ಬೆಂಗಳೂರು : ವರನಟ ಡಾ. ರಾಜ್ ಕುಮಾರ್ ಅವರನ್ನು ಕಾಡುಗಳ್ಳ ವೀರಪ್ಪನ್ ಅಪಹರಿಸಿ ನೂರು ದಿನಕ್ಕೂ ಹೆಚ್ಚು ಕಾಲ ಬಂಧನದಲ್ಲಿರಿಸಿದ್ದ ಘಟನೆ ಕುರಿತಂತೆ ಮತ್ತೊಂದು ಸ್ಪೋಟಕ ಮಾಹಿತಿಯೊಂದು ಹೊರಬಿದ್ದಿದೆ.
ಡಾ. ರಾಜ್ ಕುಮಾರ್ ಅವರನ್ನು ಅಪಹರಿಸಿದ್ದ ನರಹಂತಕ ವೀರಪ್ಪನ್ ಗೆ ರಾಜ್ಯ ಸರ್ಕಾರ ಕೋಟ್ಯಂತರ ಹಣವನ್ನು ಕೊಟ್ಟಿತ್ತು ಎಂಬ ಸ್ಪೋಟಕ ಮಾಹಿತಿ ಬಯಲಾಗಿದೆ. ಡಾ. ರಾಜ್ ಕುಮಾರ್ ಬಿಡುಗಡೆಗಾಗಿ ಕಾಡುಗಳ್ಳ ವೀರಪ್ಪನ್ ಗೆ ಅಂದಿನ ಕರ್ನಾಟಕ ಸರ್ಕಾರದಿಂದ ಸುಮಾರು 15 ಕೋಟಿ ರೂ.ಪಾವತಿಯಾಗಿತ್ತು ಎಂಬ ಸುದ್ದಿ ಹೊರಬಿದ್ದಿದೆ.
ಈ ಕುರಿತು ಹಿರಿಯ ಪತ್ರಕರ್ತ ಶಿವಸುಬ್ರಮಣ್ಯನ್ ಅವರು ಪುಸ್ತಕ `ವೀರಪ್ಪನ್ ವಾಳ್ತದುಂ ವೀಳ್ತದಂ' (ವೀರಪ್ಪನ್ ಬದುಕಿನ ಏಳು ಬೀಳು) ರಿವೀಲ್ ಆಗಿದ್ದು, ಡಾ.ರಾಜ್ ಕುಮಾರ್ ಅವರನ್ನು ಸುರಕ್ಷಿತವಾಗಿ ಕಳುಹಿಸಿಕೊಡಲು ಕೋರಿ ಕರ್ನಾಟ ಸರ್ಕಾರ ವೀರಪ್ಪನ್ ಗೆ 15 ಕೋಟಿ ರೂ. ನೀಡಿದೆ. ಆ ಸಂದರ್ಭದಲ್ಲಿ ಕರ್ನಾಟಕದಲ್ಲಿ ಪ್ರಮುಖ ಹುದ್ದೆ ಅಲಂಕರಿಸಿದ್ದ ರಾಜಕಾರಣಿಯೊಬ್ಬರು ಹಣಕಾಸಿನ ವಿಚಾರವಾಗಿ ವೀರಪ್ಪನ್ ಜೊತೆ ಮಾತುಕತೆ ನಡೆಸಿದ್ದರು ಎಂದು ತಿಳಿಸಿದ್ದಾರೆ.
ವೀರಪ್ಪನ್ ಮೊದಲ ಡಾ. ರಾಜ್ ಕುಮಾರ್ ಬಿಡುಗಡೆಗೆ 1,000 ಕೋಟಿ ರೂ. ಬೇಡಿಕೆ ಇಟ್ಟಿದ್ದ. ಅದರಲ್ಲಿ 10 ಕೋಟಿ ರೂ.ಹಣದ ರೂಪದಲ್ಲಿ ಮತ್ತು 90 ಕೋಟಿ ರೂ. ಚಿನ್ನದ ರೂಪದಲ್ಲಿ ನೀಡಲು ಹೇಳಿದ್ದ. ನಂತರ ಹಲವು ಸುತ್ತಿನ ಮಾತುಕತೆ ನಡೆದು 10 ಕೋಟಿಗೆ ಒಪ್ಪಿಸಲಾಗಿತ್ತು ಎಂದು ಹೇಳಿದ್ದಾರೆ.
2000 ರ ಜುಲೈ 30 ರ ರಾತ್ರಿ ಗಾಜನೂರಿನ ತೋಟದ ಮನೆಯಿಂದ ಡಾ. ರಾಜ್ ಕುಮಾರ್ ಹಾಗೂ ಇನ್ನಿತರ ಮೂವರನ್ನು ಅಪಹರಿಸಿದ್ದ ವೀರಪ್ಪನ್. ರಾಜ್ ಕುಮಾರ್ ಅವರನ್ನು ಸತ್ಯಮಂಗಲ ಕಾಡಿನಲ್ಲಿ ಇರಿಸಿಕೊಂಡಿದ್ದ 108 ದಿನಗಳ ನಂತರ ಅಂದರೆ ನವೆಂಬರ್ 15 ರಂದು ಬಿಡುಗಡೆ ಮಾಡಿದ್ದ.
EmoticonEmoticon