ಬಿ ಎಸ್ ಯಡಿಯೂರಪ್ಪ ಅವರ ಸಾಧನೆಯ ಹಾದಿ ಬೂಕನಕೆರೆ ಟು ವಿಧಾನಸೌಧ:ಹುಟ್ಟು ಹಬ್ಬದ ವಿಶೇಷ

February 26, 2021


 ರಾಜ್ಯದ 4ನೇ ಬಾರಿ ಮುಖ್ಯಮಂತ್ರಿಯಾಗಿರುವ ಹೆಮ್ಮೆಯ ರಾಜಕಾರಣಿ ಬಿ,ಎಸ್ ಯಡಿಯೂರಪ್ಪ ನವರ 79 ನೇ ಜನ್ಮದಿನ ಇಂದು. ರಾಜಕೀಯದಲ್ಲಿ ಅತ್ಯಂತ ಪರಿಣಿತಿ ಹೊಂದಿರುವಂತಹ ಬಿ ಎಸ್ ಯಡಿಯೂರಪ್ಪನವರ ಬಾಲ್ಯದ ಜೀವನ ಸ್ಫೂರ್ತಿಯ ಚಿಲುಮೆಯಾಗಿತ್ತು , ಕಷ್ಟಗಳ ನಡುವೆ ಮೂಡಿದ ಅವರ ಬದುಕಿನಲ್ಲಿ , ಶಿಸ್ತು, ಸಮ್ಯಮ , ಶ್ರದ್ಧೆ ಇತ್ತು. ಅವರು ನಡೆದ ಹಾದಿಯಲ್ಲಿ ಹಲವು ಮೈಲಿಗಲ್ಲು , ಸೃಷ್ಟಿಯಾಗಿವೆ . ಪ್ರತೀ ಹೆಜ್ಜೆಯಲ್ಲೂ ರೋಚಕ ತಿರುವುಗಳಿವೆ . ಸವಾಲುಗಳನ್ನು ಹಿಂದಿಕ್ಕಿದ ಪರಿಯಲ್ಲಿ ಕ್ರೀಡ ಮನೋಭಾವವಿದೆ.

ಯಡಿಯೂರಪ್ಪನವರ ಕರ್ಮಭೂಮಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ವಾದರೆ ಅವರ ಜನ್ಮಭೂಮಿ ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ತಾಲೂಕಿನ ಭೂಕನಕೆರೆ ಗ್ರಾಮ ಎಂಬುದು ಎಲ್ಲರಿಗೂ ಗೊತ್ತೆ ಇದೆ ಇವರ ತಂದೆ ಸಿದ್ದಲಿಂಗಯ್ಯ ತಾಯಿ ಶ್ರೀಮತಿ ಪುಟ್ಟ ತಾಯಮ್ಮನವರಿಗೆ 1943ರ ಫೆಬ್ರವರಿ 27 ರಂದು ಜನಿಸಿದ ಸುಪುತ್ರ ಯಡಿಯೂರಪ್ಪನವರು ತನ್ನ 4ನೇ ವಯಸ್ಸಿಗೆ ತಾಯಿಯವರನ್ನೂ ಕಳೆದು ಕೊಂಡರು,ನಂತರ ಅವರು ಮಂಡ್ಯ ಪೇಟೆ ಬೀದಿಯಲ್ಲಿ ತಾತ ಅಂದರೆ ತಾಯಿಯ ತಂದೆ ಸಂಗಪ್ಪ ರವರ ಆಶ್ರಯದಲ್ಲಿ ಬೆಳೆದ ಅವರ ರೀತಿ ಸೋಜಿಗವಾಗಿತ್ತು.

ಇವರ ಪ್ರಾಥಮಿಕ ಶಿಕ್ಷಣವನ್ನು ಪೇಟೆ ಬೀದಿಯಲ್ಲಿರುವಂತಹ ಪ್ರಾಥಮಿಕ ಶಾಲೆಯಲ್ಲಿ ಪೂರ್ಣಗೊಳಿಸಿ , ಪ್ರೌಢ ಶಿಕ್ಷಣ ಹಾಗೂ ಪಿಯುಸಿ ಯನ್ನು ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಮುನ್ಸಿಪಲ್ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಪೂರೈಸಿದರು . ಶಾಲಾ - ಕಾಲೇಜು ದಿನಗಳಲ್ಲೇ ಅವರು RSS ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುತ್ತಿದ್ದರು , ಇನ್ನೂ ಯಡಿಯೂರಪ್ಪನವರು ಕಬ್ಬಡ್ಡಿ ಆಟದಲ್ಲಿ ಪ್ರಸಿದ್ಧಿ ಪಡೆದಿದ್ದರು , ಭಾರತ್ ಕಬಡ್ಡಿ ತಂಡದಲ್ಲಿ ಅವರು ಆಡುತ್ತಿದ್ದ ಆಟ ನೋಡಲು ಅಕ್ಕ-ಪಕ್ಕದ ಹಳ್ಳಿಗಳ ಕ್ರೀಡಾಪ್ರೇಮಿಗಳು ಬಂದು ಸೇರುತ್ತಿದ್ದರು .ಇನ್ನೂ 1972 ರಲ್ಲಿ ಶಿಕಾರಿ ಪುರದ ವೀರಭದ್ರ ಶಾಸ್ತ್ರಿ ಶಂಕರ್ ರವರ ಮಗಳಾದ ಮೈತ್ರಾ ದೇವಿಯವರನ್ನು ವಿವಾಹ ವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಮೊದಲ ಬಾರಿಗೆ ಯಡಿಯೂರಪ್ಪ ರಾಜ್ಯದ ಉಪ ಮುಖ್ಯಮಂತ್ರಿಯಾಗಿ , ಹಣಕಾಸು ಸಚಿವರಾಗಿ ಅಧಿಕಾರ ಸ್ವೀಕಾರ ಮಾಡಿ, ದಶಕಗಳ ಹೋರಾಟದ ನಂತರ ಮೊದಲ ಬಾರಿಗೆ ಬಿಜೆಪಿ ಅಧಿಕಾರದ ಸಿಹಿ ಉಂಡಿತ್ತು. ನಂತರ 2007.ನ.12 ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಪ್ರಮಾಣ ವಚನ ಸ್ವೀಕಾರ ಮಾಡಿ ಅಧಿಕಾರವನ್ನು ತಮ್ಮ ಮುಡಿಗೇರಿಸಿಕೊಂಡರು.

ಹಾಗೆಯೇ ದಕ್ಷಿಣ ಭಾರತದ ಮೊದಲ ಬಿಜೆಪಿ ಸಿಎಂ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಆದರೆ ಇವರ ಮುಖ್ಯಮಂತ್ರಿ ಸ್ಥಾನವನ್ನು ಕೇವಲ 7 ದಿನಗಳಲ್ಲಿ ಕಳೆದುಕೊಂಡರು ಕಾರಣ,ಸಚಿವರಿಗೆ ಖಾತೆ ಹಂಚಿಕೆ ವೇಳೆ ಮತ್ತೆ ಉಲ್ಭಣಗೊಂಡ ಭಿನ್ನಮತದಿಂದಾಗಿ ಮೈತ್ರಿ ಸರ್ಕಾರ ಅದೇ ವರ್ಷ ಭಿನ್ನಮತ ವಾಗಿದ್ದರಿಂದ .ಆದರೆ ಅಧಿಕಾರ ಕಳೆದು ಕೊಂಡು ಸುಮ್ಮನೆ ಕುಳಿತುಕೊಳ್ಳುವ ವ್ಯಕ್ತಿತ್ವ ಯಡಿಯೂರಪ್ಪನವರದಲ್ಲ ಎಂಬುವುದನ್ನು ಇತಿಹಾಸವೇ ಸಾರಿ ಹೇಳುತ್ತದೆ.

ಯಡಿಯೂರಪ್ಪ ಬೆಳೆದು ಬಂದ ಹಾದಿ

1943- ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ತಾಲೂಕಿನ ಬೂಕನಕೆರೆಯಲ್ಲಿ ಜನನ

1965- ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರವೇಶ. ಶಿಕಾರಿಪುರಕ್ಕೆ ಆಗಮನ

1967 - ವೈವಾಹಿಕ ಜೀವನಕ್ಕೆ ಪದಾರ್ಪಣೆ

1975- ರಾಜಕೀಯ ಪ್ರವೇಶ, ಶಿಕಾರಿಪುರ ಪುರಸಭಾ ಸದಸ್ಯರಾಗಿ ಆಯ್ಕೆ

1975- ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ. 45 ದಿನಗಳ ಜೈಲುವಾಸ

1977 - ಶಿಕಾರಿಪುರ ಪುರಸಭಾ ಅಧ್ಯಕ್ಷಗಾದಿ

1980- ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ರಾಗಿ ಆಯ್ಕೆ

1981- ಜೀತ ವಿಮುಕ್ತಿ ಹೋರಾಟದ ನಾಯಕತ್ವ, ಪಾದಯಾತ್ರೆ

1983- ಮೊದಲ ಬಾರಿಗೆ ಶಾಸಕರಾಗಿ ವಿಧಾನಸಭೆಗೆ ಪ್ರವೇಶ

1985- ಬಿಜೆಪಿಯ ಶಿವಮೊಗ್ಗ ಜಿಲ್ಲಾ ಅಧ್ಯಕ್ಷ ರಾಗಿ ಆಯ್ಕೆ

1988- ಬಿಜೆಪಿಯ ರಾಜ್ಯ ಅಧ್ಯಕ್ಷ

1992- ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿಯಾಗಿ ನಿಯೋಜನೆ

1994- ವಿಧಾನಸಭೆ ಪ್ರತಿಪಕ್ಷ ನಾಯಕರಾಗಿ ಆಯ್ಕೆ

1999- ವಿಧಾನಸಭಾ ಚುನಾವಣೆಯಲ್ಲಿ ಪರಾಭವ

2000- ವಿಧಾನ ಪರಿಷತ್ಗೆ ಆಯ್ಕೆ

2003- ಬಗರ್ಹುಕುಂ ಸಕ್ರಮಕ್ಕೆ ಆಗ್ರಹಿಸಿ ಶಿಕಾರಿಪುರದಿಂದ ಬೆಂಗಳೂರಿಗೆ ಪಾದಯಾತ್ರೆ

2004- 5ನೇ ಬಾರಿಗೆ ವಿಧಾನಸಭೆ ಪ್ರವೇಶ, ಪ್ರತಿಪಕ್ಷ ದ ನಾಯಕನಾಗಿ ಆಯ್ಕೆ

2006- ಉಪ ಮುಖ್ಯಮಂತ್ರಿ, ಹಣಕಾಸು ಮತ್ತು ಅಬಕಾರಿ ಖಾತೆ ನಿರ್ವಹಣೆ

2007- ನವೆಂಬರ್- ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ. ಜೆಡಿಎಸ್ ಕೈಕೊಟ್ಟಿದ್ದರಿಂದ ರಾಜೀನಾಮೆ.

2008- ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ

2011ಧಿ- ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ

2012- ಬಿಜೆಪಿ ತೊರೆದು ಕೆಜೆಪಿ ಸ್ಥಾಪನೆ

2013- ಕೆಜೆಪಿಗೆ ಸಿಗದ ಜನತೆಯ ಮನ್ನಣೆ, ಮತ್ತೆ ಬಿಜೆಪಿ ಪ್ರವೇಶ

2014- ಶಿವಮೊಗ್ಗ ಕ್ಷೇತ್ರದಿಂದ ಲೋಕಸಭೆಗೆ ಪ್ರವೇಶ

2014- ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರಾಗಿ ನೇಮಕ

2016- ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಬಾರಿ ಆಯ್ಕೆ

2018- 3ನೇ ಬಾರಿಗೆ ಸಿಎಂ ಆಗಿ ಪ್ರಮಾಣ, ಬಹುಮತ ಸಾಬೀತುಪಡಿಸಲಾಗದೆ ಅಧಿಕಾರ ತ್ಯಾಗ

2019 ಜು.25- ರಾಜ್ಯದ ಮುಖ್ಯಮಂತ್ರಿಯಾಗಿ 4ನೇ ಬಾರಿಗೆ ಅಧಿಕಾರ ಸ್ವೀಕಾರ

ಯಡಿಯೂರಪ್ಪ ಅಧಿಕಾರಾವಧಿಯ ಪ್ರಮುಖ ಯೋಜನೆಗಳು

- ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ 'ವಿಷನ್ - 2020' ಯೋಜನೆ

- ಬಡ ಹೆಣ್ಣು ಮಕ್ಕಳಿಗಾಗಿ ಭಾಗ್ಯ ಲಕ್ಷ್ಮಿ ಬಾಂಡ್

- ಪ್ರೌಢ ಶಾಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಉಚಿತ ಸೈಕಲ್ ವಿತರಣೆ

- ಹಾಲಿಗೆ ಹೆಚ್ಚುವರಿ ಪ್ರೋತ್ಸಾಹ ಧನ

- ಉದ್ಯೋಗ ತರಬೇತಿ ಆಯೋಗ ರಚನೆ

- ಸಂಧ್ಯಾ ಸುರಕ್ಷಾ ಯೋಜನೆ

- ದೇಶದಲ್ಲೇ ಮೊದಲ ಬಾರಿಗೆ ಪ್ರತ್ಯೇಕ ಕೃಷಿ ಬಜೆಟ್

- ಶೇ.1ರ ಬಡ್ಡಿ ದರದಲ್ಲಿ ರೈತರಿಗೆ ಸಾಲ

-ಸಾವಯವ ಕೃಷಿ ಮಿಷನ್ ಆರಂಭ

- ಸೆಮಿ ಕಂಡಕ್ಟರ್ ನೀತಿ ಜಾರಿಗೆ ತಂದ ಮೊದಲ ಸಿಎಂ

- ಒಣಭೂಮಿ ಕೃಷಿಗೆ ಭೂಚೇತನ ಯೋಜನೆ

- ರೈತರಿಗೆ ಇಸ್ರೇಲ್ ಹಾಗೂ ಚೀನಾ ಪ್ರವಾಸ

- ಎಲ್ಲ ಜಿಲ್ಲೆಗಳಲ್ಲೂ ಜನಸ್ಪಂದನ ಕಾರ್ಯಕ್ರಮ

ಹೀಗೆ ತನ್ನದೇ ಚಾತುರ್ಯದಿಂದ ರಾಜಕೀಯಕ್ಕೆ ಪ್ರವೇಶಿಸಿದ, ಬಿ ಎಸ್ ಯಡಿಯೂರಪ್ಪ ನವರ ಆಡಳಿತ ಇನ್ನೊಬ್ಬರಿಗೆ ಸ್ಫೂರ್ತಿಯಾಗುವಂತದ್ದು , 4 ನೇ ಬಾರಿ ಮುಖ್ಯಮಂತ್ರಿ ಗದ್ದುಗೆ ಏರಿದ್ದ ಹಠವಾದಿ ರಾಜಕಾರಣಿ, ರೈತ ಹೋರಾಟದಿಂದ ಬಂದು ರಾಜ್ಯದಲ್ಲಿ ಪಕ್ಷವನ್ನು ಕಟ್ಟಿದ ಸಾರಥಿ , ಹಂತ-ಹಂತವಾಗಿ ಸೋಲು-ಗೆಲುವು ಎರಡನ್ನು ಕಂಡ ರಣಧೀರ ಮುಖ್ಯಮಂತ್ರಿ ಯಡಿಯೂರಪ್ಪನವರು , ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲೇಬೇಕು, ಬಿಜೆಪಿ ಪಕ್ಷ ಆಳ್ವಿಕೆ ಮಾಡಬೇಕು ಅನ್ನುವ ಕನಸು ಹೊಂದಿದಂತಹ ಹಠವಾದಿ, & ತನ್ನ ಕನಸನ್ನು ಈಡೇರಿಸಿಕೊಂಡ ದಿಟ್ಟ ವೀರ ಅಂತ ಹೇಳಿದರೆ ತಪ್ಪಾಗಲಾರದು


Related Articles

Advertisement
Previous
Next Post »