ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ ಸಿಎಲ್) ಬಿಎಂಆರ್ ಸಿಎಲ್ ನಲ್ಲಿ ಖಾಲಿ ಇರುವ ಮುಖ್ಯ ಎಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಅನುಭವಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಇದು ಆಫ್ ಲೈನ್ ಅಪ್ಲಿಕೇಶನ್ ಪ್ರಕ್ರಿಯೆಯಾಗಿದ್ದು, ಅರ್ಜಿ ಸಲ್ಲಿಕೆ ಕೆಲಸ ಈಗಾಗಲೇ ಆರಂಭವಾಗಿದೆ. ಅಂದ್ಹಾಗೆ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 28, 2021 ಆಗಿದೆ.
ಹುದ್ದೆಗಳ ವಿವರ..!
ಸಂಸ್ಥೆಯ ಹೆಸರು: ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (ಬಿಎಂಆರ್ ಸಿಎಲ್) .
ಸೇವೆ: ಐಆರ್ ಎಸ್ ಇ
ಹುದ್ದೆಗಳ ಸಂಖ್ಯೆ: 02
ಸ್ಥಳ: ಬೆಂಗಳೂರು
ವಯಸ್ಸು: ಅಧಿಸೂಚನೆ ದಿನಾಂಕಕ್ಕೆ 55 ವರ್ಷಗಳಿಗಿಂತ ಕಡಿಮೆ (ಫೆಬ್ರವರಿ 1, 2021) ಇರಬೇಕು.
ನೇಮಕಾತಿ ನಿಯಮಗಳು: ನಿಯೋಜನೆ
ಡೆಪಿಟೇಷನ್ ಅವಧಿ: 3 ವರ್ಷ ಮತ್ತು ವಿಸ್ತರಿಸಬಹುದಾದ
ಶೈಕ್ಷಣಿಕ ಅರ್ಹತೆ: ಸಿವಿಲ್ ಎಂಜಿನಿಯರಿಂಗ್ ನಲ್ಲಿ ಪದವಿ
ಅನುಭವ: 1) SAG/NFSAG ಅಥವಾ ತತ್ಸಮಾನ ದರ್ಜೆಯಲ್ಲಿರಬೇಕು, ಕನಿಷ್ಠ 17 ವರ್ಷಗಳ ಗ್ರೂಪ್ ಎ ಸೇವೆಯು ಸಾಬೀತಾಗಿರುವ ಟ್ರ್ಯಾಕ್ ರೆಕಾರ್ಡ್ ಹೊಂದಿರಬೇಕು.
2) ಮೆಟ್ರೋ/ಎಂಆರ್ ಟಿಎಸ್/ರೈಲ್ವೆ/ಎಲಿವೇಟೆಡ್ ರಸ್ತೆಗಳು/ಸುರಂಗಗಳು/ಬಂದರುಗಳು/ವಿಮಾನ ನಿಲ್ದಾಣಗಳಂತಹ ಬಹು-ಶಿಸ್ತೀಯ/ಬೃಹತ್ ಮೂಲಸೌಕರ್ಯ ಯೋಜನೆಗಳಾದ ಯೋಜನೆ, ಟೆಂಡರ್ ಮತ್ತು ಕಾರ್ಯಗತಗೊಳಿಸುವಿಕೆಗಳಲ್ಲಿ 17 ವರ್ಷಗಳ ಕನಿಷ್ಠ 5 ವರ್ಷಗಳ ಅನುಭವ ಹೊಂದಿರಬೇಕು.
3) ಹಳಿ ನಿರ್ಮಾಣ ಕಾಮಗಾರಿ, ಸಿಗ್ನಲಿಂಗ್, ವಿದ್ಯುದ್ದೀಕರಣ ಮತ್ತು ರೋಲಿಂಗ್ ಸ್ಟಾಕ್, ರೈಲ್ವೆ ನಿರ್ಮಾಣ ಮತ್ತು ಕಾರ್ಯಾಚರಣೆಗಳಿಗೆ ಸಂಬಂಧಿಸಿದ ಸುರಕ್ಷತಾ ಅಂಶಗಳು ಇತ್ಯಾದಿ ರೈಲ್ವೆ ಸಂಬಂಧಿತ ವಿಭಾಗಗಳೊಂದಿಗೆ ಸಮನ್ವಯ ಮತ್ತು ಪರಸ್ಪರ ಸಂಪರ್ಕದ ಬಗ್ಗೆ ಅನುಭವ ಮತ್ತು ಜ್ಞಾನವನ್ನು ಹೊಂದಿರಬೇಕು.
ಇತರೆ ಅಗತ್ಯಗಳು: ಯಾವುದೇ ಮೆಟ್ರೋ ಪ್ರಾಜೆಕ್ಟ್ʼನಲ್ಲಿ ಕೆಲಸ ಮಾಡಿದ ಅನುಭವ ಮತ್ತು ಕನ್ನಡಿಗರಿಗೆ ಅದ್ಯತೆ.
ಅರ್ಜಿ ಸಲ್ಲಿಸುವುದು ಹೇಗೆ..?
* ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಜನರಲ್ ಮ್ಯಾನೇಜರ್ (ಎಚ್ ಆರ್ )/ ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ, 3ನೇ ಮಹಡಿ, ಬಿಎಂಟಿಸಿ ಕಾಂಪ್ಲೆಕ್ಸ್, ಶಾಂತಿನಗರ, ಕೆ.ಎಚ್.ರಸ್ತೆ, ಬೆಂಗಳೂರು - 560027, ಅರ್ಜಿ ನಮೂನೆಗೆ ಅರ್ಜಿ ಸಲ್ಲಿಸಬೇಕು.
* ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಎನ್.ಇ.ಸಿ, ಡಿ&ಎಆರ್ ಮತ್ತು ವಿಜಿಲೆನ್ಸ್ ಕ್ಲಿಯರೆನ್ಸ್ ಮತ್ತು APARs ರೇಟಿಂಗ್ ಗಳೊಂದಿಗೆ ತಮ್ಮ ಅರ್ಜಿಯನ್ನ ಸರಿಯಾದ ಚಾನೆಲ್ ಮೂಲಕ ಸಲ್ಲಿಸಬೇಕು.
* ವೆಬ್ ಸೈಟ್ ವಿಳಾಸ: www.bmrc.co.in
* ಅಧಿಸೂಚನೆ ಮತ್ತು ಅಪ್ಲಿಕೇಶನ್ ಲಿಂಕ್: https://www.careerindia.com/downloads/2021/2/BMRCLCE.pdf
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಫೆಬ್ರವರಿ 28, 2021
EmoticonEmoticon