ಹಲಸಿನ ಹಣ್ಣಿನಿಂದ ಈ ಹತ್ತು ಲಾಭಗಳನ್ನು ಪಡೆದುಕೊಳ್ಳಿ

February 26, 2021
Friday, February 26, 2021

 


ಹಲಸಿನ ಹಣ್ಣು ಯಾರಿಗೆ ತಾನೇ ಇಷ್ಟ ಆಗಲ್ಲ ಹೇಳಿ ಎಲ್ಲರೂ ಇಷ್ಟ ಪಟ್ಟು ತಿನ್ನುವ ಹಣ್ಣು ಹಲಸಿನ ಹಣ್ಣು. ಚಳಿಗಾಲದ ಅಂತ್ಯ ಹಾಗೂ ಬೇಸಿಗೆಯ ಆರಂಭದಲ್ಲಿ ಆಗುವ ಹಲಸು ಗಾತ್ರದಲ್ಲಿ ಬಹಳ ದೊಡ್ಡದಾಗಿ ಇರುತ್ತದೆ. ಈ ಹಣ್ಣು ಹೇಗೆ ಗಾತ್ರದಲ್ಲಿ ದೊಡ್ಡ ಸ್ಥಾನವನ್ನು ಪಡೆದುಕೋಂಡಿದೆಯೋ ಹಾಗೆ ಆರೋಗ್ಯದ ವಿಷಯದಲ್ಲೂ ಕೂಡ ಬಹು ಮಹತ್ತರದ ಸ್ಥಾನವನ್ನು ಪಡೆದುಕೊಂಡಿದೆ. ಕೆಲವರು ಈ ಹಣ್ಣನ್ನು ತಿನ್ನುವುದರಿಂದ ಹೊಟ್ಟೆ ಉಬ್ಬರ ಉಂಟಾಗತ್ತೆ ಅಂತ ಹೇಳ್ತಾರೆ. ನಿಜ ಯಾವುದನ್ನೇ ಆದರೂ ಮಿತಿ ಮೀರಿ ಅಗತ್ಯಕ್ಕಿಂತ ಹೆಚ್ಚು ತಿಂದರೆ, ತೊಂದರೆಗಳು ಕಾಡುವುದು ಸಹಜ. ಆದರೆ ಮಿತಿಯಲ್ಲಿ ತಿಂದರೆ ಆರೋಗ್ಯಕ್ಕೆ ಅತ್ಯುತ್ತಮ. ಹಲಸಿನ ಹಣ್ಣು ಬಾಂಗ್ಲಾದೇಶದ ರಾಷ್ಟ್ರೀಯ ಹಣ್ಣು ಎಂಬ ಖ್ಯಾತಿಯನ್ನೂ ಪಡೆದುಕೊಂಡಿದೆ. ಇದು ಹೆಚ್ಚಾಗಿ ಉಷ್ಣ ವಲಯದಲ್ಲಿ ಬೆಳೆಯುತ್ತೆ. ಹಲಸಿನ ಹಣ್ಣು, ಕಾಯಿ, ಬೀಜ ಎಲ್ಲವೂ ಆಹಾರ ಪದಾರ್ಥಗಳ ಬಳಕೆಗೆ ಬರುತ್ತವೆ.

ಇದರಲ್ಲಿ ಸಮೃದ್ಧವಾದ ಸಪೋನಿಯಂ, ಲಿಜ್ಞಾನ್ಸ್, ಐಸೋಪ್ಲ್ಯಾವೇನನ್ ಗಳನ್ನು ಹೊಂದಿದೆ. ಇವೆಲ್ಲವೂ ಆರೋಗ್ಯ ಸಮಸ್ಯೆಗಳಾದ ಕ್ಯಾನ್ಸರ್ ಜೀವ ಕೋಶಗಳು ರಾಡಿಕಲ್ ಜೀವಕೋಶಗಳನ್ನು ತೆಗೆಯಲು ಸಹಾಯಕಾರಿ.

ನಿಯಮಿತ ಸೇವನೆಯಿಂದ ಹೊಟ್ಟೆ ಹುಣ್ಣು, ಎಂಡೋಮೆಟ್ರಿಯಲ್ ಕ್ಯಾನ್ಸರ್, ಶ್ವಾಸಕೋಶದ ಸಮಸ್ಯೆಗಳು ಅನೇಕ ಆರೋಗ್ಯ ಸಮಸ್ಯೆಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು. ಫೈಬರ್ ಅಂಶ ಹೆಚ್ಚು ಇರುವುದರಿಂದ ಮಲಬದ್ಧತೆ ಸಮಸ್ಯೆಯನ್ನು ಇದು ನಿವಾರಣೆ ಮಾಡುತ್ತದೆ. ಹಲಸಿನ ಹಣ್ಣಿನ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿದರೆ ಮುಖದ ಹಲವಾರು ಸಮಸ್ಯೆಗಳು ನಿವಾರಣೆ ಆಗುತ್ತವೆ. ಹೀಗೆ ಅದ್ಭುತ ಆರೋಗ್ಯ ಗುಣಗಳನ್ನು ಹೊಂದಿರುವ ಈ ಹಲಸಿನ ಹಣ್ಣು ನಮ್ಮ ಆರೋಗ್ಯವನ್ನು ಹೇಗೆ ಸುಧಾರಿಸತ್ತೆ ಅನ್ನೋದನ್ನ. ನೋಡೋಣ.

ಮೊದಲಿಗೆ ಹಲಸಿನ ಹಣ್ಣು ಮನಮ್ಮ ದೇಹದ ಚರ್ಮವನ್ನು ಆರೋಗ್ಯವಾಗಿ ಕಾಲಾಡುವಲ್ಲಿ ಅತ್ಯುತ್ತಮ ಸಹಾಕಾರವನ್ನು ನೀಡುತ್ತದೆ. ಇದರ ಸೇವನೆಯಿಂದ ಚರ್ಮದ ಸುಕ್ಕನ್ನು ತೆಗೆದು ನೈಸರ್ಗಿಕ ಹೊಳಪನ್ನು ಪಡೆಯಬಹುದು. ಚರ್ಮಕ್ಕೆ ಸಂಭಂಧಿಸಿದ ಅನೇಕ ಸಮಸ್ಯೆಗಳನ್ನು ಇದು ನಿವಾರಣೆ ಮಾಡುತ್ತದೆ. ತಣ್ಣಗಿನ ಹಾಲಿನಲ್ಲಿ ಹಲಸಿನ ಹಣ್ಣಿನ ಸೊಳೆಗಳನ್ನು ನೆನೆಸಿಟ್ಟು ನಂತರ ರುಬ್ಬಿ ಪೇಸ್ಟ್ ಮಾಡಿಕೊಂಡು ಮುಖಕ್ಕೆ ಸುಕ್ಕು ಗಟ್ಟಿದ ಜಾಗಕ್ಕೆ ಹಚ್ಚುವುದರಿಂದ 6 ದಿನಗಳಲ್ಲಿ ಪರಿಣಾಮಕಾರಿ ಅಂಶ ದೊರೆಯುತ್ತದೆ. ಹಣ್ಣನ್ನು ಸೇವಿಸುವುದರಿಂದ ಮಲಬದ್ಧತೆಯನ್ನು ನಿವಾರಿಸಬಹುದು. ಶುಷ್ಕವಾಗಿರುವ ಹಲಸಿನ ಹಣ್ಣಿನ ಬೀಜವನ್ನು ಜೇನುತುಪ್ಪದಲ್ಲಿ ನೆನೆಸಿಟ್ಟು ನಂತರ ಪೇಸ್ಟ್ ಮಾಡಿ ನಿಯಮಿತವಾಗಿ ಇದನ್ನ ಮುಖಕ್ಕೆ ಲೇಪಿಸುವುದರಿಂದ ವಯಸ್ಸಾದ ಕಲೆಯನ್ನು ಇದು ಹೋಗಲಾಡಿಸುತ್ತದೆ. ಹಲಸಿನ ಹಣ್ಣು ಉತ್ತಮ ಪ್ರೊಟೀನ್ ನ ಮೂಲ. ನಾವು ದಿನ ನಿತ್ಯ ಸೇವಿಸುವ ಫ್ರೂಟ್ ಸಲಾಡ್, ಆಹಾರ ಉಪಹಾರಗಳಲ್ಲಿ ಹಲಸಿನ ಹಣ್ಣನ್ನು ಸೇರಿಸಿ ಸೇವಿಸಿದರೆ ಉತ್ತಮ.

ಇದನ್ನು ಉಷ್ಣ ವಲಯದಲ್ಲಿ ಬೆಳೆಯುವುದರಿಂದ ಅತ್ಯಂತ ಪ್ರೊಟೀನ್ ಗಳನ್ನು ಒಳಗೊಂಡು ಇರತ್ತೆ. ಹಸಿವಾದಾಗ ತಿನ್ನಲು ಅತ್ಯುತ್ತಮ ಆಹಾರ. ನಿಯಮಿತ ಸೇವನೆಯಿಂದ ದೇಹಕ್ಕೆ ಪ್ರೊಟೀನ್ ಗಳನ್ನು ಒದಗಿಸುತ್ತದೆ. ಅಷ್ಟೇ ಅಲ್ಲದೇ ಕೂದಲಿನ ಆರೋಗ್ಯಕ್ಕೆ, ಕೂದಲ ನೈಸರ್ಗಿಕ ಬೆಳವಣಿಗೆಗೆ, ರಕ್ತ ಪರಿಚಲನೆಗೆ ಅಗತ್ಯವಾಗಿ ಇರತ್ತೆ. ರಕ್ತ ಪರಿಚಲನೆಯನ್ನು ಸೂಕ್ತವಾಗಿ ನಿರ್ವಹಿಸುವಲ್ಲಿ ಹಲಸಿನ ಬೀಜ ಅತ್ಯುತ್ತಮ ಕಾರ್ಯ ನಿರ್ವಹಿಸುತ್ತದೆ. ನೈಸರ್ಗಿಕವಾಗಿ ಒಂದಿಷ್ಟು ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ನಿತ್ಯವೂ ಒಂದಿಷ್ಟು ಹಲಸಿನ ಸೊಳೆಯನ್ನು ತಿನ್ನುವುದು ಒಳ್ಳೆಯದು. ಇದರಲ್ಲಿ ವಿಟಮಿನ್ ಎ ಇದ್ದು, ಕೇಶ ರಾಶಿ ಬೆಳೆಯಲು ಉತ್ತಮ ಸಹಾಯಕಾರಿ. ಹಲಸಿನ ಹಣ್ಣು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಲ್ಲಿ ವಿಟಮಿನ್ ಸಿ ಅಧಿಕವಾಗಿ ಇರುವುದರಿಂದ ರೋಗ ನಿರೋಧಕ ಶಕ್ತಿಯನ್ನು ದ್ವಿಗುಣ ಗೊಳಿಸಿ ಸಾಮಾನ್ಯವಾಗಿ ಕಾಡುವ ಶೀತ, ನೆಗಡಿ, ಜ್ವರ ಕೆಮ್ಮುಗಳನ್ನು ತಡೆದು ದೇಹದ ಸುತ್ತ ವೈರಸ್ ಉಳಿಯದಂತೆ ರಕ್ಷಣೆ ನೀಡುತ್ತದೆ.

ಹಲಸಿನ ಹಣ್ಣಿನಲ್ಲಿ ಅಧಿಕ ಪ್ರಮಾಣದಲ್ಲಿ ಕಾರ್ಬೋ ಹೈಡ್ರೇಟ್ ಇರುವುದರಿಂದ ಇದರ ಸೇವನೆಯು ಯಾವುದೇ ರೀತಿಯ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುವುದಿಲ್ಲ. ಅತ್ಯುತ್ತಮ ನೈಸರ್ಗಿಕ ಆಹಾರ ಇದಾಗಿದೆ . ಇನ್ನೂ ಹಲಸಿನ ಹಣ್ಣಿನ ವಿವಿಧ ಆಂಟಿ ಆಕ್ಸಿಡೆಂಟ್ ಗಳು ಚರ್ಮ ಸುಕ್ಕುಗಟ್ಟದಂತೆ ತಡೆದು ವೃದ್ಧಾಪ್ಯವನ್ನು, ಚರ್ಮ ಕಾಂತಿ ಕಳೆದುಕೊಳ್ಳುವುದನ್ನು ತಡೆಯುತ್ತದೆ. ಚರ್ಮಕ್ಕೆ ಅಗತ್ಯವಾದ ಆರ್ಧ್ರತೆ ಮತ್ತು ಪೋಷಣೆಯನ್ನು ನೀಡುತ್ತದೆ. ವಿಶೇಷವಾಗಿ ಮುಖಕ್ಕೆ ಕೋಮಲತೆ ನೀಡುವ ಮೂಲಕ ಬಹಳ ವರ್ಷಗಳವರೆಗೆ ತಾರುಣ್ಯ ಕಾಪಾಡಲು ಸಹಾಯ ಮಾಡುತ್ತದೆ. ರಕ್ತದ ಒತ್ತಡವನ್ನು ಇದು ನಿಯಂತ್ರಿಸುತ್ತದೆ. ಪೊಟ್ಯಾಶಿಯಂ ಅಂಶವು ದೇಹದಲ್ಲಿ ಇರುವ ಸೋಡಿಯಂ ಮಟ್ಟವನ್ನು ಕಡಿಮೆ ಗೊಳಿಸುವುದರಿಂದ ನಮ್ಮ ದೇಹದ ರಕ್ತದ ಒತ್ತಡ ಸಮ ಪ್ರಮಾಣದಲ್ಲಿ ಇರುತ್ತದೆ. ಅಷ್ಟೇ ಅಲ್ಲದೆ ಹೃದಯಕ್ಕೆ ಸಂಬಂಧಿಸಿದ ಹಲವು ಕಾಯಿಲೆಗಳನ್ನು ಸಹ ಇದು ತಡೆಗಟ್ಟುತ್ತದೆ. ಸೂಕ್ತ ಜೀರ್ಣ ಕ್ರಿಯೆಗೆ ಸಹಕರಿಸುತ್ತದೆ. ಉತ್ತಮ ನಾರಿನ ಅಂಶ ಹಿಂದಿದ್ದು ಜೀರ್ಣ ಪ್ರಕ್ರಿಯೆಯನ್ನು ಸರಾಗ ಗೊಳಿಸುತ್ತದೆ. ಮಲಬದ್ಧತೆಯನ್ನು ಸಹ ತಡೆಯುತ್ತದೆ. ಸರಿಯಾದ ಚಯಾಪಚಯ ಕ್ರಿಯೆಗೆ ಉತ್ತೇಜಿಸಿ, ಕರುಳಿಗೆ ಸಂಬಂಧಿಸಿದ ಅಪಾಯವನ್ನು ತಡೆಯಲು ಸಹ ಸಹಾಯಕಾರಿ ಆಗಿದೆ. ಅಷ್ಟೇ ಅಲ್ಲದೇ ಹೊಟ್ಟೆಯ ಹುಣ್ಣು ಕೂಡಾ ಉಂಟಾಗದಂತೆಯೇ ಇದು ಕಾಪಾಡುತ್ತದೆ. ಮುಖದ ನೆರಿಗೆಗಳನ್ನ ದೂರ ಮಾಡಲು ಹಲಸಿನ ಹಣ್ಣು ಸಹಾಯ ಮಾಡುತ್ತದೆ. ಹಲಸಿನ ಹಣ್ಣಿನ ಸೊಳೆಯನ್ನು ತೆಗೆದು ಪೇಸ್ಟ್ ಮಾಡಿ ಅದನ್ನ ಹಾಲಿನ ಜೊತೆ ಮಿಕ್ಸ್ ಮಾಡಿ ಹಚ್ಚಿಕೊಳ್ಳುವುದರಿಂದ ಮುಖದಲ್ಲಿನ ನೆರಿಗೆಗಳು ಮಾಯ ಆಗುತ್ತವೆ. ತ್ವಚೆಯ ಮೇಲೆ ಆಗುವ ಗಾಯಗಳನ್ನೂ ಸಹ ಹಲಸಿನ ಹಣ್ಣು ಹೋಗಲಾಡಿಸುತ್ತದೇ. ಹಲಸಿನ ಹಣ್ಣಿನ ಪೇಸ್ಟ್ ಗೆ ಒಂದು ಚಮಚ ಜೇನುತುಪ್ಪವನ್ನು ಬೆರೆಸಿ ಗಾಯದ ಮೇಲೆ ಹಚ್ಚುವುದರಿಂದ ಸ್ವಲ್ಪ ಸಮಯದಲ್ಲೇ ಅದರ ಬದಲಾವಣೆ ಕಂಡುಬರುತ್ತದೆ. ಹೀಗೆ ಹಲಸಿನ ಹಣ್ಣಿನಿಂದ ಇನ್ನೂ ಅನೇಕ ಪ್ರಯೋಜನಗಳು ಇವೆ.


Thanks for reading ಹಲಸಿನ ಹಣ್ಣಿನಿಂದ ಈ ಹತ್ತು ಲಾಭಗಳನ್ನು ಪಡೆದುಕೊಳ್ಳಿ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಹಲಸಿನ ಹಣ್ಣಿನಿಂದ ಈ ಹತ್ತು ಲಾಭಗಳನ್ನು ಪಡೆದುಕೊಳ್ಳಿ

Post a Comment