ಪೊಲೀಸ್ ಠಾಣೆಯ ಮುಂಭಾಗವೇ ಶವ ಪತ್ತೆ :'ದೃಶ್ಯ' ಸಿನೆಮಾ ನೆನಪಿಸುವಂತಿದೆ ಕೃತ್ಯ!

February 16, 2021
Tuesday, February 16, 2021

 


ಬೆಂಗಳೂರು ಕಾಮಾಕ್ಷಿಪಾಳ್ಯ ಸಂಚಾರಿ ಠಾಣೆಯ ಮುಂಭಾಗದ ಹೆಚ್​.ಬಿ.ಕಲ್ಯಾಣ ಮಂಟಪದ ಬಳಿಯ ಚರಂಡಿ ದುರಸ್ತಿ ವೇಳೆ ಬಿಬಿಎಂಪಿ ಸಿಬ್ಬಂದಿಗೆ ಶವವೊಂದು ಪತ್ತೆಯಾಗಿದ್ದು, ವಿಜಯನಗರ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದ್ದಾರೆ. ಚರಂಡಿಯಲ್ಲಿ ಹಲವು ದಿನಗಳಿಂದ ಸರಾಗವಾಗಿ ನೀರು ಹೋಗುತ್ತಿರಲಿಲ್ಲ. ಇದರಿಂದ‌ ಸುತ್ತಮುತ್ತಲಿನ ಪ್ರದೇಶ ವಾಸನೆಯಿಂದ ಕೂಡಿತ್ತು.

ಈ ಸಂಬಂಧ ಬಿಬಿಎಂಪಿ ಸಿಬ್ಬಂದಿ ಚರಂಡಿಯಲ್ಲಿ ಹೂಳು ತೆಗೆಯಲು ಮೋರಿಯ ಛಾವಣಿ ತೆಗೆಯಲು ಮುಂದಾಗುತ್ತಿದ್ದಂತೆ ಶವದ ಕಳೇಬರ ಕಂಡು ಆತಂಕಕ್ಕೆ ಒಳಗಾಗಿದ್ದಾರೆ. 2 ವರ್ಷಕ್ಕೂ ಹಿಂದೆಯೇ ಮಹಿಳೆ ಶವವನ್ನು ಚರಂಡಿಯಲ್ಲಿ ಹಾಕಿರಬಹುದು ಎಂದು‌ ಪ್ರಾಥಮಿಕ ತನಿಖೆ ನಡೆಸಿದ ಪೊಲೀಸರು ತಿಳಿಸಿದ್ದಾರೆ. ಸದ್ಯ ಶವವನ್ನು ಸ್ಥಳದಿಂದ ತೆರವುಗೊಳಿಸಲಾಗಿದೆ‌.

ಮೃತಪಟ್ಟಿರುವವರ ಹೆಸರು, ವಿಳಾಸ ಗೊತ್ತಾಗಿಲ್ಲ. ಈ ಹಿಂದೆ‌ ದಾಖಲಾಗಿದ್ದ ನಾಪತ್ತೆ ಪ್ರಕರಣಗಳ ಮಾಹಿತಿ ಕಲೆ ಹಾಕಿರುವ ಪೊಲೀಸರು ಅನಾಥ ಶವದ ಮಾಹಿತಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.


Thanks for reading ಪೊಲೀಸ್ ಠಾಣೆಯ ಮುಂಭಾಗವೇ ಶವ ಪತ್ತೆ :'ದೃಶ್ಯ' ಸಿನೆಮಾ ನೆನಪಿಸುವಂತಿದೆ ಕೃತ್ಯ! | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಪೊಲೀಸ್ ಠಾಣೆಯ ಮುಂಭಾಗವೇ ಶವ ಪತ್ತೆ :'ದೃಶ್ಯ' ಸಿನೆಮಾ ನೆನಪಿಸುವಂತಿದೆ ಕೃತ್ಯ!

Post a Comment