ನಾಲ್ಕು ದಿನದ ಹಿಂದೆ ಮನೆಬಿಟ್ಟು ಓಡಿಹೋದ ಪ್ರೇಮಿಗಳಿಬ್ಬರ ಮೃತದೇಹ ಕಾಡಿನಲ್ಲಿ ಪತ್ತೆ!

February 28, 2021

 


ಹಾವೇರಿ: ಕಾಡಿನಲ್ಲಿ ಪ್ರೇಮಿಗಳಿಬ್ಬರ ಮೃತ ದೇಹ ಪತ್ತೆಯಾಗಿದ್ದು, ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗುತ್ತಿದೆ.

ಹಾವೇರಿ ತಾಲೂಕಿನ ಬಸಾಪುರ ಗ್ರಾಮದ ಬಳಿಯ ವಾಟರ್ ಟ್ಯಾಂಕ್ ಹತ್ತಿರ ಘಟನೆ ನಡೆದಿದ್ದು, ಮೃತ ದೇಹಗಳ ಬಳಿ ವಿಷದ ಬಾಟಲಿ ಪತ್ತೆಯಾಗಿದೆ. ನೇತ್ರಾ ಬಾಳಿಕಾಯಿ (17) ಹಾಗೂ ಪ್ರವೀಣ ಬಾಗಿಲದ (24) ಮೃತಪಟ್ಟ ಪ್ರೇಮಿಗಳು. ಇದು ಕೊಲೆಯೊ, ಆತ್ಮಹತ್ಯೆಯೊ ಎನ್ನುವುದು ಪೋಲಿಸರ ತನಿಖೆಯಿಂದಲೇ ಪತ್ತೆಯಾಗಬೇಕಿದೆ.

ಮೃತ ಪ್ರೇಮಿಗಳು ಐದಾರು ವರ್ಷದಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದರು ಎನ್ನಲಾಗಿದ್ದು, ಕಳೆದ ನಾಲ್ಕೈದು ದಿನಗಳ ಹಿಂದೆ ಮನೆಯಿಂದ ಓಡಿ ಹೋಗಿದ್ದರು.

ಎರಡು ಮೂರು ದಿನಗಳ ಹಿಂದೆ ವಿಷ ಕುಡಿದು ಮೃತಟ್ಟಿರುವ ಶಂಕೆ ಇದ್ದು, ಸ್ಥಳಕ್ಕೆ ಪೊಲೀಸರ ಭೇಟಿ ಪರೀಶೀಲನೆ ನಡೆಸಿದ್ದಾರೆ.

ಗುತ್ತಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.


Related Articles

Advertisement
Previous
Next Post »