ಬಿಬಿಎಂಪಿಗೆ ತಲೆನೋವಾದ ಮೀನು..!

February 04, 2021
Thursday, February 4, 2021

 


ಬೆಂಗಳೂರು(ಫೆ.05): ನಗರದ ಇಸ್ರೋ ಲೇಔಟ್‌ ದೇವರೆಕೆರೆ ಪಾರ್ಕ್ ಸಮೀ​ಪ​ದ ಕೆರೆಯಲ್ಲಿ ಅನಾಮಧೇಯರು ವಿದೇಶಿ ತಳಿ ಹಾಗೂ ಜೀವ ವೈವಿ​ಧ್ಯಕ್ಕೆ ಹಾನಿಕಾರಕ ಎನ್ನಲಾದ ಪ್ಲೆಕೋ ಮೀನನ್ನು ಬಿಟ್ಟಿರುವುದು ಪಾಲಿಕೆ ಅಧಿಕಾರಿಗಳ ತಲೆನೋವಿಗೆ ಕಾರಣವಾಗಿದೆ.

ದೇವರೆಕೆರೆ ಪಾರ್ಕ್ ಸಮೀ​ಪದ ಕೆರೆಯನ್ನು ಪಾಲಿ​ಕೆಯ ಕೆರೆ ವಿಭಾ​ಗದ ಅಧಿ​ಕಾ​ರಿ​ಗಳು ಪುನ​ರು​ಜ್ಜೀ​ವನ ಮಾಡುವ ಉದ್ದೇ​ಶ​ದಿಂದ ಹೂಳು ಎತ್ತು​ತ್ತಿ​ದ್ದರು. ಈ ವೇಳೆ ಪ್ಲೆಕೋ ಮೀನು ಪತ್ತೆ ಆಗಿದ್ದು, ಸ್ಥಳೀ​ಯರು ತಿಳುವ​ಳಿಕೆ ಕೊರತೆಯಿಂದ ಈ ಮೀನು​ಗ​ಳನ್ನು ರಕ್ಷಿ​ಸಲು ಟ್ಯಾಂಕ​ರ್‌​ಗಳ ಮೂಲಕ ನೀರು ಬಿಟ್ಟು ಬದುಕಿಸುವ ಯತ್ನ ಮಾಡಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿದ ಪಾಲಿಕೆಯ ಅಧಿಕಾರಿಗಳು ಪ್ಲೆಕೋ ಮೀನುಗಳನ್ನು ತೆರವು ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ.

'ಇನ್ನೂ 6 ತಿಂಗಳವರೆಗೆ ಬಿಬಿಎಂಪಿ ಚುನಾವಣೆ ನಡೆಯೋದಿಲ್ಲ'

ಪ್ಲೆಕೋ ಮೀನು ಹೆಚ್ಚಾಗಿ ದಕ್ಷಿಣ ಅಮೆ​ರಿಕದಲ್ಲಿ ಕಂಡುಬರು​ತ್ತವೆ.

ಇದು ಸಹ ಕ್ಯಾಟ್‌ಫಿಶ್‌ ತಳಿ ಮಾದ​ರಿ​ಯಾ​ಗಿದ್ದು, ಇದ​ರಿಂದ ಉಳಿದ ಜಲ​ಚ​ರ​ಗ​ಳಿಗೆ ಹಾನಿ​ಯಾ​ಗು​ತ್ತದೆ. ಈ ಮೀನು​ಗ​ಳಿಂದ ಸ್ಥಳೀಯ ಜೀವ ವೈವಿ​ಧ್ಯ​ ಹಾಳಾ​ಗು​ತ್ತವೆ. ಈ ಮೀನು ಉಳಿದ ಜಲ​ಚ​ರ​ಗ​ಳಿಗೆ ಹಾನಿ​ಮಾ​ಡಿ ಸಾಯಿ​ಸು​ತ್ತವೆ. ಇಲ್ಲ​ವೇ ತಿನ್ನು​ತ್ತವೆ. ಹೀಗಾಗಿ, ಈ ರೀತಿಯ ಮೀನುಗಳ ಸಾಗಾ​ಣಿಕೆ ಹಾಗೂ ಸಾಕುವು​ದಕ್ಕೆ ಕಡಿ​ವಾಣ ಹಾಕ​ಬೇಕು. ಕಠಿಣ ಕಾನೂನು ರೂಪಿ​ಸ​ಬೇಕು. ಎಲ್ಲ​ಕ್ಕಿಂತ ಮುಖ್ಯ​ವಾಗಿ ಈ ಬಗ್ಗೆ ಸಾರ್ವ​ಜ​ನಿ​ಕ​ರಲ್ಲಿ ಜಾಗೃತಿ ಮೂಡಿ​ಸ​ಬೇ​ಕಿದೆ ಎನ್ನುತ್ತಾರೆ ಪರಿ​ಸ​ರ​ವಾದಿ ಡಾ ಕ್ಷಿ​ತಿಜ್‌ ಅರಸ್‌.

ಪರಿಸರ ತಜ್ಞ ವಿಜಯ್‌ ನಿಶಾಂತ್‌ ಅವರು, ಪ್ಲೆಕೋ ಮೀನುಗಳು ವಿದೇಶಿ ತಳಿ​ಯಾ​ಗಿ​ದ್ದು, ಸ್ಥಳೀ​ಯರ ತಿಳು​ವ​ಳಿಕೆ ಕೊರ​ತೆ​ಯಿಂದ ಇವು​ಗ​ಳನ್ನು ರಕ್ಷಿ​ಸಲು ಮುಂದಾ​ಗಿ​ದ್ದಾರೆ. ಇದನ್ನು ಅಕ್ವೇರಿ​ಯಂಗಳಲ್ಲಿ ಬಳ​ಸುತ್ತಾ​ರೆ. ಸ್ಥಳೀ​ಯರು ಅಥವಾ ಬೇರೆ ಎಲ್ಲಿಂದ​ಲೂ ಈ ಮೀನ​ನ್ನು ಕೆರೆಗೆ ತಂದು​ಬಿ​ಟ್ಟಿ​ರುವ ಸಾಧ್ಯತೆ ಇದೆ. ಈ ಬಗ್ಗೆ ಸಾರ್ವ​ಜ​ನಿ​ಕ​ರಿಗೆ ಮಾಹಿತಿ ನೀಡ​ಲಾ​ಗಿದೆ ಎಂದು ಮಾಹಿತಿ ನೀಡಿ​ದರು. ಸಾರ್ವಜನಿಕರ ಮಾಹಿತಿ ಕೊರತೆಯಿಂದ ಸಾಮಾಜಿಕ ಜಾಲತಾಣದಲ್ಲಿ ದೇವರೆಕೆರೆಯಲ್ಲಿರುವ ಪ್ಲೆಕೋ ಮೀನುಗಳು ಒದ್ದಾಡುತ್ತಿರುವ ಫೋಟೋ ಹಾಗೂ ವಿಡಿಯೋ ವೈರಲ್‌ ಆಗಿದೆ.


Thanks for reading ಬಿಬಿಎಂಪಿಗೆ ತಲೆನೋವಾದ ಮೀನು..! | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಬಿಬಿಎಂಪಿಗೆ ತಲೆನೋವಾದ ಮೀನು..!

Post a Comment