ಈ ನಾಯಿಯ ಹೆಸರಿನಲ್ಲಿ ಎಷ್ಟು ಕೋಟಿ ಆಸ್ತಿ ಇದೆ ಗೊತ್ತಾ, ನೋಡಿ ಪ್ರಪಂಚದ ಅತೀ ಶ್ರೀಮಂತ ನಾಯಿ.

February 16, 2021


 ಈ ಭೂಮಿಯ ಮೇಲೆ ಇರುವ ಅತೀ ನಿಯತ್ತಿನ ಪ್ರಾಣಿ ಅಂದರೆ ಅದೂ ನಾಯಿ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ನಾಯಿಗೆ ಇರುವ ನಿಯತ್ತು ಇತರೆ ಯಾವ ಪ್ರಾಣಿಗೂ ಇಲ್ಲ ಎಂದು ಹೇಳಬಹುದು. ತನಗೆ ಅನ್ನ ಹಾಕಿ ಸಾಕಿದ ಮಾಲೀಕನನ್ನ ತನ್ನ ಪ್ರಾಣಕ್ಕಿಂತ ಹೆಚ್ಚು ಪ್ರೀತಿ ಮಾಡುವ ಒಂದು ಜೀವಿ ಅಂದರೆ ಅದೂ ನಾಯಿಗಳು ಎಂದು ಹೇಳಬಹುದು. ಇನ್ನು ಕೆಲವು ಜನರು ನಾಯಿಗಳನ್ನ ಕಂಡರೆ ಕಲ್ಲಿನಲ್ಲಿ ಹೊಡೆದು ಓಡಿಸಿದರೆ ಇನ್ನು ಕೆಲವರು ನಾಯಿಗಳನ್ನ ತಮ್ಮ ಸ್ವಂತ ಮಕ್ಕಳಿಗಿಂತ ಹೆಚ್ಚಾಗಿ ಪ್ರೀತಿ ಮಾಡುತ್ತಾರೆ ಎಂದು ಹೇಳಬಹುದು. ಇನ್ನು ವಿಷಯಕ್ಕೆ ಬರುವುದಾದರೆ, ಸ್ನೇಹಿತರೆ ನಾವು ಹೇಳುವ ಇರುವ ಈ ನಾಯಿಯ ಹೆಸರಿನಲ್ಲಿ ಕೋಟಿಗಟ್ಟಲೆ ಆಸ್ತಿ ಇದ್ದು ಈ ವಿಷಯವನ್ನ ತಿಳಿದು ಇಡೀ ವಿಶ್ವವೇ ಶಾಕ್ ಆಗಿದೆ ಎಂದು ಹೇಳಿದರೆ ತಪ್ಪಾಗಲ್ಲ.

ಹಾಗಾದರೆ ಈ ನಾಯಿ ಯಾವುದು ಮತ್ತು ಈ ನಾಯಿಯ ಹೆಸರಿನಲ್ಲಿ ಇಷ್ಟೊಂದು ಆಸ್ತಿ ಇರುವುದು ಯಾಕೆ ಮತ್ತು ಈ ಆಸ್ತಿಯನ್ನ ನಾಯಿಯ ಹೆಸರಿಗೆ ಬರೆದಿದ್ದು ಯಾರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ನಾಯಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಸ್ನೇಹಿತರೆ ನಾಯಿಯನ್ನ ತನ್ನ ಜೀವಕ್ಕಿಂತ ಹೆಚ್ಚು ಪ್ರೀತಿ ಮಾಡುತ್ತಿದ್ದ ಇಲ್ಲೊಬ್ಬ ಮನುಷ್ಯ ತನ್ನ ಎಲ್ಲಾ ಆಸ್ತಿಯನ್ನ ನಾಯಿಯ ಹೆಸರಿಗೆ ಬರೆದಿದ್ದಾನೆ. ಅಮೆರಿಕದ ಆಗರ್ಭ ಶ್ರೀಮಂತ ಬಿಲ್​ ಡೋರಿಸ್​ ಎಂಟು ವರ್ಷಗಳಿಂದ ಲೂಲು ಹೆಸರಿನ ನಾಯಿಯನ್ನು ಸಾಕಿದ್ದ.

ಸಾಕಿದ್ದ ನಾಯಿಯನ್ನ ಬಹಳ ಪ್ರೀತಿ ಮಾಡುತ್ತಿದ್ದ ಈತ ತನ್ನ 5 ಮಿಲಿಯನ್ ಡಾಲರ್ ಆಸ್ತಿ ಅಂದರೆ ಸುಮಾರು 36 ಕೋಟಿ ರೂಪಾಯಿ ಆಸ್ತಿಯನ್ನ ಒಂದು ಟ್ರಸ್ಟ್ ಹೆಸರಿಗೆ ಬರೆದಿದ್ದು ಒಂದು ಷರತ್ತನ್ನ ಕೂಡ ಹಾಕಿದ್ದಾನೆ. ಹೌದು ತನ್ನ ಪ್ರೀತಿಯ ನಾಯಿ ಲೂಲುವನ್ನು ನೋಡಿಕೊಳ್ಳುವ ಟ್ರಸ್ಟ್ ಗೆ ತನ್ನ ಸೇರುತ್ತದೆ ಎಂದು ಶರತ್ತಿನಲ್ಲಿ ಬರೆದಿದ್ದಾನೆ ಬಿಲ್​ ಡೋರಿಸ್. ಇನ್ನು ಬಿಲ್​ ಡೋರಿಸ್ ಅವರ ಕೊನೆಯ ಆಸೆಯನ್ನ ಟ್ರಸ್ಟ್ ನಾಯಿಯನ್ನ ಚನ್ನಾಗಿ ನೋಡಿಕೊಳ್ಳುವ ಜವಾಬ್ದಾರಿಯನ್ನ ಹೊತ್ತಿದೆ. ಆತನ ಸ್ನೇಹಿತೆ ಮಾರ್ಥಾ ಬರ್ಟನ್ ಮನೆಯಲ್ಲಿ ಲೂಲುವನ್ನು ಬಿಡಲಾಗಿದೆ. ಲೂಲುವನ್ನು ನೋಡಿಕೊಳ್ಳುವುದಕ್ಕಾಗಿ ಪ್ರತಿ ತಿಂಗಳಿಗೆ ಇಂತಿಷ್ಟು ಎಂದು ಬರ್ಟನ್​ಗೆ ಹಣ ನೀಡಲಾಗುತ್ತಿದೆ.

ಡೋರಿಸ್​ ನಾಯಿಯನ್ನು ಅದೆಷ್ಟರ ಮಟ್ಟಿಗೆ ಹಚ್ಚಿಕೊಂಡಿದ್ದ ಎನ್ನುವುದನ್ನು ಕಣ್ಣಾರೆ ಕಂಡಿರುವ ಬರ್ಟನ್​ ಲೂಲುವನ್ನು ಅಷ್ಟೇ ಪ್ರೀತಿಯಿಂದ ಸಾಕುತ್ತಿದ್ದಾರೆ ಮತ್ತು ಲೂಲುವಾಗಿ ಎಲ್ಲವನ್ನ ಮಾಡಲು ಸಿದ್ದ ಎಂದು ಅವರು ಹೇಳಿದ್ದಾರೆ. ಲೂಲುವಿನ ಜೀವಿತಾವಧಿಗೆ ಬೇಕಾಗಿರುವುದಷ್ಟೇ ಅಲ್ಲದೆ ಅದರ ನೂರು ಪಟ್ಟು ಹಣವನ್ನು ಡೋರಿಸ್ ಟ್ರಸ್ಟ್​ ಹೆಸರಿಗೆ ಮಾಡಿಟ್ಟಿದ್ದು, ಅನೇಕರ ಮನಸ್ಸಲ್ಲಿ ಅಳಿಸಲಾಗದ ಸಂದೇಶವನ್ನು ಬರೆದಿಟ್ಟಿದೆ. ಏನೇ ಆಗಲಿ ಪ್ರೀತಿಯ ನಾಯಿಗಾಗಿ ಈತ ಮಾಡಿದ ಈ ಕೆಲಸ ಜನರ ಕಣ್ಣಲ್ಲಿ ನೀರು ತರಿಸಿದೆ ಎಂದು ಹೇಳಿದರೆ ತಪ್ಪಾಗಲ್ಲ.


Related Articles

Advertisement
Previous
Next Post »