ಚಂದ್ರಲೋಕದಲ್ಲಿ ಸೈಟ್ ಖರೀದಿಸಿ ಪ್ರೇಯಸಿಗೆ ಉಡುಗೊರೆ ನೀಡಿದ 'ಈ ಪ್ರೇಮಿ'!

February 15, 2021
Monday, February 15, 2021

 


ಇಂದೋರ್ : ಫೆಬ್ರವರಿ 14 ರಂದು ವ್ಯಾಲೆಂಟೈನ್ಸ್ ಡೇ ಯನ್ನು ವಿಶ್ವದಲ್ಲೇ ಪ್ರೇಮಿಗಳ ದಿನವನ್ನಾಗಿ ಆಚರಿಸಲಾಗುತ್ತಿದೆ ಅಲ್ವಾ? ಅಂದು ಪ್ರೇಮಿ ಯು ತನ್ನ ಪ್ರೀತಿಯನ್ನು ವಿಭಿನ್ನ ರೀತಿಯಲ್ಲಿ ವ್ಯಕ್ತಪಡಿಸುತ್ತಾನೆ ಕೂಡ. ಈ ದಿನದಂದು ಪ್ರಿಯತಮ ತನ್ನ ಪ್ರಿಯತಮೆಗೆ ವಿಶೇಷ ಉಡುಗೊರೆಯನ್ನು ನೀಡಲು ಬಯಸುತ್ತಾನೆ. ಇಂದೋರ್ ನ ಪ್ರೇಮಿಯೂ ಇದೇ ರೀತಿ ಯೋಚಿಸಿದ್ದು, ಈ ವ್ಯಾಲೆಂಟೈನ್ಸ್ ಡೇ ವಿಶೇಷವನ್ನಾಗಿಸಲು ಚಂದ್ರನ ಮೇಲೆ ಪ್ರೇಯಸಿಗಾಗಿ ಒಂದು ಎಕರೆ ಜಾಗವನ್ನು ಖರೀದಿ ಮಾಡಿದ್ದಾನೆ ಅಂದ್ರೆ ನೀವು ನಂಬಲೇ ಬೇಕು.

ಇಂದೋರ್ ನ ಪಾಲಾಶ್ ನಾಯಕ್ ತನ್ನ ಪ್ರೇಯಸಿಗಾಗಿ ಚಂದ್ರನ ಮೇಲೆ ಭೂಮಿ ಖರೀದಿಸಿದ್ದಾನೆ ಮತ್ತು ಈ ವ್ಯಾಲೆಂಟೈನ್ಸ್ ಡೇ ಯಂದು ತನ್ನ ಪ್ರೇಯಸಿಗೆ ಉಡುಗೊರೆಯಾಗಿ ಅ ದನ್ನು ನೀಡಿದ್ದಾರೆ.

ಪಾಲಾಶ್ ಈಗ ಚಂದ್ರನ ಮೇಲೆ 1 ಎಕರೆ ಜಮೀನು ಹೊಂದಿದ್ದಾನೆ ಎಂದು ಪ್ರಮಾಣಪತ್ರ ವನ್ನು ಪಡೆದಿದ್ದಾರೆ. ಭಾರತದಲ್ಲಿ, ಕೆಲವರಿಗೆ ಈ ರೀತಿ ಚಂದ್ರನ ಭೂಮಿ ಯನ್ನು ಹೊಂದಿರುವ ಅನುಭವವಿದೆ. ಇದರಲ್ಲಿ ಸುಶಾಂತ್ ಸಿಂಗ್ ರಜಪೂತ್ ಮತ್ತು ಶಾರುಖ್ ಖಾನ್ ಕೂಡ ಸೇರಿದ್ದಾರೆ. ಸದ್ಯ ಪಲಾಶ್ ಪ್ರಸ್ತುತ ದುಬೈನಲ್ಲಿ ಫ್ರೀ ಲಾಂಚಿಂಗ್ ಎಂಬ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಆತನ ಪ್ರಿಯತಮೆ ಅಶಾನಾ ಹೈದರಾಬಾದ್‌ನಲ್ಲಿ ವಾಸಿಸುತ್ತಿದ್ದಾರೆ. ಈ ಭೂಮಿಯನ್ನು ಪಲಾಶ್ ಇಂಟರ್ನ್ಯಾಷನಲ್ ಲೂನಾರ್ ಲ್ಯಾಂಡ್ಸ್ ಮೂಲಕ ಖರೀದಿಸಿದ್ದಾರೆ.


Thanks for reading ಚಂದ್ರಲೋಕದಲ್ಲಿ ಸೈಟ್ ಖರೀದಿಸಿ ಪ್ರೇಯಸಿಗೆ ಉಡುಗೊರೆ ನೀಡಿದ 'ಈ ಪ್ರೇಮಿ'! | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಚಂದ್ರಲೋಕದಲ್ಲಿ ಸೈಟ್ ಖರೀದಿಸಿ ಪ್ರೇಯಸಿಗೆ ಉಡುಗೊರೆ ನೀಡಿದ 'ಈ ಪ್ರೇಮಿ'!

Post a Comment