ಶಿವಮೊಗ್ಗ: ಸರ್ಕಾರಿ ನೌಕರರು ಹೊಟ್ಟೆ ಬೆಳೆಸಿಕೊಳ್ಳುವುದು ಕಡಿಮೆ ಮಾಡಿಕೊಂಡು ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಿ ಅಂತ ಸಚಿವ ಕೆ.ಎಸ್ ಈಶ್ವರಪ್ಪನವರು ಸಲಹೆ ನೀಡಿದ್ದಾರೆ.
ಅವರು ಶಿವಮೊಗ್ಗದಲ್ಲಿ ನಡೆಯುತ್ತಿರುವ ಜಿಲ್ಲಾ ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡುತ್ತ ಈ ಬಗ್ಗೆ ಹೇಳಿದರು, ಇದೇ ವೇಳೆ ಅವರು ಬೆಳಗ್ಗಿನಿಂದ ಸಂಜೆಯವರೆಗೆ ಕೆಲಸ ಮಾಡುವುದರಿಂದಾಗಿ ಎಷ್ಟೋ ನೌಕರರು ಹೊಟ್ಟೆ ಬೆಳೆಸಿಕೊಂಡಿರುವುದನ್ನು ನಾವು ಕಾಣಬಹುದಾಗಿದೆ. ಹೀಗಾಗಿ, ಹೊಟ್ಟೆ ಬೆಳೆಸುವುದನ್ನು ಬಿಟ್ಟು ವ್ಯಾಯಾಮ ಮಾಡುವ ಮೂಲಕ ಫಿಟ್ ಆಗಿರಿ ಅಂಥ ಸಲಹೆ ನೀಡಿದರು.
EmoticonEmoticon