BREAKING NEWS: ರೈಣಿ ಗ್ರಾಮದಲ್ಲಿ ಭಾರೀ ಹಿಮಕುಸಿತ; ಕೊಚ್ಚಿ ಹೋದ ಮನೆಗಳು; ನಾಪತ್ತೆಯಾದ ಕಾರ್ಮಿಕರು

February 07, 2021

 


ಡೆಹ್ರಾಡೂನ್: ಭಾರೀ ಹಿಮಕುಸಿತದಿಂದಾಗಿ ಉತ್ತರಾಖಂಡದ ಜನತೆ ತತ್ತರಿಸಿದ್ದು, ಇಲ್ಲಿನ ಚಮೋಲಿ ಜಿಲ್ಲೆಯ ರೈಣಿ ಗ್ರಾಮದಲ್ಲಿ ಹಿಮಪಾತದಿಂದಾಗಿ ದೌಲಿಗಂಗಾ ನದಿಯಲ್ಲಿ ಭೀಕರ ಪ್ರವಾಹ ಉಂಟಾಗಿದೆ.

ಹಿಮಕುಸಿತದಿಂದಾಗಿ ನದಿಯಲ್ಲಿ ಏಕಾಏಕಿ ಪ್ರವಾಹ ಉಂಟಾಗಿದ್ದು, ತಪೋವನ ಪ್ರದೇಶದಲ್ಲಿ ದೌಲಿಗಂಗಾ ನದಿ ಉಕ್ಕಿ ಹರಿದಿದೆ. ಅದಾಗಲೇ ಹಿಮ ಕುಸಿತದಿಂದ ತತ್ತರಿಸಿದ್ದ ಹಲವು ಮನೆಗಳು ನದಿ ಪ್ರವಾಹದ ಅಬ್ಬರಕ್ಕೆ ಕೊಚ್ಚಿ ಹೋಗಿವೆ.

ಭಾರೀ ಹಿಮಪಾತದಿಂದಾಗಿ ಋಷಿಗಂಗಾ ಯೋಜನೆಯ ಪವರ್ ಪ್ರಾಜೆಕ್ಟ್ ಗೂ ಹಾನಿಯಾಗಿದೆ. ಒಂದೆಡೆ ಪ್ರವಾಹದ ಸೆಳೆತ, ಇನ್ನೊಂದೆಡೆ ಹಿಮ ಕುಸಿತದ ಅಬ್ಬರಕ್ಕೆ ಸಿಲುಕಿರುವ ಹಲವು ಕಾರ್ಮಿಕರು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.


Related Articles

Advertisement
Previous
Next Post »