ವಿಶ್ವದ ಅತ್ಯಂತ ಹಿರಿಯ ಮೀನಿನ ಜೀವಿತಾವಧಿ ಎಷ್ಟು ಗೊತ್ತಾ..?

February 23, 2021

 


ಹನಕೊ ಎಂಬ ಹೆಸರಿನ ಜಪಾನಿ ಮೀನು ಇದುವರೆಗೆ ಅತಿ ಹೆಚ್ಚು ವರ್ಷಗಳ ಜೀವಂತ ಇದ್ದ ಬಣ್ಣದ ಮೀನು ಎಂದು ನಂಬಲಾಗಿದೆ. ಈ ಮೀನು 1977ರಲ್ಲಿ ಸಾಯುವ ಮುನ್ನ 226 ವರ್ಷಗಳ ಕಾಲ ಬದುಕಿತ್ತು ಎನ್ನಲಾಗಿದೆ.

ಕಡುಗೆಂಪು ಬಣ್ಣದ ಈ ಹೆಣ್ಣು ಮೀನು 1751ರಲ್ಲಿ ಜಪಾನ್​​ನಲ್ಲಿ ಜನಿಸಿತ್ತು. ಇಂತಹ ಮೀನಿನ ಸಾಮಾನ್ಯ ಜೀವಿತಾವಧಿ 40 ವರ್ಷ. ಆದರೆ ಈ ಮೀನು ಮಾತ್ರ 1977ರವರೆಗೂ ಬದುಕಿತ್ತು ಹಾಗೂ ಸಾಯುವ ಹೊತ್ತಿಗೆ ಅದಕ್ಕೆ 226 ವರ್ಷ ವಯಸ್ಸಾಗಿತ್ತು.

 

226 ವರ್ಷ ವಯಸ್ಸಿನ ಈ ಮೀನು 70 ಸೆಂಟಿ ಮೀಟರ್​ ಉದ್ದ ಹಾಗೂ 7.5 ಕೆಜಿ ತೂಕವನ್ನ ಹೊಂದಿತ್ತು ಎನ್ನಲಾಗಿದೆ.


ಈ ಮೀನಿನ ವಯಸ್ಸು ಬರೋಬ್ಬರಿ 81...! : 2ನೇ ಮಹಾಯುದ್ಧದ ಸಂದರ್ಭದಲ್ಲೂ ಬದುಕಿತ್ತು ಈ ಮತ್ಸ್ಯ!ಮೀನುಗಳು ಎಷ್ಟು ವರ್ಷ ಬದುಕುತ್ತವೆ...? ಹೀಗೆಂದು ಕೇಳಿದರೆ ಮತ್ಸ್ಯ ಪ್ರಿಯರು ನಗುತ್ತಾ ತಮಾಷೆಗಾದರೂ `ನಮ್ಮ ಕೈಗೆ ಸಿಕ್ಕಿ ಬೀಳುವ ತನಕ' ಎಂದು ಹೇಳಬಹುದು. ಆದರೆ, ಮೀನೊಂದು ಬರೋಬ್ಬರಿ 81 ವರ್ಷದಿಂದ ಬದುಕುತ್ತಿದೆ ಎಂದರೆ ನಂಬುತ್ತೀರಾ...? ನಂಬಲೇಬೇಕು. ಹಾಗಂತ, ಇದೇನು ಕಾಲ್ಪನಿಕ ಕತೆಯಲ್ಲ, ಪ್ರತ್ಯಕ್ಷಸಾಕ್ಷಿ.

ವಿಜ್ಞಾನಿಗಳು ಈಗ ವಿಶ್ವದ ಅತೀ ಹಿರಿಯ ಮೀನೊಂದನ್ನು ಪತ್ತೆ ಹಚ್ಚಿದ್ದಾರೆ. ಈ ಮೀನಿನ ವಯಸ್ಸು ಬರೋಬ್ಬರಿ 81. ಆಸ್ಟ್ರೇಲಿಯಾದ ಪಶ್ಚಿಮ ಕರಾವಳಿಯಲ್ಲಿ ಈ ಮಿಡ್‌ನೈಟ್ ಸ್ನ್ಯಾಪರ್ ಮೀನನ್ನು ಹಿಡಿಯಲಾಗಿತ್ತು. ಎರಡನೇ ಮಹಾಯುದ್ಧದ ಸಂದರ್ಭದಲ್ಲೂ ಈ ಮೀನು ಬದುಕಿತ್ತು ಎಂದು ವಿಜ್ಞಾನಿಗಳು ಉಲ್ಲೇಖಿಸಿದ್ದಾರೆ. ಪಶ್ಚಿಮ ಆಸ್ಟ್ರೇಲಿಯಾದ ಬ್ರೂಮ್‌ನಿಂದ 300 ಕಿಲೋ ಮೀಟರ್ ದೂರದಲ್ಲಿರುವ ರೌಲಿ ಶೋಲ್ಸ್‌ನಲ್ಲಿ ಈ ಮೀನನ್ನು ಹಿಡಿಯಲಾಗಿತ್ತು. 81 ವರ್ಷದ ಈ ಮಿಡ್‌ನೈಟ್ ಸ್ನ್ಯಾಪರ್ ಅನ್ನು 60 ವರ್ಷಕ್ಕಿಂತ ಮೇಲ್ಪಟ್ಟ ಇತರ 10 ಮೀನುಗಳೊಂದಿಗೆ ಗುರುತಿಸಲಾಗಿತ್ತು. ಈ ಮೀನುಗಳಲ್ಲಿ 79 ವರ್ಷದ ರೆಡ್ ಬಾಸ್ ಕೂಡಾ ಸೇರಿದೆ.

ಸಾಮಾನ್ಯವಾಗಿ ಪಶ್ಚಿಮ ಆಸ್ಟ್ರೇಲಿಯಾ ಹಾಗೂ ಚಾಗೋಸ್ ದ್ವೀಪಸಮೂಹದಲ್ಲಿ ಮೂರು ರೀತಿಯ ಮೀನುಗಳನ್ನು ಮತ್ಸ್ಯಗಾರರು ಹಿಡಿಯುವುದಿಲ್ಲ. ರೆಡ್ ಬಾಸ್, ಮಿಡ್‌ನೈಟ್ ಸ್ನ್ಯಾಪರ್‌ ಹಾಗೂ ಬಿಳಿ ಮತ್ತು ಕಪ್ಪು ಸ್ನ್ಯಾಪರ್‌ಗಳನ್ನು ಮೀನುಗಾರರು ಅಷ್ಟಾಗಿ ಹಿಡಿಯುವುದಿಲ್ಲ ಎಂಬುದು ಸಂಶೋಧಕರ ಮಾತು. ಸದ್ಯ ಸಂಶೋಧಕರು ಈ ಮೀನುಗಳ ಬಗ್ಗೆ ಇನ್ನಷ್ಟು ಅಧ್ಯಯನ ನಡೆಸುತ್ತಿದ್ದಾರೆ.

`ಇದುವರೆಗೆ ಉಷ್ಣವಲಯದ ನೀರಿನಲ್ಲಿ ಕಂಡುಕೊಂಡ ಅತ್ಯಂತ ಹಿರಿಯ ಮೀನುಗಳಲ್ಲಿ 60 ವರ್ಷದ ಮೀನು ದಾಖಲೆ ಬರೆದಿತ್ತು. ಈ ದಾಖಲೆಯನ್ನು ಈ ಮಿಡ್‌ನೈಟ್ ಸ್ನ್ಯಾಪರ್ ಮುರಿದಿದೆ' ಎಂದು ಈ ಅಧ್ಯಯನದ ನೇತೃತ್ವ ವಹಿಸಿದ್ದ ಆಸ್ಟ್ರೇಲಿಯನ್ ಇನ್‌ಸ್ಟಿಟ್ಯೂಟ್ ಆಫ್ ಮೆರೈನ್ ಸೈನ್ಸ್ (ಎಐಎಂಎಸ್)ನ ಮತ್ಸ್ಯ ಜೀವಶಾಸ್ತ್ರಜ್ಞ ಡಾ. ಬ್ರೆಟ್ ಟೇಲರ್ ಹೇಳಿದ್ದಾರೆ.

ಇನ್ನು, ಈ ಅಪರೂಪದ ಮತ್ತು ಹಿರಿಯ ಮೀನಿನ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಎಲ್ಲರೂ ಬಲು ಕುತೂಹಲದಿಂದಲೇ ಈ ಮೀನನ್ನು ನೋಡಿ ಅಚ್ಚರಿಪಟ್ಟಿದ್ದಾರೆ.

Related Articles

Advertisement
Previous
Next Post »