ಮನೆ, ನಿವೇಶನ ಇಲ್ಲದವರಿಗೆ ಗುಡ್ ನ್ಯೂಸ್: ಸರ್ವರಿಗೂ ಸೂರು ಯೋಜನೆಯಡಿ ಅರ್ಜಿ ಆಹ್ವಾನ

February 13, 2021
Saturday, February 13, 2021

 


ಚಿತ್ರದುರ್ಗ: ಹಿರಿಯೂರು ನಗರಸಭೆ ವ್ಯಾಪ್ತಿಯಲ್ಲಿ ವಾಸವಾಗಿರುವ ವಸತಿ, ನಿವೇಶನ ರಹಿತರಿಗೆ ಪ್ರಧಾನಮಂತ್ರಿ ಆವಾಸ್‍ಯೋಜನೆ(ನಗರ)-2022ರ ಸರ್ವರಿಗೂ ಸೂರು(ಎಹೆಚ್‍ಪಿ) ಉಪಘಟಕದಡಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಹಿರಿಯೂರು ನಗರಸಭೆ ವ್ಯಾಪ್ತಿಯ ಲಕ್ಕವ್ವನಹಳ್ಳಿ ಗ್ರಾಮದ ರಿ.ಸ.ನಂ: 35 ರಲ್ಲಿ ಲಭ್ಯವಿರುವ 20.09 ಎಕರೆ ಜಮೀನಿನಲ್ಲಿ ಜಿ+2 ಮಾದರಿಯ(ಬಹುಮಹಡಿ)1248 ಮನೆಗಳನ್ನು ನಿರ್ಮಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಅನುಮೋದನೆ ದೊರೆತ್ತಿದೆ.

ಈ ಮನೆಗಳನ್ನು ಹಿರಿಯೂರು ನಗರಸಭೆ ವ್ಯಾಪ್ತಿಯಲ್ಲಿ ವಾಸವಾಗಿರುವ ವಸತಿ, ನಿವೇಶನ ರಹಿತರಿಗೆ ನೀಡುವ ಸಲುವಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ವಸತಿ, ನಿವೇಶನ ರಹಿತ ಮಹಿಳಾ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದ್ದು, ವಿಧುರ, ವಿಕಲಚೇತನ, ಮಾಜಿ ಸೈನಿಕರು, ಸ್ವಾತಂತ್ರ್ಯ ಹೋರಾಟಗಾರರು, ವಿಶೇಷ ವರ್ಗದವರೂ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿಯನ್ನು ಹಿರಿಯೂರು ನಗರಸಭೆ ಕಚೇರಿಯಲ್ಲಿ ಫೆ. 9 ರಿಂದ 19 ರವರೆಗೆ ಪಡೆಯಬಹುದಾಗಿರುತ್ತದೆ. ಪೂರ್ಣ ಮಾಹಿತಿ ಮತ್ತು ದಾಖಲೆಗಳೊಂದಿಗೆ ಅರ್ಜಿಯನ್ನು ಫೆ.26 ರಿಂದ ಮಾರ್ಚ್ 8 ರಂದು ಸಂಜೆ 5.30ರೊಳಗೆ ನಗರಸಭೆಗೆ ಸಲ್ಲಿಸುವುದು, ನಂತರ ಬಂದ ಯಾವುದೇ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ ಎಂದು ಹಿರಿಯೂರು ನಗರಸಭೆ ಪೌರಯುಕ್ತರು ತಿಳಿಸಿದ್ದಾರೆ.


Thanks for reading ಮನೆ, ನಿವೇಶನ ಇಲ್ಲದವರಿಗೆ ಗುಡ್ ನ್ಯೂಸ್: ಸರ್ವರಿಗೂ ಸೂರು ಯೋಜನೆಯಡಿ ಅರ್ಜಿ ಆಹ್ವಾನ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಮನೆ, ನಿವೇಶನ ಇಲ್ಲದವರಿಗೆ ಗುಡ್ ನ್ಯೂಸ್: ಸರ್ವರಿಗೂ ಸೂರು ಯೋಜನೆಯಡಿ ಅರ್ಜಿ ಆಹ್ವಾನ

Post a Comment