ಕಲಬುರಗಿ: ಎರಡು ವರ್ಷಗಳಿಂದ ಶಾಲೆಗೆ ಬಾರದ ಶಿಕ್ಷಕಿಗೆ ವೇತನ ಬಿಡುಗಡೆ ಮಾಡಿರುವ ಆರೋಪ ಕಲಬುರಗಿ ಜಿಲ್ಲೆಯ ಶಹಾಪುರ ತಾಲೂಕಿನ ಮದ್ದರಕಿ ಗ್ರಾಮದಲ್ಲಿರುವ ಸರ್ಕಾರಿ ಪ್ರೌಡ ಶಾಲೆಯ ಮುಖ್ಯಶಿಕ್ಷಕನ ವಿರುದ್ದ ಕೇಳಿ ಬಂದಿದೆ.
ಕಳೆದ ಎರಡು ವರ್ಷಗಳಿಂದ ಈ ಶಾಲೆಗೆ ನೃತ್ಯ ಶಿಕ್ಷಕಿ ಬಂದಿಲ್ಲ, ಎನ್ನಲಾಗಿದ್ದು, ಆಗಿದ್ದರು ಕೂಡ ಆಕೆಯ ಮೇಲೆ ಪ್ರೀತಿ ತೋರಿಸಿರುವ ಶಿಕ್ಷಕ ವಿಜಯ್ ಆಶ್ರಿತ್ ಸಂಬಳವನ್ನು ಬಿಡುಗಡೆ ಮಾಡಿದ್ದಾರೆ ಎನ್ನಲಾಗಿದೆ.
ಹೀಗಿದ್ದರು ಕೂಡ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಇಲ್ಲಿ ತನಕ ಆರೋಪಿಗಳನ್ನು ವಿಚಾರಣೆ ಮಾಡಿಲ್ಲ, ಇದರಲ್ಲಿ ಉನ್ನತ ಅಧಿಕಾರಿಗಳು ಕೂಡ ಶಾಮೀಲು ಆಗಿರುವ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. ನೃತ್ಯ ಶಿಕ್ಷಕಿ ಶೈಲಾ ಅವರು ಶಾಲೆಗೆ ಬಾರದೇ ಹೋದರು ಕೂಡ ಯಾವ ಕಾರಣಕ್ಕೆ ವೇತನ ಪಾವತಿ ಮಾಡುತ್ತಿದ್ದಾರೆ ಅಂತ ಸ್ಥಳೀಯ ಜನತೆ ಪ್ರಶ್ನೆ ಮಾಡುತ್ತಿದ್ದಾರೆ.
EmoticonEmoticon