BIG NEWS : ರಾಜ್ಯದ 'ಶಿಕ್ಷಕ'ರೇ ಗಮನಿಸಿ : ಫೆ.15ರೊಳಗೆ 'ನಿಷ್ಠಾ ತರಬೇತಿ' ಮುಗಿಸಲು ಕೊನೆಯ ದಿನಾಂಕ

February 07, 2021
Sunday, February 7, 2021

 


ಕೋಲಾರ : ನಿಷ್ಠಾ ತರಬೇತಿ 1 ರಿಂದ 18 ಮಾಡ್ಯುಲ್ ಗಳು ಇದುವರೆಗೆ ಪೂರ್ಣಗೊಳಿಸದೇ ಇರುವಂತ ಶಿಕ್ಷಕರು ಕಡ್ಡಾಯವಾಗಿ ದಿನಾಂಕ 15-02-2021ರ ಒಳಗೆ ಮುಗಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶಿಸಿದೆ.

ಈ ಕುರಿತಂತೆ ಕೋಲಾರ ಜಿಲ್ಲೆಯ ಕ್ಷೇತ್ರ ಸಂಪನ್ಮೂಲ ಕೇಂದ್ರದ ಕ್ಷೇತ್ರ ಸಮನ್ವಯಾಧಿಕಾರಿಗಳು ಜ್ಞಾಪನಾ ಪತ್ರ ಹೊರಡಿಸಿದ್ದು, ನಿಷ್ಠಾ ತರಬೇತಿ 1 ರಿಂದ 18 ಮಾಡ್ಯೂಲ್ ಗಳು ಇದುವರೆವಿಗೂ ಪೂರ್ಣಗೊಳಿಸದೇ ಇರುವ ಶಿಕ್ಷಕರು, ಕಡ್ಡಾಯವಾಗಿ ದಿನಾಂಕ 15-02-2021ರ ಒಳಗೆ ಮುಗಿಸಲು ಸೂಚಿಸಿದೆ.

18 ಮಾಡ್ಯುಲ್ ಗಳನ್ನು ಮುಗಿಸಿದ ಶಿಕ್ಷಕರು ಪ್ರಮಾಣ ಪತ್ರಗಳನ್ನು ಪ್ರಿಂಟ್ ತೆಗೆದುಕೊಳ್ಳಲು ಸೂಚಿಸಿದೆ.

18 ಮಾಡ್ಯುಲ್ ಗಳನ್ನು ಮುಗಿಸಿರುವ ಶಿಕ್ಷಕರಿಗೆ ಇಲಾಖೆ ನಿಗಧಿತ ಅನುದಾನವನ್ನು ಶೀಘ್ರದಲ್ಲಿಯೇ ಬಿಡುಗಡೆಗೊಳಿಸುತ್ತಾರೆ ಎಂಬುದಾಗಿ ತಿಳಿಸಿದ್ದಾರೆ.



Thanks for reading BIG NEWS : ರಾಜ್ಯದ 'ಶಿಕ್ಷಕ'ರೇ ಗಮನಿಸಿ : ಫೆ.15ರೊಳಗೆ 'ನಿಷ್ಠಾ ತರಬೇತಿ' ಮುಗಿಸಲು ಕೊನೆಯ ದಿನಾಂಕ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on BIG NEWS : ರಾಜ್ಯದ 'ಶಿಕ್ಷಕ'ರೇ ಗಮನಿಸಿ : ಫೆ.15ರೊಳಗೆ 'ನಿಷ್ಠಾ ತರಬೇತಿ' ಮುಗಿಸಲು ಕೊನೆಯ ದಿನಾಂಕ

Post a Comment