ರಾತ್ರಿ ನೀರಿನಲ್ಲಿ ನೆನಸಿ ಬೆಳಗ್ಗೆ ಇವುಗಳನ್ನು ತಿನ್ನೋದ್ರಿಂದ ಶರೀರದ ಅರೋಗ್ಯ ಹೇಗಿರುತ್ತೆ ನೋಡಿ

February 08, 2021
Monday, February 8, 2021

 


ಇವತ್ತು ಬೆಳಿಗ್ಗೆ ಮಾಡಬಹುದಾದ ಅದ್ಭುತವಾದ ಒಂದು ಡಯಟ್ ಬಗ್ಗೆ ತಿಳಿಸಿಕೊಡ್ತೀವಿ. ಈ ಡಯಟ್ ಅನ್ನು ಪ್ರತೀ ದಿನ ಮಾಡುವುದರಿಂದ ಹಲವಾರು ಪ್ರಯೋಜನಗಳನ್ನು ಪಡೆಯಬಹುದು. ಹಾಗಿದ್ರೆ ಈ ಡಯಟ್ ಮಾಡೋದು ಹೇಗೆ ಇದರಿಂದ ನಮಗೆ ಏನು ಪ್ರಯೋಜನ ಅನ್ನೋದರ ಬಗ್ಗೆ ಈ ಕೆಳಗೆ ಓದಿ ತಿಳಿದುಕೊಳ್ಳಿ.

ಈ ಟಿಪ್ಸ್ ಗಳನ್ನ ಮಾಡುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು. ಹಾಗೆ ಇದನ್ನ ಪ್ರತೀ ದಿನವೂ ತೆಗೆದುಕೊಳ್ಳುವುದರಿಂದ ಥೈರಾಯ್ಡ್ ಸಮಸ್ಯೆ ಅಂತೂ ಬರುವುದೇ ಇಲ್ಲ. ಅಸ್ತಮದಿಂದ ಬಳಲುತ್ತ ಇದ್ದವರು, ರಕ್ತ ಕಡಿಮೆ ಇರುವವರು, ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು ಹಾಗೂ ಚರ್ಮ ಸಂಬಂಧಿತ ರೋಗದಿಂದ ಬಳಲುತ್ತಾ ಇರುವವರಿಗೂ ಸಹ ಈ ಟಿಪ್ಸ್ ಬಹಳ ಉಪಯೋಗ ಆಗತ್ತೆ.

ಇದನ್ನ ಮಾಡೋಕೆ ಬೇಕಾಗಿರೋದು ಕಡಲೆ ಇದರಲ್ಲಿ ಸಾಕಷ್ಟು ಐರನ್, ಕಾಪರ್, ಜಿಂಕ್, ಮೆಗ್ನಿಷ್ಯಮ್ ಹಾಗೆ ಹೆಚ್ಚಾದ ಪ್ರೊಟೀನ್ ಇರತ್ತೆ.

ಹಾಗೆ ಇದರಲ್ಲಿ ಇರುವ ಫೈಬರ್ ನಾರಿನ ಅಂಶ ಇರುವುದರಿಂದ ನೈಸರ್ಗಿಕವಾಗಿ ನೇರವಾಗಿ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಉದರಲ್ಲಿರುವ ಪ್ರೋಟೀನ್ಗಳು ರಕ್ತದಲ್ಲಿ ಇರುವ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡತ್ತೆ. ಕಡಲೆಯಲ್ಲಿ ಫೈಬರ್ ಅಂಶ ಹೆಚ್ಚು ಇರುವುದರಿಂದ ಜೀರ್ಣ ಕ್ರಿಯೆ ಸುಲಭವಾಗಿ ಮಲಬದ್ಧತೆಯನ್ನು ನಿವಾರಿಸಿಕೊಳ್ಳಬಹುದು. ನಂತರ ಬಾದಾಮಿ. ಬಾದಾಮಿಯಲ್ಲಿ ಫೈಬರ್, ಪ್ರೋಟೀನ್ಸ್, ಮೆಗ್ನಿಷ್ಯಮ್ ಹಾಗೂ ವಿಟಮಿನ್ A ತುಂಬಾ ಹೆಚ್ಚಾಗಿ ಇರತ್ತೆ. ಆದ್ದರಿಂದ ಇದು ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಬಾದಾಮಿಯನ್ನ ನಿಯಮಿತಾವಾಗಿ ತೆಗೆದುಕೊಂಡರೆ ತೂಕ ಕಡಿಮೆ ಮಾಡಿಕೊಳ್ಳಬಹುದು. ಬಾದಾಮಿಯಲ್ಲಿ ವಿಟಮಿನ್ ಇ ಇರುವುದರಿಂದ ಕ್ಯಾನ್ಸರ್ ರೋಗವನ್ನು ತಡೆಗಟ್ಟಬಹುದು. ಅದರ ಜೊತೆಗೆ ಮಧುಮೇಹ ಹಾಗೂ ರಕ್ತದ ಒತ್ತಡವನ್ನು ಕೂಡ ಕಡಿಮೆ ಮಾಡತ್ತೆ. ಇನ್ನೂ ಮೂರನೆಯದಾಗಿ ಬೇಕಾಗಿರೋದು ಒಣ ದ್ರಾಕ್ಷಿ. ಒಣ ದ್ರಾಕ್ಷಿಯಲ್ಲಿ ಅಧಿಕ ಪ್ರಮಾಣದ ಕಬ್ಬಿಣದ ಅಂಶ ಇರತ್ತೆ. ಇದು ನಮ್ಮ ದೇಹದಲ್ಲಿ ರಕ್ತ ಕಣಗಳನ್ನು ಹೇಚ್ಚಿಸಲು ಸಹಾಯ ಮಾಡತ್ತೆ. ಆದ್ದರಿಂದ ರಕ್ತ ಹೀನತೆ ಇರುವವರು ಇದನ್ನು ತಿನ್ನುವುದರಿಂದ ರಕ್ತ ಉತ್ಪತ್ತಿ ಮಾಡಲು ಸಹಾಯ ಮಾಡುತ್ತದೆ. ಹಾಗೆ ಇದರಲ್ಲಿ ಕ್ಯಾಲ್ಸಿಯಂ, ಪಿಟ್ಯಾಷಿಯಂ ಮತ್ತು ಬೋರನ್ ಅಂತ ಅಂಶ ಇದ್ದು ನಮ್ಮ ಮೂಳೆಗಳನ್ನು ಬಲಿಷ್ಠಗೊಳಿಸತ್ತೇ. ಇನ್ನು ಚಿಕ್ಕ ಮಕ್ಕಳಿಗೆ ಒಣ ದ್ರಾಕ್ಷಿಯನ್ನು ನೀರಲ್ಲಿ ನೆನೆಸಿ ಕೊಡುವುದರಿಂದ ಮಲವಿಸರ್ಜನೆಗೆ ಸಹಾಯ ಮಾಡುತ್ತದೆ. ಹಾಗೆ ತೂಕ ಕಡಿಮೆ ಮಾಡಲು ಒಣ ದ್ರಾಕ್ಷಿಯನ್ನ ತೆಗೆದುಕೊಳ್ಳಬಾರದು. ತೂಕ ಜಾಸ್ತಿ ಮಾಡಿಕೊಳ್ಳೋಕೆ ಒಣ ದ್ರಾಕ್ಷಿ ತೆಗೆದುಕೊಳ್ಳೋದು ಉತ್ತಮ.

ಈ ಪದಾರ್ಥಗಳನ್ನ ಹೇಗೆ ತಗೊಳೋದು ಅಂತ ನೋಡೋಣ. ಒಂದು ಬೌಲ್ ಗೆ ೧೦ ಒಣ ದ್ರಾಕ್ಷಿ, ೫/೬ ಬಾದಾಮಿ ಹಾಗೂ ಒಂದು ಹಿಡಿಯಷ್ಟು ಕಡಲೆ ಇವೆಲ್ಲವನ್ನು ಹಾಗಿ ಒಂದೆರಡು ಬಾರಿ ಚೆನ್ನಾಗಿ ತೊಳೆದು ನೆನೆಯಲು ಬೇಕಾದಷ್ಟು ನೀರು ಹಾಕಿ ರಾತ್ರಿ ಇಡೀ ನೆನೆಯಲು ಬಿಡಬೇಕು. ಬೆಳಿಗ್ಗೆ ನೆನೆದ ಈ ಪದಾರ್ಥಗಳಿಗೆ ನೀರನ್ನು ಚೆಲ್ಲದೆ ಒಂದು ಚಮಚ ಜೇನು ತುಪ್ಪವನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಮೊದಲು ನೆನೆದ ಕಡಲೆ, ಬಾದಾಮಿ ಹಾಗೂ ದ್ರಾಕ್ಷಿಯನ್ನ ಅಗೆದು ತಿಂದು ನಂತರ ಜೇನು ತುಪ್ಪ ಸೇರಿಸಿದ ನೀರನ್ನು ಕುಡಿಯಬೇಕು. ಇದನ್ನು ಒಂದು ತಿಂಗಳು ಮಾಡುವುದರಿಂದ ಶರೀರದಲ್ಲಿ ಶಕ್ತಿ ಹೆಚ್ಚತ್ತೆ. ಹಾಗೆ ಕೆಲವರಲ್ಲಿ ಸುಸ್ತು, ನಿಶ್ಯಕ್ತಿ,ತುಂಬಾ ಹೊತ್ತು ಕೆಲಸ ಮಾಡಲು ಆಗದೆ ಇರುವುದು, ಅಂತವರು ಇದನ್ನು ತಿನ್ನುವುದರಿಂದ ನ್8ಮ್ಮ ಶರೀರದಲ್ಲಿ ಶಕ್ತಿ ಹೆಚ್ಚುತ್ತದೆ. ಕೆಲವರಿಗೆ ಕೂದಲು ತುಂಬಾ ಉದರುತ್ತ ಇರತ್ತೆ ಅಂತವರು ಕೂಡ ಇದನ್ನು ತಿನ್ನಬಹುದು. ಇದನ್ನು ರಾತ್ರಿ ನೆನೆಸಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ವಾಕಿಂಗ್ ಅಥವಾ ಜಿಮ್ ಗೆ ಹೋಗುವ ಮೊದಲು ಸೇವಿಸಬೇಕು. ಇದರಲ್ಲಿ ಇಷ್ಟೊಂದು ಲಾಭ ಇದೆ ಎಂದು ಹೆಚ್ಚಾಗಿ ಕೂಡ ಸೇವಿಸಬಾರದು. ಎಷ್ಟು ಪ್ರಮಾಣದಲ್ಲಿ ತೋರಿಸಿದ್ದೇವೆ ಅಷ್ಟೇ ತೆಗೆದುಕೊಳ್ಳಬೇಕು. ಹಾಹೆ ಇದನ್ನ ಒಂದು ತಿಂಗಳು ತೆಗೆದುಕೊಂಡರೆ, ರೋಗನಿರೋಧಕ ಶಕ್ತಿಯನ್ನ ಹೆಚ್ಚಿಸಿಕೊಳ್ಳಬಹುದು. ಇವುಗಳನ್ನ ತಿಂದು, ನೀರು ಕುಡಿದ ನಂತರ ಒಂದು ಗಂಟೆ ಬಿಟ್ಟು ತಿಂಡಿಯನ್ನ ತಿನ್ನಬೇಕು. ಅಥವಾ ತೂಕ ಕಡಿಮೆ ಮಾಡಿಕೊಳ್ಳಲು ಬಯಸುವವರು ನೇರವಾಗಿ ಮಧ್ಯಾನ್ಹ ಊಟವೇ ಮಾಡಬಹುದು. ಶುಗರ್ ಇರುವವರು ಮತ್ತು ಜೇನುತುಪ್ಪ ಇಷ್ಟಪಡದವರು ಜೇನುತುಪ್ಪವನ್ನು ಬಿಡಬಹುದು.


Thanks for reading ರಾತ್ರಿ ನೀರಿನಲ್ಲಿ ನೆನಸಿ ಬೆಳಗ್ಗೆ ಇವುಗಳನ್ನು ತಿನ್ನೋದ್ರಿಂದ ಶರೀರದ ಅರೋಗ್ಯ ಹೇಗಿರುತ್ತೆ ನೋಡಿ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ರಾತ್ರಿ ನೀರಿನಲ್ಲಿ ನೆನಸಿ ಬೆಳಗ್ಗೆ ಇವುಗಳನ್ನು ತಿನ್ನೋದ್ರಿಂದ ಶರೀರದ ಅರೋಗ್ಯ ಹೇಗಿರುತ್ತೆ ನೋಡಿ

Post a Comment