ಮಹಾರಾಷ್ಟ್ರದಂತೆ ಕರ್ನಾಟಕದಲ್ಲೂ ಕರೊನಾ ಸೋಂಕಿನ ಸಂಖ್ಯೆ ಏರಿಕೆ! ಇಂದು ಸೋಂಕಿಗೆ ತುತ್ತಾದವರೆಷ್ಟು?

February 27, 2021
Saturday, February 27, 2021

 


ಬೆಂಗಳೂರು: ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಕರೊನಾ ಸೋಂಕಿನ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿರುವ ಬೆನ್ನಲ್ಲೇ ಕರ್ನಾಟಕದಲ್ಲೂ ಕರೊನಾ ಸೋಂಕಿತರ ಸಂಖ್ಯೆ ಏರಿಕೆ ಕಾಣಲಾರಂಭಿಸಿದೆ. ಹಲವು ವಾರಗಳ ನಂತರ ಇದೀಗ ಸತತ ಎರಡನೇ ದಿನ 500ಕ್ಕೂ ಹೆಚ್ಚು ಪ್ರಕರಣಗಳು ರಾಜ್ಯದಲ್ಲಿ ದೃಢವಾಗಿವೆ.

ಶನಿವಾರದಂದು ಕರ್ನಾಟಕದಲ್ಲಿ 523 ಕರೊನಾ ಪ್ರಕರಣಗಳು ದೃಢವಾಗಿವೆ. ಈ ಮೂಲಕ ಒಟ್ಟಾರೆ ಸೋಂಕಿತರ ಸಂಖ್ಯೆ 9,50,730ಕ್ಕೆ ಏರಿಕಯಾಗಿದೆ. ಇದರಲ್ಲಿ 9,32,747 ಮಂದಿ ಗುಣಮುಖರಾಗಿದ್ದು, 5,638 ಸಕ್ರಿಯ ಪ್ರಕರಣಗಳ ಬಾಕಿಯುಳಿದಿವೆ. ಇಂದು ಒಂದೇ ದಿನ 380 ಜನರು ಗುಣಮುಖರಾಗಿರುವ ವರದಿ ಬಂದಿದೆ. ಸದ್ಯ ಸಕ್ರಿಯವಿರುವ ಪ್ರಕರಣಗಳಲ್ಲಿ 121 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಕಳೆದ 24 ಗಂಟೆಗಳಲ್ಲಿ ಆರು ಮಂದಿ ಕರೊನಾ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ.

ಈ ಮೂಲದ ರಾಜ್ಯಾದ್ಯಂತ ಸೋಂಕಿಗೆ ಬಲಿಯಾದವರ ಸಂಖ್ಯೆ 12,326ಕ್ಕೆ ಏರಿಕೆಯಾಗಿದೆ.

ಇಂದು ದೃಢವಾದ ಪ್ರಕರಣಗಳಲ್ಲಿ ಅತಿ ಹೆಚ್ಚು (329) ಪ್ರಕರಣಗಳು ಬೆಂಗಳೂರಿನದ್ದಾಗಿದೆ. ಉಳಿದಂತೆ ಮೈಸೂರಿನಲ್ಲಿ 31, ದಕ್ಷಿಣ ಕನ್ನಡದಲ್ಲಿ 21, ಉಡುಪಿಯಲ್ಲಿ 18, ಕಲಬುರಗಿಯಲ್ಲಿ 17, ಬೆಳಗಾವಿಯಲ್ಲಿ 13 ಪ್ರಕರಣಗಳು ಪತ್ತೆಯಾಗಿವೆ. (ಏಜೆನ್ಸೀಸ್​)Thanks for reading ಮಹಾರಾಷ್ಟ್ರದಂತೆ ಕರ್ನಾಟಕದಲ್ಲೂ ಕರೊನಾ ಸೋಂಕಿನ ಸಂಖ್ಯೆ ಏರಿಕೆ! ಇಂದು ಸೋಂಕಿಗೆ ತುತ್ತಾದವರೆಷ್ಟು? | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಮಹಾರಾಷ್ಟ್ರದಂತೆ ಕರ್ನಾಟಕದಲ್ಲೂ ಕರೊನಾ ಸೋಂಕಿನ ಸಂಖ್ಯೆ ಏರಿಕೆ! ಇಂದು ಸೋಂಕಿಗೆ ತುತ್ತಾದವರೆಷ್ಟು?

Post a Comment