ಭಾರತೀಯ ಸೇನೆಯಲ್ಲಿ ಕೆಲಸ ಮಾಡುವವರಿಗೆ ಸುವರ್ಣಾವಕಾಶ

February 06, 2021

 


ನವದೆಹಲಿ, (ಫೆ.06): ಭಾರತೀಯ ಸೇನೆಯ ತಾಂತ್ರಿಕ ಪ್ರವೇಶ ಯೋಜನೆ (ಟಿಇಎಸ್)ಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

90 ಖಾಲಿ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದ್ದು, ಅರ್ಜಿ ಪ್ರಕ್ರಿಯೆಯು ಫೆಬ್ರವರಿ 1 ರಿಂದ ಪ್ರಾರಂಭವಾಗಿದೆ. ಇನ್ನು ಮಾರ್ಚ್ 2 ರ ವರೆಗೆ ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕೋರಲಾಗಿದೆ.

ವಿದ್ಯಾರ್ಹತೆ: ಪಿಸಿಎಂ (ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ) ವಿಷಯಗಳೊಂದಿಗೆ 10 + 2 ಪರೀಕ್ಷೆಯಲ್ಲಿ (12ನೇ ತರಗತಿ) ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.

ನೇಮಕಾತಿ ಪ್ರಕ್ರಿಯೆಯ ಮೂಲಕ ಆಯ್ಕೆಯಾಗುವ ಅಭ್ಯರ್ಥಿಗಳು ನಾಲ್ಕು ವರ್ಷಗಳ ಕಾಲ ಮಿಲಿಟರಿ ತರಬೇತಿಯ ಹಾಗೂ ತಾಂತ್ರಿಕ ತರಬೇತಿಯ ನಂತರ ಸೇನೆಗೆ ಸೇರಲಿದ್ದಾರೆ.

ಭಾರತೀಯ ಸೇನೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅಧಿಕೃತ ವೆಬ್‌ ಸೈಟ್ : joinindianarmy.nic.in ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.


Related Articles

Advertisement
Previous
Next Post »