BIG NEWS: ವಾಹನ ಸವಾರರಿಗೆ ಇಂದೂ ತಟ್ಟಿದ ಬಿಸಿ,‌ ಮತ್ತೆ ಏರಿಕೆಯಾಯ್ತು ಪೆಟ್ರೋಲ್‌ - ಡಿಸೇಲ್‌ ಬೆಲೆ

February 10, 2021

 


ಮೊದಲೇ ಆರ್ಥಿಕ ಸಂಕಷ್ಟದಿಂದ ಕಂಗೆಟ್ಟ ಸಾರ್ವಜನಿಕರಿಗೆ ಕಳೆದ ಹಲವು ದಿನಗಳಿಂದ ಏರಿಕೆಯಾಗುತ್ತಿರುವ ಪೆಟ್ರೋಲ್‌ - ಡಿಸೇಲ್‌ ಬೆಲೆ ಗಾಯದ ಮೇಲೆ ಬರೆ ಎಳೆದಂತೆ ಮಾಡುತ್ತಿದೆ.

ಇಂದೂ ಕೂಡಾ ದೇಶದ ವಿವಿಧ ನಗರಗಳಲ್ಲಿ ಪೆಟ್ರೋಲ್‌ ಬೆಲೆಯಲ್ಲಿ 24 ರಿಂದ 25 ಪೈಸೆ ಹಾಗೂ ಡಿಸೇಲ್‌ ಬೆಲೆಯಲ್ಲಿ 30 ರಿಂದ 31 ಪೈಸೆಗಳಷ್ಟು ಏರಿಕೆಯಾಗಿದೆ.

ಇದೀಗ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಲೀಟರ್‌ ಪೆಟ್ರೋಲ್‌ ಬೆಲೆ 87.85 ರೂಪಾಯಿಗಳಾಗಿದ್ದರೆ, ಲೀಟರ್‌ ಡಿಸೇಲ್‌ ಬೆಲೆ 78.03 ರೂಪಾಯಿಗಳಾಗಿದೆ. ಇನ್ನು ವಾಣಿಜ್ಯ ನಗರಿ ಮುಂಬೈನಲ್ಲಿ ಲೀಟರ್‌ ಪೆಟ್ರೋಲ್‌ ಬೆಲೆ 94.36 ರೂಪಾಯಿಗಳಾಗಿದ್ದು, ಲೀಟರ್‌ ಡಿಸೇಲ್‌ ಬೆಲೆ 84.94 ರೂಪಾಯಿಗಳಾಗಿದೆ.


Related Articles

Advertisement
Previous
Next Post »