FLASH :'6ನೇ ತರಗತಿ'ಯ 'ಸಮಾಜ ವಿಜ್ಞಾನ ಭಾಗ-2'ದಲ್ಲಿನ ಈ 'ಪಠ್ಯವಿಷಯ'ಕ್ಕೆ ಕತ್ತರಿ

February 19, 2021
Friday, February 19, 2021

 


ಬೆಂಗಳೂರು : 2020-21ನೇ ಶೈಕ್ಷಣಿಕ ಸಾಲಿಗೆ 6ನೇ ತರಗತಿ ಸಮಾಜ ವಿಜ್ಞಾನ ಭಾಗ-1ರಲ್ಲಿನ ಪುಟ ಸಂಖ್ಯೆ -82 ಹಾಗೂ 83ರಲ್ಲಿನ ವಿಷಯಾಂಶಗಳನ್ನು ಬೋಧನೆ, ಕಲಿಕೆ, ಮೌಲ್ಯಮಾಪನಕ್ಕೆ ಪರಿಗಣಿಸದಿರಲು ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿದೆ.

ಈ ಕುರಿತಂತೆ ಕರ್ನಾಟಕ ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕರು ರಾಜ್ಯದ ಎಲ್ಲಾ ಜಿಲ್ಲಾ ಉಪ ನಿರ್ದೇಶಕರು(ಆಡಳಿತ ಮತ್ತು ಅಭಿವೃದ್ಧಿ ಸಾರ್ವಜನಿಕ ಶಿಕ್ಷಣ ಇಲಾಖೆ ಇವರಿಗೆ ಸುತ್ತೋಲೆ ಹೊರಡಿಸಿದ್ದು, 6ನೇ ತರಗತಿ ಸಮಾಜ ವಿಜ್ಞಾನ ಭಾಗ-1ರಲ್ಲಿನ ಪಾಠ-7, ಹೊಸಧರ್ಮಗಳ ಉದಯ ಈ ಪಾಠದಲ್ಲಿನ ಪುಟ ಸಂಖ್ಯೆ 82 ಹಾಗೂ 83ರಲ್ಲಿನ ವಿಷಯಾಂಶಗಳನ್ನು, 2020-21ನೇ ಶೈಕ್ಷಣಿಕ ಸಾಲಿಗೆ ಬೋಧನೆ, ಕಲಿಕೆಗೆ, ಮೌಲ್ಯಮಾಪನಕ್ಕೆ ಪರಿಗಣಿಸದಿರುವಂತೆ ನಿಮ್ಮ ಹಂತದಿಂದ, ಸಂಬಂಧಿಸಿದ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮುಖ್ಯ ಶಿಕ್ಷಕರಿಗೆ ಸೂಕ್ತ ಸೂಚನೆ ನೀಡಲು ತಿಳಿಸಿದ್ದಾರೆ.

ಈ ಮೂಲಕ 6ನೇ ತರಗತಿಯ ಸಮಾಜ ವಿಜ್ಞಾನ ಭಾಗ -1ರಲ್ಲಿನ ಪಾಠ-7ರ ಹೊಸ ಧರ್ಮಗಳ ಉದಯ ಈ ಪಾಠದಲ್ಲಿನ ಪುಟ ಸಂಖ್ಯೆ 82 ಹಾಗೂ 83ಕ್ಕೆ ಕತ್ತರಿ ಹಾಕಿದ್ದಾರೆ.




Thanks for reading FLASH :'6ನೇ ತರಗತಿ'ಯ 'ಸಮಾಜ ವಿಜ್ಞಾನ ಭಾಗ-2'ದಲ್ಲಿನ ಈ 'ಪಠ್ಯವಿಷಯ'ಕ್ಕೆ ಕತ್ತರಿ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on FLASH :'6ನೇ ತರಗತಿ'ಯ 'ಸಮಾಜ ವಿಜ್ಞಾನ ಭಾಗ-2'ದಲ್ಲಿನ ಈ 'ಪಠ್ಯವಿಷಯ'ಕ್ಕೆ ಕತ್ತರಿ

Post a Comment