ಈ ವರ್ಷ SSLC ಪರೀಕ್ಷೆ ಪ್ಯಾಟ್ರನ್ ಬದಲಾಗುತ್ತಾ..?

February 10, 2021
Wednesday, February 10, 2021

 


ಬೆಂಗಳೂರು(ಫೆ.10): ಎಸ್‌ಎಸ್‌ಎಲ್‌ಸಿ ಪರೀಕ್ಷಾ ವಿಧಾನ ಬದಲಿಸುವಂತೆ ರಾಜ್ಯ ಸರ್ಕಾರಕ್ಕೆ ಖಾಸಗಿ ಶಾಲೆಗಳ ಒಕ್ಕೂಟ ಮನವಿ ಮಾಡಿಕೊಂಡಿದೆ.

ಇಂದು(ಬುಧವಾರ) ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರುಪ್ಸಾ ಸಂಘಟನೆಯ ರಾಜ್ಯಧ್ಯಕ್ಷ ಲೋಕೇಶ್ ತಾಳಿಕಟ್ಟೆ ಅವರು, ಹೆಚ್ಚು ಅಬ್ಜೆಕ್ಟಿವ್ ಟೈಪ್ ಪ್ರಶ್ನೆಗಳನ್ನ ಕೇಳುವಂತೆ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಲಾಗಿದೆ. ಹಿಂದಿನ‌ ವರ್ಷ 80 ಅಂಕಗಳಿಗೆ ಪರೀಕ್ಷೆ ನಡೆಸಲಾಗಿತ್ತು. ಈ ವರ್ಷ 40 ಅಥವಾ 50 ಅಂಕಗಳಿಗೆ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಕಲಿಕಾ ಪ್ರಮಾಣ ಸರಿಯಾಗಿ ಆಗಿಲ್ಲ. ಉತ್ತಮ ಮಟ್ಟದ ಪಾಠ ಮಾಡಲು ಸಾಧ್ಯವಾಗಲಿಲ್ಲ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷೆ ಪ್ಯಾಟ್ರನ್ ಬದಲಾವಣೆ ಮಾಡಲು ಒತ್ತಾಯ ಮಾಡಲಾಗಿದೆ ಎಂದು ಹೇಳಿದ್ದಾರೆ.

ಶಾಲೆ ಶುರುವಾಗಿ ಒಂದೇ ತಿಂಗಳು; SSLC ವೇಳಾಪಟ್ಟಿ ಪ್ರಕಟ

ಈ ವರ್ಷ 9.5 ಲಕ್ಷ ವಿದ್ಯಾರ್ಥಿಗಳು SSLC ಪರೀಕ್ಷೆಯನ್ನ ಬರೆಯಲಿದ್ದಾರೆ. ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಪ್ರಶ್ನೆ ಪತ್ರಿಕೆ ಪ್ಯಾಟ್ರನ್ ಬದಲಾವಣೆ ಅಗತ್ಯವಾಗಿದೆ. ಹೀಗಾಗಿ ಗರಿಷ್ಠ ಅಂಕದ ಪ್ರಮಾಣ ಇಳಿಸುವಂತೆ ಸರ್ಕಾರಕ್ಕೆ ಸಲಹೆ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.


Thanks for reading ಈ ವರ್ಷ SSLC ಪರೀಕ್ಷೆ ಪ್ಯಾಟ್ರನ್ ಬದಲಾಗುತ್ತಾ..? | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಈ ವರ್ಷ SSLC ಪರೀಕ್ಷೆ ಪ್ಯಾಟ್ರನ್ ಬದಲಾಗುತ್ತಾ..?

Post a Comment