ಕಾಲೇಜಿಗೆ ಚಕ್ಕರ್, 'ಬಾರ್'ನಲ್ಲಿ ಹಾಜರ್ : ಸಿಕ್ಕಿಬಿದ್ದ ವಿದ್ಯಾರ್ಥಿಗಳಿಗೆ 'ಪ್ರಿನ್ಸಿಪಾಲ್ ಪುಲ್ ಕ್ಲಾಸ್'.!

February 06, 2021

 


ಕೊಡಗು : ಕಾಲೇಜಿಗೆ ಚಕ್ಕರ್ ಹಾಕಿ, ಬಾರ್ ನಲ್ಲಿ ಹಾಜರಾಗಿ ಮೋಜು ಮಸ್ತಿ ಮಾಡುತ್ತಿದ್ದಂತ ವಿದ್ಯಾರ್ಥಿಗಳ ಬಗ್ಗೆ ಕೇರ್ ತಗೊಂಡ ಪ್ರಿನ್ಸಿಪಾಲರು, ದಿಢೀರ್ ಬಾರ್ ಗೆ ಭೇಟಿ ನೀಡಿದ್ದಾರೆ. ಇಂತಹ ಸಂದರ್ಭದಲ್ಲಿ ಸಿಕ್ಕಿಬಿದ್ದಂತ ವಿದ್ಯಾರ್ಥಿಗಳಿಗೆ ಸಖತ್ ಕ್ಲಾಸ್ ತಗೊಂಡಿದ್ದಲ್ಲದೇ, ಅವರ ಪೋಷಕರನ್ನು ಕರೆಸಿ, ವಾರ್ನಿಂಗ್ ಮಾಡಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ.

ಖಾಸಗಿ ಕಾಲೇಜಿನ ವಿದ್ಯಾರ್ಥಿಗಳು ಕೊರೋನಾ ಸಂಕಷ್ಟದ ನಂತ್ರ ತಡವಾಗಿ ಆರಂಭವಾಗಿದ್ದರೂ, ಕಾಲೇಜಿಗೆ ಮಾತ್ರ ಹಾಜರಾಗುತ್ತಿರಲಿಲ್ಲ. ಆದ್ರೇ ಬಾರ್ ನಲ್ಲಿ ಮಾತ್ರ ಹಾಜರಾಗಿ, ಮೋಜು ಮಸ್ತಿ ಮಾಡ್ತಾ ಇದ್ದರಂತೆ.

ಈ ವಿಷಯ ತಿಳಿದು ಪ್ರಾಂಶುಪಾಲರಾದಂತ ಫಾದರ್ ಬಾರ್ ಗೆ ದಿಢೀರ್ ಭೇಟಿ ನೀಡಿದ್ದಾರೆ.

ಬೆಳ್ಳಿಗ್ಗೆ 10 ಗಂಟೆಗೆ ಬಾರ್ ಗೆ ಹಾಜರಾಗಿ, ಮದ್ಯಪಾನ ಮಾಡುತ್ತಿದ್ದಂತ ವಿದ್ಯಾರ್ಥಿಗಳನ್ನು ಕಂಡ ಪ್ರಿನ್ಸಿಪಾಲ್, ಕೆಂಡಾಮಂಡಲರಾಗಿದ್ದಾರೆ. ಬಾರ್ ನಲ್ಲಿ ಗುಂಡು ತುಂಡು ಪಾರ್ಟಿ ಮಾಡುತ್ತಿದ್ದಂತ ವಿದ್ಯಾರ್ಥಿಗಳನ್ನು ಅಲ್ಲಿಯೇ ಸಖತ್ ಕ್ಲಾಸ್ ತಗೊಂಡಿದ್ದಾರೆ. ಆ ಬಳಿಕ ನಾಲ್ವರು ಪದವಿ ವಿದ್ಯಾರ್ಥಿಗಳ ಪೋಷಕರನ್ನು ಕರೆಸಿದಂತ ಅವರು, ಪೋಷಕರಿಗೆ ವಾರ್ನಿಂಗ್ ಮಾಡಿದ್ದಾರೆ. ಈ ಮೂಲಕ ಜಾಲಿ ಬಾರ್ ನಲ್ಲಿ ಸೇರಿದ್ದಂತ ಹುಡುಗರಿಗೆ ಪ್ರಿನ್ಸಿಪಾಲರು ಸಖತ್ ಬಿಸಿ ಮುಟ್ಟಿಸಿದ್ದಾರೆ.


Related Articles

Advertisement
Previous
Next Post »