ಶಂಕರ್ ನಾಗ್ ಅವರ ಮಗಳು ಈಗ ಏನ್ ಮಾಡ್ತಿದ್ದಾರೆ ಗೊತ್ತೇ ? ಇವರ ಧೈರ್ಯಕ್ಕೆ ಮೆಚ್ಚಲೇ ಬೇಕು

February 06, 2021


 ಶಂಕರ್ ನಾಗ್ ಅಣ್ಣ ಹೆಸರು ಯಾರಿಗೆ ತಾನೆ ಪರಿಚಯ ಇಲ್ಲ ಹೇಳಿ. ಶಂಕರ್ ನಾಗ್ ಹೆಸರು ಎಲ್ಲರಿಗೂ ಕೂಡ ಚಿರಪರಿಚಿತ . ಶಂಕರ್ ನಾಗ್ ಅವರು ಈಗ ಕನ್ನಡ ಚಿತ್ರರಂಗದ ಒಂದು ದಂತಕಥೆ. ಚಿತ್ರ ಪ್ರೇಮಿಗಳ ಮನಸ್ಸಿನಲ್ಲಿ ಅಚ್ಚಳಿಯದ ಮುದ್ರೆ ಒತ್ತಿರುವ ಶಂಕರನಾಗ್ ಕನ್ನಡಿಗರ ಮನೆ ಮನದಲ್ಲೂ ಬೆರೆತುಹೋಗಿದ್ದಾರೆ. 35 ವರ್ಷದ ಕಿರಿದಾದ ಬದುಕಿನ ಪಯಣದಲ್ಲಿ ನೂರಾರು ವರ್ಷ ನೆನೆಯುವಂತಹ ಕಾರ್ಯ ಸಾಧಿಸಿದ ಛಲಗಾರ. ನಾಯಕ ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಕನ್ನಡ ಚಿತ್ರರಂಗವನ್ನು ಬೆಳಗಿದ್ದಾರೆ. 80ರ ದಶಕದಲ್ಲಿ ಮಿಂಚಿನ ಓಟವನ್ನು ಆರಂಭಿಸಿದ ಶಂಕರನಾಗ್ ಅವರ ಓಟವನ್ನು ವಿಧಿ ಬೇಗನೆ ಕೊನೆಗೊಳಿಸಿತು. ಅಂತಹ ಮೇರು ವ್ಯಕ್ತಿತ್ವದ ಮಹಾನ್ ನಟನಿಗೆ ಒಬ್ಬಳು ಮಗಳು ಕೂಡ ಇರುವಳು ಎನ್ನುವುದು ತುಂಬಾ ಜನರಿಗೆ ತಿಳಿಯದೆ ಇರುವಂತಹ ವಿಷಯ. ಅಡಿಕೆ ಶಂಕರ್ ನಾಗ್ ಅವರ ಮಗಳು ಯಾರು?

ಅವರು ಈಗ ಎಲ್ಲಿದ್ದಾರೆ? ಏನು ಮಾಡುತ್ತಾ ಇದ್ದಾರೆ? ಅನ್ನೋದನ್ನ ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಶಂಕರ್ ನಾಗ್ ಇಂದಿಗೂ ಸಹ ಕನ್ನಡಿಗರ ಮನದಲ್ಲಿ ಕಿಂಗ್ ಆಗಿಯೇ ಮೆರೆಯುತ್ತಿದ್ದಾರೆ. ಅವರ ಮಗಳು ಕಾವ್ಯ ನಾಗ್. ಕಾವ್ಯ ಈಗ ಹೊಸೂರಿನಲ್ಲಿ ಇರುವ ತಂದೆಯ ಜಮೀನಿನಲ್ಲಿ ಕೆಮಿಕಲ್ ಮುಕ್ತ ಸೋಪ್ ಮತ್ತು ಆಯಿಲ್ ತಯಾರಿಸುವ ಕೋಕೊನಸ್ ಎಂಬ ಕಂಪನಿ ತೆರೆದಿರುವ ಕಾವ್ಯ ನಾಗ್ ನೈಸರ್ಗಿಕ ಸೋಪ್ ಮತ್ತು ಆಯಿಲ್ ಗಳನ್ನು ಉತ್ಪಾದನೆ ಮಾಡಿ ಮಾರಾಟ ಮಾಡುತ್ತಿದ್ದಾರೆ. ತಂದೆ ಇಲ್ಲದ ಮಗಳ ಧೈರ್ಯ ಮೆಚ್ಚುವಂತದ್ದು. ಕಾವ್ಯ ನಾಗ್ ವನ್ಯಜೀವಿ ವಿಭಾಗದಲ್ಲಿ MA ಮಾಡಿದ್ದಾರೆ. ಮದುವೆ ಆದ ನಂತರ ಗಂಡನ ಜೊತೆ ವಿಯೆಟ್ನಾಂಗೆ ಹೋಗಿ ನಂತರ ಮತ್ತೆ ಬೆಂಗಳೂರಿಗೆ ಬಂದು ತನ್ನದೇ ಆದ ಒಂದು ಸ್ವಂತ ಕಂಪನಿಯನ್ನು ತೆರೆದಿದ್ದಾರೆ. ಅವರ ವ್ಯಾಪಾರ ವೃದ್ಧಿಸಲಿ ಹಾಗೂ ಅವರಿಗೆ ಒಳ್ಳೆಯದಾಗಲಿ ಎಂದು ಆಶಿಸೋಣ.


Related Articles

Advertisement
Previous
Next Post »