ಎಷ್ಟೇ ತಾಳ್ಮೆ ಇದ್ದವರಾದರೂ ಮಕ್ಕಳು ಮಾಡುವ ತಂಟೆ, ತರಲೆಗಳಿಗೆ ಕೆಲವೊಮ್ಮೆ ಬೇಸತ್ತು ಒಂದೇಟು ಹೊಡೆದು ಬಿಡುತ್ತಾರೆ. ಎಷ್ಟೇ ಬುದ್ದಿಮಾತು ಹೇಳಿದರೂ ಕೆಲವು ಮಕ್ಕಳು ಅದನ್ನು ಕೇಳುವುದೇ ಇಲ್ಲ. ಆಗ ಮನಸ್ಸಿಗೆ ಕಿರಿಕಿರಿ ಆಗಿ ಎರಡೇಟು ಹೊಡೆದೇ ಬಿಡುತ್ತಾರೆ. ಆದರೆ ಇದು ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮ ಬೀರುತ್ತದೆಯಂತೆ.
ಅಪರೂಪಕ್ಕೊಮ್ಮೆ ಅಥವಾ ಮಕ್ಕಳು ದೊಡ್ಡ ತಪ್ಪು ಮಾಡಿದಾಗ ಹೊಡೆಯುವುದಕ್ಕೂ ನಿಮ್ಮ ಸಿಟ್ಟು, ಒತ್ತಡಗಳ ಕಾರಣದಿಂದ ಹೊಡೆಯುವುದಕ್ಕೂ ತುಂಬ ವ್ಯತ್ಯಾಸವಿದೆ.
ಕೆಲವು ಪೋಷಕರು ಮಕ್ಕಳು ಮಾಡುವ ಚಿಕ್ಕ ಚಿಕ್ಕ ತಪ್ಪುಗಳಿಗೂ ಹೊಡೆಯುತ್ತಿರುತ್ತಾರೆ. ಅವರ ಮೇಲೆ ಅತಿಯಾದ ಶಿಸ್ತನ್ನು ಹೇರುತ್ತಾರೆ. ಇದು ತಪ್ಪು.
ಆದರೆ ಪ್ರತಿಸಲ ಅವರಿಗೆ ಹೊಡೆಯುತ್ತಾ ಇರುವುದರಿಂದ ಅವರ ಪುಟ್ಟ ಮನಸ್ಸು ಘಾಸಿಗೊಳ್ಳುತ್ತದೆ.
ನಿಮಗೆ ಕೋಪ ಬಂದಾಗ ಯಾವುದೇ ಕಾರಣಕ್ಕೂ ಅದನ್ನು ಮಕ್ಕಳ ಮುಂದೆ ಪ್ರದರ್ಶಿಸಬೇಡಿ. ಆದಷ್ಟು ಕಂಟ್ರೋಲ್ ಮಾಡಿಕೊಂಡು ಮಕ್ಕಳ ಜತೆ ಮಾತನಾಡಿ. ಅವರ ತಪ್ಪಿನ ಕುರಿತು ಮನವರಿಕೆ ಮಾಡಿ. ಮಾತಿನಲ್ಲಿಯೇ ಮುಗಿಯುವುದನ್ನು ಕೋಲಿನಲ್ಲಿ ಮುಗಿಸಬೇಡಿ. ಮಕ್ಕಳು ನಿಮ್ಮನ್ನು ನೋಡಿಯೇ ಕಲಿತುಕೊಳ್ಳುತ್ತಾರೆ.
EmoticonEmoticon