ಕೆಎನ್ಎನ್ಡಿಜಿಟಲ್ಡೆಸ್ಕ್: ಮನುಷ್ಯನ ವ್ಯಕ್ತಿತ್ವವನ್ನ ಹಲವಾರು ವಿಧದಲ್ಲಿ ಪರೀಕ್ಷಿಸಬಹುದು. ಅದು ಪಾದದ ಮೂಲಕವೂ ಸಾಧ್ಯ. ಹೌದು. ಹೆಬ್ಬೆರಳಿನಿಂದ ಕಿರುಬೆರಳಿನವರೆಗೂ ಏರಿಕೆಯಿಂದ ಇಳಿಕೆ ಕ್ರಮದವರೆಗೂ ನಿಮ್ಮ ಬೆರಳುಗಳಿದ್ದರೆ ನೀವುಗಳು ಏಕಾಂತ ಬಯಸುವ ವ್ಯಕ್ತಿಯಾಗಿದ್ದೀರಿ ಹಾಗೂ ಶಾಂತ ಪ್ರಿಯರು ಎಂದರ್ಥ.
ನಿಮ್ಮ ಪಾದದಲ್ಲಿ ಎಲ್ಲ ಬೆರಳುಗಳು ಸಮಾನಾಗಿದ್ದರೆ ನೀವು ಸಮಾಧಾನ ವ್ಯಕ್ತಿಯಾಗಿರುತ್ತೀರಿ ಎಂದರ್ಥ. ನಂಬಿಕೆಗೆ ಅರ್ಹರಾದ ವ್ಯಕ್ತಿಯಾಗಿರುತ್ತೀರಿ ಹಾಗೂ ವಾಸ್ತವವಾಗಿ ವಿಚಾರ ಮಾಡುವಂತ ವ್ಯಕ್ತಿಯಾಗಿರುತ್ತೀರಿ. ನಿಮ್ಮ ಪಾದದಲ್ಲಿನ ಹೆಬ್ಬೆರಳಿನ ಪಕ್ಕದ ಬೆರಳು ಹೆಬ್ಬೆರಳಿಗಿಂತ ಉದ್ದವಾಗಿದ್ದರೆ ನೀವು ಕಲಾತ್ಮಕ ವ್ಯಕ್ತಿಯಾಗಿರುತ್ತೀರಿ ಎಂದರ್ಥ. ನೀವು ಭಾವನಾತ್ಮಕ ಜೀವಿಗಳಾಗಿದ್ದೀರಿ ಎಂದರ್ಥ.
ನಿಮ್ಮ ಪಾದದಲ್ಲಿ ಕಿರುಬೆರಳು ಹಾಗೂ ಅದರ ಪಕ್ಕದ ಬೆರಳು ಯಾವಾಗಲೂ ಜೊತೆಗೂಡಿಕೊಂಡಿದ್ದರೆ ನೀವು ಪ್ರಶಾಂತ ಸ್ವಭಾವದವರರಾಗಿರುತ್ತೀರಿ. ಹಾಗೂ ನಿಮ್ಮ ಜೀವನ ಅತ್ಯಂತ ನಿಖರವಾಗಿ ಊಹಿಸಬಹುದು. ನಿಮ್ಮ ಪಾದದಲ್ಲಿರುವ ಕಿರು ಬೆರಳು ಎಲ್ಲ ಬೆರಳಿನಿಂದ ಹೊರತಾಗಿ ಜೀವಿಸುತ್ತಿದ್ದರೆ ನೀವುಗಳು ಸಾಹಸಿಗಳಾಗಿರುತ್ತೀರಿ ಎಂದರ್ಥ. ಹಾಗೂ ನೀವು ಕಾಲಕ್ಕೆ ತಾಕಾ ರೀತಿಯಲ್ಲಿ ಜೀವನ ಕ್ರಮವನ್ನುಬದಲಿಸಿಕೊಳ್ಳುತ್ತೀರಾ ಎಂದರ್ಥ.
ನಿಮ್ಮ ಪಾದದ ಕಿರುಬೆರಳು ಅತ್ಯಂತ ಚಿಕ್ಕದಾಗಿದೆಯೇ..? ಹಾಗಿದ್ದರೆ ನೀವು ಹೆಚ್ಚಾಗಿ ಸಾರ್ವಜನಿಕ ಅಭಿಪ್ರಾಯ ಪರಿಗಣಿಸುವುದಿಲ್ಲ. ನೀವು ನಿಮ್ಮ ಅಭಿಪ್ರಾಯವನ್ನು ಮಾತ್ರ ಪರಿಗಣನೆಗೆ ತೆಗೆದುಕೊಂಡು ನಿಮ್ಮ ಜೀವನ ನಡೆಸುತ್ತೀರಿ. ನಿಮ್ಮ ಪಾದದ ಮಧ್ಯದ ಬೆರಳು ಹೊರ ಮುಖ ಮಾಡಿದೆಯೇ..?ಹಾಗಿದ್ದರೆ ನೀವು ನಿಮ್ಮ ಜೀವನದಲ್ಲಿ ಎಲ್ಲವನ್ನ ಅತ್ಯಂತ ಯೋಜಿತವಾಗಿ ನೆರವೇರಿಸಿಕೊಳ್ಳುತ್ತೀರಿ ಹಾಗೂ ಎಲ್ಲ ಕೆಲಸಗಳನ್ನು ನಿಮ್ಮ ನಿಯಂತ್ರಣದಲ್ಲಿಡಲು ಬಯಸುತ್ತೀರಿ.. ನಿಮ್ಮ ಮಧ್ಯದ ಬೆರಳಿಗೂ ಹಾಗೂ ತೋರ್ ಬೆರಳಿಗೂ ನಡುವೆ ಅಂತರವಿದ್ದರೆ ನೀವು ಅದ್ಭುತ ರಾಜ ತಾಂತ್ರಿಕ, ಅದ್ಭುತ ವಿಶ್ಲೇಷಕ ಹಾಗೂ ಬುದ್ದಿವಂತ ವ್ಯಾಪಾರಿಗಳಾಗುತ್ತೀರಿ.
EmoticonEmoticon