ಕರೋನ ಕಾರಣದಿಂದ ಶಾಲೆ ಬಿಟ್ಟ ಮಕ್ಕಳ ಮಾಹಿತಿ ಕೇಳಿದ್ರೆ ಶಾಕ್‌ ಆಗ್ತೀರಾ.!

February 19, 2021

 


ಪಟನಾ: ಬಿಹಾರ ರಾಜ್ಯದಲ್ಲಿ ಕೋವಿಡ್‌-19 ರ ಲಾಕ್ ಡೌನ್ ನಿಂದಾಗಿ ಬಿಹಾರದ ವಿವಿಧ ಜಿಲ್ಲೆಗಳಿಂದ ಒಟ್ಟು 10 ಲಕ್ಷ ಮಕ್ಕಳು ಶಾಲೆ ತೊರೆದಿದ್ದಾರೆ ಎಂದು ಅಧಿಕೃತ ಅಂಕಿ-ಅಂಶಗಳ ಮೂಲಕ ತಿಳಿದು ಬಂದಿದೆ. ಸರ್ಕಾರಿ ಶಾಲೆಗಳ 5ರಿಂದ 6ನೇ ತರಗತಿಗೆ ದಾಖಲಾದ 6 ಲಕ್ಷ ಮಕ್ಕಳು ಶಾಲೆ ತೊರೆದರೆ, 8 ಮತ್ತು 9ನೇ ತರಗತಿಯಿಂದ 4 ಲಕ್ಷ ಮಕ್ಕಳು ಶಾಲೆ ತೊರೆದಿದ್ದಾರೆ ಎನ್ನಲಾಗಿದೆ.

ಅಂದ ಹಾಗೇ ಶಾಲೆ ಬಿಟ್ಟ ಈ ವಿದ್ಯಾರ್ಥಿಗಳನ್ನು ಮತ್ತೆ ತರಗತಿಗಳಿಗೆ ಕರೆತರುವ ಉದ್ದೇಶದಿಂದ ಏಪ್ರಿಲ್ 1ರಿಂದ ರಾಜ್ಯಾದ್ಯಂತ 'ಅಡ್ಮಿಷನ್ ಡ್ರೈವ್' ಆರಂಭಿಸಲು ಬಿಹಾರ ಸರ್ಕಾರದ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಈ ಕುರಿತು ಮಾಹಿತಿ ನೀಡಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ನಿರ್ದೇಶಕ ಡಾ.ರಂಜಿತ್ ಕೆ ಸಿಂಗ್, ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ವಿಶೇಷ ಅಭಿಯಾನ ಏಪ್ರಿಲ್ ನಿಂದ ನಡೆಯಲಿದೆ ಅಂತ ಖಾಸಗಿಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದಾರೆ.

ಪ್ರಾಥಮಿಕ ದಿಂದ ಪ್ರೌಢಶಾಲೆಹಂತದ ಶಾಲಾ ಮುಖ್ಯೋಪಾಧ್ಯಾಯರಿಗೆ, ವಿದ್ಯಾರ್ಥಿಗಳ ಶಾಲೆ ಬಿಡುವುದನ್ನು ಕಡಿಮೆ ಮಾಡಲು ಹೆಚ್ಚಿನ ಪ್ರಮಾಣದಲ್ಲಿ ಪ್ರವೇಶವನ್ನು ಮತ್ತೆ ಮಾಡುವ ಕಾರ್ಯವನ್ನು ನೀಡಲಾಗಿದೆ.


Related Articles

Advertisement
Previous
Next Post »