ಹುಣಸೂರು ತಾಲ್ಲೂಕಿನ ತರಿಕಲ್ಲು ರಂಗಯ್ಯನ ಕೊಪ್ಪಲು ಗ್ರಾಮದ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಕೋವಿಡ್ ಸಮಯದಲ್ಲಿನ ಕಲಿಕೆ, ವಿದ್ಯಾಗಮ ಹಾಗೂ ಆನ್ಲೈನ್ ತರಗತಿಗಳ ಪಾಠದ ಬಗ್ಗೆ ಮಕ್ಕಳಿಂದ ಮಾಹಿತಿ ಪಡೆದರು. 7ನೇ ತರಗತಿಯ ವಿದ್ಯಾರ್ಥಿಯೊಬ್ಬನಿಗೆ ಭಿನ್ನರಾಶಿಯ ಲೆಕ್ಕ ನೀಡಿ, ಕಪ್ಪು ಹಲಗೆಯ ಮೇಲೆ ಬಿಡಿಸುವಂತೆ ತಿಳಿಸಿದರು. ತಪ್ಪಿದಾಗ, ಆತನ ತಪ್ಪು ತಿದ್ದಿ, ಲೆಕ್ಕ ಹೇಳಿಕೊಟ್ಟರು.
ಕನ್ನಡ ಮತ್ತು ಇಂಗ್ಲಿಷ್ ಪಾಠ ಓದುವುದರಲ್ಲಿಯೂ ವಿದ್ಯಾರ್ಥಿಗಳು ನಿರೀಕ್ಷಿತ ಸಾಮಥ್ರ್ಯ ತೋರದಾದಾಗ, ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಜಿಲ್ಲಾಕಾರಿ, ಮಾತೃಭಾಷೆಯಾದ ಕನ್ನಡವನ್ನು ಓದಲೂ ಕಷ್ಟಪಟ್ಟರೆ ಇತರ ಪಠ್ಯಗಳ ಪರಿಸ್ಥಿತಿ ಏನು?
ಮೊರಾರ್ಜಿ ದೇಸಾಯಿ ವಸತಿ ಶಾಲೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಉನ್ನತ ಶಿಕ್ಷಣ, ಸ್ಪರ್ಧಾತ್ಮಕ ಪರೀಕ್ಷೆಯ ಪೂರ್ವಸಿದ್ಧತೆ ಕುರಿತು ಮಾಹಿತಿ ನೀಡಿದರು. ಗ್ರಾಮದ ಅಂಗನವಾಡಿಗೆ ಭೇಟಿ ನೀಡಿ, ಮುದ್ದು ಕಂದಮ್ಮಗಳಿಗೆ ಬಣ್ಣಗಳನ್ನು ಗುರುತಿಸುವ ಚಟುವಟಿಕೆ ಮಾಡಿಸಿದರು. ಕೆಲವು ಕ್ಷಣ ಮಕ್ಕಳೊಂದಿಗೆ ಕಳೆದರು.
ellaa oorina shalegaliguu primary/highschool bheti needuvanthagali
ReplyDelete