ನವದೆಹಲಿ: ದೇಶಾದ್ಯಂತ ನಾಳೆ ರಾಷ್ಟ್ರವ್ಯಾಪಿ ಮುಷ್ಕರ ದ ಕರೆಯಿಂದಾಗಿ ಅಂಗಡಿ ಮುಂಗಟ್ಟುಗಳು ಮತ್ತು ವ್ಯಾಪಾರ ಸಂಸ್ಥೆಗಳು ಬಂದ್ ಆಗಲಿವೆ. ಫೆಬ್ರವರಿ 26ರಂದು ಭಾರತ್ ಬಂದ್ ಆಚರಿಸಲಿರುವ ಹಿನ್ನೆಲೆಯಲ್ಲಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ವರ್ತಕರು ಹಾಗೂ ಸಾರಿಗೆ ಸಂಸ್ಥೆ ಗಳೂ ಬಂದ್ ಆಚರಿಸಲು ನಿರ್ಧಾರಿಸಿದ್ದಾವೆ.
ರಾಷ್ಟ್ರವ್ಯಾಪಿ ಮುಷ್ಕರದ ಬಗ್ಗೆ ಪ್ರಮುಖ ಅಂಶಗಳು ಇಲ್ಲಿವೆ:
- ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ನಿಯಮವನ್ನು ಪುನರ್ ಪರಿಶೀಲಿಸಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) 'ಭಾರತ್ ಬಂದ್' ಗೆ ಕರೆ ನೀಡಿದೆ.
- ಅಖಿಲ ಭಾರತ ಟ್ರಾನ್ಸ್ ಪೋರ್ಟರ್ಸ್ ವೆಲ್ ಫೇರ್ ಅಸೋಸಿಯೇಷನ್ (AITWA) ಸಹ ಸಿಎಐಟಿ ನೀಡಿರುವ ಬಂದ್ ಕರೆಗೆ ಬೆಂಬಲ ನೀಡಿದೆ.
- ಹೊಸ ಇ-ವೇ ಬಿಲ್ ರದ್ದು ಪಡಿಸಬೇಕು ಎಂದು ಸಾರಿಗೆ ದಾರರ ಸಂಘ ಒತ್ತಾಯಿಸಿದೆ.
- ಇ-ಇನ್ ವಾಯ್ಸ್ ಗೆ ಫಾಸ್ಟ್ ಟ್ಯಾಗ್ ಸಂಪರ್ಕಬಳಸಿ ವಾಹನಗಳನ್ನು ಟ್ರ್ಯಾಕ್ ಮಾಡಲು ನಿಯಮಗಳನ್ನು ತೆಗೆದುಹಾಕಲು ಸಹ ಸಾರಿಗೆದಾರರು ಬಯಸುತ್ತಾರೆ
- ದೇಶದ ಎಂಟು ಕೋಟಿ ವರ್ತಕರನ್ನು ಪ್ರತಿನಿಧಿಸುವ ಸುಮಾರು 40 ಸಾವಿರ ವಾಣಿಜ್ಯ ಸಂಘಟನೆಗಳು ಸಿಎಐಟಿ ನೀಡಿರುವ ಭಾರತ್ ಬಂದ್ ಕರೆಗೆ ಬೆಂಬಲ ನೀಡಿವೆ.
- ಎಲ್ಲಕ್ಕಿಂತ ಮುಖ್ಯವಾಗಿ ದೇಶಾದ್ಯಂತ ಡೀಸೆಲ್ ದರಗಳಲ್ಲಿ ಏಕರೂಪತೆ ಕಾಣಬೇಕೆಂದು ವರ್ತಕರ ಮತ್ತು ಸಾಗಣೆದಾರರ ಸಂಘಗಳು ಮನವಿ ಮಾಡಿದೆ.
EmoticonEmoticon