ಪ್ರತಿ ತಿಂಗಳು ನಿಗದಿತ ಗಳಿಕೆ ಬೇಕೆಂದ್ರೆ ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿ

February 09, 2021
Tuesday, February 9, 2021

 


ಭವಿಷ್ಯದ ಬಗ್ಗೆ ಆಲೋಚನೆ ಮಾಡುವವರು ಉತ್ತಮ ಹೂಡಿಕೆ ಮಾಡಲು ಬಯಸ್ತಾರೆ. ಸುರಕ್ಷಿತ ಹಾಗೂ ಲಾಭ‌ ತರುವ ಹೂಡಿಕೆಗೆ ಮಹತ್ವ ನೀಡ್ತಾರೆ. ಹೂಡಿಕೆ ಮಾಡಲು ಅಂಚೆ ಕಚೇರಿ ಉತ್ತಮ ಆಯ್ಕೆ. ಅಂಚೆ ಕಚೇರಿಯ ಮಾಸಿಕ ಆದಾಯ ಯೋಜನೆ ಖಾತೆಯಲ್ಲಿ ಸಾಕಷ್ಟು ಲಾಭವಿದೆ. ಇದ್ರಲ್ಲಿ ಬಂಡವಾಳ ಸುರಕ್ಷಿತವಾಗಿರುತ್ತದೆ. ಪ್ರತಿ ತಿಂಗಳು ಉತ್ತಮ ಲಾಭ ಸಿಗುತ್ತದೆ. ಎಫ್ಡಿಗಿಂತ ಹೆಚ್ಚಿನ ಬಡ್ಡಿ ಸಿಗುತ್ತದೆ. ಇದನ್ನು ಯಾರು ಬೇಕಾದ್ರೂ ತೆರೆಯಬಹುದು.

ನಿಮ್ಮ ಮಗುವಿನ ಹೆಸರಿನಲ್ಲಿ ಕೂಡ ಖಾತೆ ತೆರೆಯಬಹುದು. ಮಕ್ಕಳ ವಯಸ್ಸು 10 ವರ್ಷಕ್ಕಿಂತ ಕೆಳಗಿದ್ದರೆ ಹೆತ್ತವರು ಖಾತೆ ತೆರೆಯಬಹುದು. 10 ವರ್ಷ ಮೇಲ್ಪಟ್ಟ ಮಕ್ಕಳು ತಮ್ಮ ಖಾತೆಯನ್ನು ತಾವೇ ನಿರ್ವಹಿಸಬಹುದು. 4.5 ಲಕ್ಷ ರೂಪಾಯಿವರೆಗೆ ನೀವು ಹೂಡಿಕೆ ಮಾಡಬಹುದು. ಕನಿಷ್ಠ 1,000 ರೂಪಾಯಿ ಠೇವಣಿ ಇಡಬಹುದು. ಖಾತೆ ಜಂಟಿಯಾಗಿದ್ದರೆ ಗರಿಷ್ಠ 9 ಲಕ್ಷ ರೂಪಾಯಿ ಠೇವಣಿ ಇಡಬಹುದು.

ಒಬ್ಬ ವ್ಯಕ್ತಿಯು ಒಂದಕ್ಕಿಂತ ಹೆಚ್ಚು ಖಾತೆಯನ್ನು ತೆರೆಯಬಹುದು.

ವಾರ್ಷಿಕವಾಗಿ ಶೇಕಡಾ 6.6 ರಷ್ಟು ಬಡ್ಡಿ ಸಿಗುತ್ತದೆ. ಮಾಸಿಕ ಆಧಾರದ ಮೇಲೆ ಬಡ್ಡಿ ಸಿಗುತ್ತದೆ. 9 ಲಕ್ಷ ರೂಪಾಯಿ ಠೇವಣಿ ಇಟ್ಟಿದ್ದರೆ ವಾರ್ಷಿಕ ಬಡ್ಡಿ ಸುಮಾರು 59,400 ರೂಪಾಯಿಯಾಗುತ್ತದೆ. ಪ್ರತಿ ತಿಂಗಳು ಸುಮಾರು 4,950 ರೂಪಾಯಿ ಸಿಗುತ್ತದೆ. ಮೆಚುರಿಟಿ ಅವಧಿಯ ನಂತರ ಇನ್ನೂ ಕೆಲವು ಬೋನಸ್‌ಗಳನ್ನು ಸೇರಿಸಲಾಗುತ್ತದೆ. ಪ್ರತಿ ತಿಂಗಳು ನೀವು ಇದನ್ನು ತೆಗೆದುಕೊಳ್ಳದಿದ್ದರೆ ಕೊನೆಯಲ್ಲಿ ಎಲ್ಲ ಹಣ ಒಟ್ಟಿಗೆ ಸಿಗುತ್ತದೆ. ಯೋಜನೆ ಅವಧಿ 5 ವರ್ಷವಾಗಿದೆ. ಬೇಕಾದಲ್ಲಿ ಈ ಅವಧಿಯನ್ನು ನೀವು ವಿಸ್ತರಿಸಬಹುದು. ಯಾವುದೇ ಅಂಚೆ ಕಚೇರಿಯಲ್ಲಿ ಈ ಖಾತೆ ತೆರೆಯಬಹುದು.

ಆಧಾರ್ ಕಾರ್ಡ್, ಪಾನ್ ಕಾರ್ಡ್, ವೋಟರ್ ಐಡಿ, ಪಡಿತರ ಚೀಟಿ, ಚಾಲನಾ ಪರವಾನಿಗೆ ಇವುಗಳಲ್ಲಿ ಒಂದನ್ನು ದಾಖಲೆ ರೂಪದಲ್ಲಿ ನೀಡಬೇಕು. ವಿಳಾಸಕ್ಕೆ ಪುರಾವೆ ನೀಡಬೇಕು. ಎರಡು ಪಾಸ್ಪೋರ್ಟ್ ಗಾತ್ರದ ಫೋಟೋ ನೀಡಬೇಕು.


Thanks for reading ಪ್ರತಿ ತಿಂಗಳು ನಿಗದಿತ ಗಳಿಕೆ ಬೇಕೆಂದ್ರೆ ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಪ್ರತಿ ತಿಂಗಳು ನಿಗದಿತ ಗಳಿಕೆ ಬೇಕೆಂದ್ರೆ ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿ

Post a Comment