಬಹುತೇಕರು ಜಿಮ್ʼಗೆ ಹೋಗೋಕೆ ಹಿಂಜರಿಯುತ್ತಾರೆ. ಸಮಯದ ಅಭಾವೂ ಇದಕ್ಕೆ ಕಾರಣವಾಗ್ಬೋದು. ಇನ್ನು ಕೆಲವರು ಜಿಮ್ʼಗೆ ಹೆಚ್ಚು ಹಣ ಖರ್ಚು ಮಾಡಲು ಬಯಸುವುದಿಲ್ಲ. ಅಂತಹ ಮಹಿಳೆಯರು ಈ ಸುಲಭ ಟಿಪ್ಸ್‌ʼಗಳನ್ನ ಅನುಸರಿಸಿ, ತೂಕ ಇಳಿಸಿಕೊಳ್ಬೋದು.

ಹೌದು, ತಜ್ಞರ ಪ್ರಕಾರ ನೀವು ಇದಕ್ಕಾಗಿ ತುಂಬಾ ಶ್ರಮಪಡುವ ಅಗತ್ಯವಿಲ್ಲ. ಅಡುಗೆ ಮನೆಯಲ್ಲಿರುವ ಕೇವಲ 1 ಚಮಚ ಸೋಂಪು ಕಾಳಿನ ಸಹಾಯದಿಂದ ಶೀಘ್ರವಾಗಿ ನೀವು ನಿಮ್ಮ ತೂಕ ಕಡಿಮೆ ಮಾಡಿಕೊಳ್ಬೋದು.

ಬಹುತೇಕ ಎಲ್ಲ ಮನೆಗಳಲ್ಲಿಯೂ ಸೋಂಪು ಕಾಳನ್ನ ಬಳಸಲಾಗುತ್ತೆ. ಸಾಮಾನ್ಯ ಇದನ್ನ ಆಹಾರದ ಸ್ವಾದ ಹೆಚ್ಚಿಸೋಕೆ ಮಸಾಲೆ ಪದಾರ್ಥವಾಗಿ ಬಳಸಲಾಗುತ್ತದೆ.

ಇನ್ನು ಆಹಾರ ಚೆನ್ನಾಗಿ ಜೀರ್ಣವಾಗಲು ರೆಸ್ಟೋರೆಂಟ್ ಮತ್ತು ಇತರೆಡೆಗಳಲ್ಲಿ ಊಟ ಮಾಡಿದ ನಂತ್ರ ಈ ಸೋಂಪು ಕಾಳನ್ನ ನೀಡೋ ಪದ್ದತಿ ಇದೆ.

ಆದ್ರೆ, ಪ್ರತಿದಿನವೂ ಸೋಂಪು ತಿನ್ನುವ ಮೂಲಕ ನಿಮ್ಮ ತೂಕವನ್ನ ಶೀಘ್ರವಾಗಿ ಕಡಿಮೆ ಮಾಡಿಕೊಳ್ಬೋದು. ಅಲ್ದೇ ವಿವಿಧ ರೀತಿಯ ಸಮಸ್ಯೆಗಳನ್ನ ನಿವಾರಿಸಿಕೊಳ್ಬೋದು ಅನ್ನೋದು ನಿಮ್ಗೆ ಗೊತ್ತಾ? ಈ ಕಾಳುಗಳು ಆರೋಗ್ಯಕ್ಕೆ ತುಂಬಾ ಅಗತ್ಯವಾದ ಹಲವಾರು ಪೋಷಕಾಂಶಗಳನ್ನ ಒಳಗೊಂಡಿರುತ್ತವೆ. ಬೇಸಿಗೆಯಲ್ಲಿ ದೇಹವನ್ನ ತಂಪಾಗಿರಿಸಲು ಸೋಂಪು ಬಳಸಲಾಗುತ್ತೆ. ಆದ್ದರಿಂದ ಇದ್ರ ಬಳಕೆ ಬೇಸಿಗೆಯಲ್ಲಿ ಕೊಂಚ ಹೆಚ್ಚಾಗಿರುತ್ತೆ ಅಂದ್ರೆ ತಪ್ಪಾಗೋಲ್ಲ.

ಸೋಂಪು ಕಾಳಿನಲ್ಲಿ ವಿಟಮಿನ್ ಸಿ ಅಂಶವಿದ್ದು, ಇದರಲ್ಲಿ ಕ್ಯಾಲ್ಸಿಯಂ, ಸೋಡಿಯಂ, ರಂಜಕ, ಕಬ್ಬಿಣ ಮತ್ತು ಪೊಟ್ಯಾಶಿಯಂʼನಂತಹ ಅಗತ್ಯ ಖನಿಜಗಳಿವೆ. ಇದು ಆರೋಗ್ಯವನ್ನ ವೃದ್ಧಿಸುವ ಶಕ್ತಿ ಹೊಂದಿದೆ.

ತೂಕ ಇಳಿಸಲು ಸಹಕಾರಿ ಈ ಸೋಂಪು..!ಸೋಂಪು ಕಾಳುಗಳು ನಾರಿನಾಂಶ, ಆಂಟಿ ಆಕ್ಸಿಡೆಂಟ್, ಖನಿಜಾಂಶಗಳು ಇತ್ಯಾದಿಗಳ ಸಮೃದ್ಧ ಮೂಲವಾಗಿದ್ದು, ಎಲ್ಲಾ ಕೊಬ್ಬು ಕರಗಿಸಲು ಇದು ತುಂಬಾ ಸಹಕಾರಿ ಎಂದು ತಜ್ಞರು ಹೇಳುತ್ತಾರೆ. ಸೋಂಪಿನಲ್ಲಿ ನಾರಿನ ಅಂಶವು ಸಮೃದ್ಧವಾಗಿದ್ದು, ಇದು ಹೆಚ್ಚು ಹೊತ್ತು ಹೊಟ್ಟೆ ತುಂಬಿದಂತೆ ಮಾಡುತ್ತದೆಯಂತೆ. ಹಾಗಾಗಿ ಇದ್ರಿಂದ ನೀವು ಹೆಚ್ಚು ತಿನ್ನೋಕಾಗಲ್ಲ. ಇದು ಕ್ಯಾಲೋರಿ ಸೇವನೆಯನ್ನ ಕಡಿಮೆ ಮಾಡೋದ್ರಿಂದ ತೂಕ ಕಡಿಮೆ ಆಗುತ್ತೆ ಎನ್ನುತ್ತಾರೆ.

ಇನ್ನು 'ಈ ಸೋಂಪು ದೇಹದಲ್ಲಿ ವಿಟಮಿನ್ʼಗಳು ಮತ್ತು ಖನಿಜಗಳ ಹೀರಿಕೊಳ್ಳುವಿಕೆಯನ್ನ ಸುಧಾರಿಸುವ ಮೂಲಕ ಕೊಬ್ಬಿನ ಶೇಖರಣೆಯನ್ನ ಕಡಿಮೆ ಮಾಡುತ್ತೆ. ಸೋಂಪಿನಲ್ಲಿ ಮೂತ್ರವರ್ಧಕ ಗುಣಗಳಿವೆ. ಆದ್ದರಿಂದ ಸೋಂಪು ಕಾಳಿನ ಟೀ ದೇಹದಲ್ಲಿರುವ ವಿಷಕಾರಿ ಅಂಶಗಳು ಹೊರ ಹಾಕುತ್ತೆ.

ಹೊಟ್ಟೆಗೆ ಒಳ್ಳೆಯದು..!
ಸೋಂಪಿನಲ್ಲಿ ಆಂಟಿ ಆಕ್ಸಿಡೆಂಟ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳಿವೆ. ಆದ್ದರಿಂದ ಇದು ಹೊಟ್ಟೆಗೆ ತುಂಬಾ ಒಳ್ಳೆಯದು. ದೇಹವನ್ನ ಒಳಗಿನಿಂದ ತಂಪಾಗಿಡುತ್ತದೆ. ಅಸಿಡಿಟಿಯನ್ನು ತಡೆದು, ದೇಹದ ವಾಸನೆ ಮತ್ತು ಉಸಿರಾಟದ ದುರ್ವಾಸನೆಯನ್ನ ಹೋಗಲಾಡಿಸುತ್ತೆ.

ಬ್ಲಾಕ್ ಪ್ಯೂರಿಫೈಯರ್ ಮಾಡುತ್ತೆ..!
ಸೋಂಪು ಕಾಳಿನಲ್ಲಿರುವ ಸಾರಭೂತ ತೈಲಗಳು ಮತ್ತು ನಾರುಗಳು ದೇಹದಿಂದ ವಿಷಕಾರಿ ಅಂಶಗಳನ್ನ ಹೊರಹಾಕಲು ಮತ್ತು ಬ್ಲಾಕ್ʼನ್ನ ಶುದ್ಧೀಕರಿಸಲು ಉಪಯುಕ್ತವಾಗಿವೆ. ಇದರ ಜೊತೆಗೆ ಸೋಂಪು ತಿನ್ನುವ ಮೂಲಕ ನಿಮ್ಮ ದೇಹವು ಹೆಚ್ಚಿನ ಪೋಷಕಾಂಶಗಳನ್ನ ಹೀರಿಕೊಳ್ಳಲು ಸಹಾಯ ಮಾಡುತ್ತದೆ.

ಕೂದಲಿಗೆ ಒಳ್ಳೆಯದು..!ನಿಮ್ಮ ಕೂದಲು ಬಿಳಿಯಾಗಿರದಂತೆಯೂ ಸೋಂಪು ರಕ್ಷಿಸುತ್ತದೆ. ಇದರಲ್ಲಿ ಹೇರಳವಾಗಿರುವ ಪ್ರೋಟೀನುಗಳು ನಿಮ್ಮ ಕೂದಲಿಗೆ ಕಬ್ಬಿಣ ಮತ್ತು ಸತುವನ್ನ, ಕ್ಯಾಲ್ಸಿಯಂ ಮತ್ತು ಪೊಟ್ಯಾಶಿಯಂನೊಂದಿಗೆ ನೀಡುತ್ತೆ. ಈ ಎಲ್ಲಾ ಪೋಷಕಾಂಶಗಳು ನಿಮ್ಮ ಕೂದಲಿಗೆ ತುಂಬಾ ಅವಶ್ಯಕ.

ಚರ್ಮದಲ್ಲಿ ಹೊಳಪು..!
ನಿಮ್ಮ ಚರ್ಮಕ್ಕೆ ಸೋಂಪು ಅತ್ಯುತ್ತಮ. ಖಾಲಿ ಹೊಟ್ಟೆಯಲ್ಲಿ ಸೋಂಪು ತಿಂದ್ರೆ ಚರ್ಮವು ಕಾಂತಿಯಿಂದ ಕೂಡಿರುತ್ತದೆ. ಇನ್ನೀದು ನಿಮ್ಮ ಚರ್ಮದ ಸಮಸ್ಯೆಯನ್ನ ಸಹ ಸುಧಾರಿಸುತ್ತದೆ. ಸೋಂಪು ಕಾಳುಗಳಲ್ಲಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ಉತ್ಕರ್ಷಣ ನಿರೋಧಕ ಗುಣಗಳಿದ್ದು, ಇದು ಮುಮ್ಹಾನ್ʼಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಕಣ್ಣಿನ ಆರೋಗ್ಯ ವೃದ್ಧಿಸುತ್ತೆ..!
ಪ್ರತಿದಿನವೂ ಸೋಂಪು ಸೇವಿಸುವುದು ಕಣ್ಣಿಗೂ ಒಳ್ಳೆಯದು. ಸೋಂಪು ಕಾಳಿನಲ್ಲಿ ವಿಟಮಿನ್ ಎ ಹೇರಳವಾಗಿದ್ದು, ಇದು ನಿಮ್ಮ ಕಣ್ಣುಗಳಿಗೆ ತುಂಬಾ ಒಳ್ಳೆಯದು.

ಈ 5 ಸಮಸ್ಯೆಗಳಿಂದ ಹೊರಬರಲು ನೀವು ಪ್ರತಿದಿನ 1 ಚಮಚ ಸೋಂಪು ಸೇವಿಸಿ.

Thanks for reading ಪ್ರತಿದಿನ 1 ಚಮಚ ʼಸೋಂಪು ಕಾಳುʼ ತಿನ್ನಿ.. ಈ 6 ಸಮಸ್ಯೆಗಳಿಗೆ ಟಾಟಾ ಬೈ ಬೈ ಹೇಳಿ..! | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಪ್ರತಿದಿನ 1 ಚಮಚ ʼಸೋಂಪು ಕಾಳುʼ ತಿನ್ನಿ.. ಈ 6 ಸಮಸ್ಯೆಗಳಿಗೆ ಟಾಟಾ ಬೈ ಬೈ ಹೇಳಿ..!

Post a Comment