ಭಾರತವನ್ನು ಮಾತುಕತೆಗೆ ಕರೆದ ಪಾಕ್‌ ಪ್ರಧಾನಿ!

February 06, 2021


 ಪಾಕ್ ಪ್ರಧಾನಿ ಇಮ್ರಾನ್ ಖಾನ್ ಭಾರತದೊಂದಿಗೆ ಮಾತುಕತೆಗೆ ಆಹ್ವಾನ ನೀಡಿದ್ದಾರೆ. ಅರೆ ಏನಪ್ಪಾ ಕಡೆಗೂ ಅಹಂಕಾರ ಕಮ್ಮಿ ಆಯ್ತಾ ಅನ್ಕೊಂಡ್ರೆ ಖಂಡಿತ ಇಲ್ಲ. ನಾವೇನು ಮಾತುಕತೆಗೆ ಬನ್ನಿ ಅಂತಾ ಪಾಕಿಗಳನ್ನ ಕರೆದಿಲ್ಲ. ಭಾರತ ಈಗಾಗಲೇ ಸ್ಪಷ್ಟವಾಗಿ ಹೇಳಿದೆ. ಎಲ್ಲಿ ತನಕ ಉಗ್ರರಿಗೆ ಬೆಂಬಲ ನಿಲ್ಲಿಸೋದಿಲ್ಲವೋ ಅಲ್ಲಿ ತನಕ ಮಾತುಕತೆ ಇಲ್ಲ ಅಂತ. ಆದ್ರೆ ಈ ಇಮ್ರಾನ್ ಖಾನ್​​ ಅವರಾಗೇ ಮಾತುಕತೆಗೆ ಕರ್ದಿರೋದಲ್ಲದೆ ಕಂಡೀಶನ್ ಕೂಡ ಹಾಕಿದ್ದಾರೆ.

ಏನ್ ಕಂಡೀಶನ್ ಗೊತ್ತಾ? ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್ 370 ಮತ್ತೆ ಜಾರಿ ಮಾಡಿದ್ರೆ ಮಾತ್ರ ಮಾತಾಡ್ತೀವಿ ಅಂತ. ಪಾಕ್ ಆಕ್ರಮಿತ ಕಾಶ್ಮೀರದ ಕೋಟ್ಲಿ ಜಿಲ್ಲೆಯಲ್ಲಿ ಕಾಶ್ಮೀರ ದಿನ ಅಂತಾ ಒಂದು ಕಾರ್ಯಕ್ರಮ ಆಯೋಜಿಸಿ ಅದರಲ್ಲಿ ಈ ಮಾತಾಡಿದ್ದಾರೆ. 1991ರಿಂದಲೂ ಪಾಕಿಸ್ತಾನ ಫೆಬ್ರವರಿ 5ನೇ ತಾರೀಕು ಈ ಕಾರ್ಯಕ್ರಮ ಮಾಡಿಕೊಂಡು ಬಂದಿದೆ.

ನಾನು ಭಾರತದ ಪ್ರಧಾನಿ ಮೋದಿಗೆ ಎಷ್ಟು ಸಲ ಮಾತುಕತೆಗೆ ಕರೆದರೂ ಅವ್ರು ಬರ್ತಿಲ್ಲ. ನಮ್ಮ ಸ್ನೇಹದ ಹಸ್ತ ನಮ್ಮ ದೌರ್ಬಲ್ಯ ಎಂದುಕೊಳ್ಳಬೇಡಿ ಅಂತಾ ಕೂಡ ಹೇಳಿದ್ದಾರೆ ಇಮ್ರಾನ್ ಖಾನ್. ಇವ್ರು ಮಾತಿಗೆ ಯಾರ್ ಕೇರ್ ಮಾಡ್ತಾರೆ. ಬಿಟ್ಟಾಕಣ.


Related Articles

Advertisement
Previous
Next Post »