ಚಿರತೆ ಹಾಗೂ ನಾಯಿ ನಡುವೆ ಭೀಕರ ಕಾದಾಟ: ಎರಡೂ ಪ್ರಾಣಿಗಳ ಸಾವು!

February 05, 2021
Friday, February 5, 2021

 


ಮಂಡ್ಯ: ಚಿರತೆ ಹಾಗೂ ನಾಯಿಗಳ ನಡುವೆ ಕಾದಾಟ ನಡೆದು ಎರಡೂ ಪ್ರಾಣಿಗಳು ಸಾವನ್ನಪ್ಪಿದ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಅಣ್ಣೆಚಾಕನಹಳ್ಳಿ ಗ್ರಾಮದಲ್ಲಿ ಕಳೆದ ರಾತ್ರಿ ನಾಯಿ ಹಾಗೂ ಎಂಟು ತಿಂಗಳ ಚಿರತೆ ಮರಿ ಸೆಣೆಸಾಡಿದ್ದವು. ಆದರೆ ಈ ಕಾದಟದಲ್ಲಿ ಚಿರತೆ ಹಾಗೂ ನಾಯಿ ಎರಡು ಕೂಡಾ ಸಾವನ್ನಪ್ಪಿದೆ.

ವಿಷಯ ತಿಳಿದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿರತೆ ಹಾವಳಿಗೆ ಅಣ್ಣೇಚಾಕನಹಳ್ಳಿ ಗ್ರಾಮದಲ್ಲಿ ಭಯದ ವಾತಾವರಣ ಮೂಡಿದ್ದು, ಬೋನು ಇರಿಸಿ ಚಿರತೆ ಸೆರೆ ಹಿಡಿಯುವ ಭರವಸೆಯನ್ನು ಸ್ಥಳಕ್ಕೆ ಭೇಟಿ ನೀಡಿದ ಅರಣ್ಯಾಧಿಕಾರಿಗಳ ತಂಡ ನೀಡಿದೆ.


Thanks for reading ಚಿರತೆ ಹಾಗೂ ನಾಯಿ ನಡುವೆ ಭೀಕರ ಕಾದಾಟ: ಎರಡೂ ಪ್ರಾಣಿಗಳ ಸಾವು! | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಚಿರತೆ ಹಾಗೂ ನಾಯಿ ನಡುವೆ ಭೀಕರ ಕಾದಾಟ: ಎರಡೂ ಪ್ರಾಣಿಗಳ ಸಾವು!

Post a Comment