SBI customers alert! ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಈ ಯೋಜನೆಯ ಮೂಲಕ ಪ್ರತಿ ತಿಂಗಳು 10,000 ರೂ ಗಳಿಸಿ

February 16, 2021
Tuesday, February 16, 2021

 


ನವದೆಹಲಿ: ಜನರು ತಮ್ಮ ಭವಿಷ್ಯವನ್ನು ಭದ್ರಪಡಿಸಲು ಹಲವು ಹೂಡಿಕೆಗಳ ಮೂಲಕ ಹಣವನ್ನು ಹೂಡಿಕೆ ಮಾಡುತ್ತಾರೆ. ಆದರೆ ಕೆಲವೊಮ್ಮೆ ತಪ್ಪು ಸ್ಥಳದಲ್ಲಿ ಹೂಡಿಕೆ ಮಾಡುವುದರಿಂದ ಲಾಭಗಳ ಬದಲಿಗೆ ಸಮಸ್ಯೆಗಳನ್ನು ಎದುರಿಸುವುದನ್ನು ನಾವು ಕಾಣಬಹುದಾಗಿದೆ. ಇಂತಹ ಸನ್ನಿವೇಶದಲ್ಲಿ, ನೀವು ಸರಿಯಾದ ಸ್ಥಳದಲ್ಲಿ ಹಣವನ್ನು ಹೂಡಿಕೆ ಮಾಡುವುದು ಬಹಳ ಮುಖ್ಯವಾಗುತ್ತದೆ. ಅಂದ ಹಾಗೇ ಸರಿಯಾದ ಸಮಯದಲ್ಲಿ, ಸರಿಯಾದ ಸ್ಥಳದಲ್ಲಿ ನೀವು ನಿರ್ದಿಷ್ಟ ಸಮಯದ ನಂತರ ಮಾಸಿಕ ಆದಾಯವನ್ನು ಪಡೆಯಲು ಬಯಸಿದ್ದರೇ, ಆ ಬಗೆಗಿನ ಮಾಹಿತಿ ನಿಮಗಾಗಿ ಇಲ್ಲಿದೆ. ಹೌದು, ಎಸ್ ಬಿಐನ ವಾರ್ಷಿಕ ಯೋಜನೆ ಬಗ್ಗೆ ಇಲ್ಲಿ ನಾವು ನಿಮಗೆ ತಿಳಿಸುತ್ತಿದ್ದೇವೆ.

ಎಸ್ ಬಿಐನ ಈ ಸ್ಕೀಮ್ ಅನ್ನು 36, 60, 84 ಅಥವಾ 120 ತಿಂಗಳ ಅವಧಿಗೆ ಹೂಡಿಕೆ ಮಾಡಬಹುದು. ಇದರಲ್ಲಿ ಹೂಡಿಕೆಯ ಮೇಲಿನ ಬಡ್ಡಿ ದರವು ಆಯ್ಕೆ ಮಾಡಿದ ಅವಧಿಯ ಅವಧಿಯ ಠೇವಣಿಗೆ ಸಮಾನವಾಗಿರುತ್ತದೆ. ಐದು ವರ್ಷಗಳ ಕಾಲ ನೀವು ಠೇವಣಿಯನ್ನು ಫಂಡ್ ಮಾಡಿ, ನಂತರ ಐದು ವರ್ಷಗಳ ನಿಶ್ಚಿತ ಠೇವಣಿಗೆ ಅನ್ವಯವಾಗುವ ಬಡ್ಡಿ ದರಕ್ಕೆ ಅನುಗುಣವಾಗಿ ಮಾತ್ರ ಬಡ್ಡಿ ಯನ್ನು ನೀವು ಪಡೆಯ ಬಹುದಾಗಿದೆ. ಅಂದ ಹಾಗೇ ಪ್ರತಿಯೊಬ್ಬರೂ ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

ಮಾಸಿಕ ಆದಾಯ 10 ಸಾವಿರ ರೂ ಪಡೆಯುವುದು ಹೇಗೆ?

ಹೂಡಿಕೆದಾರಪ್ರತಿ ತಿಂಗಳು 10,000 ರೂಪಾಯಿಮಾಸಿಕ ಆದಾಯ ವನ್ನು ಬಯಸಿದರೆ, ಆತ 5,07,964 ರೂಪಾಯಿಗಳನ್ನು ಠೇವಣಿ ಇಡಬೇಕಾಗುತ್ತದೆ. ಠೇವಣಿ ಇಟ್ಟ ಹಣದಲ್ಲಿ ಪ್ರತಿ ತಿಂಗಳು 10 ಸಾವಿರ ರೂ.ಗಳ ಬಡ್ಡಿ ದರ ದಿಂದ ಶೇ.7ರ ಬಡ್ಡಿ ಗೆ ರಿಟರ್ನ್ ಪಡೆಯುತ್ತಾನೆ. ನೀವು ಹೂಡಿಕೆ ಮಾಡಲು 5 ಲಕ್ಷ ರೂಪಾಯಿಗಿಂತ ಹೆಚ್ಚು ಹಣಹೊಂದಿದ್ದರೆ ಮತ್ತು ಭವಿಷ್ಯದಲ್ಲಿ ನಿಮ್ಮ ಆದಾಯವನ್ನು ಹೆಚ್ಚಿಸಲು ನೀವು ಬಯಸಿದರೆ, ಇದು ನಿಮಗೆ ಉತ್ತಮ ಆಯ್ಕೆಯಾಗಿದೆ. ಎಸ್ ಬಿಐನಲ್ಲಿ ಪ್ರತಿ ತಿಂಗಳು ಕನಿಷ್ಠ 1 ಸಾವಿರ ರೂ.ಗಳನ್ನು ಠೇವಣಿ ಇಡಬಹುದು. ಇದರಲ್ಲಿ ಗರಿಷ್ಠ ಹೂಡಿಕೆಗೆ ಯಾವುದೇ ಮಿತಿ ಇಲ್ಲ. ವಾರ್ಷಿಕ ಪಾವತಿಯಲ್ಲಿ, ನಿಗದಿತ ಸಮಯದ ನಂತರ ಗ್ರಾಹಕನು ಠೇವಣಿ ಮಾಡಿದ ಮೊತ್ತದ ಮೇಲೆ ಬಡ್ಡಿಯು ಪ್ರಾರಂಭವಾಗುತ್ತದೆ. ಈ ಯೋಜನೆಗಳು ಭವಿಷ್ಯದ ದೃಷ್ಟಿಯಿಂದ ಉತ್ತಮವಾಗಿವೆ,


Thanks for reading SBI customers alert! ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಈ ಯೋಜನೆಯ ಮೂಲಕ ಪ್ರತಿ ತಿಂಗಳು 10,000 ರೂ ಗಳಿಸಿ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on SBI customers alert! ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಈ ಯೋಜನೆಯ ಮೂಲಕ ಪ್ರತಿ ತಿಂಗಳು 10,000 ರೂ ಗಳಿಸಿ

Post a Comment