ತಂದೆಯ ಎಡವಟ್ಟಿಗೆ ಮಗ ಬಲಿ: ಸೆವೆನ್​ ಅಪ್​ ಎಂದು ತಿಳಿದು ವಿಷ ಕುಡಿದ ಯುವಕ ದುರಂತ ಸಾವು!

February 27, 2021
Saturday, February 27, 2021

 


ಹಾವೇರಿ: ಸೆವೆನ್​ ಅಪ್​ ಅಂತ ತಿಳಿದು ವಿಷ ಕುಡಿದ ಯುವಕನೊಬ್ಬ ಚಿಕಿತ್ಸೆ ಫಲಿಸದೇ ಮೃತಪಟ್ಟಿರುವ ಘಟನೆ ಸವಣೂರು ತಾಲೂಕಿನ ಚಿಕ್ಕ ಮರಳಿಹಳ್ಳಿ ಗ್ರಾಮದಲ್ಲಿ ನಡೆದಿದೆ.

ಹನುಮಂತ ಲಮಾಣಿ ಮೃತ ದುರ್ದೈವಿ. ಎರಡು ದಿನಗಳ ಹಿಂದೆ ನಡೆದಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಹಲಸಂದೆ ಮತ್ತು ಮೆಕ್ಕೆಜೋಳ ಬೆಳೆಗಳನ್ನು ಕಾಡುವ ಕೀಟಗಳಿಗಾಗಿ ಹನುಮಂತ ತಂದೆ ಕ್ರೀಮಿನಾಶಕ ತಂದಿದ್ದರು. ಬಳಿಕ ಅದನ್ನು ಸೆವನ್ ಅಪ್​ ಬಾಟಲ್​ನಲ್ಲಿ ಶೇಖರಿಸಿ ಇಟ್ಟಿದ್ದರು.

ಸೆವೆನ್ ಅಪ್ ಕುಡಿಯುವುದಕ್ಕೆ ತಂದಿದ್ದಾರೆಂದು ಭಾವಿಸಿ, ಹನುಮಂತ ಕ್ರಿಮಿನಾಶಕವನ್ನು ಧಾವಂತದಲ್ಲಿ ಕುಡಿದಿದ್ದ.

ಆನಂತರವೇ ಅದು ವಿಷ ಎಂದು ಆತನಿಗೆ ತಿಳಿದಿದೆ. ತಕ್ಷಣ ಆತನನ್ನು ಹುಬ್ಬಳ್ಳಿಯ ಕಿಮ್ಸ್​ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಯಿತು. ಆದರೆ, ಚಿಕಿತ್ಸೆ ಫಲಿಸದೆ ಹನುಮಂತ ಅಸುನೀಗಿದ್ದಾನೆ.

ಅನ್ಯಾಯವಾಗಿ ಪ್ರಾಣ ಕಳೆದುಕೊಂಡ ಹನುಮಂತನನ್ನು ನೆನೆದು ಸಂಬಂಧಿಕರು ರೋಧಿಸುತ್ತಿದ್ದಾರೆ. ಇನ್ನು ಹನುಮಂತು ಎರಡು ತಿಂಗಳ ಹಿಂದಷ್ಟೇ ತಂದೆಯಾಗಿದ್ದ. ಇದೊಂದು ಆಕಸ್ಮಿಕ ಘಟನೆ ಎಂದು ತಂದೆ ಪೋಲಿಸರಿಗೆ ಹೇಳಿಕೆ ನೀಡಿದ್ದು, ಸವಣೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)


Thanks for reading ತಂದೆಯ ಎಡವಟ್ಟಿಗೆ ಮಗ ಬಲಿ: ಸೆವೆನ್​ ಅಪ್​ ಎಂದು ತಿಳಿದು ವಿಷ ಕುಡಿದ ಯುವಕ ದುರಂತ ಸಾವು! | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ತಂದೆಯ ಎಡವಟ್ಟಿಗೆ ಮಗ ಬಲಿ: ಸೆವೆನ್​ ಅಪ್​ ಎಂದು ತಿಳಿದು ವಿಷ ಕುಡಿದ ಯುವಕ ದುರಂತ ಸಾವು!

Post a Comment