ದಟ್ಟ ಕಾಡಿನಲ್ಲಿ ಜಾಗ್ವರ್-ಕರಿಚಿರತೆ ರೇಸ್: ಹೇಗಿದೆ ಗೊತ್ತಾ ಈ ರೋಚಕ ರೇಸ್?

February 11, 2021
Thursday, February 11, 2021

 


ಸ್ಪರ್ಧೆ ಅಂದರೆ ಎಲ್ಲರಲ್ಲೂ ಕುತೂಹಲ. ಅದರಲ್ಲೂ ಸಮಬಲರು, ಬಲಶಾಲಿಗಳ ನಡುವೆ ಸ್ಪರ್ಧೆ ಏರ್ಪಟ್ಟರಂತೂ ಜನರು ನೋಡಲು ಕಾತರ ವ್ಯಕ್ತಪಡಿಸುತ್ತಾರೆ. ಮನುಷ್ಯರ ನಡುವೆ, ಕಾರುಗಳ ನಡುವೆ, ಬೈಕುಗಳ ನಡುವೆ, ನಾಯಿಗಳ ನಡುವೆ, ಹಸುಗಳ ನಡುವೆ, ಎತ್ತಿನಗಾಡಿಗಳ ನಡುವೆ.. ಹೀಗೆ ನಾನಾ ತರಹದ ರೇಸ್ ಗಳನ್ನು ನೋಡಿದ್ದೀರಿ.

ಕಾಡಿನಲ್ಲಿ ಸಹಜವಾಗಿ ನಡೆಯುವ ರೇಸ್ ಗಳು ಇದಕ್ಕಿಂತಲೂ ರೋಚಕ. ಆದರೆ ಅದು ಕಣ್ಣಿಗೆ ಸಿಗುವುದು ಬಹು ಅಪರೂಪ. ಇಂತಹ ಅಪರೂಪದ ರೇಸ್ ಈಗ ಕ್ಯಾಮರಾ ಕಣ್ಣಿಗೆ ಸಿಕ್ಕಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ.

ಹೌದು, ವಿಶ್ವದ ಅತ್ಯಂತ ವೇಗದ ಹಾಗೂ ಬಲಿಷ್ಠ ಪ್ರಾಣಿಗಳ ಸಂತತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಜಾಗ್ವರ್ ಮತ್ತು ಕರಿಚಿರತೆ ನಡುವೆ ನಡೆದಿರುವ ರೇಸ್ ಅನ್ನು ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಸುಸಂತ ನಂದ ಅವರ ಕಣ್ಣಿಗೆ ಬಿದ್ದಿದೆ.

CLICK ಮಾಡಿಚಿರತೆಯ ವಿಡಿಯೋ ನೋಡಿ 

https://twitter.com/susantananda3/status/1359336396314472450?ref_src=twsrc%5Etfw%7Ctwcamp%5Etweetembed%7Ctwterm%5E1359336396314472450%7Ctwgr%5E%7Ctwcon%5Es1_c10&ref_url=http%3A%2F%2Fapi-news.dailyhunt.in%2F

ಸುಸಂತ ನಂದ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದು, ವನ್ಯಲೋಕದ ಹಲವು ಕುತೂಹಲಕಾರಿ ವಿಡಿಯೋಗಳನ್ನು ಹಂಚಿಕೊಳ್ಳುವ ಸುಸಂತ ನಂದ ಅವರು ಈ ಸಲ ಕರಿಚಿರತೆ ಮತ್ತು ಜಾಗ್ವರ್ ರೇಸ್‌ನಲ್ಲಿ ತೊಡಗಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಕಾಡಿನ ನಡುವೆ ಈ ಎರಡು ಬಲಶಾಲಿಗಳು ಓಡುವ ದೃಶ್ಯವೇ ಅದ್ಭುತವಾಗಿದೆ.

ಚಿರತೆ ಮತ್ತು ಜಾಗ್ವಾರ್‌ಗಳು ನೋಡಲು ಒಂದೇ ರೀತಿ ಇದ್ದರೂ ಅವುಗಳಲ್ಲಿ ತುಂಬಾ ವ್ಯತ್ಯಾಸಗಳಿವೆ. ಸೂಕ್ಷ್ಮವಾಗಿ ಗಮನಿಸಿದಾಗ ಈ ವ್ಯತ್ಯಾಸ ಕಾಣುತ್ತದೆ. ಜಾಗ್ವಾರ್ ಮತ್ತು ಚಿರತೆಗಳ ನಡುವಿನ ದೊಡ್ಡ ವ್ಯತ್ಯಾಸವೆಂದರೆ ಅವುಗಳ ದೈಹಿಕ ಗಾತ್ರ. ಚಿರತೆಗಳು ಸಾಮಾನ್ಯವಾಗಿ ಜಾಗ್ವಾರ್‌ಗಳಿಗಿಂತ ಚಿಕ್ಕದಾಗಿರುತ್ತವೆ.

ಜಾಗ್ವಾರ್‌ಗಳು ಸಾಮಾನ್ಯವಾಗಿ ಚಿರತೆಗಳಿಗಿಂತ ದೊಡ್ಡ ತಲೆಗಳನ್ನು ಹೊಂದಿರುತ್ತವೆ. ಈ ಎರಡೂ ಪ್ರಾಣಿಗಳು ಬೇಟೆಯಲ್ಲಿ ಪಳಗಿರುತ್ತವೆ. ಆದರೆ, ಚಿರತೆಗೆ ಮಾತ್ರ ತನ್ನ ಬೇಟೆಯ ಕಳೇಬರವನ್ನು ಎತ್ತಿಕೊಂಡು ಮರಕ್ಕೆ ಏರುವ ಸಾಮರ್ಥ್ಯ ಇದೆ. ಇವೆರಡೂ ಈಜುವುದರಲ್ಲೂ ಜಾಣ ಪ್ರಾಣಿಗಳು. ಆದರೆ, ಜಾಗ್ವಾರ್‌ಗಳಿಗೆ ತುಂಬಾ ಹೊತ್ತು ನೀರಿನಲ್ಲಿ ಕಳೆಯುವುದೆಂದರೆ ಬಲು ಇಷ್ಟ. ಚಿರತೆಗಳು ಆದಷ್ಟು ನೀರಿನಲ್ಲಿ ಇರಲು ಇಷ್ಟಪಡುವುದಿಲ್ಲ. ಹೀಗೆ ಇವುಗಳ ನಡುವೆ ಇನ್ನೂ ಅನೇಕ ದೈಹಿಕ ಮತ್ತು ಜೀವನಕ್ರಮದಲ್ಲಿ ವ್ಯತ್ಯಾಸಗಳಿವೆ.Thanks for reading ದಟ್ಟ ಕಾಡಿನಲ್ಲಿ ಜಾಗ್ವರ್-ಕರಿಚಿರತೆ ರೇಸ್: ಹೇಗಿದೆ ಗೊತ್ತಾ ಈ ರೋಚಕ ರೇಸ್? | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ದಟ್ಟ ಕಾಡಿನಲ್ಲಿ ಜಾಗ್ವರ್-ಕರಿಚಿರತೆ ರೇಸ್: ಹೇಗಿದೆ ಗೊತ್ತಾ ಈ ರೋಚಕ ರೇಸ್?

Post a Comment