ಕೊರೊನಾ 2ನೇ ಅಲೆ ಭೀತಿ: ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ ಸರ್ಕಾರ

March 24, 2021

 


ಹೈದರಾಬಾದ್, ಮಾರ್ಚ್ 23: ಕೊರೊನಾ 2ನೇ ಅಲೆ ಹೆಚ್ಚಾಗುತ್ತಿರುವ ಹಿನ್ನೆಲೆ ವೈದ್ಯಕೀಯ ಕಾಲೇಜುಗಳನ್ನು ಹೊರತುಪಡಿಸಿ ಎಲ್ಲಾ ಶಾಲಾ ಸಂಸ್ಥೆಗಳನ್ನು ಮುಚ್ಚಲು ತೆಲಂಗಾಣ ಸರ್ಕಾರ ನಿರ್ಧರಿಸಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ವೈದ್ಯಕೀಯ ಶಿಕ್ಷಣ ಸಂಸ್ಥೆ ಹೊರತುಪಡಿಸಿ ಬೇರೆಲ್ಲಾ ಸರ್ಕಾರಿ- ಖಾಸಗಿ ಶಾಲೆ, ಕಾಲೇಜು, ಹಾಸ್ಟೆಲ್, ಗುರುಕುಲ ಗಳಿಗೆ ರಜೆ ಘೋಷಿಸಿ ಕೆ.ಚಂದ್ರಶೇಖರ್ ರಾವ್ ನೇತೃತ್ವದ ತೆಲಂಗಾಣ ಸರ್ಕಾರ ಆದೇಶ ಹೊರಡಿಸಿದೆ.

ಬೆಂಗಳೂರಿನಲ್ಲಿ ಕೊರೊನಾ ಏರಿಕೆ; ರಾಜ್ಯದಲ್ಲಿ 2010 ಪ್ರಕರಣ ಪತ್ತೆ

ಇನ್ನು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಧಕ್ಕೆ ಆಗಬಾರದು ಎಂದು ಆನ್‌ಲೈನ್ ತರಗತಿಗಳನ್ನು ಮುಂದುವರೆಸಲಾಗುವುದು ಎಂದು ಶಿಕ್ಷಣ ಸಚಿವರಾದ ಪಿ.ಸಬಿತಾ ಇಂದ್ರ ರೆಡ್ಡಿ ವಿಧಾನಸಭೆಯಲ್ಲಿ ತಿಳಿಸಿದರು.

ರಾಜ್ಯದಾದ್ಯಂತ ಅದರಲ್ಲೂ ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚಿನ ಸಂಖ್ಯೆಯ ಕೋವಿಡ್-19 ಪ್ರಕರಣಗಳು ವರದಿಯಾಗುತ್ತಿವೆ. ವಿದ್ಯಾರ್ಥಿಗಳು ಸಾಮೂಹಿಕವಾಗಿ ಸೇರುವುದರಿಂದ ವೈರಸ್ ಮತ್ತಷ್ಟು ಹರಡುವ ಸಾಧ್ಯತೆಯಿದೆ ಎಂದು ಹೇಳಿದರು.

ಇನ್ನು ಮಾಸ್ಕ್ ಧರಿಸುವುದು, ದೈಹಿಕ ಅಂತರ ಕಾಪಾಡಿಕೊಳ್ಳುವುದು ಮತ್ತು ನಿಯಮಿತವಾಗಿ ಕೈ ತೊಳೆಯುವುದು ಸೇರಿದಂತೆ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಸರಿಯಾಗಿ ಅನುಸರಿಸುವ ಮೂಲಕ ಕೊರೊನಾ ವಿರುದ್ಧ ಹೋರಾಡಬೇಕಿದೆ. ರಾಜ್ಯ ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳಿಗೆ ಜನರು ಸ್ಪಂದಿಸಬೇಕಿದೆ ಎಂದು ಮನವಿ ಮಾಡಿದರು.ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೂ ಕೋವಿಡ್‌ ಲಸಿಕೆ ಕೊಡಿ

March 24, 2021

 


ಬೆಂಗಳೂರು: ಕೋವಿಡ್‌ ಸೋಂಕಿನ ಎರಡನೇ ಅಲೆ ಶುರುವಾಗಿದೆ. ಈಗಾಗಲೇ ನೆರೆಯ ಮಹಾರಾಷ್ಟ್ರ ಸೇರಿ ಇನ್ನಿತರ ಕೆಲ ರಾಜ್ಯಗಳಲ್ಲಿ ಸೋಂಕಿನ ಹೆಚ್ಚಳ ಕಂಡು ಬಂದಿದೆ. ಹಲವು ನಗರಗಳು ಮತ್ತೆ ಲೌಕ್‌ಡೌನ್‌ ಆಗಿವೆ. ರಾಜ್ಯದಲ್ಲೂ ಸೋಂಕಿನ ಸಂಖ್ಯೆಯಲ್ಲಿ ದ್ವಿಗುಣತೆ ಕಂಡು ಬಂದಿದ್ದು ಆಹಿನ್ನೆಲೆ ಯಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೂ ಕೋವಿಡ್‌ ಲಸಿಕೆ ನೀಡಬೇಕೆಂಬ ಮಾತು ಕೇಳಿ ಬಂದಿದೆ.

ಎಲ್ಲರಿಗೂ ಲಸಿಕೆ ನೀಡುವುದು ಸರ್ಕಾರದ ಜವಾಬ್ದಾರಿ. ಈಗಾಗಲೇ ಸರ್ಕಾರ ಹಿರಿಯ ನಾಗರಿಕರಿಗೆ ಕೋವಿಡ್‌ ಲಸಿಕೆನೀಡುವ ಕಾರ್ಯದಲ್ಲಿ ಮಗ್ನವಾಗಿದೆ. ಅದೇ ರೀತಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಕೋವಿಡ್‌ ಲಸಿಕೆ ಉಚಿತವಾಗಿ ನೀಡಬೇಕೆಂದು ಹಿರಿಯಶಿಕ್ಷಣ ತಜ್ಞ ನಿರಂಜನಾರಾಧ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.ಈ ಹಿಂದೆ ಸರ್ಕಾರ ಶಿಕ್ಷಕರನ್ನು ಕೋವಿಡ್‌ ಕಾರ್ಯಕ್ಕೆ ಬಳಕೆಮಾಡಿಕೊಂಡಿದೆ.

ಹೀಗಾಗಿ ಅವರೂ ಸುರಕ್ಷಿತವಾಗಿರುವುದು ಮುಖ್ಯ. ಅವರು ಸುರಕ್ಷಿತವಾಗಿದ್ದಾರೆ ‌ ಮಕ್ಕಳು ಸುರಕ್ಷಿತರಾಗಿರುತ್ತಾರೆ.ಆ ಹಿನ್ನೆಲೆಯಲ್ಲಿ ಶಿಕ್ಷಕರು ಮತ್ತು ಮಕ್ಕಳಿಗೆ ಲಸಿಕೆ ನೀಡುವುದು ಅಗತ್ಯ ಎಂದು ತಿಳಿಸಿದ್ದಾರೆ.

ಪರೀಕ್ಷೆ ಎದುರಿಸಲು ಧೈರ್ಯ ಬರುತ್ತದೆ: ಶೀಘ್ರದಲ್ಲೇಮಕ್ಕಳಿಗೆ ಪರೀಕ್ಷೆಗಳು ಆರಂಭವಾಗುವುದರಿಂದ ಅವರಿಗೆಲಸಿಕೆ ನೀಡುವ ಕಾರ್ಯ ಕೂಡ ಆಗಬೇಕು. ಹೀಗೆಮಾಡಿದಾಗ ಮಾತ್ರ ಮಕ್ಕಳು ಧೈರ್ಯದಿಂದ ಪರೀಕ್ಷೆಬರೆಯಲು ಸಾಧ್ಯವಾಗುತ್ತದೆ ಎಂದು ಚೈಲ್ಡ್‌ ರೈಟ್‌ ಟ್ರಸ್ಟ್‌ನ ನಿರ್ದೇಶಕರಾದ ನಾಗಸಿಂಹ ಜಿ.ರಾವ್‌ ಹೇಳಿದ್ದಾರೆ.ಸರ್ಕಾರ ಕೇವಲ ಪರೀಕ್ಷೆ ಮಾಡಬೇಕೋ, ಬೇಡವೋ ಎಂಬ ಬಗ್ಗೆ ಮಾತ್ರ ಗಮನ ಹರಿಸುತ್ತಿದೆ. ಆದರೆ ನಮ್ಮ ಸಂರಕ್ಷಣೆ ದೃಷ್ಟಿಯಿಂದ ಆ‌ಲೋಚಿಸುತ್ತಿಲ್ಲ ಎಂಬ ಮಾತುಗಳನ್ನು ವಿದ್ಯಾರ್ಥಿಗಳು ಆಡುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಸರ್ಕಾರಕಾಲೇಜು ಮಕ್ಕಳಿಗೂ ಕೂಡ ಲಸಿಕ ನೀಡುವಿಕೆಯಲ್ಲಿ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದ್ದಾರೆ

ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ: ವಿದಾರ್ಥಿಗಳು ಭಿನ್ನ ಭಿನ್ನ ಪ್ರದೇಶಗಳಿಂದ ಶಾಲೆ ಮತ್ತು ಕಾಲೇಜುಗಳಿಗೆ ತೆರಳುತ್ತಾರೆ. ಮಕ್ಕಳ ಉಷ್ಣಾಂಶವನ್ನು ಪರೀಕ್ಷೆಮಾಡುವುದರಿಂದ ಪ್ರಯೋಜನವಿಲ್ಲ. ಆ ಹಿನ್ನೆಲೆ ಯಲ್ಲಿವಿದ್ಯಾರ್ಥಿಗಳಿಗೂ ಲಸಿಕೆ ನೀಡುವತ್ತ ಆಲೋಚಿಸಬೇಕೆಂದು ಬೆಂಗಳೂರಿನ ಆಚಾರ್ಯ ಎಜುಕೇಶನ್‌ ಟ್ರಸ್ಟ್‌ನ ಉಪಾಧ್ಯಕ್ಡಾ.ವಿಷ್ಣಭರತ್‌ ಹೇಳಿದ್ದಾರೆ. ಲಾಕ್‌ಡೌನ್‌ ಮಾಡಿರುವ ಮೂಲ ಉದ್ದೇಶ ಹಿರಿಯರನ್ನು ಮತ್ತು ಮಕ್ಕಳನ್ನು ರಕ್ಷಿಸುವುದ್ದಾಗಿದೆ. ಈಗಾಗಲೇ ಸರ್ಕಾರ ಲಸಿಕೆ ನೀಡುವಿಕೆಯಲ್ಲಿ ಹಿರಿಯ ನಾಗರಿಕರಿಗೆ ಮೊದಲ ಆದ್ಯತೆನೀಡಿದೆ. ಮುಂದಿನ ಹಂತವಾಗಿ ಶಿಕ್ಷಕರಿಗೆ ಮತ್ತುಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಆದ್ಯತೆ ನೀಡಬೇಕುಎಂದು ಸಂದೀಪನಿ ಗ್ರೂಫ್ ಆಫ್ ಇನ್ಸ್‌ಸ್ಟಿಟ್ಯೂಟ್‌ನ ಅಧ್ಯಕ್ಷ ಲೋಕೇಶ್‌ ತಾಳಿಕಟ್ಟೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಶಿಕ್ಷಕರು, ಪತ್ರಕರ್ತರಿಗೂ ಲಸಿಕೆಗೆ ಒತ್ತಾಯ :

ವಿಧಾನ ಪರಿಷತ್ತು: ಕೋವಿಡ್ ವಾರಿಯರ್ಸ್ ಗಳಾಗಿ ಕಾರ್ಯನಿರ್ವಹಿಸಿದ ಶಿಕ್ಷಕರು, ಉಪನ್ಯಾಸಕರು ಹಾಗೂ ಪತ್ರಕರ್ತರಿಗೂ ಸರ್ಕಾರ ಕೋವಿಡ್ ಲಸಿಕೆ ನೀಡಲು ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಸದಸ್ಯ ಅರುಣ ಶಹಾಪೂರ ಒತ್ತಾಯಿಸಿದರು. ಮಂಗಳವಾರ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿ, ಲಾಕ್‌ಡೌನ್‌ ಸಂದರ್ಭದಲ್ಲಿ ರಾಜ್ಯದ ಶಿಕ್ಷಕರು, ಉಪನ್ಯಾಸಕರು ಜೀವ ಪಣಕ್ಕಿಟ್ಟು ಕೋವಿಡ್ ವಾರಿಯರ್ಸ್‌ಗಳಾಗಿ ಸೇವೆ ಸಲ್ಲಿಸಿದ್ದಾರೆ. ಈಗ ಕೋವಿಡ್ ಎರಡನೇ ಅಲೆ ಪ್ರಾರಂಭವಾಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಮುಂಬರುವ ದಿನಗಳಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳನ್ನೂ ನಡೆಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಕರಿಗೂ ಲಸಿಕೆ ನೀಡುವುದು ಅತ್ಯವಶ್ಯಕ ಎಂದು ಅಭಿಪ್ರಾಯಪಟ್ಟರು. ಅಲ್ಲದೆ, ಲಾಕ್‌ಡೌನ್‌ ಅವಧಿಯಲ್ಲಿ ಪತ್ರಕರ್ತರು, ಮಾಧ್ಯಮ ವಿಭಾಗದ ಎಲ್ಲ ಸಿಬ್ಬಂದಿ ಸಹ ಕಾರ್ಯನಿರ್ವಹಿಸಿದ್ದಾರೆ. ಅವರಿಗೂ ಲಸಿಕೆ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.

ಧೈರ್ಯದಿಂದ ಪರೀಕ್ಷೆ ಎದುರಿಸುವ ದೃಷ್ಟಿಯಿಂದ ಸರ್ಕಾರ ಲಸಿಕೆ ಯನ್ನು ವಿದ್ಯಾರ್ಥಿ ಸಮೂಹಕ್ಕೂ ನೀಡುವ ನಿಟ್ಟಿನಲ್ಲಿ ಹೆಜ್ಜೆಯಿರಿ ಸಬೇಕು. ಕೊಠಡಿಯಲ್ಲಿ ಭಯಬಿಟ್ಟು ಮಕ್ಕಳುಪಾಠ ಕೇಳುವ ವಾತಾವರಣ ಸೃಷ್ಠಿಯಾಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ. – ಚಂದ್ರಕಾಂತ್‌ ಭಂಡಾರಿ, ಶ್ರೀಕೊಟ್ಟೂರು ಬಸವೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷ, ರುಕ್ಮಾಪುರ ಯಾದಗಿರಿ

ಶೈಕ್ಷಣಿಕ ಹಿತದೃಷ್ಟಿಯಿಂದ ವಿದ್ಯಾರ್ಥಿ ಗಳಿಗೆ ಕೋವಿಡ್ ಲಸಿಕೆಯನ್ನುಆದ್ಯತೆ ಮೇರೆಗೆ ನೀಡಬೇಕು. ಪಿಯುಸಿ,ಪದವಿ, ಸ್ನಾತಕೋತ್ತರ ಪದವಿ, ಎಂಜಿನಿಯರಿಂಗ್‌, ಡಿಪ್ಲೊಮಾ ಸೇರಿ ಎಲ್ಲ ರೀತಿಯ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ ಲಸಿಕೆಯನ್ನು ಸರ್ಕಾರ ನೀಡಬೇಕು. ಡಾ.ಬಿ.ಆರ್‌. ಸುಪ್ರಿತ್‌, ಪ್ರಾಂಶುಪಾಲರುಹಾಗೂ ಕಾರ್ಯದರ್ಶಿ, ಆಕ್ಸ್‌ಫ‌ರ್ಡ್‌ ಕಾಲೇಜು, ಉಲ್ಲಾಳ ಉಪನಗರ

ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೂಕೋವಿಡ್‌ ಲಸಿಕೆ ನೀಡಿದರೆ ಉತ್ತಮ.ಆನ್‌ಲೈನ್‌ ಕ್ಲಾಸ್‌ಗಳು, ಆಫ್ಲೈನ್‌ ಕ್ಲಾಸ್‌ಗಳಂತೆ ಅಲ್ಲ. ಲಸಿಕೆ ನೀಡುವುದರಿಂದ ಕೋವಿಡ್ ಎದುರಿಸುವ ಧೈರ್ಯ ಮಕ್ಕಳಿಗೆಬರಲಿದೆ. ಭಯ ಬಿಟ್ಟು ಕಲಿಯಲು ಸಾಧ್ಯವಾಗುತ್ತದೆ. ಡಾ.ಬಿ.ವಸಂತಶೆಟ್ಟಿ, ಉಪಕುಲ ಸಚಿವ ರಾಜೀವ್‌ ಗಾಂಧಿ ಆರೋಗ್ಯ ವಿವಿ,ಬೆಂಗಳೂರು.

ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲಕ್ಕಾಗಿ ಸರ್ಕಾರವೂ ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕೆ ನೀಡುವ ಪ್ರಕ್ರಿಯೆಆರಂಭಿಸಬೇಕು. ಈ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಗಮನ ಸೆಳೆಯಲು ಸಂಘಟನಾತ್ಮಕವಾದ ಚರ್ಚೆ ನಡೆಸುತ್ತಿದ್ದೇವೆ. ಇದರ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದೇವೆ. ಹರ್ಷ ನಾರಾಯಣ, ರಾಷ್ಟ್ರೀಯ ಕಾರ್ಯದರ್ಶಿ, ಎಬಿವಿಪಿ


ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಅಹ್ವಾನ

March 22, 2021

 


ಕಲಬುರಗಿ: ಕಲಬುರಗಿ ಜಿಲ್ಲೆಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ (ವಿವಿಧ ವಿಷಯಗಳ) ಖಾಲಿಯಿರುವ ಹುದ್ದೆಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲು ಆಸಕ್ತಿಯುಳ್ಳ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅತಿಥಿ ಉಪನ್ಯಾಸಕರನ್ನು ಆಯಾ ಹುದ್ದೆಗೆ ನಿಗದಿಪಡಿಸಿದ ಕನಿಷ್ಠ ವಿದ್ಯಾರ್ಹತೆಯನ್ನು ಪರಿಗಣಿಸಿ ಮೆರಿಟ್ ಆಧಾರದಲ್ಲಿ ಆಯ್ಕೆ ಮಾಡಲಾಗುತ್ತದೆ. ಅತಿಥಿ ಉಪನ್ಯಾಸಕರ ನೇಮಕಾತಿಯು ಸರ್ಕಾರದ ಆದೇಶದ ಷರತ್ತುಗಳಿಗೊಳಪಟ್ಟಿರುತ್ತದೆ. ಆಸಕ್ತಿಯುಳ್ಳ ಅರ್ಹ ಅಭ್ಯರ್ಥಿಗಳು ಸಂಬಂಧಪಟ್ಟ ಆಯಾ ಕಾಲೇಜಿನ ಪ್ರಿನ್ಸಿಪಾಲರಿಗೆ 2021ರ ಮಾರ್ಚ್ 25ರೊಳಗಾಗಿ ಅರ್ಜಿ ಸಲ್ಲಿಸಬೇಕು.

ಜಿಲ್ಲೆಯ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಖಾಲಿಯಿರುವ ಉಪನ್ಯಾಸಕರ (ವಿಷಯವಾರು) ವಿವರ ಹಾಗೂ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಮಿನಿ ವಿಧಾನಸೌಧದ ಆವರಣದಲ್ಲಿರುವ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಗೆ ಸಂಪರ್ಕಿಸಲು ಕೋರಲಾಗಿದೆ.


ಶಿಕ್ಷಕರ ಸಂಘದ ವಂಚನೆ: ರಾಜ್ಯ ಸರ್ಕಾರಕ್ಕೆ 'ಸುಪ್ರೀಂ' ನೋಟಿಸ್‌

March 22, 2021

 


ನವದೆಹಲಿ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳಿಗೆ ಸಂಬಂಧಿಸಿದ ವಂಚನೆ ಪ್ರಕರಣದಲ್ಲಿ ರಾಜ್ಯ ಹೈಕೋರ್ಟ್‌ ನೀಡಿರುವ ಆದೇಶದ ಸಿಂಧುತ್ವ ಪ್ರಶ್ನಿಸಿ ಕರ್ನಾಟಕ ಲೋಕಾಯುಕ್ತದಿಂದ ಸಲ್ಲಿಕೆಯಾಗಿರುವ ಮೇಲ್ಮನವಿಯ ವಿಚಾರಣೆ ಕುರಿತು ಪರಿಶೀಲಿಸುವುದಾಗಿ ಸುಪ್ರೀಂ ಕೋರ್ಟ್‌ ತಿಳಿಸಿದೆ.

ಸಂಘದ ಅಧ್ಯಕ್ಷ ಹಾಗೂ ಖಜಾಂಚಿಯವರು ಸರ್ಕಾರಿ ನೌಕರರಲ್ಲ ಹಾಗಾಗಿ ಈ ಪದಾಧಿಕಾರಿಗಳನ್ನು ಸಂಘದ ನಿಧಿಯ ದುರ್ಬಳಕೆ ಮತ್ತು ವಂಚನೆ ಆರೋಪದಲ್ಲಿ ಲೋಕಾಯುಕ್ತದ ಭ್ರಷ್ಟಾಚಾರ ನಿಗ್ರಹ ದಳದ ವಿಚಾರಣೆಗೆ ಒಳಪಡಿಸಲು ಸಾಧ್ಯವಿಲ್ಲ ಎಂದು ರಾಜ್ಯ ಹೈಕೋರ್ಟ್‌ 2020ರ ಮಾರ್ಚ್‌ 26ರಂದು ಆದೇಶ ನೀಡಿದೆ.

ನ್ಯಾಯಮೂರ್ತಿಗಳಾದ ವಿನೀತ್ ಸರನ್‌, ಸಂಜೀವ್‌ ಖನ್ನಾ ಅವರಿದ್ದ ಪೀಠವು, ರಾಜ್ಯ ಸರ್ಕಾರ, ಸಂಘದ ಅಧ್ಯಕ್ಷ ವಿ.ಎಂ. ನಾರಾಯಣಸ್ವಾಮಿ ಮತ್ತು ಖಜಾಂಚಿ ಎಸ್‌.ಟಿ.

ಗಂಗಣ್ಣವರ ಅವರಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ನೋಟಿಸ್ ಜಾರಿ ಮಾಡಿದೆ.

'ಸಂಘದ ಸದಸ್ಯತ್ವವು ಕೇವಲ ರಾಜ್ಯ ಸರ್ಕಾರಿ ಉದ್ಯೋಗಿಗಳಿಗೆ ಮೀಸಲಿದ್ದು, ಈ ಇಬ್ಬರೂ ಪದಾಧಿಕಾರಿಗಳು ಸರ್ಕಾರಿ ನೌಕರರೇ ಆಗಿದ್ದಾರೆ' ಎಂದು ಲೋಕಾಯುಕ್ತ ಪರ ವಾದ ಮಂಡಿಸಿದ ವಕೀಲ ಶೈಲೇಶ್‌ ಮಡಿಯಾಳ್‌ ನ್ಯಾಯಪೀಠಕ್ಕೆ ತಿಳಿಸಿದರು.

ಸರ್ಕಾರಿ ನೌಕರರು ಮಾತ್ರವೇ ಸಂಘದ ಸದಸ್ಯ ಹಾಗೂ ಪದಾಧಿಕಾರಿ ಆಗಬಹುದು. ಆದರೆ, ಸರ್ಕಾರಿ ನೌಕರ ಮತ್ತು ಪದಾಧಿಕಾರಿ ಹುದ್ದೆಗಳ ವ್ಯತ್ಯಾಸ ಅರಿಯುವಲ್ಲಿ ಹೈಕೋರ್ಟ್ ಪ್ರಮಾದ ಎಸಗಿದೆ. ಲೋಕಾಯುಕ್ತ ಕಾಯ್ದೆಗೆ ಸೀಮಿತವಾಗಿಸಿ ಸಂಘದ ಪದಾಧಿಕಾರಿಗಳನ್ನು ಸರ್ಕಾರಿ ನೌಕರರಲ್ಲ ಎಂದು ತಿಳಿಸಲು ಹೈಕೋರ್ಟ್‌ ಪ್ರಯತ್ನಿಸುವ ಮೂಲಕ ಸಂಘದ ಸದಸ್ಯತ್ವವು ಸರ್ಕಾರಿ ನೌಕರರಿಗಾಗಿ ಮಾತ್ರ ಇದೆ ಎಂಬುದನ್ನು ಮರೆತಂತಿದೆ ಎಂದು ಅವರು ವಿವರಿಸಿದರು.

'ಶಿಕ್ಷಕರಿಗೆ ಸ್ಮಾರ್ಟ್‌ ಕಾರ್ಡ್ ಹಂಚುವ ಸಲುವಾಗಿ ಅವರ ಸಂಬಳದಿಂದಲೇ ತಲಾ ₹ 210ರಂತೆ ಒಟ್ಟು ₹ 3.78 ಕೋಟಿ ಸಂಗ್ರಹಿಸಿದ್ದ ಸಂಘದ ಅಧ್ಯಕ್ಷ ಹಾಗೂ ಖಜಾಂಚಿ, ಈ ಸಂಬಂಧ ಟೆಂಡರ್‌ ಕರೆಯದೆಯೇ ನಿಯಮ ಉಲ್ಲಂಘಿಸಿದ್ದಾರೆ. 2011 ಹಾಗೂ 2014ರಲ್ಲಿ ಕೂಡಲಸಂಗಮ ಮತ್ತು ಹುಬ್ಬಳ್ಳಿಯಲ್ಲಿ ಶಿಕ್ಷಕರಿಗಾಗಿ ಏರ್ಪಡಿಸಿದ್ದ ವಿಚಾರ ಸಂಕಿರಣಕ್ಕೆ ಮಾಡಲಾದ ವೆಚ್ಚಕ್ಕೂ ಲೆಕ್ಕ ನೀಡಿಲ್ಲ' ಎಂದು ಆರೋಪಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಶಂಕರಗೌಡ ಪಾಟೀಲ ಅವರು ನೀಡಿದ್ದ ದೂರಿನನ್ವಯ, ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್‌ ವರಿಷ್ಠಾಧಿಕಾರಿ ಪ್ರಕರಣ ದಾಖಲಿಸಿದ್ದರು.

ಆದರೆ, ಈ ಪ್ರಕರಣದ ಅಡಿ ವಿಚಾರಣೆ ನಡೆಸದಂತೆ ಆರೋಪಿಗಳಿಬ್ಬರೂ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿ ಹೈಕೋರ್ಟ್‌ ತುರ್ತಾಗಿ, ಪ್ರಮಾದದ ಆದೇಶ ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ನಂತರ ಪದಾಧಿಕಾರಿಗಳಿ ವಿರುದ್ಧ 2018ರಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿತ್ತು ಎಂದು ಲೋಕಾಯುಕ್ತ ದೂರಿದೆ.


BIG NEWS: 1 - 9 ನೇ ತರಗತಿಗೆ ಪರೀಕ್ಷೆ, ಜೂನ್ ಎರಡನೇ ವಾರ ಫಲಿತಾಂಶ

March 22, 2021

 


ಬೆಂಗಳೂರು: ಒಂದರಿಂದ 9ನೇ ತರಗತಿಗೆ ಮೇ ಅಂತ್ಯಕ್ಕೆ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದ್ದು, ಜೂನ್ 2 ನೇ ವಾರ ಫಲಿತಾಂಶ ಪ್ರಕಟಿಸಲಾಗುವುದು.

2020 -21ನೇ ಶೈಕ್ಷಣಿಕ ಸಾಲಿನ ಅವಧಿ ಬದಲಾದ ಹಿನ್ನೆಲೆಯಲ್ಲಿ ಮೇ ಅಂತ್ಯಕ್ಕೆ ವಾರ್ಷಿಕ ಪರೀಕ್ಷೆ ನಡೆಸಲಾಗುವುದು. ಪ್ರತಿವರ್ಷ ಏಪ್ರಿಲ್ 14 ರಂದು ಫಲಿತಾಂಶ ಪ್ರಕಟಿಸಲಾಗುತ್ತಿದ್ದು, ಈ ಬಾರಿ ಫಲಿತಾಂಶವನ್ನು ಜೂನ್ ಎರಡನೇ ವಾರ ಪ್ರಕಟಿಸಲಾಗುವುದು. ಅಲ್ಲದೇ, ಪರೀಕ್ಷೆ ಗಳ ಸಂಖ್ಯೆಯನ್ನು ಕಡಿತಗೊಳಿಸಲಾಗಿದೆ.

ಆನ್ಲೈನ್ ತರಗತಿ, ವಿದ್ಯಾಗಮ ಹಾಗೂ ಸಂವೇದ ಪಾಠಗಳ ಅವಧಿಯಲ್ಲಿ ಗಳಿಸಿದ ಕಲಿಕಾಂಶಗಳನ್ನು ಆಧರಿಸಿ ಶಾಲೆ ಹಂತದಲ್ಲಿ ಪರೀಕ್ಷೆ ಮತ್ತು ಮೌಲ್ಯಮಾಪನ ನಡೆಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ.

ಪ್ರತಿವರ್ಷ ಒಂದರಿಂದ 9ನೇ ತರಗತಿಯ ವರೆಗೆ 4 ಕಿರುಪರೀಕ್ಷೆ, ಅರ್ಧವಾರ್ಷಿಕ ಪರೀಕ್ಷೆ ಹಾಗೂ ವಾರ್ಷಿಕ ಪರೀಕ್ಷೆಗಳನ್ನು ನಡೆಸಲಾಗುತ್ತದೆ.

ಈ ವರ್ಷ ಎರಡು ಕಿರುಪರೀಕ್ಷೆ ಹಾಗೂ ವಾರ್ಷಿಕ ಪರೀಕ್ಷೆ ಮಾತ್ರ ನಡೆಸಲಾಗುವುದು. ಒಂದರಿಂದ ಐದನೇ ತರಗತಿ ಮಕ್ಕಳಿಗೆ ಗುಂಪುಚಟುವಟಿಕೆ ಹೊರತುಪಡಿಸಿ ಒಂದು ಕಿರುಪರೀಕ್ಷೆ ಮತ್ತು ವಾರ್ಷಿಕ ಪರೀಕ್ಷೆ ಮಾತ್ರ ನಡೆಯಲಿದೆ. ಮೇ ಕೊನೆಯ ವಾರದಿಂದ ಜೂನ್ ಮೊದಲ ವಾರದ ವರೆಗೆ ವಾರ್ಷಿಕ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದ್ದು, ಜೂನ್ ಎರಡನೇ ವಾರ ಫಲಿತಾಂಶ ಪ್ರಕಟಿಸಲಾಗುವುದು ಎಂದು ಹೇಳಲಾಗಿದೆ.


ಕೊರೊನಾ ಸೋಂಕು ಹೆಚ್ಚಳ : ತಮಿಳುನಾಡಿನಲ್ಲಿ ನಾಳೆಯಿಂದ 9,10, 11 ನೇ ತರಗತಿ ಶಾಲೆಗಳು ಬಂದ್!

March 20, 2021

 ಚೆನ್ನೈ : ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಾರ್ಚ್ 22 ರಿಂದ 9, 10 ಮತ್ತು 11 ನೇ ತರಗತಿ ಶಾಲೆಗಳನ್ನು ಮುಚ್ಚಲಾಗುವುದು ಎಂದು ತಮಿಳುನಾಡು ಸರ್ಕಾರ ಆದೇಶಿಸಿದೆ.


ತಮಿಳುನಾಡಿನಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮ ಕೈಗೊಂಡಿರುವ ರಾಜ್ಯ ಕಂದಾಯ ಮತ್ತು ವಿಪತ್ತು ನಿರ್ವಹಣಾ ಇಲಾಖೆ, 9,10, 11 ತರಗತಿ ಶಾಲೆ ಹಾಗೂ ಹಾಸ್ಟೆಲ್ ಗಳನ್ನು ಮುಚ್ಚಲಾಗುವುದು . ಆದರೆ ಆನ್ ಲೈನ್ ತರಗತಿಗಳು ಮುಂದುವರಿಯುತ್ತದೆ ಎಂದು ಆದೇಶ ಹೊರಡಿಸಿದೆ.

ಇನ್ನು 10 ನೇ ತರಗತಿ ಬೋರ್ಡ್ ಪರೀಕ್ಷೆ ನಡೆಯಲಿದ್ದು, ವಿಶೇಷ ತರಗತಿಗಳು ಮುಂದುವರೆಯಲಿವೆ.

9,10, ಮತ್ತು 11 ನೇ ತರಗತಿ ವಿದ್ಯಾರ್ಥಿಗಳಿಗೆ ಆನ್ ಲೈನ್/ ಡಿಜಿಟಲ್ ಶಿಕ್ಷಣ ಮುಂದುವರೆಸುವಂತೆ ತಮಿಳು ನಾಡುಸರ್ಕಾರ ಸೂಚನೆ ನೀಡಿದೆ.

ಮಧ್ಯಪ್ರದೇಶದಲ್ಲಿ ಕೊರೊನಾ ಅಬ್ಬರ : ಮೂರು ಜಿಲ್ಲೆಗಳಲ್ಲಿ ಸಂಡೇ ಲಾಕ್ ಡೌನ್ನವದೆಹಲಿ : ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಅಬ್ಬರ ಹೆಚ್ಚಳವಾಗುತ್ತಿದ್ದು, ಮಹಾರಾಷ್ಟ್ರದ ಬಳಿಕ ಮಧ್ಯಪ್ರದೇಶದಲ್ಲೂ ಲಾಕ್ ಡೌನ್ ಜಾರಿ ಮಾಡಲಾಗಿದೆ.

ಮಧ್ಯಪ್ರದೇಶ ಸರ್ಕಾರ ಈ ಕುರಿತು ಆದೇಶ ಹೊರಡಿಸಿದ್ದು, ಮಧ್ಯಪ್ರದೇಶದ ಇಂದೋರ್, ಭೋಪಾಲ್, ಜಬಲ್ ಪುರ್ ನಲ್ಲಿ ಇಂದಿನಿಂದ ಸಂಡೇ ಲಾಕ್ ಡೌನ್ ಜಾರಿಯಾಗಲಿದೆ. ಪ್ರತಿ ಭಾನುವಾರ ಲಾಕ್ ಡೌನ್ ಇರಲಿದ್ದು, ಇದು ಸರ್ಕಾರದ ಮುಂದಿನ ಆದೇಶದ ವರೆಗೆ ಮುಂದುವರೆಯಲಿದೆ ಎಂದು ಸರ್ಕಾರ ತಿಳಿಸಿದೆ.

ಇನ್ನು ಶನಿವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಗ್ಗೆ ವರೆಗೆ ನೈಟ್ ಕರ್ಪ್ಯೂ ಇರಲಿದೆ.

ಲಾಕ್ ಡೌನ್, ಕರ್ಪ್ಯೂ ನಡುವೆ ಜನರ ಅಗತ್ಯ ಸೇವೆಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಸರ್ಕಾರ ಹೇಳಿದೆ.


'ಶಿಕ್ಷಕರ ಹುದ್ದೆ'ಯ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ : ಶೀಘ್ರವೇ ರಾಜ್ಯದ 'ಸರ್ಕಾರಿ ಶಾಲೆ'ಗಳಲ್ಲಿ ಖಾಲಿ ಇರುವ '3590 ಶಿಕ್ಷಕರ ಹುದ್ದೆ'ಗಳಿಗೆ ಅರ್ಜಿ

March 20, 2021

 ಬೆಂಗಳೂರು : ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವಂತ 3590 ಶಿಕ್ಷಕರ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಿಕೊಳ್ಳಲಾಗುತ್ತದೆ ಎಂಬುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.ವಿಧಾನಸಭೆಯಲ್ಲಿ ಶಾಸಕ ಹೆಚ್.ಡಿ.ರೇವಣ್ಣ ಅವರು ಕೇಳಿದಂತ ಪ್ರಶ್ನೆಗೆ ಉತ್ತರಿಸಿದಂತ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಅವರು, ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ 3590 ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹಣಕಾಸು ಇಲಾಖೆ ಅನುಮತಿ ನೀಡಿದ ಬಳಿಕ, ಶೀಘ್ರವೇ 3590 ಶಿಕ್ಷಕರ ಹುದ್ದೆಗಳ ಭರ್ತಿಗೆ ಚಾಲನೆ ನೀಡಲಾಗುತ್ತದೆ ಎಂದರು.

ಶಿಕ್ಷಕರೊಬ್ಬರಿಗೆ ಕೋವಿಡ್ ದೃಢ; ತಾತ್ಕಾಲಿಕವಾಗಿ ಶಾಲೆಗೆ ರಜೆ ಘೋಷಣೆಹನೂರು (ಚಾಮರಾಜನಗರ): ತಾಲ್ಲೂಕಿನ ಮಾರ್ಟಳ್ಳಿಯ ಸೇಂಟ್ ಮೇರಿಸ್ ತಮಿಳು ಮಾಧ್ಯಮದ ಶಿಕ್ಷಕರೊಬ್ಬರಿಗೆ ಕೋವಿಡ್ ದೃಢಪಟ್ಟಿರುವುದರಿಂದ ತಾತ್ಕಾಲಿಕವಾಗಿ ಶಾಲೆಗೆ ರಜೆ ಘೋಷಿಸಲಾಗಿದೆ.

ನಾಲ್ಕೈದು ದಿನಗಳ ಹಿಂದೆ ವೃದ್ಧೆಯೊಬ್ಬರು ಇವರ ಮನೆಗೆ ತಮಿಳುನಾಡಿನಿಂದ ಬಂದಿದ್ದರು. ಅವರಿಂದ ಸೋಂಕು ತಗುಲಿರಬಹುದು ಎಂದು ಆರೋಗ್ಯಾಧಿಕಾರಿಗಳು ಅಂದಾಜಿಸಿದ್ದಾರೆ.

ವಿದ್ಯಾರ್ಥಿಗೆ ಸೋಂಕು ತಗುಲಿಲ್ಲ: ಕಾಲೇಜಿನ ವಿದ್ಯಾರ್ಥಿಯೊಬ್ಬರಿಗೆ ಸೋಂಕು ಕಾಣಿಸಿಕೊಂಡಿದ್ದು, ಕಾಲೇಜಿಗೆ ರಜೆ ಘೋಷಿಸಲಾಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ‌ ಹರಡಿದೆ. ಆದರೆ ಇದು ಸುಳ್ಳು ಎಂದು ಪ್ರಾಂಶುಪಾಲರು ಹೇಳಿದ್ದಾರೆ.

'ನಮ್ಮ ಕಾಲೇಜಿನ ಯಾವುದೇ ವಿದ್ಯಾರ್ಥಿಗೂ ಸೋಂಕು ದೃಢಪಟ್ಟಿಲ್ಲ' ಎಂದು ಕಾಲೇಜಿನ ಉಪನ್ಯಾಸಕ ರಾಬರ್ಟ್ ಧನರಾಜ್ ಪ್ರಜಾವಾಣಿಗೆ ತಿಳಿಸಿದರು.

'ಎರಡು ದಿನಗಳ ಹಿಂದೆ ಶಿಕ್ಷಕರ ಗಂಟಲು ದ್ರವವನ್ನು ಪರೀಕ್ಷೆಗೆ ಸಂಗ್ರಹಿಸಿದ್ದೆವು. ಅವುಗಳ ವರದಿ ಬಂದ ಮೇಲೆ ಶಿಕ್ಷಕರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ವಿದ್ಯಾರ್ಥಿಗೆ ಸೋಂಕು ತಗುಲಿರುವ ಬಗ್ಗೆ ಮಾಹಿತಿ ಇಲ್ಲ. ಶಿಕ್ಷಕರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಪರೀಕ್ಷೆ ಮಾಡುತ್ತಿದ್ದೇವೆ' ಎಂದು ಮಾರ್ಟಳ್ಳಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ರಾಜೇಶ್ ಅವರು ಪ್ರಜಾವಾಣಿಗೆ ತಿಳಿಸಿದರು.ಪ್ರೀತಿ, ಪ್ರೇಮ, ಶಾಪಿಂಗ್.. ಗರ್ಲ್ ಫ್ರೆಂಡ್ ಜೊತೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಪತಿರಾಯ: ಮುಂದೇನಾಯ್ತು ಗೊತ್ತಾ?

March 16, 2021

 


ಡಿಜಿಟಲ್‌ ಡೆಸ್ಕ್‌: ಗರ್ಲ್ ಫ್ರೆಂಡ್ ಜೊತೆ ಶಾಪಿಂಗ್ ಮಾಡುತ್ತಾ ಜಾಲಿ ಮೂಡ್‌ʼನಲ್ಲಿದ್ದ ವ್ಯಕ್ತಿಯೊಬ್ಬನಿಗೆ ಏಕಾಏಕಿ ಸುನಾಮಿಯೇ ಅಪ್ಪಳಿಸಿದಂತಾಗಿದೆ. ಹೌದು, ಮದುವೆಯಾಗಿದ್ರು ಮತ್ತೊಬ್ಬಳ ಸಂಗ ಬಯಸಿ, ಆಕೆಯೊಂದಿಗೆ ಶಾಪಿಂಗ್‌ ಮಾಡುವಾಗ ಏಕಾಏಕಿಯಾಗಿ ತಾಳಿ ಕಟ್ಟಿಸಿಕೊಂಡ ಪತ್ನಿ ಎದುರಾದ್ರೆ ಏನ್‌ ಆಗ್ಬೇಡ ಹೇಳಿ..? ಸುನಾಮಿನೇ ಅಲ್ವಾ..!

ಹೌದು, ಮೀರತ್ʼನ ನಿವಾಸಿಯೊಬ್ಬ ಇಂದು ತನ್ನ ಗೆಳತಿಯೊಟ್ಟಿಗೆ ಮುಂದೆನಾಗುತ್ತೋ ಅನ್ನೋ ಪರಿವೆ ಇಲ್ಲದೇ ಖುಷಿ ಖುಷಿಯಾಗಿ ಶಾಪಿಂಗ್‌ ಮಾಡ್ತಿದ್ದ.. ಆದ್ರೆ, ಆತನ ಏಕಾಏಕಿಯಾಗಿ ಹೆಂಡತಿ ಪ್ರತ್ಯಕ್ಷ್ಯವಾಗಿದ್ದಾಳೆ. ಪಾಪ ಪತಿರಾತಿ ಗೆಳತಿಯ ಜೊತೆಗೆ ರೆಡ್ ಹ್ಯಾಂಡಾಗಿ ಹೆಂಡತಿಗೆ ಸಿಕ್ಕಿಬಿದ್ದಿದ್ದಾನೆ. ಸಧ್ಯ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಪರಸ್ಪರ ಆರೋಪ ಮಾಡಿ ದಂಪತಿ ಪೊಲೀಸ್ ಠಾಣೆಗೆ ಪತ್ರ ಬರೆದಿದ್ದಾರೆ.

ಅಂದ್ಹಾಗೆ, ಮೀರತ್ʼನ ಗರ್ರೋಡ್ʼನ ನಂದಿನಿ ಪ್ಲಾಜಾದಲ್ಲಿ ವ್ಯಕ್ತಿನೊಬ್ಬ ಬಂದಿಳಿದ. ಆತ ಮುಜಾಫರ್ ನಗರದ ನಿವಾಸಿಯಾಗಿದ್ದು, ಮೀರತ್ʼನಲ್ಲಿ ಖಾಸಗಿ ಆಸ್ಪತ್ರೆಯೊಂದನ್ನು ನಡೆಸುತ್ತಿದ್ದಾನೆ. ಸ್ವಲ್ಪ ಸಮಯದಲ್ಲೇ ಆತನ ಪತ್ನಿ ನಂದಿನಿ ಪ್ಲಾಜಾಕ್ಕೆ ಬಂದಿಳಿದ್ದಿದ್ದಾರೆ.ಗಂಡನನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಕಿತ್ತಾಟ ಶುರುವಚ್ಚುಕೊಂಡಿದ್ದಾಳೆ. ಈ ಜಗಳ ಸದ್ದು ಮಾಡುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಎಂಟ್ರಿ ಕೊಟ್ಟಿದ್ದು, ಠಾಣೆಗೆ ಕರೆದೊಯ್ದಿದ್ದಾರೆ.

ಕಾನ್ಶಿರಾಮ್ ಕಾಲೋನಿ ನಿವಾಸಿಯಾಗಿರೊ ಪತ್ನಿ, ತನ್ನ ಗಂಡ ಎರಡು ತಿಂಗಳಿನಿಂದ ಬೇರೆ ಮಹಿಳೆಯೊಂದಿಗೆ ಸಂಪರ್ಕದಲ್ಲಿದ್ದಾನೆ ಎಂದು ವಿವರಿಸಿದ್ದಾಳೆ. ಮದುವೆಯಾದ ನಂತರ ತನ್ನ ಪತಿ ಝಡಿ ಸೊಸೈಟಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಸುಮಾರು ಒಂದೂವರೆ ತಿಂಗಳ ಹಿಂದೆ ಕಾನ್ಶಿರಾಮ್ ಕಾಲೋನಿಯಿಂದ ಹೊರಟ ನಂತ್ರ ಪತಿ ಬೇರೆ ಮಹಿಳೆಯರೊಂದಿಗೆ ಸಂಪರ್ಕದಲ್ಲಿದ್ದ ಎಂದು ಮಹಿಳೆ ತಿಳಿಸಿದ್ದಾಳೆ.

ಇನ್ನು ಠಾಣೆಯಲ್ಲಿ ಪತಿ ಮತ್ತು ಪತ್ನಿ ಇಬ್ಬರು ಪರಸ್ಪರ ಆರೋಪದ ದೂರು ದಾಖಲು ಮಾಡಿದ್ದಾರೆ. ಇನ್ನು ಈ ಪ್ರಕರಣದಲ್ಲಿ ಎರಡೂ ಕಡೆಯವರು ಪರಸ್ಪರ ಆರೋಪ ಮಾಡುತ್ತಿದ್ದಾರೆ ಎಂದು ಸಹ-ಸಿವಿಲ್ ಲೈನ್ ದೇವೇಶ್ ಸಿಂಗ್ ಹೇಳಿದ್ದು, ತನಿಖೆಯ ನಂತರ ಸತ್ಯಾಂಶದ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಮಂಡಿ ನೋವು ನಿವಾರಣೆಗೆ ಸುಲಭ ಮನೆಮದ್ದು ಮೆನೆಯಲ್ಲೇ ಮಾಡಿ

March 16, 2021

 


ಮಂಡಿ ನೋವು ಇಂದಿನ ಕಾಲದಲ್ಲಿ ಎಲ್ಲರಿಗೂ ಕಾಡುವಂತಹ ಸಾಮಾನ್ಯ ಸಮಸ್ಯೆ. ಇದಕ್ಕೆ ಆಯುರ್ವೇದದಲ್ಲಿ ಇರುವಂತಹ ಸುಲಭವಾದ ಮನೆಮದ್ದು ಗ್ರೀನ್ ಜ್ಯುಸ್ ಥೆರಪಿ ಹೇಗೆ ಮಾಡೋದು ಅನ್ನೋದನ್ನ ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಗ್ರೀನ್ ಜ್ಯುಸ್ ಥೆರಪಿ ಇದು ಬಹಳ ಹೆಸರುವಾಸಿ ಆದ ಚಿಕಿತ್ಸೆ ಆಗಿದೆ. ಈ ಗ್ರೀನ್ ಜ್ಯುಸ್ ಥೆರಪಿ ಇಂದ ಅನೇಕರು ತಮ್ಮ ಮಂಡಿ ನೋವನ್ನು ಕಡಿಮೆ ಮಾಡಿಕೊಂಡಿದ್ದಾರೆ. ನಾವಿಂದು 40 / 45 ವರ್ಷಗಳ ಮಹಿಳೆಯರಲ್ಲಿ ಹೆಚ್ಚಾಗಿ ಈ ಮಂಡಿ ನೋವು ಕಾಣುತ್ತಿದ್ದೇವೆ. ಮಂಡಿ ನೋವು ಕಡಿಮೆ ಆಗಬೇಕು ಅಂದರೆ ಹೆಚ್ಚು ಹೆಚ್ಚು ವಿಟಮಿನ್ ಡಿ ಬೇಕಾಗುತ್ತದೆ. ಇದು ನಮಗೆ ಸೂರ್ಯನ ಬೆಳಕಿನಲ್ಲಿ ಸಿಗುತ್ತದೆ. ಹಾಗಾಗಿ ಸೂರ್ಯನ ಬೆಳಕಿಗೆ ಮೈ ಒಡ್ಡಬೇಕು. ಬಹಳ ಪ್ರಮುಖವಾದ ಪೋಷಕಾಂಶ ಕ್ಯಾಲ್ಶಿಯಂ ಪ್ರೊಟೀನ್ ಇವೂ ಕೂಡ ನಮಗೆ ಮಂಡಿ ನೋವನ್ನು ಕಡಿಮೆ ಮಾಡಲು ಬೇಕಾಗುತ್ತದೆ.

ಇದರ ಜೊತೆಗೆ ಗ್ರೀನ್ ಜ್ಯುಸ್ ಥೆರಪಿ ಹೇಗೆ ಮಾಡಿಕೊಳ್ಳೋದು ಅನ್ನೋದನ್ನ ನೋಡೋಣ.

ಒಂದು ಮುಷ್ಟಿ ಕರಿಬೇವು ಅಥವಾ ನಾವು ತಿನ್ನುವಂತಹ ಯಾವುದೇ ಒಂದು ಸೊಪ್ಪು (ಮೆಂತೆ ಸೊಪ್ಪು, ಪಾಲಕ್ ಸೊಪ್ಪು ಇತ್ಯಾದಿ) ಒಂದು ಮುಷ್ಟಿ ತೆಗೆದುಕೊಂಡು, ಒಂದು ಚಮಚ ಕಪ್ಪು ಎಳ್ಳು, ಒಂದು ಚಮಚ ಅಗಸೆ ಬೀಜ ಹಾಗೂ ಎರಡು ಚಮಚ ಬೆಲ್ಲ ( ಡಯಾಬಿಟಿಸ್ ಇರುವವರಿಗೆ ಬೆಲ್ಲ ಬೇಡ) ಇವಿಷ್ಟನ್ನು ಸೇರಿಸಿ ಸ್ವಲ್ಪ ನೀರು ಹಾಕಿ ಮಿಕ್ಸಿಯಲ್ಲಿ ರುಬ್ಬಿಕೊಂಡು ಸೋಸಿಕೊಂಡು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಈ ರೀತಿಯಾಗಿ ಮೂರು ತಿಂಗಳು ಮಾಡಬೇಕು. ಇದನ್ನು ಸತತವಾಗಿ ಮೂರು ತಿಂಗಳು ಮಾಡಿದಲ್ಲಿ ಮಂಡಿ ನೋವು ಶೇಕಡಾ 70 ರಷ್ಟು ಕಡಿಮೆ ಆಗುತ್ತದೆ. ಯಾವುದೇ ಖರ್ಚು ಹಾಗೂ ಅಡ್ಡ ಪರಿಣಾಮಗಳು ಇಲ್ಲದೆ ನಮ್ಮ ಮಂಡಿ ನೋವು ಕಡಿಮೆ ಮಾಡುವುದು ಅಲ್ಲದೇ ಚರ್ಮಕ್ಕೂ ಒಳ್ಳೆಯದು ಹಾಗೂ ನಮ್ಮ ಇಡೀ ದೇಹಕ್ಕೂ ಒಳ್ಳೆಯದು. ಹೆಚ್ಚಿನ ಆಯುರ್ವೇದ ಔಷಧಿಗಳ ಮಾಹಿತಿಗಾಗಲಿ ಸಂಪರ್ಕಿಸಿ. ಡಾಕ್ಟರ್ ವೆಂಕಟರಮಣ ಹೆಗಡೆ ನಿಸರ್ಗ ಮನೆ, ವೇದ ವೆಲ್ ನೆಸ್ ಸೆಂಟರ್ ಸಿರ್ಸಿ. 9448729434 / 9731460353


BREAKING: ಬೆಂಗಳೂರು ವಸತಿ ಕಾಲೇಜಿನ 15 ವಿದ್ಯಾರ್ಥಿಗಳು, ಮಂಗಳೂರು ಮೆಡಿಕಲ್​ ಕಾಲೇಜಿನ 30 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು!

March 16, 2021

 ಡಿಜಿಟಲ್‌ ಡೆಸ್ಕ್ : ರಾಜ್ಯದಲ್ಲಿ ಮತ್ತೆ ಕೊರೊನಾ ಹವಾಳಿ ಶುರುವಾಗಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಪ್ರಕರಣಗಳು ಹೆಚ್ಚಾಗುತ್ತಿವೆ. ಅದ್ರಂತೆ, ಬೆಂಗಳೂರಿನ ವಸತಿ ಕಾಲೇಜಿನ ಪ್ರಾಂಶುಪಾಲರು, ಉಪಪ್ರಾಂಶುಪಾಲರು ಸೇರಿ 15 ವಿದ್ಯಾರ್ಥಿಗಳಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ.ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಸರ್ಜಾಪುರದ ಶ್ರೀ ಚೈತನ್ಯ ವಸತಿ ಕಾಲೇಜಿನ ಪ್ರಥಮ ಪಿಯುಸಿಯ 8 ವಿದ್ಯಾರ್ಥಿಗಳು, ದ್ವಿತೀಯ ಪಿಯುಸಿಯ ಮೂವರು ವಿದ್ಯಾರ್ಥಿಗಳಿಗೆ ಹಾಗೂ ಕಾಲೇಜಿನ ಪ್ರಾಂಶುಪಾಲರು, ಉಪಪ್ರಾಂಶುಪಾರು ಮತ್ತು ಸಿಬ್ಬಂದಿ ಸೇರಿ ಒಟ್ಟು 15 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ.

ಇನ್ನು ಮಂಗಳೂರಿನಲ್ಲಿಯೂ ಕೊರೊನಾ ಅಟ್ಟಹಾಸ ಜೋರಾಗಿದ್ದು, ಇಲ್ಲಿನ ಪ್ರತಿಷ್ಠಿತ ಮೆಡಿಕಲ್ ಕಾಲೇಜಿನ 30 ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ.

ಮಂಗಳೂರು ಹೊರವಲಯದ ಯೇನಪೋಯ ಮೆಡಿಕಲ್ ಕಾಲೇಜಿನ ಹಾಸ್ಟೆಲ್​​ನಲ್ಲಿದ್ದ 30 ವಿದ್ಯಾರ್ಥಿಗಳ ಆರ್​ಟಿಪಿಸಿಆರ್ ಟೆಸ್ಟ್ ವರದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಇನ್ನು ನಗರದಲ್ಲಿ ಆತಂಕ ಹೆಚ್ಚಾಗಿದ್ದು, ಹಾಸ್ಟೇಲ್ ಸೇರಿದಂತೆ ಅಲ್ಲಿನ ಸುತ್ತಮುತ್ತ ಪ್ರದೇಶವನ್ನ ಕಂಟೋನ್ಮೆಂಟ್ ಝೋನ್ ಆಗಿ ಪರಿವರ್ತನೆ ಮಾಡಲಾಗಿದೆ. ಅದ್ರಂತೆ, ಇನ್ನು 10 ದಿನಗಳ ಕಾಲ ಕಾಲೇಜು ಹಾಗೂ ಹಾಸ್ಟೆಲ್ ಸಿಲ್​ಡೌನ್ ಮಾಡಲಾಗಿದೆ.


India Post: 10ನೇ ತರಗತಿ ಪಾಸ್ ಆದವರಿಗೆ ಪರೀಕ್ಷೆಯಿಲ್ಲದೆ ಸಿಗಲಿದೆ ಕೆಲಸ

March 15, 2021

 


India Post GDS Recruitment 2021: ಇಂಡಿಯಾ ಪೋಸ್ಟ್ (India Post) ಕೇರಳ ಪೋಸ್ಟಲ್ ಸರ್ಕಲ್ (Kerala Postal Circle)ನಲ್ಲಿ ಗ್ರಾಮೀಣ ಡಾಕಾ ಸೇವಾ (GDS) ಹುದ್ದೆಗಳಿಗೆ (ಇಂಡಿಯಾ ಪೋಸ್ಟ್ ಜಿಡಿಎಸ್ ನೇಮಕಾತಿ 2021) ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು (India Post GDS Recruitment 2021) ಇಂಡಿಯಾ ಪೋಸ್ಟ್‌ನ ಅಧಿಕೃತ ವೆಬ್‌ಸೈಟ್ appost.in ಗೆ ಭೇಟಿ ನೀಡಿ 2021 ಏಪ್ರಿಲ್ 07 ರ ಮೊದಲು ಅರ್ಜಿ ಸಲ್ಲಿಸಬಹುದು.

ಇದಲ್ಲದೆ, ಅಭ್ಯರ್ಥಿಗಳು ಈ ಲಿಂಕ್ ಅನ್ನು ಕ್ಲಿಕ್ ಮಾಡುವುದರ ಮೂಲಕ ನೇರವಾಗಿ ಈ ಹುದ್ದೆಗಳಿಗೆ (Govt Jobs) (ಇಂಡಿಯಾ ಪೋಸ್ಟ್ ಜಿಡಿಎಸ್ ನೇಮಕಾತಿ 2021) ಅರ್ಜಿ ಸಲ್ಲಿಸಬಹುದು https://indiapostgdsonline.in/gdsonlinec3p6/reference.aspx.


ಅಲ್ಲದೆ, ಈ ಲಿಂಕ್ ಮೂಲಕ https://appost.in/gdsonline/Home, ನೀವು ಅಧಿಕೃತ ಅಧಿಸೂಚನೆಗಳನ್ನು ಸಹ ನೋಡಬಹುದು.

ಈ ನೇಮಕಾತಿ (ಇಂಡಿಯಾ ಪೋಸ್ಟ್ ಜಿಡಿಎಸ್ ನೇಮಕಾತಿ 2021) ಪ್ರಕ್ರಿಯೆಯಡಿಯಲ್ಲಿ, ಕ್ಯಾಲಿಕಟ್, ಕಣ್ಣನೂರು, ಕಾಸರಗೋಡು, ಮಂಜೆರಿ, ಒಟ್ಟಪ್ಪಲಂ, ಪಾಲ್ಘಾಟ್, ತಲಶೇರಿ, ತಿರುರು, ವಡ್ಕರ, ಅಲ್ಲೆಪ್ಪೆ, ಅಲ್ವೇ, ಚಂಕೇರಿ, ಎರ್ನಾಕುಲಂ, ಇಡುಕ್ಕಿ, ಇರಿಂಜಲಕುಡ, ಕೊಟ್ಟಾಯರಂ ತಿರುವನಂತಪುರ ಉತ್ತರ ಮತ್ತು ತಿರುವನಂತಪುರ ದಕ್ಷಿಣಕ್ಕೆ ಒಟ್ಟು 1421 ಹುದ್ದೆಗಳನ್ನು ಭರ್ತಿ ಮಾಡಲಾಗುವುದು.

ಇಂಡಿಯಾ ಪೋಸ್ಟ್ ಜಿಡಿಎಸ್ ನೇಮಕಾತಿ 2021 ರ ಪ್ರಮುಖ ದಿನಾಂಕಗಳು:ಆನ್‌ಲೈನ್ ಅಪ್ಲಿಕೇಶನ್‌ಗೆ ಪ್ರಾರಂಭ ದಿನಾಂಕ - 08 ಮಾರ್ಚ್ 2021
ಆನ್‌ಲೈನ್ ಅರ್ಜಿಗೆ ಕೊನೆಯ ದಿನಾಂಕ - 07 ಏಪ್ರಿಲ್ 2021

ಇಂಡಿಯಾ ಪೋಸ್ಟ್ ಜಿಡಿಎಸ್ ನೇಮಕಾತಿ 2021 ರ ಹುದ್ದೆಯ ವಿವರಗಳು:
ಜಿಡಿಎಸ್ (ಬ್ರಾಂಚ್ ಪೋಸ್ಟ್ ಮಾಸ್ಟರ್ (ಬಿಪಿಎಂ), ಸಹಾಯಕ ಶಾಖೆ ಪೋಸ್ಟ್ ಮಾಸ್ಟರ್ (ಎಬಿಪಿಎಂ) ಮತ್ತು Dav Sevak) - 1421 ಹುದ್ದೆಗಳು

  • ಯುಆರ್ - 784 ಪೋಸ್ಟ್ಗಳು
  • ಇಡಬ್ಲ್ಯೂಎಸ್ - 167 ಪೋಸ್ಟ್ಗಳು
  • ಒಬಿಸಿ - 297 ಪೋಸ್ಟ್‌ಗಳು
  • ಪಿಡಬ್ಲ್ಯೂಡಿ-ಎ - 11 ಹುದ್ದೆಗಳು
  • ಪಿಡಬ್ಲ್ಯೂಡಿ-ಬಿ - 22 ಹುದ್ದೆಗಳು
  • ಪಿಡಬ್ಲ್ಯೂಡಿ-ಸಿ - 19 ಪೋಸ್ಟ್ಗಳು
  • ಪಿಡಬ್ಲ್ಯೂಡಿ-ಡಿಇ - 2 ಪೋಸ್ಟ್ಗಳು
  • ಎಸ್‌ಸಿ - 105 ಹುದ್ದೆಗಳು
  • ಎಸ್ಟಿ - 14 ಪೋಸ್ಟ್ಗಳು

ಇಂಡಿಯಾ ಪೋಸ್ಟ್ ಜಿಡಿಎಸ್ ನೇಮಕಾತಿ 2021ಕ್ಕೆ ಅರ್ಹತಾ ಮಾನದಂಡಗಳು :ಅಭ್ಯರ್ಥಿಗಳು ಭಾರತ ಸರ್ಕಾರ / ರಾಜ್ಯ ಸರ್ಕಾರಗಳು / ಕೇಂದ್ರಾಡಳಿತ ಪ್ರದೇಶಗಳಿಂದ ಯಾವುದೇ ಮಾನ್ಯತೆ ಪಡೆದ ಶಾಲಾ ಶಿಕ್ಷಣ ಮಂಡಳಿಯು ನಡೆಸುವ ಗಣಿತ, ಸ್ಥಳೀಯ ಭಾಷೆ ಮತ್ತು ಇಂಗ್ಲಿಷ್ (ಕಡ್ಡಾಯ ಅಥವಾ ಐಚ್ಛಿಕ ವಿಷಯವಾಗಿ ಅಧ್ಯಯನ) 10 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಅಲ್ಲದೆ, ಅಭ್ಯರ್ಥಿಗಳು ಸ್ಥಳೀಯ ಭಾಷೆಯ ಕಡ್ಡಾಯ ಜ್ಞಾನವನ್ನು ಹೊಂದಿರಬೇಕು.

ಇಂಡಿಯಾ ಪೋಸ್ಟ್ ಜಿಡಿಎಸ್ ನೇಮಕಾತಿ 2021 ರ ವಯಸ್ಸಿನ ಮಿತಿ:
ಅಭ್ಯರ್ಥಿಗಳ ವಯಸ್ಸಿನ ಮಿತಿ 18 ರಿಂದ 40 ವರ್ಷದೊಳಗಿರಬೇಕು.

ಇಂಡಿಯಾ ಪೋಸ್ಟ್ ಜಿಡಿಎಸ್ ನೇಮಕಾತಿ 2021 ಗೆ ಅರ್ಜಿ ಶುಲ್ಕ:
ಯುಆರ್ / ಒಬಿಸಿ / ಇಡಬ್ಲ್ಯೂಎಸ್ ಪುರುಷ / ಟ್ರಾನ್ಸ್ ಮ್ಯಾನ್ - ರೂ. 100 / -
ಎಲ್ಲಾ ಮಹಿಳಾ / ಟ್ರಾನ್ಸ್-ಮಹಿಳಾ ಅಭ್ಯರ್ಥಿಗಳು, ಎಲ್ಲಾ ಎಸ್ಸಿ / ಎಸ್ಟಿ ಮತ್ತು ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲಕಿಡ್ನಿ ಸ್ಟೋನ್ ಗೆ ಇಲ್ಲಿದೆ ಮನೆಮದ್ದು

March 15, 2021

 


ಇತ್ತೀಚಿನ ದಿನದಲ್ಲಿ ಈ ಕಿಡ್ನಿ ಸ್ಟೋನ್ ಅನ್ನೋದು ಎಲ್ಲರಿಗೂ ಕಾಮನ್ ಆಗಿ ಬಿಟ್ಟಿದೆ. ಈ ಮುಂಚೆ ಕಿಡ್ನಿ ಸ್ಟೋನ್ ಅಂದ್ರೆನೆ ಭಯ ಪಡೋರು. ಈಗ ಕೇಳಿದ 50‌ ಪರ್ಸೆಂಟ್ ಮಂದಿಯಲ್ಲಿ ಈ ಕಾಯಿಲೆ ಸಹಜವಾಗಿದೆ.

ನಮ್ಮ ಜೀವನ ಶೈಲಿ ಬದಲಾದಂತೆ ನಮಗೆ ಬರಿವ ರೋಗಗಳ ಸ್ಟೈಲ್ ನಲ್ಲು ಬದಲಾವಣೆಯಾಗಿದೆ. ಕಿಡ್ನಿ ಸ್ಟೋನ್, ಮಲಬದ್ಧತೆ, ಗ್ಯಾಸ್ಟ್ರಿಕ್‌, ಬೊಜ್ಜು ಹೀಗೆ ಅನೇಕ ಕಾಯಿಲೆಗಳು ಮನುಷ್ಯನಿಗೆ ಈಗ ಕಾಮನ್ ಅನ್ನಿಸಿಬಿಟ್ಟಿವೆ. ಯಾರಿಗಾದ್ರೂ ಇಂಥ ಸಮಸ್ಯೆ ಇದೆ ಅಂತ ಹಂಚಿಕೊಳ್ಳೋಕೆ ಹೋದ್ರೆ ಹೇ ಬಾ ಗುರು ನಂಗು ಆಗಿತ್ತು ಮಾತ್ರೆ ತಗೊಂಡೆ ಸರಿ ಹೋಯ್ತು ಅಂತಾರೆ.

ಆದ್ರೆ ಎಲ್ಲಾ ಕಾಯಿಲೆಗಳು ಮಾತ್ರೆಯನ್ನೆ ತಿನ್ನುತ್ತಾ ಬಂದ್ರೆ ಜೀವನ ಹೇಗೆ..? ಮಾತ್ರೆಯೊಂದೆ ಪರಿಹಾರ ಅಲ್ವಲ್ಲ.‌ ಅದ್ಕೆ ಇಲ್ಲಿ ಒಂದಷ್ಟು ಮನೆಮದ್ದನ್ನ ಹೇಳ್ತೀವಿ ಫಾಲೋ ಮಾಡಿ.

• ಕಿಡ್ನಿಯಲ್ಲಿ ಕಲ್ಲು ಇರುವವರು ಕುರುಗದಲೆ ಸೊಪ್ಪಿನ ಪಲ್ಯ ತಿನ್ನಿ. ಅಥವಾ ಸಾಂಬಾರ್ ತಿನ್ನಿ
• ಆದಷ್ಟು ಬಾಳೆ ದಿಂಡಿನ ಆಹಾರವನ್ನ ತಿಂತಾ ಇರಿ.
• ಕೆಸವೆ ದಂಟಿನ ಪಲ್ಯ ಇದಕ್ಕೆ ರಾಮಬಾಣವಿದ್ದಂತೆ
• ಚಟ್ಟಪಟ್ಟಲೆ ಎಲೆ ತಿನ್ನಿ
• ನೀರು, ಎಳನೀರು, ಮಜ್ಜಿಗೆ ಹೀಗೆ ಲಿಕ್ವಿಡ್ ಇರುವಂತದ್ದನ್ನ ಹೆಚ್ಚು ಕುಡಿಯಿರಿ.
• ಕಾಡು ಬಸಳೆ ಮತ್ತು ಜೀರಿಗೆ ಹಾಕಿ ರುಬ್ಬಿ ಬೆಳ್ಳಿಗೆ 4.00ಗಂಟೆಗೆ ಕುಡಿಯಬೇಕು 3 ದಿವಸ ಕುಡಿಯಿರಿ.

ದೇಶದಲ್ಲಿ ಹೆಚ್ಚಾದ ಕೊರೋನಾ ಆತಂಕ: ಎಲ್ಲಾ ಸಿಎಂ ಜೊತೆ ಸಭೆ ಕರೆದ ಮೋದಿ!

March 15, 2021

 


ನವದೆಹಲಿ(ಮಾ.15); ಭಾರತದಲ್ಲಿ ಕೊರೋನಾ ವೈರಸ್ ಸಂಖ್ಯೆ ಆತಂಕ ತರುತ್ತಿದೆ. ದಿನದಿಂದ ದಿನಕ್ಕೆ ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇಂದು(ಮಾ.15) ಭಾರತದಲ್ಲಿ 26,291 ಪ್ರಕರಣಗಳು ದಾಖಲಾಗಿದೆ. ಆತಂಕ ಹೆಚ್ಚಾಗುತ್ತಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಇದೇ ಮಾರ್ಚ್ 17ಕ್ಕೆ ಎಲ್ಲಾ ಮುಖ್ಯಮಂತ್ರಿಗಳ ಜೊತೆ ಸಭೆ ಕರೆದಿದ್ದಾರೆ.

ಪರಿಸ್ಥಿತಿಗೆ ಹೀಗೆ ಮುಂದುವರಿದರೆ ಲಾಕ್‌ಡೌನ್; ಆರೋಗ್ಯ ಸಚಿವರ ಖಡಕ್ ವಾರ್ನಿಂಗ್!

ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶದ ಮುಖ್ಯಮಂತ್ರಿಗಳ ಜೊತೆ ಮಾರ್ಚ್ 17ರ ಮಧ್ಯಾಹ್ನ 12.30ಕ್ಕೆ ವಿಡಿಯೋ ಕಾನ್ಫೆರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆ. ಇದೀಗ ಮೋದಿ ಸಭೆ ಕರೆದ ಬೆನ್ನಲ್ಲೇ, ಲಾಕ್‌ಡೌನ್ ಆತಂಕ ಎದುರಾಗಿದೆ. ಆದರೆ ಈಗಾಗಲೇ ಮೋದಿ ಮತ್ತೆ ಲಾಕ್‌ಡೌನ್ ಮಾತಿಲ್ಲ ಎಂದಿದ್ದರು.

ಕೊರೋನಾ ಅಬ್ಬರ: ನಾಗ್ಪುರ ಒಂದು ವಾರ ಲಾಕ್‌!.

ಮೋದಿ ಜನವರಿ ತಿಂಗಳಲ್ಲಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ್ದರು. ಕೊರೋನಾ ಲಸಿಕೆ ಕುರಿತು ಈ ಸಭೆ ನಡೆಸಲಾಗಿತ್ತು. ಇದೀಗ ಮೋದಿ, ಎಲ್ಲಾ ಮುಖ್ಯಮಂತ್ರಿಗಳಿಂದ ಕೊರೋನಾ ನಿಯಂತ್ರಿಸಲು ಕ್ರಮಗಳ ಕುರಿತು ಮಾಹಿತಿ ಪಡೆಯಲಿದ್ದಾರೆ.

ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಳಿಗೆ ಮಹತ್ವದ ಸಲಹೆ ನೀಡುವ ಸಾಧ್ಯತೆ ಇದೆ. ಮೋದಿ ಸಭೆ ಇದೀಗ ಕುತೂಹಲಕ್ಕೂ ಕಾರಣವಾಗಿದೆ.

ಸರಕಾರಿ ಶಾಲೆಗಳ ಕಟ್ಟಡಗಳ ರಕ್ಷಣೆಗೆ ಹೊಸ ಸಾಫ್ಟವೇರ್ ಅಭಿವೃದ್ಧಿ: ಸುರೇಶ್‍ ಕುಮಾರ್

March 15, 2021

 


ಬೆಂಗಳೂರು, ಮಾ.15: ಮುಂದಿನ ಮೂರು ತಿಂಗಳಲ್ಲಿ ಎಲ್ಲ ಸರಕಾರಿ ಶಾಲೆಗಳ ಕಟ್ಟಡಗಳನ್ನು ಸಂರಕ್ಷಣೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಈಗಾಗಲೇ ಹೊಸ ಸಾಫ್ಟ್ ವೇರ್ ಅಭಿವೃದ್ಧಿಪಡಿಸಲಾಗಿದ್ದು, ಇದರಲ್ಲಿ 26 ಸಾವಿರ ಕಟ್ಟಡಗಳನ್ನು ಸೇರ್ಪಡೆಗೊಳಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಫ್ರೌಢ ಶಿಕ್ಷಣ ಸಚಿವ ಸುರೇಶ್‍ಕುಮಾರ್ ಹೇಳಿದ್ದಾರೆ.

ಸೋಮವಾರ ವಿಧಾನ ಪರಿಷತ್ತಿನಲ್ಲಿ ಜೆಡಿಎಸ್ ಸದಸ್ಯ ಕಾಂತರಾಜ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದ ಎಲ್ಲ ಸರಕಾರಿ ಶಾಲೆಗಳ ಜಾಗಗಳು ಒತ್ತುವರಿಯಾಗಿದ್ದಲ್ಲಿ ಕೂಡಲೇ ಅದನ್ನು ಸುಪರ್ದಿಗೆ ತೆಗೆದುಕೊಳ್ಳುವಂತೆ ಎಲ್ಲ ಉಪ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು, ಪದವಿ ಪೂರ್ವ ಕಾಲೇಜುಗಳ ಸ್ಥಿರಾಸ್ತಿಯನ್ನು ಖಾತೆ ಮಾಡಿ ಆರ್‍ಟಿಸಿಯಲ್ಲಿ ನಮೂದಿಸಲು ಅಗತ್ಯ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.

ರಾಜ್ಯದಲ್ಲಿ 20,751 ಸರಕಾರಿ ಪ್ರಾಥಮಿಕ ಶಾಲೆಗಳು, 22,499 ಸರಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಗಳು, 4,727 ಸರಕಾರಿ ಪ್ರೌಢಶಾಲೆಗಳು ಹಾಗೂ 1,234 ಸರಕಾರಿ ಪದವಿ ಪೂರ್ವ ಕಾಲೇಜುಗಳು ಇವೆ ಎಂದು ಹೇಳಿದರು.

ಹಾವು ಕಡಿತ: ಜನರು ಏನು ಮಾಡಬಹುದು ಮತ್ತು ಮುಂಜಾಗ್ರತಾ ಕ್ರಮಗಳೇನು?

March 15, 2021

 


ಹಾವುಗಳೆಂದರೆ ಎಂತಹವರಿಗೂ ಭಯವಾಗುವುದು ಸಹಜ. ಅದು ಒಂದು ವಿಷಜಂತುವೆಂದೇ ಪ್ರಸಿದ್ಧ. ಹಾವುಗಳು ಹಳ್ಳಿಗಾಡುಗಳಲ್ಲದೆ ನಗರ ಪ್ರದೇಶದಲ್ಲೂ ಕಾಣಸಿಗುವುದು ಸಹಜ. ಸುತ್ತಮುತ್ತಲಿನ ಕಾಡುಮೇಡುಗಳನ್ನು ನಾಶ ಮಾಡುವುದರಿಂದ ಹಾವುಗಳು ಸಹ ತಮ್ಮ ಸಹಜ ವಾಸ ಸ್ಥಳಗಳನ್ನು ಕಳೆದುಕೊಂಡು ನಗರ ಪ್ರದೇಶಗಳಿಗೆ ನುಗ್ಗುವುದುಂಟು.

ಪ್ರಪಂಚದಲ್ಲಿ ಸುಮಾರು 2000 ರೀತಿಯ ಹಾವುಗಳಿದ್ದು ಭಾರತದಲ್ಲಿ 300 ಪ್ರಭೇದಗಳನ್ನು ಕಾಣಬಹುದು ಅದರಲ್ಲಿಯೂ 50 ಪ್ರಭೇದಗಳು ವಿಷಕಾರಕವಾಗಿರುತ್ತವೆ. ಸಾಮಾನ್ಯವಾಗಿ ಭಾರತದಲ್ಲಿ ಅದರಲ್ಲೂ ದಕ್ಷಿಣ ಭಾರತದಲ್ಲಿ ನಾಗರಹಾವು, ಕಟ್ಟು ಹಾವು, ಕಾಳಿಂಗಸರ್ಪ, ಕೊಳಕಮಂಡಲ ಸಾಮಾನ್ಯ.

ಹಾವುಗಳು ಕಡಿದೊಡನೆ ಹಲವು ಬಾರಿ ಹಾವು ವಿಷಕಾರಿಯಲ್ಲದಿದ್ದರೂ ವ್ಯಕ್ತಿಯು ಆತಂಕದಿಂದ ಮಾನಸಿಕವಾಗಿ ಕುಗ್ಗಿ ಪ್ರಾಣ ಕಳೆದುಕೊಳ್ಳುವುದುಂಟು.

ಹಾವು ಕಡಿತವಾದೊಡನೆ ಸಾಮಾನ್ಯವಾಗಿ ಮಾಡಬಹುದಾದ್ದೇನು ಹಾಗೂ ಏನನ್ನು ಮಾಡಬಾರದು ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಹಾವು ಕಡಿತ ಹೇಗೆ ಕಾಣಿಸಿಕೊಳ್ಳಬಹುದು ?


ಹಾವು ಕಡಿತದ ರೋಗಲಕ್ಷಣಗಳ ತೀವ್ರತೆಯು ಯಾವ ಹಾವಿನ ಪ್ರಭೇದ, ಎಷ್ಟು ವಿಷ ಶರೀರವನ್ನು ಒಳ ಹೊಕ್ಕಿದೆ, ಯಾವ ಜಾಗಕ್ಕೆ ಕಡಿತ ಉಟಾಗಿದೆ, ಒಮ್ಮೆ ಕಚ್ಚಿದೆಯೋ ಅಥವಾ ಹಲವಾರು ಬಾರಿ ಕಚ್ಚಿದೆಯೋ, ಕಚ್ಚಿದ ನಂತರ ಎಷ್ಟು ಸಮಯ ಕಳೆದಿದೆ ಎಂಬ ಎಲ್ಲ ಮಾಹಿತಿಗಳ ಮೇಲೆ ನಿರ್ಧಾರವಾಗುತ್ತದೆ.

ಸಾಮಾನ್ಯವಾಗಿ ಹಾವು ಕಡಿತ ಹೊಲಗದ್ದೆಗಳಲ್ಲಿ ಕೆಲಸ ಮಾಡುವ ರೈತಾಪಿ ಜನರಲ್ಲಿ ಸಾಮಾನ್ಯವಾಗಿ ನೆಲದಲ್ಲಿ ಮಲಗುವ ಅಭ್ಯಾಸವಿರುವವರಲ್ಲಿ, ಬರಿಗಾಲಿನಲ್ಲಿ ನಡೆಯುವವರಲ್ಲಿ, ಪೊದೆಗಿಡಗಳಿಗೆ ನೀರೆರೆಯುಲು ಹೋದಾಗ ಉಂಟಾಗಬಹುದಾಗಿದೆ.

ಸಾಮಾನ್ಯವಾಗಿ ಹಾವು ಕಡಿತಕ್ಕೆ ಒಳಗಾದವರಲ್ಲಿ ಸುಸ್ತು, ದುರ್ಬಲತೆ, ರಕ್ತಸ್ರಾವ, ಉರಿ, ಊತ, ಮಾಂಸಖಂಡಗಳ ದೌರ್ಬಲ್ಯ ಉಂಟಾಗಬಹುದಾಗಿದೆ.

ಹಾವು ಕಡಿತಕ್ಕೆ ಒಳಗಾದ ವ್ಯಕ್ತಿಯ ಜೊತೆಯಲ್ಲಿರುವವರು ರೋಗಿಗೆ ಮಾನಸಿಕ ಧೈರ್ಯ ತುಂಬುವುದು ಅತಿಮುಖ್ಯ. 70% ವಿಷಕಾರಿಯಲ್ಲದ ಹಾವುಗಳಿರುತ್ತವೆ.

ಹಾವು ಕಡಿತದ ಗಾಯ ಗುರುತಿಸುವುದು ಬಹಳ ಮುಖ್ಯ.

ಕಡಿತಕ್ಕೊಳಗಾದ ಅಂಗವನ್ನು ನಿಶ್ಚಲಗೊಳಿಸುವುದು ಅತಿ ಮುಖ್ಯ. ಮುರಿದ ಮೂಳೆಯನ್ನು ಅಥವಾ ಫ್ರಾಕ್ಚರ್ ಅನ್ನು ಹೇಗೆ ನಿಶ್ಚಲಗೊಳಿಸಲಾಗುತ್ತದೆ ಹಾಗೆ ನಿಶ್ಚಲಗೊಳಿಸುವುದು ಮುಖ್ಯ. ಅದನ್ನು ಮಾಡಲು ಬ್ಯಾಂಡೇಡ್ ಮುಂತಾದವುಗಳನ್ನು ಬಳಸಬಹುದು.

ರಕ್ತ ಸಂಚಲನವನ್ನು ಕಡಿಮೆ ಮಾಡುವುದು ಅಥವಾ ದಾರ ಕಟ್ಟುವುದು ಇದನ್ನು ಮಾಡಬಾರದು.

ರೋಗಿಯನ್ನು ಎಡ ಮಗ್ಗಲಿಗೆ ಮಲಗಿಸುವುದರಿಂದ ಉಸಿರಾಟದ ತೊಂದರೆಯಾಗುವುದನ್ನು ತಪ್ಪಿಸಬಹುದು.

ಹಾವು ಕಡಿತಕ್ಕೆ ಒಳಗಾದ ವ್ಯಕ್ತಿಯು ಓಡುವುದು, ತಾವೇ ಸ್ವತಃ ವಾಹನ ಚಲಾಯಿಸುವುದು ಅಪಾಯಕಾರಿ.

ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಆಸ್ಪತ್ರೆಗೆ ರೋಗಿಯನ್ನು ಕರೆದೊಯ್ಯುವುದು ಅತಿಮುಖ್ಯ.

ಕಾಲಿಗೆ ಹಾಕಿರುವ ಚಪ್ಪಲಿ, ಷೂ, ಉಂಗುರ, ಕೈಯಲ್ಲಿನ ವಾಚ್, ಆಭರಣಗಳು, ಬಿಗಿಯಾದ ಬಟ್ಟೆಗಳನ್ನು ತೆಗೆಯುವುದು ಉತ್ತಮ.

ಯಾವುದನ್ನುಮಾಡಬಾರದು :

ಕಡಿದ ಹಾವನ್ನು ಸಾಯಿಸಲು ಹೋಗುವುದು ಅಪಾಯಕಾರಿ.

ಗಿಡಮೂಲಿಕೆ ಔಷಧಿಗಳ ಲೇಪನ ಹಾನಿಕಾರಕ.

ಗಾಯವನ್ನು ತೊಳೆಯುವುದು, ಉಜ್ಜುವುದು ಹಾನಿಕಾರಕ.

ಹಾವು ಕಡಿದ ಜಾಗಕ್ಕೆ ನೇರವಾಗಿ ಔಷಧಿಗಳನ್ನು ಹಚ್ಚುವುದು ಅಪಾಯಕಾರಿ.

ದಾರದಿಂದ ಕಟ್ಟುವುದು ಬಹಳ ಪ್ರಚಲಿತ ಆದರೆ ಇದರಿಂದ ಕಾವು ಕಡಿತಕ್ಕೆ ಒಳಗಾದ ಅಂಗವು ರಕ್ತಸಂಚಲನದಿಂದ ಕುಂಟಿತವಾಗಿ ಕೊಳೆತು ಹೋಗುವ ಸಾಧ್ಯತೆ ಹೆಚ್ಚು.

ರೋಗಿಯನ್ನು 30 ನಿಮಿಷದಿಂದ ಮೂರು ಗಂಟೆಯ ಒಳಗಾಗಿ ಆಸ್ಪತ್ರೆಗೆ ಕೊಂಡೊಯ್ಯಬಹುದಾಗಿದ್ದರೆ ಮಾತ್ರ ಬ್ಯಾಂಡೇಜನ್ನು ಕಟ್ಟಬಹುದಾಗಿದೆ.

ಪ್ರಾಥಮಿಕ ಆಸ್ಪತ್ರೆಗಳಲ್ಲಿ ಮಾಡಬಹುದಾದ್ದೇನು ?


ಯಾವುದೇ ರೋಗಲಕ್ಷಣಗಳಿಲ್ಲದಿದ್ದರೆ 24 ಗಂಟೆಗಳ ಕಾಲ ವೀಕ್ಷಣೆಯಲ್ಲಿಡಬಹುದು.

ರೋಗಲಕ್ಷಣಗಳನ್ನು ಗುರುತಿಸುವುದು ಅತಿ ಮುಖ್ಯ.

ಉಸಿರಾಟದ ತೊಂದರೆ, ನರದೌರ್ಬಲ್ಯ, ಬೆಂಡಾಗುವುದು, ರಕ್ತದೊತ್ತಡದಲ್ಲಿ ಏರುಪೇರು, ಉರಿ, ಊತ, ಉಷ್ಟಾಂಶದಲ್ಲಿ ಏರುಪೇರು, ಕಣ್ಣುಗಳ ರೆಪ್ಪೆ ಮುಚ್ಛಲ್ಪಡುವುದು (Ptosis) ಮುಂತಾದವು ಕಂಡುಬಂದಲ್ಲಿ ಆಯಂಟಿ ಸ್ನೇಕ್ ವೀನೋಮ್ (ASV) ಎಂಬ ಔಷಧಿಯನ್ನು ಯಾವುದೇ ಅಡ್ಡ ಪರಿಣಾಮಗಳು ಆಗದಂತೆ ಮುಂಜಾಗರೂಕಾ ಕ್ರಮಗಳೊಂದಿಗೆ ಕೊಟ್ಟು ತುರ್ತು ನಿಗಾ ಘಟಕಕ್ಕೆ ವರ್ಗಾಯಿಸಲಾಗುತ್ತದೆ.

2 ಸಾವಿರಕ್ಕೂ ಹೆಚ್ಚು ಜನ ಇರೋ ಈ ಊರಿನಲ್ಲಿ ಎಲ್ಲರ ಹೆಸರು ಒಂದೇ, ಎಲ್ಲಿ ಗೊತ್ತೇ?

March 15, 2021

 


ಇಲ್ಲೊಂದು ವಿಶೇಷವಾದ ಒಂದು ಗ್ರಾಮ ಇದೆ. ಇದು ಸಾಮಾನ್ಯ ಗ್ರಾಮ ಏನೂ ಅಲ್ಲ. ಭಕ್ತಿಗೆ ಇದು ಇನ್ನೊಂದು ರೂಪ. ಈ ಗ್ರಾಮದಲ್ಲಿ ಜನಿಸುವ ಪ್ರತಿಯೊಬ್ಬರಿಗೂ ಒಂದೇ ಹೆಸರನ್ನು ಇಡಲಾಗುತ್ತದೆ ಹಾಗೂ ಅಷ್ಟೇ ಅಲ್ಲದೆ ಆ ಊರಿಗೆ ಮದುವೆಯಾಗಿ ಬರುವ ಹುಡುಗಿಗೂ ಸಹ ಅದೇ ಒಂದೇ ಹೆಸರಿನಿಂದ ಕರೆಯಲಾಗುತ್ತದೆ. ಅಷ್ಟಕ್ಕೂ ಈ ಗ್ರಾಮದ ವಿಶೇಷತೆ ಏನೂ? ಈ ಗ್ರಾಮ ಯಾವ ಜಿಲ್ಲೆಯಲ್ಲಿದೆ ಇವೆಲ್ಲದರ ಬಗ್ಗೆ ಇಲ್ಲಿದೆ ಮಾಹಿತಿ.

ಈ ಒಂದು ಹಳ್ಳಿ ಇರುವುದು ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನಲ್ಲಿ. ಈ ಗ್ರಾಮದ ಹೆಸರು ಉಲ್ಲಿಕೆರೆ ಇನಾಮ್ ಗ್ರಾಮ. ಈ ಗ್ರಾಮದ ದೇವತೆ ಕದ್ದೆಮ್ಮ ದೇವಿ. ಈ ಗ್ರಾಮದಲ್ಲಿ ಐದುನುರಕ್ಕೂ ಹೆಚ್ಚು ಮನೆಗಳಿದ್ದು ಎರಡುಸಾವಿರದಐದುನೂರಕ್ಕೂ ಹೆಚ್ಚು ಜನ ವಾಸ ಮಾಡುತ್ತಾ ಇದ್ದಾರೆ. ಇಲ್ಲಿ ಈ ಊರಿನಲ್ಲಿ ಜನಿಸುವಂತಹ ಮಗು ಗಂಡು ಮಗು ಆಗಿದ್ದರೆ ಕದ್ದೆಪ್ಪ ಎಂದೂ ಹೆಣ್ಣು ಮಗು ಆಗಿದ್ದಲ್ಲಿ ಕದ್ದೆಮ್ಮ ಎಂದೂ ಹೆಸರನ್ನ ಇಡುತ್ತಾರೆ.

ಅಷ್ಟೇ ಅಲ್ಲದೇ ಈ ಊರಿಗೆ ಮಾದುವೆಯಾಗಿ ಬರುವ ಸೊಸೆಗೂ ಸಹ ಕದ್ದೆಮ್ಮ ಎಂಬ ಹೆಸರಿನಿಂದಲೇ ಕರೆಯಲಾಗುತ್ತದೆ. ಜನರಿಗೆ ಕದ್ದೆಮ್ಮ ದೇವಿಯ ಹೆಸರನ್ನೇ ಇಡದಿದ್ದರೆ ಈ ದೇವಿ ತಮ್ಮ ಕುಟುಂಬದ ರಕ್ಷಣೆ ಮಾಡುವುದಿಲ್ಲ ಎಂದು ನಂಬಿ ದೇವಿಯ ಹೆಸರಿನಿಂದಲೇ ಕರೆಯುತ್ತಾರೆ. ಇದು ಇವರ ಅನಾಧಿಕಾಲದ ನಂಬಿಕೆ ಕೂಡ ಆಗಿದೆ.

ಇಲ್ಲಿನ ಇನ್ನೊಂದು ವಿಶೇಶ ಅಂದರೆ ಮಕ್ಕಳು ಆಗದವರು ಇಲ್ಲಿ ಬಂದು ಈ ಗ್ರಾಮ ದೇವಿಯ ಬಳಿ ಬಂದು ಪ್ರಾರ್ಥಿಸಿಕೊಂಡವರಿಗೆ ಮಕ್ಳಳಾಗಿರುವ ಉದಾಹರಣೆಗಳೂ ಬೇಕಾದಷ್ಟು ಇವೆ. ಆಧಿನೀಕತೆಯ ಈ ಕಾಲದಲ್ಲಿ ಇನ್ನೂ ಸಹ ಇಂತದ್ದೊಂದು ಗ್ರಾಮ ಇದೆ ಎನ್ನುವುದು ಆಶ್ಚರ್ಯಕರ ಸಂಗತಿ ಎನ್ನಬಹುದು.ಬಹುಶಃ ಈ ಊರಿನಲ್ಲಿ ಹುಟ್ಟಿದ ಪ್ರತಿಯೊಬ್ಬರಿಗೂ ಈ ದೇವಿಯ ಹೆಸರನ್ನೇ ಇಟ್ಟು , ಜನರನ್ನು ಒಂದೇ ಹೆಸರಿನಿಂದ ಕರೆಯುವ ಗ್ರಾಮ ನಮ್ಮ ದೇಶದಲ್ಲಿ ಮಾತ್ರ ಅಲ್ಲದೆ ಪ್ರಪಂಚದಲ್ಲಿ ಕೂಡಾ ಬೇರೆ ಇಲ್ಲೂ ಕಾಣಿಸುವುದಿಲ್ಲ. ಇಂತಹ ಸಂಪ್ರದಾಯವನ್ನು ಮುಂದುವರೆಸಿಕೊಂಡು ಹೋಗುವುದು ಸುಲಭವೇನೂ ಅಲ್ಲ. ಆಧುನಿಕತೆಯ ಹೆಸರಿನಲ್ಲಿ ಈ ಪ್ರಪಂಚ ಎಷ್ಟೇ ಮುಂದುವರೆದಿದ್ದರೂ ಈ ಊರಿನ ಜನರ ದೇವರ ಮೇಲಿನ ನಂಬಿಕೆ ಅಗಾಧವಾದದ್ದು.

ಇನ್ಮುಂದೆ ಪಡಿತರ ಚೀಟಿ ಬೇಕೆಂದಿಲ್ಲ..! ಯಾಕೆ..? ಪೂರ್ಣ ಮಾಹಿತಿ ಇಲ್ಲಿದೆ.

March 15, 2021

 


ನವ ದೆಹಲಿ : ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಒನ್ ನೇಷನ್, ಒನ್ ರೇಷನ್ ಕಾರ್ಡ್ ಯೋಜನೆಗೆ ಈಗ ತಾಂತ್ರಿಕ ಬೆಂಬಲ ದೊರಕಿದೆ.

ದೇಶದ ಯಾವುದೇ ಭಾಗದಲ್ಲಿ ಪಡಿತರ ಪಡೆಯಲು ಜನರಿಗೆ ಅನುಕೂಲವಾಗುವ ಈ ಒನ್ ನೇಷನ್ ಒನ್ ರೇಷನ್ ಕಾರ್ಡ್‌ ಗೆ ಸಂಬಂಧಿಸಿದ ಸ್ಮಾರ್ಟ್‌ ಫೋನ್ ಆಪ್ ವೊಂದನ್ನು ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿದೆ.

ಪಡಿತರ ಕಾರ್ಡ್ ಹೊಂದಿದವರಿಗೆ ಸುಲಭವಾಗುವ ಹಾಗೆ ಕೇಂದ್ರ ಸರ್ಕಾರ 'ಮೇರಾ ರೇಷನ್' ಮೊಬೈಲ್ ಆಯಪ್ ನ್ನು ಅನಾವರನಗೊಳಿಸಿದ್ದು, ಪಡಿತರ ಚೀಟಿದಾರರು ಇನ್ನು ಮುಂದೆ ತಮ್ಮ ರೇಷನ್ ಪಡೆದುಕೊಳ್ಳಲು ಈ ಮೊಬೈಲ್ ಅಪ್ಲಿಕೇಶನ್ ನನ್ನು ಬಳಸಿಕೊಳ್ಳಬಹುದಾಗಿದೆ.

ಒಂದೇ ಪಡಿತರ ಕಾರ್ಡ್ ಇಟ್ಟುಕೊಂಡು ದೇಶದ ಯಾವ ಭಾಗದಲ್ಲಾದರೂ ರೇಷನ್ ಪಡೆಯಲು ಈ ಅಪ್ಲಿಕೇಶನ್ ನೆರವು ನೀಡುತ್ತದೆ.

ಬಹಳ ಪ್ರಮುಖವಾಗಿ ರಾಜ್ಯದಿಂದ ಪರ ರಾಜ್ಯಕ್ಕೆ ವಲಸೆ ಹೋಗುವ ಕಾರ್ಮಿಕರಿಗೆ ಇದು ಅತ್ಯಂತ ನೆರವನ್ನು ನೀಡಲಿದೆ ಎನ್ನುವುದರಲ್ಲಿ ಅನುಮಾನ ಪಡಬೇಕಾಗಿಲ್ಲ.

ವಲಸಿಗರು ಇನ್ಮುಂದೆ ಈ 'ಮೇರಾ ರೇಷನ್' ಮೊಬೈಲ್ ಅಪ್ಲಿಕೇಶನ್ ಮೂಲಕವೇ ಸಮೀಪದ ನ್ಯಾಯ ಬೆಲೆ ಅಂಗಡಿಗಳಿಂದಲೇ ಪಡಿತರ ಧಾನ್ಯಗಳನ್ನು ಪಡೆದುಕೊಳ್ಳಬಹುದಾಗಿದೆ.

ಇನ್ನು, ಸದ್ಯ ಬಿಡುಗಡೆಗೊಂಡಿರುವ 'ಮೇರಾ ರೇಷನ್' ಮೊಬೈಲ್ ಅಪ್ಲಿಕೇಶನ್ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಮಾತ್ರ ಲಭ್ಯವಿದ್ದು, ಅತಿ ಶೀಘ್ರದಲ್ಲೇ ದೇಶದ 14 ಪ್ರಾದೇಶಿಕ ಭಾಷೆಗಳಲ್ಲಿ ಈ ಅಪ್ಲಿಕೇಶನ್ ನ ಸಾಲಭ್ಯ ದೊಕಲಿದೆ.

ವಲಸೆ ಕಾರ್ಮಿಕರಿಗೆ ಅನುಕೂಲವಾಗುವಂತೆ ಹೆಚ್ಚು ಬಳಕೆಯಲ್ಲಿರುವ ಪ್ರಾದೇಶಿಕ ಭಾಷೆಗಳಲ್ಲಿ 'ಮೇರಾ ರೇಷನ್' 14 ಪ್ರಾದೇಶಿಕ ಭಾಷೆಗಳಲ್ಲಿ ದೊರೆಯುವಂತೆ ಮಾಡಲು ಕಾರ್ಯೋನ್ಮುಖವಾಗಿದೆ ಎಂದು ಮೂಲಗಳು ತಿಳಿಸಿವೆ. ಇದರಿಂದ ಪಡಿತರ ಚೀಟಿದಾರರಿಗೆ ಹೆಚ್ಚು ಲಾಭವಾಗಲಿದೆ. ಕೇವಲ ಹಿಂದಿ ಮತ್ತು ಇಂಗ್ಲಿಷ್‌ ನಲ್ಲೇ ಇದ್ದರೆ ಈ ಮೊಬೈಲ್ ಬಳಕೆಯ ಹೆಚ್ಚಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೂಡಾ, ವಲಸಿಗರು, ಕಾರ್ಮಿಕರು ಹೆಚ್ಚು ಎಲ್ಲಿದ್ದಾರೆಂಬುದನ್ನು ಗುರುತಿಸಿ ಭಾಷೆಗಳನ್ನು ನಿರ್ಧರಿಸಲಾಗುವುದು ಎಂದು ಮಾಹಿತಿ ನೀಡಿದೆ.

ಇದನ್ನು ಪ್ರತಿ ದಿನ ತಿಂದರೆ ʼಹೃದಯʼ ಖಾಯಿಲೆ ದೂರ

March 14, 2021

 


ಹೃದಯ ಖಾಯಿಲೆ ಅನ್ನೋದು ಇತ್ತೀಚಿನ ದಿನಗಳಲ್ಲಿ ಕಾಮನ್ ಆಗಿಬಿಟ್ಟಿದೆ. ಇಂದಿನ ಜೀವನ ಶೈಲಿ, ಆಹಾರ ಪದ್ಧತಿಯಿಂದಾಗಿ ಹೃದಯ ಸಂಬಂಧಿತ ಹಲವಾರು ಆರೋಗ್ಯ ಸಮಸ್ಯೆಗಳು ಜನರನ್ನು ಮುತ್ತಿಕೊಳ್ಳುತ್ತಿವೆ. ಆದರೆ ನೀವು ದಿನವೂ ಮೊಸರು ತಿನ್ನುವವರಾಗಿದ್ದರೆ ಸ್ವಲ್ಪ ಮಟ್ಟಿಗೆ ಈ ಹೃದಯ ಖಾಯಿಲೆಯಿಂದ ದೂರವಿರಬಹುದು.

ಹೌದು..ಅಮೆರಿಕದ ಜರ್ನಲ್ ಒಂದರಲ್ಲಿ ಪ್ರಕಟವಾದ ಸಂಶೋಧನಾ ವರದಿಯ ಪ್ರಕಾರ ಡೈರಿ ಉತ್ಪನ್ನಗಳಾದ ಹಾಲು, ಬೆಣ್ಣೆ, ತುಪ್ಪ ಇವೆಲ್ಲ ಹೃದಯಕ್ಕೆ ಒಳ್ಳೆಯದು. ಆದರೆ ಮೊಸರು ಹೃದಯದ ಖಾಯಿಲೆ ಬರದಂತೆ ತಡೆಯುವಲ್ಲಿ ಬಹುತೇಕ ಯಶಸ್ವಿಯಾಗುತ್ತದೆ. ದಿನವೂ ಮೊಸರನ್ನು ತಿನ್ನುವುದರಿಂದ ಹೃದಯ ಸಂಬಂಧಿ ಖಾಯಿಲೆಗಳು ಬರದಂತೆಯೇ ತಡೆಯಬಹುದು.

ಈ ಸಂಶೋಧನೆಗೆ 30-55 ವರ್ಷ ವಯಸ್ಸಿನ 55 ಸಾವಿರ ಮಹಿಳೆಯರನ್ನು ಹಾಗೂ 40 ರಿಂದ 75 ವರ್ಷ ವಯಸ್ಸಿನ 18 ಸಾವಿರ ಮಂದಿ ಪುರುಷರನ್ನು ಬಳಸಿಕೊಳ್ಳಲಾಗಿದೆ.

ದಿನವೂ ಹೆಚ್ಚಾಗಿ ಮೊಸರನ್ನು ತಿನ್ನುವ ಮಹಿಳೆಯರಲ್ಲಿ ಹೃದಯ ಸಂಬಂಧಿ ಖಾಯಿಲೆ ಪ್ರಮಾಣ ಶೇ.30 ರಷ್ಟು ಹಾಗೂ ಪುರುಷರಲ್ಲಿ ಶೇ.19 ರಷ್ಟು ಕಡಿಮೆಯಾಗಿರುವುದು ಕಂಡುಬಂದಿದೆ.

ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ಹಣ್ಣು ಸೇವಿಸುವುದರ ಆರೋಗ್ಯ ಪ್ರಯೋಜನಗಳು

March 14, 2021


 ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ಹಣ್ಣು ಸೇವಿಸುವುದರ ಆರೋಗ್ಯ ಪ್ರಯೋಜನಗಳು Saakshatv healthtips papaya

ಹಣ್ಣುಗಳನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಅಸಂಖ್ಯಾತ ಪ್ರಯೋಜನಗಳಿವೆ. ಎಲ್ಲಾ ಪೋಷಕಾಂಶಗಳಿಂದ ಕೂಡಿದ ಮತ್ತು ದೇಹದ ಉತ್ತಮ ಕಾರ್ಯನಿರ್ವಹಣೆಗೆ ಅಗತ್ಯವಾಗಿರುವ ಹಣ್ಣುಗಳಲ್ಲಿ ಒಂದು ಹಣ್ಣು ಪಪ್ಪಾಯಿ. ಈ ಮೃದು ಮತ್ತು ಸಿಹಿ ಹಣ್ಣು ಕಡಿಮೆ ಕ್ಯಾಲೊರಿ ಮತ್ತು ಹೆಚ್ಚಿನ ಫೈಬರ್ ಅಂಶವನ್ನು ಹೊಂದಿರುತ್ತದೆ. ಪಪ್ಪಾಯಿ ತಿನ್ನಲು ಬೆಳಿಗ್ಗೆ ಸರಿಯಾದ ಸಮಯ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಂದರೆ, ನೀವು ಪ್ರತಿದಿನ ಎದ್ದು ಪಪ್ಪಾಯಿಯನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ, ನೀವು ಅಸಂಖ್ಯಾತ ಪ್ರಯೋಜನಗಳನ್ನು ಪಡೆಯಬಹುದು. Saakshatv healthtips papaya

ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ಹಣ್ಣು ಸೇವಿಸುವುದರ ಕೆಲವು ಆರೋಗ್ಯ ಪ್ರಯೋಜನಗಳು ಇಲ್ಲಿದೆ1. ಕ್ಯಾನ್ಸರ್ ತಪ್ಪಿಸಲು, ಪಪ್ಪಾಯವನ್ನು ಸೇವಿಸುವುದು ಪ್ರಯೋಜನಕಾರಿ.

ಇದು ಇಸಿಥಿಯೊನಟ್ ಎಂಬ ಅಂಶವನ್ನು ಹೊಂದಿರುತ್ತದೆ, ಇದು ಕ್ಯಾನ್ಸರ್ ಚಿಕಿತ್ಸೆ ಮತ್ತು ತಡೆಗಟ್ಟುವಲ್ಲಿ ಬಹಳ ಪರಿಣಾಮಕಾರಿಯಾಗಿದೆ.

2. ಈ ಹಣ್ಣನ್ನು ಕಡಿಮೆ ಕ್ಯಾಲೊರಿಗಳಲ್ಲದೆ ಫೈಬರ್‌ನ ಅತ್ಯುತ್ತಮ ಮೂಲವೆಂದು ಪರಿಗಣಿಸಲಾಗುತ್ತದೆ. ಇದು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿಡುತ್ತದೆ.

3. ಇದು ವಿಷವನ್ನು ಹೊರಹಾಕಲು ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಜೀರ್ಣಕಾರಿ ಅಸ್ವಸ್ಥತೆಗಳು, ಹೊಟ್ಟೆ ಉಬ್ಬರ ಮತ್ತು ಮಲಬದ್ಧತೆ ಮುಂತಾದವುಗಳಿಗೆ ಸಹ ಇದು ಪರಿಣಾಮಕಾರಿ.

4. ಪಪ್ಪಾಯಿ ಎ, ಸಿ ಮತ್ತು ಕೆ ಜೀವಸತ್ವಗಳನ್ನು ಹೊಂದಿದೆ . ಇದು ದೇಹದಿಂದ ವಿಷವನ್ನು ತೆಗೆದುಹಾಕುವ ಮೂಲಕ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ರೋಗಗಳು ಮತ್ತು ಸೋಂಕುಗಳನ್ನು ದೂರವಿಡಲು ಸಹಾಯ ಮಾಡುತ್ತದೆ.

5. ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಪಪ್ಪಾಯವನ್ನು ಸೇವಿಸಬೇಕು. ಫೈಬರ್ ಮತ್ತು ಕಡಿಮೆ ಕ್ಯಾಲೋರಿಗಳಲ್ಲಿ ಸಮೃದ್ಧವಾಗಿರುವ ಈ ಹಣ್ಣು ತೂಕ ಕಡಿಮೆ ಮಾಡಲು ನೆರವಾಗುತ್ತದೆ.

6. ಪಪ್ಪಾಯಿಯಲ್ಲಿ ವಿಟಮಿನ್ ಸಿ, ಪೊಟ್ಯಾಸಿಯಮ್, ಆಂಟಿಆಕ್ಸಿಡೆಂಟ್‌ಗಳು ಮತ್ತು ಫೈಬರ್ ಇರುವಿಕೆಯು ಅಪಧಮನಿಗಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಇದು ರಕ್ತದ ಹರಿವನ್ನು ಉತ್ತೇಜಿಸುತ್ತದೆ ಮತ್ತು ರಕ್ತಪರಿಚಲನೆಯನ್ನು ಹೆಚ್ಚಿಸುವ ಮೂಲಕ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ಹೃದ್ರೋಗ ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

7. ಇದು ನೈಸರ್ಗಿಕ ನೋವು ನಿವಾರಕವಾದ ಪ್ಯಾಪೈನ್ ಕಿಣ್ವವನ್ನು ಹೊಂದಿರುತ್ತದೆ. ಇದಲ್ಲದೆ ಇದು ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪ್ಯಾಪಿನ್‌ಗಳು ಪ್ರೋಟೀನ್‌ಗಳ ಗುಂಪಿನ ಸೈಟೊಕಿನ್‌ಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ. ಇದು ಉರಿಯೂತವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

8. ಪಪ್ಪಾಯಿಯಲ್ಲಿ ಕಣ್ಣಿನ ಆರೋಗ್ಯಕ್ಕೆ ಅಗತ್ಯವಾದ ಲುಟೀನ್, ಝೀಕ್ಯಾಂಥಿನ್ ಮತ್ತು ವಿಟಮಿನ್ ಇ ಸೇರಿದಂತೆ ಅನೇಕ ಪೋಷಕಾಂಶಗಳಿವೆ. ಚರ್ಮಕ್ಕೆ ಇದು ಪರಿಣಾಮಕಾರಿಯಾಗಿದೆ.

9. ಇದರಲ್ಲಿ ವಿಟಮಿನ್ ಸಿ ಇದ್ದು, ಬೀಟಾ-ಕ್ಯಾರೋಟಿನ್ ಮತ್ತು ಲೈಕೋಪೀನ್ ನಂತಹ ಕ್ಯಾರೊಟಿನಾಯ್ಡ್ ಗಳನ್ನು ಹೊಂದಿರುತ್ತದೆ. ಅದಕ್ಕಾಗಿಯೇ ಇದರ ಸೇವನೆಯು ಸುಕ್ಕುಗಳು ಮತ್ತು ವಯಸ್ಸಾದ ಇತರ ಚಿಹ್ನೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

10. ಪಪ್ಪಾಯಿಗಳು ಲಿವರ್ ಗೆ ಅತ್ಯುತ್ತಮವಾಗಿವೆ. ಪಿತ್ತಜನಕಾಂಗದ ಸಿರೋಸಿಸ್ನಲ್ಲಿ ಇದು ತುಂಬಾ ಪ್ರಯೋಜನಕಾರಿಯಾಗಿದೆ. ನೀವು ಬಯಸಿದರೆ ಅದನ್ನು ನಿಂಬೆ ರಸದೊಂದಿಗೆ ತೆಗೆದುಕೊಳ್ಳಬಹುದು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸುವುದರಿಂದ ಬಹಳಷ್ಟು ಪ್ರಯೋಜನಕಾರಿಯಾಗಿದೆ.

ಹುಡುಗಿ ಹುಡುಕಿಕೊಡಿ ಎಂದವನನ್ನು ಭೇಟಿ ಮಾಡಲು ಮುಂದಾದ ಸಲ್ಮಾನ್​ ಖಾನ್​!

March 14, 2021

 


ನೋಯ್ಡಾ: ಕುಳ್ಳನೆಯ ವ್ಯಕ್ತಿಯೊಬ್ಬ ಮದುವೆಯಾಗಲು ಹುಡುಗಿ ಹುಡುಕಿಕೊಡಿ ಎಂದು ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದ ಸುದ್ದಿ ಇತ್ತೀಚೆಗೆ ಹರಿದಾಡಿತ್ತು. ಆ ಸುದ್ದಿಯ ಬೆನ್ನಲ್ಲೇ ಇದೀಗ ವಧುವಿನ ನಿರೀಕ್ಷೆಯಲ್ಲಿರುವ ಯುವಕನನ್ನು ಭೇಟಿ ಮಾಡಲು ಬಾಲಿವುಡ್​ ನಟ ಸಲ್ಮಾನ್​ ಖಾನ್ ಮುಂದಾಗಿದ್ದಾರೆ.

ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಮನ್ಸೂರಿ (26) ಇತ್ತೀಚೆಗೆ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದ. ಅಲ್ಲಿದ್ದ ಮಹಿಳಾ ಪೊಲೀಸರ ಮುಂದೆ ಕುಳಿತು ತನ್ನ ಅಳಲನ್ನು ತೋಡಿಕೊಂಡಿದ್ದ. ನಾನು ಇರೋದು 2 ಅಡಿ 3 ಇಂಚು. ನಮ್ಮನೆಗೆ ಬರುವ ವಧುವಿನ ಕಡೆಯವರೆಲ್ಲ ನನ್ನ ಎತ್ತರ ಸಾಲದು ಎಂದು ವಾಪಾಸು ಹೋಗುತ್ತಾರೆ. ನಾನು ಕಾಸ್ಮೆಟಿಕ್​ ಅಂಗಡಿ ಇಟ್ಟುಕೊಂಡಿದ್ದೇನೆ. ಕುಟುಂಬಕ್ಕೆ ಬೇಕಾಗುವಷ್ಟು ಹಣ ಸಂಪಾದನೆ ಮಾಡುತ್ತಿದ್ದೇನೆ. ಆದರೂ ಯಾರೂ ಹೆಣ್ಣು ಕೊಡುತ್ತಿಲ್ಲ.

ನಮ್ಮ ಮನೆಯವರೂ ಹುಡುಗಿ ಹುಡುಕುವ ಕೆಲಸವನ್ನು ಮಾಡುತ್ತಿಲ್ಲ. ಸಾರ್ವಜನಿಕ ಸೇವೆಗಿರುವ ನೀವಾದರೂ ನನಗೆ ಹುಡುಗಿ ಹುಡುಕಿಕೊಡಿ ಎಂದು ಕೇಳಿಕೊಂಡಿದ್ದ.

ಪೊಲೀಸರ ಎದುರು ಈ ರೀತಿಯ ವಿಚಿತ್ರ ಬೇಡಿಕೆಯನ್ನಿಟ್ಟು ಸಕತ್​ ವೈರಲ್​ ಆಗಿತ್ತು. ಅದೇ ಕಾರಣದಿಂದಾಗಿ ಸಲ್ಮಾನ್​ ಖಾನ್​ ಕೂಡ ಮನ್ಸೂರ್​ನನ್ನು ಭೇಟಿ ಮಾಡುವ ಮನಸ್ಸು ಮಾಡಿದ್ದಾರೆ. ಮುಂಬೈಗೆ ಬರುವಂತೆ ಹೇಳಿದ್ದಾರೆ. ಅವರು ಮನ್ಸೂರ್​ನೊಂದಿಗೆ ಏನು ಮಾತನಾಡಲಿದ್ದಾರೆ? ಹುಡುಗಿಯನ್ನು ಹುಡುಕಿ ಕೊಡಲಿದ್ದಾರಾ ಎನ್ನುವುದನ್ನು ಕಾದು ನೋಡಬೇಕು. (ಏಜೆನ್ಸೀಸ್​)

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ದಿಲ್ಲಿಯಿಂದ ಏಳು ತಿಂಗಳುಗಳ ಕಾಲ್ನಡಿಗೆ ಪಯಣದ ಬಳಿಕ ಜಾರ್ಖಂಡ್‌ನ ಮನೆಗೆ ತಲುಪಿದ ವಲಸೆ ಕಾರ್ಮಿಕ !ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಮಾ.23: ಜಾರ್ಖಂಡ್‌ನ 54 ವರ್ಷ ವಯಸ್ಸಿನ ವಲಸೆ ಕಾರ್ಮಿಕ ಬೆರ್ಜೊಮ್ ಬಮ್ಡಾ ಪಹಾಡಿಯಾ ಕಳೆದ ವರ್ಷ ದಿಲ್ಲಿಯಿಂದ ಕಾಲ್ನಡಿಗೆಯಲ್ಲಿ ಪ್ರಯಾಣವನ್ನು ಆರಂಭಿಸಿದವನು ಏಳು ತಿಂಗಳುಗಳ ಬಳಿಕ ಜಾರ್ಖಂಡ್‌ನಲ್ಲಿರುವ ಮನೆಯನ್ನು ತಲುಪಿದ್ದಾನೆ. ಬೆರ್ಜೊಮ್‌ನ ಆಗಮನವು ಆತನ ಕುಟುಂಬದಲ್ಲಿ ಹರ್ಷವನ್ನು ಮೂಡಿಸಿದೆ.

ದಿಲ್ಲಿಯಲ್ಲಿ ಕಟ್ಟಡ ಕಾರ್ಮಿಕನಾಗಿದ್ದ ಪಹಾಡಿಯಾನಿಗೆ ಆತನ ಗುತ್ತಿಗೆದಾರ ಕೂಲಿ ಹಣ ಕೂಡಾ ನೀಡದೆ, ಹೊರಹಾಕಿದ್ದ. ಅಲ್ಲದೆ ಪಹಾಡಿಯಾ ತನ್ನ ಹಳ್ಳಿಯಿಂದ ಬರುವಾಗ ಹಣವನ್ನು ಕಿತ್ತುಕೊಂಡಿದ್ದ. ಕೈಯಲ್ಲಿ ಬಿಡಿಗಾಸೂ ಇಲ್ಲದ ಬೆರ್ಜೊಮ್ ಕಳೆದ ವರ್ಷದ ಆಗಸ್ಟ್‌ನಲ್ಲಿ ಜಾರ್ಖಂಡ್‌ನಲ್ಲಿರುವ ತನ್ನ ಹಳ್ಳಿಯೆಡೆಗೆ ಕಾಲ್ನಡಿಗೆಯ ಪ್ರಯಾಣವನ್ನು ಆರಂಭಿಸಿದ್ದ.

ದಿಲ್ಲಿಯಿಂದ 1200 ಕಿ.ಮೀ. ನಡೆದು ಸಾಹೇಬ್‌ಗಂಜ್ ಜಿಲ್ಲೆಯಲ್ಲಿರುವ ತನ್ನ ಊರಾದ ಅಮರ್‌ಬಿತಾ ಗ್ರಾಮವನ್ನು ಪಹಾಡಿಯಾ ಮಾರ್ಚ್ 13ರಂದು ತಲುಪಿದ್ದ.

ತನ್ನ ಹಳ್ಳಿಯಲ್ಲಿ ಕೂಲಿ ಕೆಲಸ ಮಾಡಿಕೊಂಡು ಬದುಕುತ್ತಿದ್ದ ಪಹಾಡಿಯಾನಿಗೆ ಮಧ್ಯವರ್ತಿಯೊಬ್ಬ ಉತ್ತಮ ವೇತನದ ಕೆಲಸದ ಭರವಸೆ ನೀಡಿದ್ದರಿಂದ ಆತ ತನ್ನ ಹಳ್ಳಿಯ ಇತರ ಹತ್ತುಮಂದಿಯೊಂದಿಗೆ ಕಳೆದ ವರ್ಷದ ಫೆಬ್ರವರಿಯಲ್ಲಿ ದಿಲ್ಲಿಗೆ ತೆರಳಿದ್ದ. ಲಾಕ್‌ಡೌನ್ ಹೇರಿಕೆಗೆ ಮುನ್ನ ಪಹಾಡಿಯಾ ದಿಲ್ಲಿಯಲ್ಲಿ 20-25 ದಿನಗಳ ಕಾಲ ಕೆಲಸ ಮಾಡಿದ್ದ. ಆದರೆ ದಲ್ಲಾಳಿಯು ಆತನಿಗೆ ಒಂದು ಬಿಡಿಗಾಸನ್ನೂ ಕೂಡಾ ನೀಡಿರಲಿಲ್ಲ. ಕೇವಲ ದಿನಕ್ಕೆ ಎರಡು ಹೊತ್ತಿನ ಊಟ ಹಾಗೂ ಉಳಿದುಕೊಳ್ಳಲು ಸ್ಥಳವನ್ನಷ್ಟೇ ಒದಗಿಸಲಾಗಿತ್ತು. ''ಮಾರ್ಚ್‌ನಲ್ಲಿ ಲಾಕ್‌ಡೌನ್ ಹೇರಿದ ಬಳಿಕ ದಲ್ಲಾಳಿಯು, ಪಹಾಡಿಯಾ ಮನೆಯಿಂದ ಬರುವಾಗ ತಂದಿದ್ದ ಏಳು ಸಾವಿರ ರೂ.ಗಳನ್ನು ಕಿತ್ತುಕೊಂಡಿದ್ದ, ಇದರ ಜೊತೆಗೆ ನನ್ನ ಸೊತ್ತುಗಳನ್ನು ಹಾಗೂ ಆಧಾರ್‌ಕಾರ್ಡ್ ಕೂಡಾ ಕಸಿದುಕೊಂಡಿದ್ದ'' ಎಂದು ಪಹಾಡ್ ಟೆಲಿಗ್ರಾಫ್ ಪತ್ರಿಕೆಯ ಮುಂದೆ ತನ್ನ ಗೋಳನ್ನು ತೋಡಿಕೊಂಡಿದ್ದಾನೆ.

ಆನಂತರ ಪಹಾಡಿಯಾ ಬೀದಿಬದಿಯಲ್ಲೇ ವಾಸಮಾಡಬೇಕಾಯಿತು. ರೈಲು ಟಿಕೆಟ್ ಖರೀದಿಸಲು ಆತನ ಬಳಿಯಲ್ಲಿ ಹಣವಿಲ್ಲದೆ ಇದ್ದುದರಿಂದ ಆತ ಕಾಲ್ನಡಿಗೆಯಲ್ಲಿಯೇ ಪ್ರಯಾಣ ಆರಂಭಿಸಿದ್ದ. ಆತನಿಗೆ ಬುಡಕಟ್ಟು ಸಂತಾಲಿ ಭಾಷೆ ಮಾತ್ರ ಬರುತ್ತಿದ್ದುದರಿಂದ ಉಳಿದ ಜನರೊಂದಿಗೆ ತನ್ನ ಸಂಕಷ್ಟವನ್ನು ಹೇಳಲೂ ಸಾಧ್ಯವಾಗಿರಲಿಲ್ಲ

ರೈಲು ಮಾರ್ಗದಲ್ಲಿಯೇ ನಡೆಯುತ್ತಲ್ಲೇ ಕಾಲ್ನಡಿಗೆ ಪ್ರಯಾಣ ಆರಂಭಿಸಿದ ತಾನು ಹೊಟ್ಟೆ ತುಂಬಿಸಿಕೊಳ್ಳಲು ಭಿಕ್ಷೆ ಬೇಡುತ್ತಿದ್ದೆ ಎಂದು ಪಹಾಡಿಯಾ ತಿಳಿಸಿದ್ದಾನೆ. ಮಾರ್ಚ್ 11ರಂದು ಪಹಾಡಿಯಾ ಧನಾಬಾದ್ ಜಿಲ್ಲೆಯ ಮಹುಡಾದಲ್ಲಿ ರೈಲ್ವೆ ಹಳಿಯನ್ನು ದಾಟುತ್ತಿದ್ದಾಗ, ಎನ್‌ಜಿಓ ಸಂಸ್ಥೆ 'ರೋಟಿಬ್ಯಾಂಕ್ 'ನ ಕಾರ್ಯಕರ್ತರು ಆತ ಹಸಿವಿನಿಂದ ಕಂಗಾಲಾಗಿರುವುದನ್ನು ಗಮನಿಸಿದರು. ಆನಂತರ ಅವರು ಪಹಾಡಿಯಾನಿಗೆ ಸಾಹೇಬ್‌ಗಂಜ್‌ವರೆಗೆ ಬಸ್‌ಟಿಕೆಟ್‌ನ ವ್ಯವಸ್ಥೆ ಮಾಡಿದರಲ್ಲದೆ, ಹೊಸ ಬಟ್ಟೆಗಳನ್ನು ಕೂಡಾ ಕೊಡಿಸಿದರು. ವಿಶ್ರಾಂತಿಗಾಗಿ ಕೊಠಡಿಯನ್ನು ಕೂಡಾ ಒದಗಿಸಿದರು.

ಗುತ್ತಿಗೆದಾರನೊಬ್ಬನ ವಾಹನದಲ್ಲಿ ಪಹಾಡಿಯಾನನ್ನು ಆತನ ಮಹುಡಾ ಜಿಲ್ಲೆಗೆ ಮಾರ್ಚ್ 13ರಂದು ತಲುಪಿಸಿದರು. ಎನ್‌ಜಿಓ ಸಂಸ್ಥೆಯ ಸದಸ್ಯರೊಬ್ಬರು ಕೂಡಾ ಆತನ ಜೊತೆಗಿದ್ದರು. ಘಟನೆಗೆ ಸಂಬಂಧಿಸಿ ತನಿಖೆ ನಡೆಸಲಾಗುವುದು ಹಾಗೂ ಸಾಧ್ಯವಾದಲ್ಲಿ ಪಹಾಡಿಯಾನನ್ನು ದಿಲ್ಲಿಗೆ ಕರೆದೊಯ್ದ ದಲ್ಲಾಳಿಯನ್ನು ಬಂಧಿಸಲಾಗುವುದು ಎಂದು ಸಾಹೇಬ್‌ಗಂಜ್ ಜಿಲ್ಲಾಧಿಕಾರಿ ರಾಮ್ ನಿವಾಸ್‌ಯಾದವ್ ತಿಳಿಸಿದ್ದಾರೆ.


ಲಾಕ್ ಡೌನ್ ಆಗಬಾರದು ಅಂದ್ರೆ ಸರ್ಕಾರದ ಜೊತೆ ಸಹಕರಿಸಿ : ಸಿಎಂ

March 14, 2021

 


ಬೆಂಗಳೂರು : ಕೋವಿಡ್ ಸೋಂಕು ಕೈ ಮೀರಿ ಹೋಗ್ತಿದೆ, ಸರ್ಕಾರದ ಜೊತೆ ಜನರು ಸಹಕರಿಸಬೇಕು, ಲಾಕ್ ಡೌನ್ ಆಗಬಾರದು ಅಂತಿದ್ದರೆ, ಕರ್ಪ್ಯೂ ಮಾಡಬಾರದು ಅಂತಿದ್ದರೆ ಸಹಕರಿಸಿ ಎಂದು ಸಿಎಂ ಯಡಿಯೂರಪ್ಪ ಜನರಲ್ಲಿ ಕೇಳಿಕೊಂಡಿದ್ದಾರೆ.

ಮಾಸ್ಕ್ ಹಾಕಬೇಕು, ಕೋವಿಡ್ ನಿಯಮ ಪಾಲಿಸಿದರೆ ಸೋಂಕು ಹರಡುವುದನ್ನು ನಿಯಂತ್ರಣ ಮಾಡಬಹುದು. ಮಹಾರಾಷ್ಟ್ರದಲ್ಲೂ ಹೆಚ್ಚಾಗ್ತಿದೆ, ಗಡಿಗಳಲ್ಲಿಯೂ ಬಿಗಿ ಕ್ರಮ ಕೈಗೊಳ್ಳುವ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದರು.

ರಮೇಶ್ ಜಾರಕಿಹೊಳಿ ಸಿಡಿ ವಿಚಾರವಾಗಿ ಮಾತನಾಡಿದ ಸಿಎಂ, ವಿರೋಧ ಪಕ್ಷದವರು ತಮ್ಮ ಕರ್ತವ್ಯ ನಿರ್ವಹಿಸಲಿ, ಅವರು ಸರ್ಕಾರಕ್ಕೆ ಸಲಹೆ ಕೊಟ್ಟರೆ ಅದನ್ನ ಸ್ವೀಕರಿಸುತ್ತೇವೆ, ಸಚಿವರು ಎಚ್ಚರಿಕೆಯಿಂದ ಕೆಲಸ ಮಾಡಲು ಸಹಕಾರಿ ಆಗುತ್ತೆ ಎಂದರು.


ಮೇಲ್ ಓದಿ, ಹಣ ಪಡೆಯಿರಿ... ಈ ಸಿಂಪಲ್ ಟ್ರಿಕ್ಸ್ ಮೂಲಕ ಮನೆಯಲ್ಲಿಯೇ ಕುಳಿತು ಹೆಚ್ಚುವರಿ ಆದಾಯ ಪಡೆಯಿರಿ..

March 14, 2021

 ಸ್ಪೆಷಲ್ ಡೆಸ್ಕ್ : ಹೆಚ್ಚುತ್ತಿರುವ ಹಣದ ಸಮಸ್ಯೆಯ ನಡುವೆ, ಪ್ರತಿಯೊಬ್ಬರೂ ತಮ್ಮ ಜೀವನವನ್ನು ಸುಧಾರಿಸುವ ಹೆಚ್ಚುವರಿ ಆದಾಯದ ಮೂಲವನ್ನು ಕಂಡುಹಿಡಿಯಲು ಬಯಸುತ್ತಾರೆ. ಅದಕ್ಕಾಗಿ ಏನು ಮಾಡುವುದು ಎಂದು ಜನರು ಯೋಚಿಸುತ್ತಲೇ ಇರುತ್ತಾರೆ, ಆದರೆ ಕೆಲವರಿಗೆ ಯೋಚನೆಯನ್ನು ಮೀರಿ ಹೋಗುವುದಿಲ್ಲ. ಇನ್ನು ಕೆಲವರು ಜುಗಾಡ್ ಅಥವಾ ಕಳ್ಳ ದಾರಿಯಲ್ಲಿ ಮುಂದುವರೆಯುತ್ತಾರೆ. ಇತ್ತೀಚಿನ ದಿನಗಳಲ್ಲಿ ಇಂಟರ್ನೆಟ್ ಕೂಡ ಹೆಚ್ಚುವರಿ ಆದಾಯಕ್ಕೆ ಬಹಳ ಸಹಕಾರಿ ಎಂದು ಸಾಬೀತು ಮಾಡುತ್ತಿದೆ. ಹಣ ಪಡೆಯುವ ಅನೇಕ ಸೈಟ್ ಗಳಿವೆ. ನೀವು ಇದೇ ರೀತಿಯ ಆಯ್ಕೆಯನ್ನು ಹುಡುಕುತ್ತಿದ್ದರೆ, ಈ ಸುದ್ದಿ ನಿಮಗೆ ಸಹಾಯಕಾರಿಯಾಗಬಹುದು. ಮನೆ ಅಥವಾ ಕಚೇರಿಯಲ್ಲಿ ಕುಳಿತು ಕಡಿಮೆ ಅವಧಿಯಲ್ಲಿ ನೀವು ಹೇಗೆ ಹೆಚ್ಚುವರಿ ಆದಾಯವನ್ನು ಗಳಿಸಬಹುದು ಎಂದು ಹೇಳೋಣ.


ಜಾಹೀರಾತು ನೋಡಿ ಗಳಿಕೆ
ಅಂತರ್ಜಾಲ ಜಗತ್ತಿನಲ್ಲಿ ಅನೇಕ ವೆಬ್ ಸೈಟ್ ಗಳಿದ್ದು, ಜಾಹೀರಾತುಗಳನ್ನು ನೋಡಲು ಹಣವೂ ದೊರೆಯುತ್ತದೆ. ಹೌದು ನೀವು ಓದಿರುವುದು ಸರಿಯಾಗಿಯೇ ಇದೆ. ಇದಕ್ಕಾಗಿ ನೀವು ಯಾವುದೇ ಪೇಯ್ಡ್-ಟು-ಕ್ಲಿಕ್ (PTC) ವೆಬ್ ಸೈಟ್ ಗೆ ಭೇಟಿ ನೀಡಿ ನಿಮ್ಮನ್ನು ನೀವು ನೋಂದಾಯಿಸಿಕೊಳ್ಳಬೇಕು. ClixSense.com, NeoBux ನಂತಹ PTC ವೆಬ್ ಸೈಟ್ ಗಳಲ್ಲಿ ಜಾಹೀರಾತುಗಳನ್ನು ನೋಡಿದರೆ ನೀವು ಹಣ ಪಡೆಯುತ್ತೀರಿ.

ಆಯಪ್ ಅನ್ನು ಪ್ರಚಾರ ಮಾಡುವ ಮೂಲಕ
ಇಂಟರ್ನೆಟ್ ನಲ್ಲಿ ಹಲವಾರು ಆಪ್ ಗಳಿದ್ದು, ನೀವು ಪ್ರಚಾರ ಮಾಡುವ ಮೂಲಕ ಹಣ ಗಳಿಸಬಹುದು. ಇದಕ್ಕಾಗಿ ನೀವು ಸಂಬಂಧಪಟ್ಟ ಆಯಪ್ ಗೆ ಲಾಗಿನ್ ಆಗಿ ನಂತರ ಆ ಆಪ್ ಬಗ್ಗೆ ನಿಮ್ಮ ಸ್ನೇಹಿತರಿಗೆ ಮತ್ತು ಸಂಬಂಧಿಕರಿಗೆ ತಿಳಿಸಬೇಕು. ಅಪ್ಲಿಕೇಶನ್ ನಲ್ಲಿ ನೀವು ಹೇಳಿದ ಕೋಡ್ ಬಳಸಿ, ಇತರ ಬಳಕೆದಾರರು ಸೇವೆಯನ್ನು ಪಡೆದುಕೊಂಡರೆ ಅದರಿಂದ ನಿಮಗೆ ನನಿಶ್ಚಿತ ಮೊತ್ತದ ಹಣ ಪಾವತಿಯಾಗುತ್ತದೆ.

ಮೇಲ್ ಓದಿ, ಹಣ ಪಡೆಯಿರಿ
ಕೇವಲ ಮೇಲ್ ಓದುವ ಮೂಲಕ ಹಣ ಸಂಪಾದಿಸಬಹುದು. ಮನಿ ಮೇಲ್ ಡಾಟ್ ಕಾಮ್ ನಲ್ಲಿ ನೀವು ಮೇಲ್ ಓದುವ ಮೂಲಕ ಸಂಪಾದಿಸಬಹುದು. ತಿಂಗಳಿಗೆ ಹತ್ತು ಸಾವಿರ ರೂಪಾಯಿವರೆಗೆ ಸಂಪಾದಿಸುತ್ತಾರೆ ಎಂದು ಅನೇಕರು ಹೇಳಿಕೊಂಡಿದ್ದಾರೆ. ಇದಕ್ಕಾಗಿ ನೀವು ಪ್ರತಿದಿನ ನಿಮ್ಮ ಖಾತೆಗೆ ಲಾಗಿನ್ ಆಗಬೇಕು ಮತ್ತು ಇನ್ ಬಾಕ್ಸ್ ಮೇಲ್ ಅನ್ನು ಓದಬೇಕಾಗುತ್ತದೆ. ನಿಮ್ಮ ಸ್ನೇಹಿತರೊಬ್ಬರು ನಿಮ್ಮ ಶಿಫಾರಸಿನ ಮೇಲೆ ಖಾತೆಯನ್ನು ರಚಿಸಿದರೆ, ನೀವು ನಿರ್ದಿಷ್ಟ ಮೊತ್ತವನ್ನು ಪಡೆಯುತ್ತೀರಿ. ಮ್ಯಾಟ್ರಿಕ್ಸ್ ಮೇಲ್ ಡಾಟ್ ಕಾಮ್ ನಲ್ಲಿ ನೀವು ಗಂಟೆಗೆ 2ರಿಂದ 2500 ರೂಪಾಯಿಗಳನ್ನು ಸುಲಭವಾಗಿ ಸಂಪಾದಿಸಬಹುದು.

ಕಂಪನಿಗಳ ಪ್ರಚಾರದಿಂದ
ಅನೇಕ ಕಂಪನಿಗಳು ತಮ್ಮ ಉತ್ಪನ್ನಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಲು ಹಣ ಪಾವತಿಸುತ್ತಿವೆ. ಇದಕ್ಕಾಗಿ ನೀವು ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ಇನ್ ಸ್ಟಾಗ್ರಾಂ ಮತ್ತು ಟ್ವಿಟರ್ ನಲ್ಲಿ ಖಾತೆಯೊಂದನ್ನು ರಚಿಸಿ ಮತ್ತು ಪ್ರಾಯೋಜಿತ ಪೋಸ್ಟ್ ಗಳನ್ನು ಪೋಸ್ಟ್ ಮಾಡಬೇಕಾಗುತ್ತದೆ. ಅಲ್ಲದೆ, ನಿಮ್ಮಸ್ವಂತ ವೀಡಿಯೊಗಳನ್ನು ರಚಿಸುವ ಮೂಲಕ ಮತ್ತು ಇನ್ ಬಾಕ್ಸ್ ಡೋಲ್ಸ್ ನಂತಹ ವೆಬ್ ಸೈಟ್ ಗಳಲ್ಲಿ ವೀಡಿಯೊಗಳನ್ನು ವೀಕ್ಷಿಸುವ ಮೂಲಕ ನೀವು ಹಣ ಗಳಿಸಬಹುದು.


ಹೊಸ ಅಪ್ ಗಳನ್ನು ಇನ್ ಸ್ಟಾಲ್ ಮಾಡುವ ಮೂಲಕ
ಯಾವುದೇ ಹೊಸ ಆಪ್ ಅನ್ನು ಲಾಂಚ್ ಮಾಡಿದರೆ, ಅದು ಬಳಕೆದಾರರಿಗೆ ಆರಂಭದಲ್ಲಿ ವಿವಿಧ ರೀತಿಯ ಪ್ರಯೋಜನಗಳನ್ನು ನೀಡುತ್ತದೆ. ಈ ಆಪ್ ಗಳ ಕಡೆಗೆ ಗಮನ ಹರಿಸುವ ಮೂಲಕ ಉತ್ತಮ ಪ್ರಯೋಜನವನ್ನು ಪಡೆಯಬಹುದು. ಫ್ರೋಂಟೋ ಒಂದು ಲಾಕ್ ಸ್ಕ್ರೀನ್ ಅಪ್ಲಿಕೇಶನ್ ಆಗಿದ್ದು, ಗುಗಲ್ ಪೇ, ಅಮೆಜಾನ್ ಇತ್ಯಾದಿಗಳಿಗೆ ಪಾಯಿಂಟ್ ಗಳನ್ನು ವಿನಿಮಯ ಮಾಡಿಕೊಳ್ಳಲು ನಿಮಗೆ ಅನುಮತಿಸುತ್ತದೆ. ಐಬೋಟಾ ಒಂದು ಕ್ಯಾಶ್ ಬ್ಯಾಕ್ ಆಪ್ ಆಗಿದೆ, ನೀವು 1000 ರೂಪಾಯಿಗಳಿಗಿಂತ ಹೆಚ್ಚು ಸಂಪಾದಿಸಬಹುದಾಗಿದೆ.

ಆಟಗಳನ್ನು ಆಡುವಮೂಲಕ, ಫೋಟೋ ಕ್ಲಿಕ್ ಮಾಡುವ ಮೂಲಕ ಹಣವನ್ನು ಸಂಪಾದಿಸಿ
ಸೆಕೆಂಡ್ ಲೈಫ್, ಲ್ಯಾಕ್ಟಿಕ್ ಮತ್ತು ಮಿಸ್ಟ್ ಪ್ಲೇ ನಂತಹ ಹಲವಾರು ವೆಬ್ ಸೈಟ್ ಗಳಿವೆ, ಅಲ್ಲಿ ನೀವು ಆಟಆಡುವಾಗ ಹಣ ಪದೆಯುತ್ತೀರಿ. ಕೆಲವು ವೆಬ್ ಸೈಟ್ ಗಳು ಈ ಮೊತ್ತವನ್ನು ಗಿಫ್ಟ್ ಕಾರ್ಡ್ ಆಗಿ ಮತ್ತು ಕೆಲವು PayPal ಮೂಲಕ ಪಾವತಿಸುತ್ತವೆ. ನೀವು ಫೋಟೋಗ್ರಫಿಯನ್ನು ಇಷ್ಟಪಡುತ್ತಿದ್ದರೆ, ನೀವು ಜನಪ್ರಿಯ ತಾಣಗಳಾದ ಶಟರ್ ಸ್ಟಾಕ್, ಗೆಟ್ಟಿ ಚಿತ್ರಗಳು, ಫೋಟೋಶೆಲ್ಡ್ ಗೆ ಅಪ್ ಲೋಡ್ ಮಾಡಬಹುದು. ಇಲ್ಲಿ, ನಿಮ್ಮ ಫೋಟೋವನ್ನು ಯಾರಾದರು ಬಳಕೆ ಮಾಡಿದ ತಕ್ಷಣ, ಆ ಮೊತ್ತವನ್ನು ನಿಮ್ಮ ಖಾತೆಯಲ್ಲಿ ಪಾವತಿಮಾಡಲಾಗುತ್ತದೆ.

ಕ್ಯಾಶ್ ಫಾರ್ ಆಫರ್ ಡಾಟ್ ಕಾಮ್ ನಲ್ಲಿ ನೀವು ಗೋಲ್ಡ್ ಸದಸ್ಯನಾದ ತಕ್ಷಣ . ನೀವು ವೆಬ್ ಸೈಟ್ ಗೆ ಸೈನ್ ಇನ್ ಆಗುತ್ತಿದ್ದಂತೆ, ನಿಮಗೆ 5 ಡಾಲರ್ ಅಂದರೆ 300 ರಿಂದ 350 ರೂ. ಸಿಗುತ್ತದೆ. ಹೀಗೆ ಇಮೇಲ್ ಗಳನ್ನು ಓದುವ ಮೂಲಕ, ಸಮೀಕ್ಷೆಗಳ ಮೂಲಕ, ಕ್ಯಾಶ್ ಆಫರ್ ಗಳ ಮೂಲಕ, ನೀವು ಆನ್ ಲೈನ್ ಆಟಗಳನ್ನು ಆಡುವ ಮೂಲಕ ಹೆಚ್ಚುವರಿ ಆದಾಯವನ್ನು ಗಳಿಸಬಹುದು.


VIDEO| ಭೂತದ ಪಕ್ಷಿ ನೋಡಿ ಹೆದರಿದ ಮಹಿಳೆ: ಹತ್ತಿರ ಹೋದವಳಿಗೆ ಕಾದಿತ್ತು ಬಿಗ್​ ಶಾಕ್​..!

March 14, 2021

 


ಬೊಗತಾ: ತನ್ನ ವಿಚಿತ್ರ ನೋಟದಿಂದಲೇ ಭೂತದ ಪಕ್ಷಿಯೊಂದು ಮಹಿಳೆಯೊಬ್ಬಳನ್ನು ಬೆಚ್ಚಿ ಬೀಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಮರದ ಬೇಲಿಯ ಮೇಲೆ ಕುಳಿತಿದ್ದ ಪಕ್ಷಿಯನ್ನು ಮಹಿಳೆ ಆರಂಭದಲ್ಲಿ ಅದೊಂದು ಮರಣ ತುಣುಕು ಇರಬಹುದೆಂದು ಭಾವಿಸಿದ್ದಳು. ಆದರೆ, ಆಕೆಯ ಊಹೆಯನ್ನು ವಿಚಿತ್ರ ಪಕ್ಷಿ ಮೀರಿದೆ.

ಮರದ ತುಂಡಿನ ಮೇಲೆ ಕಣ್ಣು ಮುಚ್ಚಿ ಕುಳಿತಿದ್ದ ಪಕ್ಷಿಯ ಬಳಿ ಮಹಿಳೆ ವಿಡಿಯೋ ಮಾಡುತ್ತಾ ಹೋಗುತ್ತಾಳೆ. ಈ ವೇಳೆ ಕಣ್ಣು ತೆರೆಯುವ ಪಕ್ಷಿ ಮಹಿಳೆ ಹತ್ತಿರವಿದ್ದರೂ ಹೆದರದೆ, ತಾನೇ ಆಕ್ರಮಣ ಮಾಡುವ ರೀತಿಯಲ್ಲಿ ಅಗಲವಾಗಿ ಬಾಯಿ ತೆಗೆಯುತ್ತದೆ. ಇದನ್ನು ನೋಡಿದ ವಿಡಿಯೋ ರೆಕಾರ್ಡ್​ ಮಾಡುವ ಮಹಿಳೆ ಒಂದು ಕ್ಷಣ ಬೆಚ್ಚಿ ಬೀಳುತ್ತಾಳೆ. ಬಾಯಿ ತೆರೆಯುತ್ತಿದ್ದಂತೆ ಪಕ್ಷಿಯ ನೋಟ ತುಂಬಾ ವಿಕಾರವಾಗಿ ಕಾಣುತ್ತದೆ.

ಇನ್ನು ಆ ಪಕ್ಷಿಯ ಪರಿಚಯದ ಕಡೆ ಬಂದರೆ, ಅದೊಂದು 'ಗ್ರೇಟ್​ ಪೊಟೋ' ಪಕ್ಷಿಯಾಗಿದೆ. ಇದು ರಾತ್ರಿ ಜಾತಿಯ ಪಕ್ಷಿಯಾಗಿದ್ದು, ಭೂತದ ಪಕ್ಷಿಯಂತಲೂ ಕರೆಯಲಾಗುತ್ತದೆ. ದೊಡ್ಡ ಕೀಟಗಳು ಮತ್ತು ಸಣ್ಣ ಕಶೇರುಕಗಳನ್ನು ತಿಂದು ಬದುಕುತ್ತದೆ. ಇಡೀ ರಾತ್ರಿ ಕೂಗುವುದು ಮತ್ತು ನರಳುವ ಕೂಗಿನಿಂದಲೇ ಇದರು ಪ್ರಸಿದ್ಧಿ ಪಡೆದಿದೆ. ಇದು ಸಾಮಾನ್ಯವಾಗಿ ದಕ್ಷಿಣ ಅಮೆರಿಕ ಅರಣ್ಯ ಪ್ರದೇಶಗಳಲ್ಲಿ ಕಂಡುಬರುತ್ತದೆ.

ಅಂದಹಾಗೆ ವೈರಲ್​ ವಿಡಿಯೋವನ್ನು ಕೊಲಂಬಿಯಾದ ಚಿಬೊಲೋ ಫಾರ್ಮ್​ನಲ್ಲಿ ರೆಕಾರ್ಡ್​ ಮಾಡಲಾಗಿದೆ. ಆರಂಭದಲ್ಲಿ ಮಹಿಳೆ ಅದೊಂದು ಮರದ ತುಂಡು ಅಂದಿಕೊಂಡಿದ್ದಳಂತೆ. ಬಳಿಕ ಕಣ್ಣುಗಳನ್ನು ತೆರೆಯುವುದನ್ನು ನೋಡಿ ವಿಡಿಯೋ ಮಾಡುತ್ತಾ ಅದರ ಬಳಿಕ ಹೋಗಿದ್ದಾರೆ. ಯಾವಾಗ ಅದು ಬಾಯಿಯನ್ನು ಅಗಲವಾಗಿ ತೆರೆಯಿತೋ ಮಹಿಳೆ ಒಂದು ಕ್ಷಣ ಬೆಚ್ಚಿಬಿದ್ದಿದ್ದಾಳೆ.

ಸದ್ಯ ವಿಡಿಯೋ ವೈರಲ್​ ಆಗಿದ್ದು, ವಿಚಿತ್ರ ಪಕ್ಷಿಯನ್ನು ನೋಡಿ ಒಂದು ಕ್ಷಣ ಭಯಗೊಂಡಿದ್ದಾಗಿ ನೆಟ್ಟಿಗರು ಸಹ ಹೇಳಿಕೊಂಡಿದ್ದಾರೆ. ಹತ್ತಿರ ಹೋದರು ಕೊಂಚವು ಕದಲದೆ ಕುಳಿತಿದ್ದ ಪಕ್ಷಿಯ ಧೈರ್ಯವನ್ನು ಕೆಲವರು ಮೆಚ್ಚಿದ್ದಾರೆ. ಇನ್ನು ಕೆಲವರು ಈ ಪಕ್ಷಿ ತುಂಬಾ ಅಪಾಯಕಾರಿನಾ? ಎಂದು ಪ್ರಶ್ನಿಸಿದ್ದಾರೆ. ಸದ್ಯ ಈ ಪಕ್ಷಿ ಅನೇಕರಲ್ಲಿ ಭಯ ಹುಟ್ಟಿಸಿರುವುದಂತೂ ಸುಳ್ಳಲ್ಲ. (ಏಜೆನ್ಸೀಸ್​)

ಪರೀಕ್ಷೆ ಇಲ್ಲದೇ ಮಕ್ಕಳು ಪಾಸಾ? ಕಾಲೇಜುಗಳಿಗೆ 15 ದಿನ ರಜೆನಾ? 'ಸುತ್ತೋಲೆ'ಯ ಅಸಲಿಯತ್ತೇನು?

March 14, 2021

 


ಬೆಂಗಳೂರು: ಕರೊನಾ ಎರಡನೆಯ ಅಲೆ ಶುರುವಾಗುತ್ತಿರುವ ಸುದ್ದಿಯಾಗುತ್ತಿದ್ದಂತೆಯೇ ಮಕ್ಕಳನ್ನು ಶಾಲಾ- ಕಾಲೇಜುಗಳಿಗೆ ಕಳುಹಿಸುವುದು ಹೇಗಪ್ಪಾ ಎಂಬ ಚಿಂತೆ ಪಾಲಕರಿಗೆ ಶುರುವಾಗಿದೆ. ಕೆಲ ವಾರಗಳ ಹಿಂದೆ ಶುರುವಾಗಿರುವ ಶಾಲಾ- ಕಾಲೇಜುಗಳಿಗೆ ಹೇಗೋ ಧೈರ್ಯ ಮಾಡಿ ಮಕ್ಕಳನ್ನು ಕಳಿಸಲಾಗಿದೆ. ಇದರ ಬೆನ್ನಲ್ಲೇ ಇದೀಗ ಮತ್ತೆ ಮಹಾಮಾರಿಯ ಆರ್ಭಟ ಜೋರಾಗಿದೆ.

ಪಾಲಕರು ಹೀಗೆ ಭಯಪಡುತ್ತಿರುವ ನಡುವೆಯೇ ಕೆಲವು ಸಂದೇಶಗಳು, ಸರ್ಕಾರದ ಸುತ್ತೋಲೆಯಂತೆ ತೋರುವ ಪತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

1 ರಿಂದ 6ನೇ ಶಾಲೆಯ ಮಕ್ಕಳಿಗೆ ಪರೀಕ್ಷೆ ಇಲ್ಲದೇ ಪಾಸ್​ ಮಾಡಲು ಸರ್ಕಾರ ನಿರ್ಧರಿಸಿದ್ದು, ಈ ಕುರಿತು ಶಿಕ್ಷಣ ಸಚಿವರು ಮಾಹಿತಿ ನೀಡಿದ್ದಾರೆ ಎಂದು ಶೇರ್​ ಆಗುತ್ತಿದ್ದರೆ, ಕೆಲವು ಸಂದೇಶಗಳಲ್ಲಿ 1ರಿಂದ 9ನೇ ತರಗತಿಯವರೆಗಿನ ಮಕ್ಕಳಿಗೆ ಪರೀಕ್ಷೆ ಇಲ್ಲದೇ ಪಾಸ್​ ಎಂಬ ಸಂದೇಶ ಹರಿದಾಡುತ್ತಿವೆ.

ಇದರ ಮುಂದುವರೆದಿರುವ ಭಾಗವಾಗಿ ನಿನ್ನೆಯಿಂದ 15 ದಿನಗಳವರೆಗೆ ಕಾಲೇಜುಗಳಿಗೆ ರಜೆ, ಆದರೆ ಕಚೇರಿಗಳು ಎಂದಿನಂತೆಯೇ ಕಾರ್ಯನಿರ್ವಹಿಸಲಿವೆ ಎಂಬ ಸಂದೇಶ ಹರಿದಾಡುತ್ತಿದೆ. ಸಾಲದು ಎಂಬುದಕ್ಕೆ ಸರ್ಕಾರದ ಸುತ್ತೋಲೆಯನ್ನೇ ಹೋಲುವ ಸುತ್ತೋಲೆಯಲ್ಲಿ ಈ ಪ್ರಕಟಣೆ ಹೊರಡಿಸಲಾಗಿದೆ.

ಇದನ್ನು ನಂಬಿ ಅನೇಕ ವಿದ್ಯಾರ್ಥಿಗಳು ನಲಿದಾಡುತ್ತಿದ್ದರೆ, ಇದು ನಿಜವೋ, ಸುಳ್ಳೋ ಎನ್ನುವುದು ತಿಳಿಯದೇ ಹಲವರು ಕನ್​ಫ್ಯೂಸ್​ನಲ್ಲಿದ್ದಾರೆ.

ಅಸಲಿಗೆ ಇವ್ಯಾವುವೂ ನೈಜ ಸುದ್ದಿಗಳಲ್ಲ. ಪರೀಕ್ಷೆ ಇಲ್ಲದೇ ಪಾಸು ಎಂಬ ಸುದ್ದಿಯ ಕುರಿತಾಗಿ ಇದಾಗಲೇ ಶಿಕ್ಷಣ ಸಚಿವ ಸುರೇಶ್​ ಕುಮಾರ್​ ಅವರು ಸ್ಪಷ್ಟನೆ ನೀಡಿದ್ದು, ಇದು ಫೇಕ್​ ಸುದ್ದಿ, ಸರ್ಕಾರದಿಂದ ಇಂಥ ಆದೇಶ ಹೊರಟಿಲ್ಲ ಎಂದಿದ್ದಾರೆ. ಇದೀಗ ಶಿಕ್ಷಣ ಇಲಾಖೆಯ ನಿರ್ದೇಶಕರು ಸರ್ಕಾರದ ಸುತ್ತೋಲೆ ಹೋಲುವ ಸಂದೇಶದ ಕುರಿತು ಸ್ಪಷ್ಟನೆ ನೀಡಿದ್ದು, ಇದು ಅಸಲಿ ಸುತ್ತೋಲೆ ಅಲ್ಲ. ಸರ್ಕಾರದಿಂದ ಇಂಥ ಯಾವುದೇ ಆದೇಶ ಹೊರಟಿಲ್ಲ. ಇವುಗಳನ್ನು ಯಾರೂ ನಂಬಬಾರದು ಎಂದಿದ್ದಾರೆ.


ನನ್ನ ಸಿ.ಡಿ. ನಾನೇ ಬಿಡುಗಡೆ ಮಾಡ್ತೀನಾ? ನಾನು ನಿರಪರಾಧಿ: ಜಾರಕಿಹೊಳಿ

March 13, 2021

ಬೆಂಗಳೂರು(ಮಾ.14): 'ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರೇ ಅಶ್ಲೀಲ ವಿಡಿಯೋ ಇರುವ ಸಿ.ಡಿ. ಬಿಡುಗಡೆ ಮಾಡಿದ್ದಾರೆ' ಎಂಬ ಯುವತಿಯ ಆರೋಪವನ್ನು ಸ್ವತಃ ಜಾರಕಿಹೊಳಿ ತಳ್ಳಿ ಹಾಕಿದ್ದಾರೆ. ಸಚಿವನಾಗಿದ್ದುಕೊಂಡು ನನ್ನ ವಿಡಿಯೋ ನಾನೇ ಬಿಡುಗಡೆ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.ವಿವಾದಿತ ಸಿ.ಡಿ.ಯಲ್ಲಿನ ಯುವತಿ ವಿಡಿಯೋ ಮೂಲಕ ಪ್ರತ್ಯಕ್ಷವಾಗಿ ಹೇಳಿಕೆ ನೀಡಿದ ಬೆನ್ನಲ್ಲೇ ಸ್ಪಷ್ಟನೆ ನೀಡಿದ ಅವರು, 'ನಾನು ನಿರಪರಾಧಿ. ಸತ್ಯ ಏನು ಎಂಬುದನ್ನು ಸಾಬೀತುಪಡಿಸುತ್ತೇನೆ. ನಾನು ದೂರು ನೀಡಿದ ಅರ್ಧಗಂಟೆಯಲ್ಲಿ ಯುವತಿಯ ವಿಡಿಯೋ ಹೊರಗೆ ಬರುತ್ತದೆ ಎಂದರೆ ಕಾಣದ ಕೈಗಳು ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತವೆ ಎಂಬುದನ್ನು ಗಮನಿಸಿ. ಸಚಿವನಾಗಿ ನನ್ನ ವಿಡಿಯೋ ನಾನೇ ಬಿಡುಗಡೆ ಮಾಡಲು ಸಾಧ್ಯನಾ? ಇದು ರಾಜಕೀಯ ಷಡ್ಯಂತ್ರ' ಎಂದು ತಿಳಿಸಿದರು.

ಹಲವರು ಬಲಿಪಶು:

ಇದೇ ವೇಳೆ, ಸಿ.ಡಿ. ಪ್ರಕರಣದ ಬಗ್ಗೆ ಶನಿವಾರ ಪೊಲೀಸರಿಗೆ ದೂರು ದಾಖಲಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ಸಿ.ಡಿ. ಪ್ರಕರಣ ದೊಡ್ಡ ರಾಜಕೀಯ ಷಡ್ಯಂತ್ರ. ಇದಕ್ಕೆ ನಾನು ಮಾತ್ರವಲ್ಲದೆ, ಇನ್ನೂ ಹಲವರು ಬಲಿಪಶುಗಳಾಗಿದ್ದಾರೆ. ಸಮಗ್ರ ತನಿಖೆ ನಡೆದರೆ ಮಾತ್ರ ಇದರ ಹಿಂದಿನ ರೂವಾರಿಗಳ ಹೆಸರು ಬಹಿರಂಗವಾಗುತ್ತದೆ. ಹೀಗಾಗಿಯೇ ದೂರಿನಲ್ಲಿ ನಾನು ಯಾರ ಹೆಸರನ್ನೂ ಉಲ್ಲೇಖಿಸಿಲ್ಲ' ಎನ್ನುವ ಮೂಲಕ ತಾವು ದೂರಿನಲ್ಲಿ ಏಕೆ ಯಾರ ಹೆಸರನ್ನೂ ಉಲ್ಲೇಖಿಸಿಲ್ಲ ಎಂಬುದನ್ನು ವಿವರಿಸಿದರು.

ಹೆಸರು ಉಲ್ಲೇಖಿಸಿದರೆ ಆ ಹೆಸರುಗಳಿಗೆ ಸೀಮಿತವಾಗಿ ತನಿಖೆ ನಡೆಯುತ್ತದೆ. ಸಮಗ್ರ ತನಿಖೆ ನಡೆದರೆ ಮಾತ್ರ ರಾಜಕೀಯ ಷಡ್ಯಂತ್ರದ ರೂವಾರಿಗಳ ಹೆಸರು ಬಹಿರಂಗವಾಗಲು ಸಾಧ್ಯ. ಕಾನೂನು ತಜ್ಞರ ಸಲಹೆ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ, ಬ್ಲಾಕ್‌ಮೇಲ್‌ ಮಾಡಿರುವ ಬಗ್ಗೆಯೂ ಎಫ್‌ಆರ್‌ನಲ್ಲಿ ಪ್ರಸ್ತಾಪಿಸಲಾಗಿದೆ ಎಂದು ಹೇಳಿದರು. ಅಲ್ಲದೆ, ಕಾನೂನು ಹೋರಾಟ ಇದೀಗ ಆರಂಭವಾಗಿದ್ದು, ಅದು ಮಹಾನ್‌ ನಾಯಕನವರೆಗೂ ಮುಟ್ಟಲಿದೆ ಎಂದರು.

ಶನಿವಾರ ಅಧಿಕೃತವಾಗಿ ದೂರು ನೀಡಲಾಗಿದೆ. ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ. ಕಾನೂನು ಹೋರಾಟ ಪ್ರಾರಂಭವಾಗಿದ್ದು, ಕೊನೆಯವರೆಗೆ ಬಿಡುವುದಿಲ್ಲ. ಅಂತಿಮ ಹಂತದವರೆಗೂ ಹೋರಾಟ ಮಾಡುತ್ತೇವೆ. ಕಾನೂನು ಪ್ರಕಾರವೇ ಮುಂದುವರಿಯುತ್ತೇವೆ. ರಾಜಕೀಯವಾಗಿ ತುಳಿಯಲು ನೂರಾರು ಕೋಟಿ ರು. ಖರ್ಚು ಮಾಡಿ ಷಡ್ಯಂತ್ರ ಮಾಡಲಾಗಿದೆ ಎಂದು ತಿಳಿಸಿದರು.

ಎಸ್‌ಐಟಿ ಅಧಿಕಾರಿಗಳು ತನಿಖೆಯನ್ನು ತೀವ್ರಗತಿಯಲ್ಲಿ ನಡೆಸುತ್ತಿದ್ದಾರೆ. ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿರುವ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಮಾಧ್ಯಮದಲ್ಲಿ ನೋಡಿದ್ದೇನೆ ಅಷ್ಟೆ. ಪೊಲೀಸರ ತನಿಖೆಗೆ ಸಂಪೂರ್ಣ ಸಹಕಾರ ನೀಡಲಾಗುವುದು. ದೆಹಲಿ ಮತ್ತು ಬೆಂಗಳೂರು ಕಾನೂನು ತಜ್ಞರು ಮಾಧ್ಯಮದವರ ಮುಂದೆ ಹೋಗಬೇಡಿ ಎಂದು ಸಲಹೆ ನೀಡಿದ್ದರು. ಆದರೂ, ಬೆಳಗ್ಗೆಯಿಂದ ಮಾಧ್ಯಮದವರು ಕಾಯುತ್ತಿರುವ ಕಾರಣ ಪ್ರತಿಕ್ರಿಯೆ ನೀಡಲು ಬಂದಿದ್ದೇನೆ ಎಂದರು.

LPG ಸಬ್ಸಿಡಿ ಬಂದ್ ಆಗಿದ್ಯಾ..? ಮನೆಯಲ್ಲೇ ಕುಳಿತು ಸುಲಭವಾಗಿ ಮಾಡಿ ಈ ಕೆಲಸ

March 13, 2021

 


ಎಲ್.ಪಿ.ಜಿ. ಸಿಲಿಂಡರ್ ಬೆಲೆ ಕಳೆದ 7 ವರ್ಷಗಳಲ್ಲಿ ದ್ವಿಗುಣವಾಗಿದೆ. ಆದ್ರೆ ಎಲ್.ಪಿ.ಜಿ. ಗ್ರಾಹಕರ ಸಂಖ್ಯೆ ಹೆಚ್ಚಾಗಿದೆ. ಎಲ್.ಪಿ.ಜಿ. ಸಿಲಿಂಡರ್ ಬಳಕೆದಾರರು ನೀವಾಗಿದ್ದರೆ ಈ ಸುದ್ದಿಯನ್ನು ಅವಶ್ಯಕವಾಗಿ ಓದಿ.

ಎಲ್.ಪಿ.ಜಿ. ಖರೀದಿಗೆ ಸರ್ಕಾರ ಸಬ್ಸಿಡಿ ನೀಡುತ್ತದೆ. ನೇರವಾಗಿ ಅದು ನಿಮ್ಮ ಖಾತೆಗೆ ಹೋಗುತ್ತದೆ. ನಿಮ್ಮ ಖಾತೆಗೆ ಸಬ್ಸಿಡಿ ಬಂದಿದೆಯಾ ಎಂಬುದನ್ನು ನೀವು ಚೆಕ್ ಮಾಡಬೇಕು. ಬೇರೆ ಬೇರೆ ರಾಜ್ಯಗಳಲ್ಲಿ ಸಬ್ಸಿಡಿ ದರ ಬೇರೆಯಿದ್ದು, ಇದಕ್ಕೆ ಆಧಾರ್ ಲಿಂಕ್ ಮಾಡಬೇಕಾಗುತ್ತದೆ.

ವಾರ್ಷಿಕ 10 ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಆದಾಯ ಹೊಂದಿರುವವರಿಗೆ ಸಬ್ಸಿಡಿ ಸಿಗುವುದಿಲ್ಲ. ವಾರ್ಷಿಕ 10 ಲಕ್ಷ ರೂಪಾಯಿಗಳ ಆದಾಯವನ್ನು ಪತಿ ಮತ್ತು ಪತ್ನಿ ಇಬ್ಬರ ಗಳಿಕೆಯನ್ನು ಸೇರಿಸಿ ಹೇಳಲಾಗುತ್ತದೆ.

ಆಧಾರ್ ನ್ನು ಎಲ್.ಪಿ.ಜಿ.

ಜೊತೆ ಲಿಂಕ್ ಮಾಡುವುದು ಸುಲಭ. ಮನೆಯಲ್ಲೇ ಕುಳಿತು ಈ ಕೆಲಸ ಮಾಡಬಹುದು. ಕರೆ ಮಾಡುವ ಮೂಲಕ, ಐವಿಆರ್‌ಎಸ್ ಮೂಲಕ ಮತ್ತು ಎಸ್‌ಎಂಎಸ್ ಮೂಲಕವೂ ಲಿಂಕ್ ಮಾಡಬಹುದು. ಹಾಗೆ ಸಬ್ಸಿಡಿ ಹಣ ನಿಮ್ಮ ಖಾತೆಗೆ ಬಂದಿರುವುದನ್ನು ಚೆಕ್ ಮಾಡುವುದು ಕೂಡ ಸುಲಭ.‌

ಮೊದಲು ಇಂಡೇನ್‌ನ ಅಧಿಕೃತ ವೆಬ್‌ಸೈಟ್‌ http://mylpg.in/hindi/index.aspxಗೆ ಭೇಟಿ ನೀಡಬೇಕು. ಮುಖಪುಟದಲ್ಲಿ ಕಾಣಿಸಿಕೊಳ್ಳುವ ಎಲ್.ಪಿ.ಜಿ. ಸಿಲಿಂಡರ್ ಚಿತ್ರದ ಮೇಲೆ ಕ್ಲಿಕ್ ಮಾಡಬೇಕು. ಕಂಪ್ಲೇಂಟ್ ಬಾಕ್ಸ್ ನಲ್ಲಿ ಸಬ್ಸಿಡಿ ಸ್ಥಿತಿ ಬರೆಯಿರಿ ಮತ್ತು ಮುಂದುವರಿಯಿರಿ ಮೇಲೆ ಕ್ಲಿಕ್ ಮಾಡಿ. ಇದರ ನಂತರ ಸಬ್ಸಿಡಿ ಸಂಬಂಧಿತ ಗುಂಡಿಯನ್ನು ಕ್ಲಿಕ್ ಮಾಡಿ.


ಇನ್ನೊಂದು ಪುಟ ತೆರೆದುಕೊಳ್ತಿದ್ದಂತೆ ಗ್ರಾಹಕರು ಸ್ವೀಕರಿಸದ ಸಬ್ಸಿಡಿ ಕ್ಲಿಕ್ ಮಾಡಬೇಕಾಗುತ್ತದೆ. ಕ್ಲಿಕ್ ಮಾಡಿದ ನಂತರ ಇನ್ನೊಂದು ಪುಟ ತೆಗೆಯುತ್ತದೆ. ಸಬ್ಸಿಡಿ ಸ್ಥಿತಿಯನ್ನು ಪರೀಕ್ಷಿಸಲು 2 ಆಯ್ಕೆಗಳನ್ನು ತೋರಿಸಲಾಗುತ್ತದೆ. ಮೊದಲನೇಯದು ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಎರಡನೇಯದು ಎಲ್.ಪಿ.ಜಿ. ಐಡಿ. ಐಡಿ ಹಾಕಿದ ನಂತ್ರ ಪರಿಶೀಲಿಸಿ ಕ್ಲಿಕ್ ಮಾಡಬೇಕು. ಸಬ್ಸಿಡಿಗೆ ಸಂಬಂಧಿಸಿದ ಎಲ್ಲಾ ಮಾಹಿತಿ ಸಿಗುತ್ತದೆ.

ಆಧಾರ್ ಕಾರ್ಡ್ ಮೂಲಕ ಎಲ್.ಪಿ.ಜಿ. ಸಬ್ಸಿಡಿ ಪಡೆಯಲು, ಆಧಾರ್ ಕಾರ್ಡನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಬೇಕಾಗುತ್ತದೆ. ಅದರ ನಂತರ ಗ್ರಾಹಕರು ತಮ್ಮ ಎಲ್.ಪಿ.ಜಿ. ಸಂಪರ್ಕವನ್ನು ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಬೇಕಾಗುತ್ತದೆ. ಹಾಗೆ ನಿಮ್ಮ ಮೊಬೈಲ್ ಸಂಖ್ಯೆಯನ್ನು ಗ್ಯಾಸ್ ಏಜೆನ್ಸಿಯ ನಿಮ್ಮ ಖಾತೆ ಜೊತೆ ಲಿಂಕ್ ಮಾಡಬೇಕು.

ನಂತ್ರ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಿದ ನಂತರ ಯುಐಡಿ ಎಂದು ಟೈಪ್ ಮಾಡಿ ಮತ್ತು ಅದನ್ನು ಮತ್ತೆ ಗ್ಯಾಸ್ ಏಜೆನ್ಸಿ ಸಂಖ್ಯೆಗೆ ಕಳುಹಿಸಿ. ಆಗ ಎಲ್.ಪಿ.ಜಿ. ನಿಮ್ಮ ಆಧಾರ್‌ಗೆ ಲಿಂಕ್ ಮಾಡಲಾಗುತ್ತದೆ. ಅದರ ದೃಢೀಕರಣವು ನಿಮ್ಮ ಮೊಬೈಲ್ ಗೆ ಬರುತ್ತದೆ.

ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಇಂಡೇನ್ ಗ್ಯಾಸ್ ಏಜೆನ್ಸಿಯ ಸಂಖ್ಯೆ 1800 2333 5555 ಗೆ ಕರೆ ಮಾಡುವುದು ಇನ್ನೊಂದು ಮಾರ್ಗವಾಗಿದೆ. ಆಧಾರ್ ಸಂಖ್ಯೆಯನ್ನು ಗ್ರಾಹಕ ಸೇವಾ ಕೇಂದ್ರದ ಸಿಬ್ಬಂದಿಗೆ ತಿಳಿಸಿ ಲಿಂಕ್ ಮಾಡುವಂತೆ ಹೇಳಬೇಕು

ಯುಐಡಿಎಐನ ಅಧಿಕೃತ ವೆಬ್‌ಸೈಟ್‌ಗೆ ಹೋಗಿ, ವಿಳಾಸ ಮತ್ತು ಇತರ ಪ್ರಮುಖ ಮಾಹಿತಿಯನ್ನು ಭರ್ತಿ ಮಾಡಿ ಲಿಂಕ್ ಮಾಡಬಹುದು.

'ಬೇಸಿಗೆ ರಜೆ, ಪರೀಕ್ಷೆ ಇಲ್ಲದೇ ವಿದ್ಯಾರ್ಥಿಗಳನ್ನು ಪಾಸ್'‌ ಮಾಡೋ ಬಗ್ಗೆ ಮಹತ್ವದ ಮಾಹಿತಿ ನೀಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್

March 13, 2021

 ಬೆಂಗಳೂರು: ಒಂದರಿಂದ ಆರನೇ ತರಗತಿ ವಿದ್ಯಾರ್ಥಿಗಳಿಗೆ ಬೇಸಿಗೆ ರಜೆ, ಪರೀಕ್ಷೆ ಇಲ್ಲದೇ ವಿದ್ಯಾರ್ಥಿಗಳು ಪಾಸ್‌ ಮಾಡೋ ಬಗ್ಗೆ ಸುಳ್ಳು ಸುದ್ದಿಗಳು ಹರಿದಾಡುತ್ತಿರುವುದರ ವಿರುದ್ದ ಶಿಕ್ಷಣ ಸಚಿವ ಸುರೇಶ್ ಕುಮಾರ್ ವಿರುದ್ದ ಸ್ಪಷ್ಟೀಕರಣ ನೀಡಿದ್ದಾರೆ. ಅವರು ಶನಿವಾರ ಮಕ್ಕಳಿಗೆ ಶಿಕ್ಷಕರು ವಿದ್ಯಾರ್ಥಿಗಳ ಕಲಿಕೆಯನ್ನು ನೀಡುವಲ್ಲಿ ತಲ್ಲಿನರಾಗಿದ್ದು, ಈ ನಿಟ್ಟಿನಲ್ಲಿ ಎಲ್ಲಾ ರೀತಿಯಲ್ಲಿ ಇಲಾಖೆ ಸಹಕಾರ ನೀಡುತ್ತಿದೆ. ಈ ಹೊತ್ತಿನಲ್ಲಿ ಬೇಸಿಗೆ ರಜೆಯನ್ನು ನೀಡುವ ಉದ್ದೇಶವಾಗಲಿ, ಪ್ರಸ್ತಾವನೆಯಾಗಲಿ ಇಲಾಖೆ ಮುಂದೆ ಇಲ್ಲ ಅಂತ ಅವರು ಹೇಳಿದ್ದಾರೆ.ಈಗಾಗಲೇ ಖಾಸಗಿ ಶಾಲೆಗಳು ಆನ್‌ಲೈನ್‌ ಮೂಲಕ ತಮ್ಮ ವಿದ್ಯಾರ್ಥಿಗಳಿಗೆ ಕಲಿಕೆಯ ಕಾರ್ಯಕ್ರವನ್ನು ನೀಡುತ್ತಿದೆ.

ಇದಲ್ಲದೇ ರಾಜ್ಯ ಸರ್ಕಾರ ಕೂಡ ದರಿಂದ ಐದನೇ ತರಗತಿ ಸರ್ಕಾರಿ ಶಾಲಾ ಮಕ್ಕಳಿಗೆ ಆಕಾಶವಾಣಿಯಲ್ಲಿ ಕಲಿಯೋಣ- ನಲಿಯೋಣ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತಿದ್ದು, ಇದರ ಜೊತೆಗೆ ದೂರದರ್ಶನದಲ್ಲಿ ಸಂವೇದಾ ಕಾರ್ಯಕ್ರಮವನ್ನು ಕೂಡ ಪ್ರಸಾರ ಮಾಡುತ್ತಿದ್ದು, ಮಕ್ಕಳು ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಬೇಕು, ಸುಳ್ಳು ಸುದ್ದಿಗಳನ್ನು ನಂಬಬಾರದು ಅಂತ ಅವರು ಮನವಿ ಮಾಡಿಕೊಂಡಿದ್ದಾರೆ.