ಸರಕಾರದ ನಿರ್ಧಾರ ಖಂಡಿಸಿ ಇಂದು ರಾಜ್ಯಾದ್ಯಂತ ಖಾಸಗಿ ಶಾಲೆ ಪ್ರತಿಭಟನೆ

February 22, 2021

 


ಬೆಂಗಳೂರು: ಪ್ರಸಕ್ತ ಸಾಲಿನ ಶಾಲಾ ಶುಲ್ಕ ಕಡಿತಕ್ಕೆ ಸಂಬಂಧಿಸಿದಂತೆ ಸರಕಾರ ತೆಗೆದುಕೊಂಡಿರುವ ನಿರ್ಧಾರ ಖಂಡಿಸಿ ರಾಜ್ಯ ಖಾಸಗಿ ಶಾಲೆಗಳ ಆಡಳಿತ ಮಂಡಳಿ, ಶಿಕ್ಷಕರು, ಶಿಕ್ಷಕರೇತರ ಸಿಬಂದಿ ಸಮನ್ವಯ ಸಮಿತಿಯ ಮೂಲಕ ಮಂಗಳವಾರ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದ್ದಾರೆ.

ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘಟನೆಗಳಾದ ಕ್ಯಾಮ್ಸ್‌, ಮಿಕ್ಸಾ, ಮಾಸ್‌, ಕುಸ್ಮಾ, ಬಿಎಇ, ಎಸ್‌ಇಸಿ, ಪಿಎಸ್‌ಎಸಿಡ್ಲು ಎ, ಕೆಯುಎಂಎಸ್‌ಎಂಎ, ಐಎಸ್‌ಎಫ್‌ಐ ಮತ್ತು ಟಿಯು ಜತೆ ಸೇರಿ ಈ ಪ್ರತಿಭಟನೆ ನಡೆಸಲಿವೆ. ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 4ರ ವರೆಗೆ ಪ್ರತಿಭಟನೆ ನಡೆಯಲಿದೆ.Related Articles

Advertisement
Previous
Next Post »